ಕರ್ನಾಟಕದಲ್ಲಿ ಬಿಜೆಪಿ ಆಡಳಿತವಿದ್ದರೂ ಅನುದಾನ ಬಿಡುಗಡೆಯಲ್ಲಿ ಕೇಂದ್ರದಿಂದ ಮಲತಾಯಿ ಧೋರಣೆ
ರಾಜ್ಯ

ಕರ್ನಾಟಕದಲ್ಲಿ ಬಿಜೆಪಿ ಆಡಳಿತವಿದ್ದರೂ ಅನುದಾನ ಬಿಡುಗಡೆಯಲ್ಲಿ ಕೇಂದ್ರದಿಂದ ಮಲತಾಯಿ ಧೋರಣೆ

ಕಳೆದ ವರ್ಷ ಭಾರಿ ಪ್ರವಾಹದಿಂದ 35 ಸಾವಿರದ 165 ಕೋಟಿ ರೂಪಾಯಿ ಹಾನಿ ಸಂಭವಿಸಿತ್ತು. 35 ಸಾವಿರದ 891 ಕೋಟಿ ಪರಿಹಾರ ಕೊಡುವಂತೆ ರಾಜ್ಯ ಸರ್ಕಾರ ಮನವಿ ಮಾಡಿತ್ತು. ಆದರೆ ಕೇಂದ್ರದಿಂದ ಇಲ್ಲಿಯವರೆಗೆ ಬಿಡುಗಡೆ ಆಗಿರುವ ಹಣ ಕೇವಲ 1 ಸಾವಿರದ 652 ಕೋಟಿ ಮಾತ್ರ.

ಕೃಷ್ಣಮಣಿ

ಕೇಂದ್ರದಲ್ಲಿ ಒಂದು ಪಕ್ಷ ರಾಜ್ಯದಲ್ಲಿ ಒಂದು ಪಕ್ಷ ಅಧಿಕಾರದಲ್ಲಿ ಇದ್ದರೆ ಕೇಂದ್ರ ಸರ್ಕಾರ ನಮಗೆ ಅನುದಾನ ಕೊಡುವುದರಲ್ಲಿ ತಾರತಮ್ಯ ಮಾಡಿದರೆ ಕೇಂದ್ರದ ವಿರುದ್ಧ ನಿಯೋಗ ಕೊಂಡೊಯ್ಯಬಹುದು. ನಮಗೆ ನ್ಯಾಯಯುತವಾಗಿ ಬರಬೇಕಾದ ರಾಜ್ಯದ ಪಾಲನ್ನು ಕೊಡಲೇಬೇಕು ಎಂದು ಪಟ್ಟು ಹಿಡಿದು ಕುಳಿತುಕೊಳ್ಳಬಹುದು. ಆದರೆ ಕೇಂದ್ರ ಹಾಗು ರಾಜ್ಯದಲ್ಲಿ ಎರಡೂ ಕಡೆ ಒಂದೇ ಪಕ್ಷ ಅಧಿಕಾರಲ್ಲಿ ಇದ್ದರೆ, ಏನನ್ನೂ ಕೇಳುವಂತಿಲ್ಲ. ಸ್ವಲ್ಪ ಜೋರಾಗಿ ಕೇಳಿದರೂ ಮುಂದಿನ ದಿನಗಳಲ್ಲಿ ಸಂಕಷ್ಟ ಕಟ್ಟಿಟ್ಟ ಬುತ್ತಿ. ಇದೀಗ ರಾಜ್ಯ ಸರ್ಕಾರ ಕೂಡ ಇದೇ ಪರಿಸ್ಥಿತಿಗೆ ಸಿಲುಕಿ ವಿಲವಿಲನೆ ಒದ್ದಾಡುತ್ತಿದೆ.

ಕೇಂದ್ರದಿಂದ ಸರಿಯಾಗಿ ರಾಜ್ಯಕ್ಕೆ ಅನುದಾನ ಬರ್ತಿಲ್ಲ. ಎಂದು ಮೊನ್ನೆ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದ್ದರು. ಸದನದಲ್ಲಿ ತೆರಿಗೆ ಹಣದ ಬಗ್ಗೆ ಪ್ರಸ್ತಾಪ ಮಾಡಿದ್ದ ಸಿದ್ದರಾಮಯ್ಯ, ಕೇಂದ್ರದಿಂದ ಬರಬೇಕಿದ್ದ ಜಿಎಸ್
ಟಿ ಪಾಲು ರಾಜ್ಯಕ್ಕೆ ಬರುತ್ತಿಲ್ಲ. ಪ್ರತೀ ವರ್ಷ ತೆರಿಗೆ ಪಾಲು ಬರೋದು ಕಡಿತವಾಗಿದೆ. ಕೇಂದ್ರ ಸರ್ಕಾರದ ನೆರವಿಲ್ಲದೇ ರಾಜ್ಯದ ಅಭಿವೃದ್ಧಿ ಹೇಗೆ ಸಾಧ್ಯ? ಎಂದು ಪ್ರಶ್ನೆ ಮಾಡಿದ್ರು. ಕೇಂದ್ರ ಸರ್ಕಾರ ಕರ್ನಾಟಕವನ್ನು ಮರೆತಂತಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಕುಟುಕಿದರು. ಸಿಎಂ ಹಾಗೂ ಬಿಜೆಪಿ ನಾಯಕರಿಗೆ ಸಿದ್ದರಾಮಯ್ಯ ಪ್ರಶ್ನೆ ಎದುರಾಗುತ್ತಿದ್ದಂತೆ, ಬಿಜೆಪಿ ನಾಯಕರು ಏನೂ ಆಗಿಯೇ ಇಲ್ಲವೇನೋ ಎಂಬಂತೆ ಕೇಂದ್ರ ಸರ್ಕಾರದ ಪರವಾಗಿ ಮಾತನಾಡಿದ್ದರು.

ಕರ್ನಾಟಕದಲ್ಲಿ ಬಿಜೆಪಿ ಆಡಳಿತವಿದ್ದರೂ ಅನುದಾನ ಬಿಡುಗಡೆಯಲ್ಲಿ ಕೇಂದ್ರದಿಂದ ಮಲತಾಯಿ ಧೋರಣೆ
http://truthprofoundationindia.com/

ಕೇಂದ್ರದಿಂದ ರಾಜ್ಯಕ್ಕೆ ಯಾವ ಯಾವ ರೀತಿ ಅನ್ಯಾಯವಾಗ್ತಿದೆ ಎನ್ನುವುದನ್ನು ಬಿಚ್ಚಿಟ್ಟಿದ್ದ ಸಿದ್ದರಾಮಯ್ಯ, ಕಳೆದ ಬಾರಿ 39 ಸಾವಿರದ 591 ಕೋಟಿ ಕೇಂದ್ರದಿಂದ ಅನುದಾನ ನಿಗದಿ ಆಗಿತ್ತು. ಆದ್ರೆ ಕೇಂದ್ರ ಸರ್ಕಾರ ಕೊಟ್ಟಿರುವುದು 28 ಸಾವಿರದ 591 ಕೋಟಿ ಹಣ ಮಾತ್ರ. ಬರೋಬ್ಬರಿ 11 ಸಾವಿರ ಕೋಟಿ ಅನುದಾನ ಬರುವುದು ವ್ಯತ್ಯಯ ಆಗಿದೆ. ಕಳೆದ ವರ್ಷ ಭಾರಿ ಪ್ರವಾಹದಿಂದ 35 ಸಾವಿರದ 165 ಕೋಟಿ ರೂಪಾಯಿ ಹಾನಿ ಸಂಭವಿಸಿತ್ತು. 35 ಸಾವಿರದ 891 ಕೋಟಿ ಪರಿಹಾರ ಕೊಡುವಂತೆ ರಾಜ್ಯ ಸರ್ಕಾರ ಮನವಿ ಮಾಡಿತ್ತು. ಆದರೆ ಕೇಂದ್ರದಿಂದ ಇಲ್ಲಿಯವರೆಗೆ ಬಿಡುಗಡೆ ಆಗಿರುವ ಹಣ ಕೇವಲ 1 ಸಾವಿರದ 652 ಕೋಟಿ ಮಾತ್ರ, ಎಂದು ಮಾಹಿತಿ ಕೊಟ್ಟಿದ್ದಾರೆ.

ರಾಜ್ಯಕ್ಕೆ ಬರಬೇಕಿದ್ದ ಜಿಎಸ್‌ಟಿ ಹಣಕ್ಕೂ ನರೇಂದ್ರ ಮೋದಿ ಸರ್ಕಾರ ಕಲ್ಲು ಹಾಕಿದೆ ಎನ್ನಲಾಗಿದೆ. ತೆರಿಗೆ ಸಂಗ್ರಹದಲ್ಲಿ ಕರ್ನಾಟಕ ಹಲವು ರಾಜ್ಯಗಳಿಗಿಂತ ಬಹಳಷ್ಟು ಮುಂದಿದ್ದು, ಕರ್ನಾಟಕಕ್ಕೆ ಬರಬೇಕಿರುವ ತೆರಿಗೆ ಪಾಲಿನಲ್ಲಿ ಕೇಲವ ಶೇಕಡ 45 ರಷ್ಟು ಮಾತ್ರಿ ತೆರಿಗೆ ಹಣ ವಾಪಸ್‌ ಬರುತ್ತಿದೆ. ಆದರೆ ಗುಜರಾತ್‌ಗೆ ಶೇಕಡ 235 ರಷ್ಟು, ಬಿಹಾರಕ್ಕೆ ಶೇಕಡ 235 ರಷ್ಟು, ಉತ್ತರ ಪ್ರದೇಶಕ್ಕೆ ಶೇಕಡ 198ರಷ್ಟು ತೆರಿಗೆ ಹಣ ಹೋಗುತ್ತಿದೆ. ನಮ್ಮ ರಾಜ್ಯದಿಂದ ಸಂಗ್ರಹವಾದ ತೆರಿಗೆಯಲ್ಲೂ ರಾಜ್ಯಕ್ಕೆ ಕನಿಷ್ಠ ಪಕ್ಷ ಸಮಪಾಲು ವಾಪಸ್‌ ಆಗುತ್ತಿಲ್ಲ. ಉತ್ತರ ಭಾರತದ ರಾಜ್ಯಗಳಿಗೆ ದುಪ್ಪಟ್ಟು ಪ್ರಮಾಣಕ್ಕಿಂತಲು ಹೆಚ್ಚಾಗಿ ನೀಡಲಾಗ್ತಿದೆ ಎಂದು ಕಿಡಿ ಕಾರಿದ್ದಾರೆ.

ಕರ್ನಾಟಕದಲ್ಲಿ ಬಿಜೆಪಿ ಆಡಳಿತವಿದ್ದರೂ ಅನುದಾನ ಬಿಡುಗಡೆಯಲ್ಲಿ ಕೇಂದ್ರದಿಂದ ಮಲತಾಯಿ ಧೋರಣೆ
http://truthprofoundationindia.com/

ಸಿದ್ದರಾಮಯ್ಯ ಆರೋಪಕ್ಕೆ ಸದನದಿಂದ ಹೊರಗೆ ಉತ್ತರ ಕೊಟ್ಟಿರುವ ಸಿಎಂ ಬಿ.ಎಸ್‌ ಯಡಿಯೂರಪ್ಪ, ಅನುದಾನ ತಾರತಮ್ಯದ ಬಗೆ ಗಮನ ಹರಿಸಲಾಗುವುದು ಎಂದಿದ್ದಾರೆ. ಜೊತೆಗೆ ತಾರತಮ್ಯ ಆಗಿರುವ ಅನುದಾನವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ರಾಜ್ಯ ಹಣಕಾಸು ಇಲಾಖೆ ಆಯುಕ್ತರು ಪತ್ರ ಬರೆದಿದ್ದಾರೆ. ಕೋಟ ಶ್ರೀನಿವಾಸ ಪೂಜಾರಿ ಈ ಬಗ್ಗೆ ಮಾತನಾಡಿ 15ನೇ ಹಣಕಾಸು ಹಂಚಿಕೆಯಲ್ಲಿ ಕೇಂದ್ರ ತಾರತಮ್ಯ ವಿಚಾರ, ಮುಂದಿನ ದಿನಗಳಲ್ಲಿ ಇದು ಸರಿಯಾಗಲಿದೆ ಎನ್ನುವ ಮೂಲಕ ಸದ್ಯ ಆಗಿರುವುದು ಸತ್ಯ ಎನ್ನುವುದನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. ಈ ಮೂಲಕ ಕೇಂದ್ರ ಸರ್ಕಾರದ ತಾರತಮ್ಯವನ್ನು ಒಪ್ಪಿಕೊಂಡಿದ್ದಾರೆ. ಕಳೆದ 6 ವರ್ಷದಿಂದ ಕೇಂದ್ರ ಸರ್ಕಾರದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಉತ್ತರ ಭಾರತದ ರಾಜ್ಯಗಳಿಗೆ ಮಣೆ ಹಾಕಿರುವುದು ಸಿದ್ದರಾಮಯ್ಯ ಹಾಗು ಉಳಿದ ನಾಯಕರ ಮಾತುಗಳಲ್ಲಿ ಸಾಬೀತಾಗಿದೆ.

Click here Support Free Press and Independent Journalism

Pratidhvani
www.pratidhvani.com