ಮರಳಿ ಗೂಡಿಗೆ ಸೇರಲು ವಲಸೆ ಕಾರ್ಮಿಕರ ತವಕ

ಮರಳಿ ಗೂಡಿಗೆ ಸೇರಲು ವಲಸೆ ಕಾರ್ಮಿಕರ ತವಕ

ಯಾವಾಗ ತಮ್ಮ ಊರಿನ ಬಸ್‌ ಬರುತ್ತದೆಯೋ ಎನ್ನುವ ಚಿಂತೆ ಲಾಕ್‌ಡೌನ್‌ನಿಂದ ಸಿಲುಕಿಕೊಂಡಿದ್ದ ಪ್ರಯಾಣಿಕರದಾದರೆ, ಜಮಾಯಿಸಿದ್ದ ಪ್ರಯಾಣಿಕರಿಗೆ ವ್ಯವಸ್ಥಿತವಾಗಿ ಬಸ್ಸುಗಳ ಸೌಲಭ್ಯವನ್ನು ಒದಗಿಸುವ ಚಿಂತೆ ಸಾರಿಗೆ ಇಲಾಖೆಯ ಅಧಿಕಾರಿಗಳದಾಗಿತ್ತು.

ಲಾಕ್‌ಡೌನ್‌ನಿಂದ ಕಂಗೆಟ್ಟಿದ್ದ ವಲಸಿಗ ಕಾರ್ಮಿಕರಿಗೆ ತಮ್ಮ ಗೂಡಿಗೆ ತೆರಳಲು ಅನುಮತಿ ನೀಡಿ, ರಾಜ್ಯದಲ್ಲಿ ನಿಗದಿತ ಪ್ರಮಾಣದಲ್ಲಿ ಬಸ್‌ ಸಂಚಾರ ಆರಂಭವಾಗಿದೆ. ಆದರೆ, ತಮ್ಮ ಊರಿಗೆ ಹೋಗುವ ಆತುರದಲ್ಲಿ ನಗರದ ಕೆಂಪೇಗೌಡ ಬಸ್‌ಸ್ಟ್ಯಾಂಡ್‌ಗೆ ಸಾವಿರಾರು ಸಂಖ್ಯೆಯಲ್ಲಿ ನುಗ್ಗಿದ ಪ್ರಯಾಣಿಕರಿಂದಾಗಿ ಸಂಪೂರ್ಣ ಬಸ್‌ಸ್ಟ್ಯಂಡ್‌ ಅವ್ಯವಸ್ಥೆಯ ಆಗರವಾಗಿತ್ತು. ಸಾಮಾಜಿಕ ಅಂತರವೆನ್ನುವ ಪದಕ್ಕೆ ಅರ್ಥವೇ ಇಲ್ಲದಂತಾಗಿತ್ತು. ಯಾವಾಗ ತಮ್ಮ ಊರಿನ ಬಸ್‌ ಬರುತ್ತದೆಯೋ ಎನ್ನುವ ಚಿಂತೆ ಲಾಕ್‌ಡೌನ್‌ನಿಂದ ಸಿಲುಕಿಕೊಂಡಿದ್ದ ಪ್ರಯಾಣಿಕರದಾದರೆ, ಜಮಾಯಿಸಿದ್ದ ಪ್ರಯಾಣಿಕರಿಗೆ ವ್ಯವಸ್ಥಿತವಾಗಿ ಬಸ್ಸುಗಳ ಸೌಲಭ್ಯವನ್ನು ಒದಗಿಸುವ ಚಿಂತೆ ಸಾರಿಗೆ ಇಲಾಖೆಯ ಅಧಿಕಾರಿಗಳದಾಗಿತ್ತು.

Click here Support Free Press and Independent Journalism

Last updated

Pratidhvani
www.pratidhvani.com