ಕ್ಯಾಪ್ಟನ್ ಮಣಿವಣ್ಣನ್‌ರನ್ನು  ಹೊಸ ಹುದ್ದೆಗೆ ನೇಮಕ ಮಾಡಿದ ಸರ್ಕಾರ
ರಾಜ್ಯ

ಕ್ಯಾಪ್ಟನ್ ಮಣಿವಣ್ಣನ್‌ರನ್ನು ಹೊಸ ಹುದ್ದೆಗೆ ನೇಮಕ ಮಾಡಿದ ಸರ್ಕಾರ

ಮಣಿವಣ್ಣನ್ ಅವರ ವರ್ಗಾವಣೆಗೆ ಕಾರ್ಮಿಕ ವಲಯದಿಂದ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಕರ್ನಾಟಕದಲ್ಲಿ ಕಾರ್ಮಿಕರ ಪರವಾಗಿ ಸಾಕಷ್ಟು ನಿರ್ಧಾರಗಳನ್ನು ತೆಗೆದುಕೊಂಡಿದ್ದ ಮಣಿವಣ್ಣನ್ ಅವರ ಪರವಾಗಿ, ಆನ್ಲೈನ್ನಲ್ಲಿ ಸಹಿ ಸಂಗ್ರಹಿಸುವ ಕಾರ್ಯವೂ ನಡೆದಿತ್ತು.

ಪ್ರತಿಧ್ವನಿ ವರದಿ

ಬಹಳ ಚರ್ಚೆಗೆ ಕಾರಣವಾಗಿದ್ದ ಐಎಎಸ್‌ ಅಧಿಕಾರಿ ಕ್ಯಾಪ್ಟನ್‌ ಅವರ ವರ್ಗಾವಣೆ ವಿಚಾರದಲ್ಲಿ ಸರ್ಕಾರ ತೇಪೆ ಹಚ್ಚುವ ಕಾರ್ಯಕ್ಕೆ ಮುಂದಾಗಿದೆ. ದಿಢೀರ್‌ ವರ್ಗಾವಣೆ ಆದೇಶವನ್ನು ಹೊರಡಿಸಿದ್ದ ಸರ್ಕಾರ, ಮಣಿವಣ್ಣನ್‌ ಅವರಿಗೆ ಬೇರಾವುದೇ ಸ್ಥಾನಕ್ಕೆ ನೇಮಕ ಮಾಡಿರಲಿಲ್ಲ. ಆದರೆ, ಈಗ ಅವರನ್ನು ಪಶು ಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯ ಕಾರ್ಯದರ್ಶಿ ಹುದ್ದೆಗೆ ನೇಮಕ ಮಾಡಿ ಆದೇಶ ಮಾಡಿದೆ.

ಮಣಿವಣ್ಣನ್‌ ಅವರ ವರ್ಗಾವಣೆಗೆ ಕಾರ್ಮಿಕ ವಲಯದಿಂದ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಕರ್ನಾಟಕದಲ್ಲಿ ಕಾರ್ಮಿಕರ ಪರವಾಗಿ ಸಾಕಷ್ಟು ನಿರ್ಧಾರಗಳನ್ನು ತೆಗೆದುಕೊಂಡಿದ್ದ ಮಣಿವಣ್ಣನ್‌ ಅವರ ಪರವಾಗಿ, ಆನ್ಲೈನ್‌ನಲ್ಲಿ ಸಹಿ ಸಂಗ್ರಹಿಸುವ ಕಾರ್ಯವೂ ನಡೆದಿತ್ತು.

ಕೈಗಾರಿಕೆಗಳ, ಬಿಲ್ಡರ್‌ಗಳ ಒತ್ತಡ ಹಾಗೂ ರಾಜಕಾರಣಿಗಳ ಒತ್ತಡಕ್ಕೆ ಮಣಿದಿದ್ದ ಸರ್ಕಾರವು ಅವರನ್ನು ಏಕಾಏಕಿ ಅವರನ್ನು ವರ್ಗಾಯಿಸಿ ಆದೇಶ ಹೊರಡಿಸಿತ್ತು. ಈಗ ಸರ್ಕಾರದ ಯಾವುದೇ ನಿರ್ಧಾರಗಳಿಗೆ ಅಡ್ಡಿಯಾಗದಂತೆ ಅವರನ್ನು ಪಶುಸಂಗೋಪನೆ ಮತ್ತು ಮೀನುಗಾರಿಕಾ ಇಲಾಖೆಗೆ ವರ್ಗಾಯಿಸಲಾಗಿದೆ ಎಂಬ ಅಪವಾದ ಕೇಳಿ ಬರುತ್ತಿದೆ.

Click here Support Free Press and Independent Journalism

Pratidhvani
www.pratidhvani.com