ಪಟಾಕಿ ಸಿಡಿಸದಂತೆ ವಿರಾಟ್ ಮನವಿ: ಟ್ವಿಟರಿನಲ್ಲಿ ಬಿರುಸಾದ ಪರ-ವಿರೋಧ ಚರ್ಚೆ

ವಿರಾಟ್‌ ಕೊಹ್ಲಿ ಶುಭಾಶಯವನ್ನು ಎಂದಿನಂತೆ ಪಟಾಕಿ ಪರ ಇರುವವರು ಟೀಕಿಸಿದ್ದಾರೆ. ಹಿಂದೂ ಆಚರಣೆಗಳನ್ನು ಆಚರಿಸಿದಂತೆ ತಡೆಯುವ ನೀವು ಹಿಂದೂ ವಿರೋಧಿಗಳೆಂದೂ ವಿರಾಟ್‌ ವಿರುದ್ಧ ಹರಿಹಾಯ್ದಿದ್ದಾರೆ
ಪಟಾಕಿ ಸಿಡಿಸದಂತೆ ವಿರಾಟ್ ಮನವಿ: ಟ್ವಿಟರಿನಲ್ಲಿ ಬಿರುಸಾದ ಪರ-ವಿರೋಧ ಚರ್ಚೆ

ದೇಶವಿಡೀ ದೀಪಾವಳಿ ಆಚರಿಸುತ್ತಿದ್ದರೆ ಕಳೆದ ಕೆಲವು ವರ್ಷಗಳಂತೆ ಈ ವರ್ಷವೂ ಪಟಾಕಿಯ ಪರ-ವಿರೋಧ ಚರ್ಚೆ ಬಿರುಸಾಗಿದೆ. ಈ ಬಾರಿ ಪಟಾಕಿ ಪರ ವಾದಿಸುವವರಿಗೆ ಟೀಕೆಗೆ ಗುರಿಯಾಗಿರುವುದು ಭಾರತ ಕ್ರಿಕಟ್‌ ತಂಡದ ಕ್ಯಾಪ್ಟನ್‌ ವಿರಾಟ್‌ ಕೊಹ್ಲಿ.

ತನ್ನ ಅಧಿಕೃತ ಟ್ವಿಟರ್‌ ಖಾತೆ ಮೂಲಕ ದೀಪಾವಳಿ ಶುಭಾಶಯ ಕೋರಿದ ವಿರಾಟ್‌ ಕೊಹ್ಲಿ, ಪಟಾಕಿ ಸಿಡಿಸದೆ, ಪರಿಸರ-ಸ್ನೇಹಿಯಾಗಿ ಸರಳ ದೀಪಾವಳಿ ಆಚರಿಸಿ ಎಂದು ವಿಡಿಯೋ ಮೂಲಕ ಹೇಳಿದ್ದರು.

ವಿರಾಟ್‌ ಕೊಹ್ಲಿ ಶುಭಾಶಯವನ್ನು ಎಂದಿನಂತೆ ಪಟಾಕಿ ಪರ ಇರುವವರು ಟೀಕಿಸಿದ್ದಾರೆ. ಹಿಂದೂ ಆಚರಣೆಗಳನ್ನು ಆಚರಿಸಿದಂತೆ ತಡೆಯುವ ನೀವು ಹಿಂದೂ ವಿರೋಧಿಗಳೆಂದೂ ವಿರಾಟ್‌ ವಿರುದ್ಧ ಅಸಹ್ಯವಾಗಿ ಹರಿಹಾಯ್ದಿದ್ದಾರೆ. ಮತ್ತೂ ಕೆಲವರು ಅನಗತ್ಯವಾಗಿ ವಿರಾಟ್‌ ಪತ್ನಿ ಅನುಷ್ಕಾ ಶರ್ಮಾರನ್ನು ಚರ್ಚೆಗೆ ಎಳೆದು ತಂದಿದ್ದಾರೆ.

ವಿರಾಟ್‌ ವಿರುದ್ಧ ಟೀಕೆಗಳು ಹೆಚ್ಚುತ್ತಿದ್ದಂತೆ, ಪರಿಸರವಾದಿಗಳು, ಪಟಾಕಿ ವಿರೋಧಿಗಳು ಹಾಗೂ ವಿರಾಟ್‌ ಅಭಿಮಾನಿಗಳು ವಿರಾಟ್‌ ಬೆಂಬಲಕ್ಕೆ ನಿಂತಿದ್ದಾರೆ. #IStandWithVirat ಹ್ಯಾಷ್‌ಟ್ಯಾಗ್‌ ಮೂಲಕ ಭರಪೂರ ಬೆಂಬಲವನ್ನು ನೀಡಿದ್ದಾರೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com