ಭಾರತೀಯ ಆಟಗಾರರ ಮನೋಬಲ ಕುಗ್ಗಿಸಲು ಈಗಲೇ ತಂತ್ರ ಹೂಡಿದ ಆಸ್ಟ್ರೇಲಿಯಾ ಆಟಗಾರರು

ಆಸ್ಟ್ರೇಲಿಯಾ ತಂಡವು ವಿರಾಟ್‌ ಅವರನ್ನು ದ್ವೇಷಿಸಲು ಇಷ್ಟಪಡುತ್ತದೆ ಎಂದು ಆಸ್ಟ್ರೇಲಿಯಾ ಕಪ್ತಾನ ಟಿಮ್‌ ಪೈನ್‌ ಹೇಳಿದ್ದು ಈ ಸರಣಿಯು ಭಾರತಕ್ಕೆ ಅಷ್ಟೊಂದು ಸುಲಭವಾಗಿರುವುದಿಲ್ಲ ಎಂಬ ವಿಚಾರವನ್ನು ಸ್ಪಷ್ಟಪಡಿಸಿದೆ.
ಭಾರತೀಯ ಆಟಗಾರರ ಮನೋಬಲ ಕುಗ್ಗಿಸಲು ಈಗಲೇ ತಂತ್ರ ಹೂಡಿದ ಆಸ್ಟ್ರೇಲಿಯಾ ಆಟಗಾರರು

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಕ್ರಿಕೆಟ್‌ ಸರಣಿ ಕ್ರಿಕೆಟ್‌ ಮೈದಾನದಲ್ಲಿ ಆರಂಭವಾಗುವ ಮುನ್ನವೇ ಸ್ಲೆಡ್ಜಿಂಗ್‌ ಮೂಲಕ ಆರಂಭವಾಗಿದೆ. ಪ್ರತೀ ಬಾರಿಯಂತೆ ಈ ಬಾರಿಯು ಭಾರತದ ಆಸ್ಟ್ರೇಲಿಯಾ ಸರಣಿ ಅಂಗಣಕ್ಕಿಂತ ಹೆಚ್ಚಾಗಿ ಅಂಗಣದ ಹೊರಗೆ ಆಡಲ್ಪಡುವುದು ನಿಶ್ಚಯವಾಗಿದೆ.

ಈ ಬಾರಿ ಭಾರತದ ಆಟಗಾರರನ್ನು ಕೆಣಕಿದ್ದು, ಆಸ್ಟ್ರೇಲಿಯಾ ಟೆಸ್ಟ್‌ ತಂಡದ ಕಪ್ತಾನರಾಗಿರುವ ಟಿಮ್‌ ಪೈನ್‌. ಸಾಮಾನ್ಯವಾಗಿ ಭಾರತ ತಂಡದ ಕಪ್ತಾನ ವಿರಾಟ್‌ ಕೊಹ್ಲಿ ಅವರನ್ನು ಕೆಣಕಲು ಯಾವ ತಂಡವೂ ಮುಂದಾಗುವುದಿಲ್ಲ. ಆದರೆ, ಅವರನ್ನು ಕೆಣಕುವುದೇ ನಮಗಿಷ್ಟ ಎಂದು ಟಿಮ್‌ ಪೈನ್‌ ಹೇಳಿದ್ದಾರೆ. ಆಸ್ಟ್ರೇಲಿಯಾ ತಂಡ ಹಾಗೂ ವಿರಾಟ್‌ ನಡುವಿನ ಕೌತುಕಭರಿತ ಸನ್ನಿವೇಷಗಳನ್ನು ಈ ಬಾರಿಯ ಸರಣಿಯಲ್ಲಿ ಹೆಚ್ಚು ನೋಡಲು ಸಾದ್ಯವಿಲ್ಲ. ಏಕೆಂದರೆ, ಮೊದಲ ಟೆಸ್ಟ್‌ನ ಬಳಿಕ ಭಾರತಕ್ಕೆ ಮರಳಲಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಒಂದು ಪಂದ್ಯಕ್ಕೇ ಆಸ್ಟ್ರೇಲಿಯಾ ತಂಡ ಮಾನಸಿಕವಾಗಿ ಎಷ್ಟು ಸಿದ್ದವಾಗಿದೆಯೆಂದರೆ, ಭಾರತದ ಆಟಗಾರರ ಮೇಲೆ ಈಗಲೇ ಮಾನಸಿಕ ಒತ್ತಡವನ್ನು ಹೇರಲು ಪ್ರಯತ್ನಿಸುತ್ತಿದ್ದಾರೆ. ಈಗ ಟಿಮ್‌ ಪೈನ್‌ ಅವರು, ವಿರಾಟ್‌ ಕೊಹ್ಲಿ ಒಬ್ಬ ಸಾಂಆನ್ಯ ಆಟಗಾರ ಅವರ ಕುರಿತು ಹೆಚ್ಚಿಗೆ ಯೋಚಿಸಬೇಕಾದ ಅವಶ್ಯಕತೆಯಿಲ್ಲ. ಅವರನ್ನು ಟಾಸ್‌ ಸಂದರ್ಭದಲ್ಲಿ ನೋಡುತ್ತೇನೆ, ಅವರ ವಿರುದ್ದ ಆಡುತ್ತೇನೆ ಅಷ್ಟೇ ಹೊರತಾಗಿ ಬೇರೆ ಯಾವ ಸಂಬಂಧವೂ ಅವರೊಂದಿಗೆ ಇಲ್ಲ, ಎಂದು ಹೇಳಿದ್ದಾರೆ.

ಇದರೊಂದಿಗೆ ಆಸ್ಟ್ರೇಲಿಯಾ ತಂಡವು ವಿರಾಟ್‌ ಅವರನ್ನು ದ್ವೇಷಿಸಲು ಇಷ್ಟಪಡುತ್ತದೆ ಎಂದು ಹೇಳಿ ಈ ಸರಣಿಯು ಭಾರತಕ್ಕೆ ಅಷ್ಟೊಂದು ಸುಲಭವಾಗಿರುವುದಿಲ್ಲ ಎಂಬ ವಿಚಾರವನ್ನು ಸ್ಪಷ್ಟಪಡಿಸಿದ್ದಾರೆ.

ಕಳೆದ ಬಾರಿ ಭಾರತವು ಆಸ್ಟ್ರೇಲಿಯಾ ಸರಣಿಗೆ ಹೋಗಿದ್ದಾಗ ರಿಷಬ್‌ ಪಂತ್‌ ಮತ್ತು ಟಿಮ್‌ ಪೈನ್‌ ನಡುವಿನ ಸ್ಲೆಡ್ಜಿಂಗ್‌ ಸಮರ ತಾರಕಕ್ಕೇರಿತ್ತು. ಕ್ರಿಕೆಟ್‌ ಅಂಗಣದೊಳಗೆ ಎದುರಾಳಿ ಆಟಗಾರರ ಮನೋಬಲವನ್ನು ಕುಗ್ಗಿಸಲು ಮಾತಿನ ಮೂಲಕವೇ ತಿವಿಯುವ ಅಸ್ತ್ರವನ್ನು ಆಸ್ಟ್ರೇಲಿಯಾ ಆಟಗಾರರು ಬಹಳ ಚೆನ್ನಾಗಿ ಉಪಯೋಗಿಸುತ್ತಾರೆ. ಆದರೆ, ಕಳೆದ ಸರಣಿಯಲ್ಲಿ ಈ ಅಸ್ತ್ರ ಅಷ್ಟೊಂದು ಪ್ರಯೋಜನವಾಗಲಿಲ್ಲ.

ಈ ಬಾರಿಯ ಆಸ್ಟ್ರೇಲಿಯಾ ಸರಣಿಯ ಮೊದಲ ಟೆಸ್ಟ್‌ನ ನಂತರ ಉಳಿದ ಪಂದ್ಯಗಳಿಗೆ ವಿರಾಟ್‌ ಅಲಭ್ಯರಾಗಿರುತ್ತಾರೆ. ಈ ಪಂದ್ಯಗಳಿಗೆ ಅಜಿಂಕ್ಯಾ ರಹಾನೆ ಕಪ್ತನರಾಗಿ ತಂಡವನ್ನು ಮುನ್ನಡೆಸಲಿದ್ದಾರೆ. ಹಾಗಾಗಿ, ಎರಡೂ ತಂಡಗಳ ತಂತ್ರಗಾರಿಕೆಯಲ್ಲಿ ಯಾವ ರೀತಿಯ ಬದಲಾವಣೆ ಬರಬಹುದು ಎಂಬುದು ನಿಜಕ್ಕೂ ಕ್ರಿಕೆಟ್‌ ಪ್ರಿಯರಲ್ಲಿ ಕೌತುಕ ಮೂಡಿಸಿದೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com