ಕುತೂಹಲಕಾರಿ ಘಟ್ಟ ತಲುಪಿದ ಐಪಿಎಲ್‌: ನಾಲ್ಕನೇ ಸ್ಥಾನಕ್ಕೆ ಹೆಚ್ಚಿದ ಪೈಪೋಟಿ

ಮುಂಬೈ ಇಂಡಿಯನ್ಸ್‌, ಡೆಲ್ಲಿ ಕ್ಯಾಪಿಟಲ್ಸ್‌ ಮತ್ತು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಗಳು ಪ್ಲೇ ಆಫ್‌ ಸುತ್ತಿಗೇರುವ ಸಾಧ್ಯತೆ ದಟ್ಟವಾಗಿದೆ.
ಕುತೂಹಲಕಾರಿ ಘಟ್ಟ ತಲುಪಿದ ಐಪಿಎಲ್‌: ನಾಲ್ಕನೇ ಸ್ಥಾನಕ್ಕೆ ಹೆಚ್ಚಿದ ಪೈಪೋಟಿ

ಕ್ರಿಕೆಟ್‌ ಅಭಿಮಾನಿಗಳ ಪಾಲಿನ ಅತೀ ದೊಡ್ಡ ಮನರಂಜನೆ IPL‌ ಕ್ರೀಡಾಕೂಟ ಈಗ ಕುತೂಹಲಕಾರಿ ಘಟ್ಟ ತಲುಪಿದೆ. ಇನ್ನು ಲೀಗ್‌ ಹಂತದಲ್ಲಿ ಕೇವಲ 10 ಪಂದ್ಯಗಳು ಮಾತ್ರವೇ ಬಾಕಿ ಇದ್ದು, ಯಾವ ತಂಡ ಪ್ಲೇ ಆಫ್‌ ತಲುಪಲಿದೆ ಎಂಬುದು ಐಪಿಎಲ್‌ ಪ್ರೇಮಿಗಳಿಗೆ ಸವಾಲಾಗಿದೆ. ಚೆನ್ನೈ ಸೂಪರ್‌ ಕಿಂಗ್ಸ್‌ ಒಂದರ ಹೊರತಾಗಿ ಬೇರೆ ಎಲ್ಲಾ ತಂಡಗಳ ಪ್ಲೇ ಆಫ್‌ ಆಸೆ ಇನ್ನೂ ಜೀವಂತವಾಗಿದೆ.

ಐಪಿಎಲ್‌ ಆರಂಭವಾದಾಗ ಸತತವಾದ ಸೋಲಿನಿಂದ ಕಂಗೆಟ್ಟಿದ್ದ ಪಂಜಾಬ್‌ ತಂಡವು ನಂತರ ತೋರಿದ ಪ್ರದರ್ಶನದಿಂದಾಗಿ ನಾಲ್ಕನೇ ಸ್ಥಾನದಲ್ಲಿದೆ. ಸತತ ಐದು ಗೆಲುವುಗಳು ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡವನ್ನು ಕೊನೇಯ ಸ್ಥಾನದಿಂದ ನಾಲ್ಕನೇ ಸ್ಥಾನಕ್ಕೆ ಏರುವಂತೆ ಮಾಡಿದೆ. ಉಳಿದಂತೆ ಮುಂಬೈ ಇಂಡಿಯನ್ಸ್‌, ಡೆಲ್ಲಿ ಕ್ಯಾಪಿಟಲ್ಸ್‌ ಮತ್ತು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಬಹುತೇಕ ಪ್ಲೇ ಆಫ್‌ ಸುತ್ತಿಗೇರುವುದು ಖಚಿತವಾಗಿದೆ. ಆದರೆ, ಉಳಿದ ಹತ್ತು ಪಂದ್ಯಗಳ ಫಲಿತಾಂಶದ ಮೇಲೆ ಈ ಮೂರು ತಂಡಗಳ ಸ್ಥಾನ ನಿರ್ಧಾರವಾಗಲಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಸದ್ಯಕ್ಕೆ ಕುತೂಹಲ ಹುಟ್ಟಿಸಿರುವುದು ನಾಲ್ಕನೇ ಸ್ಥಾನಕ್ಕಾಗಿ ಇರುವ ಪೈಪೋಟಿ. ಪಂಜಾಬ್‌ ಮತ್ತು ಕೊಲ್ಕತ್ತಾ ನೈಟ್‌ ರೈಡರ್ಸ್‌ ತಂಡಗಳು ಈ ಸ್ಥಾನದ ಪ್ರಮುಖ ಸ್ಪರ್ಧಿಗಳು. ಉಳಿದಂತೆ, ಸನ್‌ರೈಸರ್ಸ್‌ ಹೈದರಾಬಾದ್‌, ರಾಜಸ್ಥಾನ್‌ ರಾಯಲ್ಸ್‌ ತಂಡಗಳು ಕೂಡಾ ನಾಲ್ಕನೇ ಸ್ಥಾನದ ಮೇಲೆ ಕಣ್ಣಿಟ್ಟಿವೆ. ಕೊಲ್ಕತ್ತಾ ಮತ್ತು ಪಂಜಾಬ್‌ ತಂಡಗಳಿಗೆ ಮಾತ್ರ 16 ಅಂಕಗಳನ್ನು ಅವಕಾಶವಿದೆ. ಉಳಿದ ತಂಡಗಳು ಆ ಅವಕಾಶವನ್ನು ಕಳೆದುಕೊಂಡಿವೆ.

ಕುತೂಹಲಕಾರಿ ಘಟ್ಟ ತಲುಪಿದ ಐಪಿಎಲ್‌: ನಾಲ್ಕನೇ ಸ್ಥಾನಕ್ಕೆ ಹೆಚ್ಚಿದ ಪೈಪೋಟಿ
ಐಪಿಎಲ್‌ನಲ್ಲಿ ಮಿಂಚುತ್ತಿರುವ ಭಾರತ ತಂಡದ ಭವಿಷ್ಯದ ವೇಗಿಗಳು

ರಾಜಸ್ಥಾನ ರಾಯಲ್ಸ್‌ ಉಳಿದ ಎರಡು ಪಂದ್ಯಗಳನ್ನು ಉತ್ತಮ ರನ್‌ರೇಟ್‌ನಿಂದ ಗೆಲ್ಲುವ ಒತ್ತಡದಲ್ಲಿದೆ. ಕಳೆದ ಐದು ಪಂದ್ಯಗಳಲ್ಲಿ ರಾಜಸ್ಥಾನ್‌ ರಾಯಲ್ಸ್‌ ಎರಡು ಪಂದ್ಯಗಳನ್ನು ಗೆಲ್ಲಲಷ್ಟೇ ಸಕ್ತವಾಗಿದೆ. ಇನ್ನು ಸನ್‌ರೈಸರ್ಸ್‌ ಹೈದರಾಬಾದ್‌ ಕಳೆದ ಐದು ಪಂದ್ಯಗಳಲ್ಲಿ ನಾಲ್ಕು ಪಂದ್ಯಗಳನ್ನು ಕೈಚೆಲ್ಲಿದೆ. ಆದರೆ, ಇನ್ನು ಮೂರು ಪಂದ್ಯಗಳು ಇರುವುದರಿಂದಾಗಿ ಪ್ಲೇ ಆಫ್‌ಗೆ ಕ್ವಾಲಿಫೈ ಆಗಲು ಶೇ. 7ರಷ್ಟು ಸಾಧ್ಯತೆಗಳಿವೆ.

ಮುಂಬೈ ಇಂಡಿಯನ್ಸ್‌, ಡೆಲ್ಲಿ ಕ್ಯಾಪಿಟಲ್ಸ್‌ ಮತ್ತು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಗಳು ಪ್ಲೇ ಆಫ್‌ ಸುತ್ತಿಗೇರುವ ಸಾಧ್ಯತೆ ಶೇ. 95. ಈ ಮೂರು ತಂಡಗಳು ಈಗ ಅಗ್ರ ಮೂರು ಸ್ಥಾನಗಳಲ್ಲಿದ್ದು, ಈ ಮೂರರಲ್ಲಿ ಒಂದು ತಂಡ ಗರಿಷ್ಟ ಎಂದರೆ, 20 ಅಂಕಗಳನ್ನು ಗಳಿಸಬಹುದು. ಯಾವುದಾದರೂ ಒಂದು ತಂಡ 20 ಅಂಕ ಗಳಿಸಿದರೆ, ಉಳಿದ ಎರಡು ತಂಡಗಳಿಗೆ ಈ ಅವಕಾಶವಿರುವುದಿಲ್ಲ. ಉಳಿದ ಪಂದ್ಯಗಳು ಹಾಗೂ ಅವುಗಳಿಂದ ಬರಬಹುದಾದ ಒಟ್ಟು ಫಲಿತಾಂಶಗಳನ್ನು ಪಟ್ಟಿ ಮಾಡಿದರೆ, ಒಟ್ಟು 1,024 ಫಲಿತಾಂಶಗಳು ಹೊರಬರುವ ಸಾದ್ಯತೆಯಿದೆ.

ಒಟ್ಟಿನಲ್ಲಿ ಈ ಬಾರಿಯ ಐಪಿಎಲ್‌ ಕುತೂಹಲಕಾರಿ ಘಟ್ಟ ತಲುಪಿದ್ದು, ಯಾವ ತಂಡ ಯಾವ ಸ್ಥಾನದಲ್ಲಿ ಪ್ಲೇ ಆಫ್‌ ಸುತ್ತಿಗೇರುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ. ಅದರಲ್ಲೂ ನಾಲ್ಕನೇ ಸ್ಥಾನಕ್ಕೆ ಇರುವಂತಹ ಪೈಪೋಟಿ ನಿಜಕ್ಕೂ ಸ್ವಾರಸ್ಯಕರವಾಗಿದೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com