ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯಾಟಕ್ಕೆ ಧೋನಿ, ರೈನಾ ವಿದಾಯ
ಕ್ರೀಡೆ

ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯಾಟಕ್ಕೆ ಧೋನಿ, ರೈನಾ ವಿದಾಯ

ಮಹೇಂದ್ರ ಸಿಂಗ್‌ ಧೋನಿ ನಿವೃತ್ತಿ ಬೆನ್ನಲ್ಲಿ ಭಾರತದ ಇನ್ನೋರ್ವ ಆಟಗಾರ ಸುರೇಶ್‌ ರೈನಾ ಕೂಡಾ ಅಂತರಾಷ್ಟ್ರೀಯ ಕ್ರಿಕೆಟ್‌ ಪಂದ್ಯಾಟಕ್ಕೆ ನಿವೃತ್ತಿ ಘೋಷಿಸಿದ್ದಾರೆ

ಪ್ರತಿಧ್ವನಿ ವರದಿ

ಭಾರತ ಕ್ರಿಕೆಟ್‌ ತಂಡದ ಮಾಜಿ ಕಪ್ತಾನ ಮಹೇಂದ್ರ ಸಿಂಗ್‌ ಧೋನಿ (Mahendra Singh Dhoni) ಅಂತರಾಷ್ಟ್ರೀಯ ಕ್ರಿಕೆಟ್‌ ಪಂದ್ಯಾಟಕ್ಕೆ ನಿವೃತ್ತಿ ಘೋಷಿಸಿದ್ದಾರೆ. 39 ವರ್ಷದ ಧೋನಿ, 2004 ರಲ್ಲಿ ಅಂತರಾಷ್ಟ್ರೀಯ ಏಕದಿನ ಪಂದ್ಯಾಟಕ್ಕೆ ಪಾದಾರ್ಪನೆಗೈದಿದ್ದರು. ಭಾರತದ ಯಶಸ್ವಿ ಕ್ಯಾಪ್ಟನ್(captain) ಆಗಿದ್ದ ಧೋನಿ ನೇತೃತ್ವದಲ್ಲಿ 2007ರಲ್ಲಿ ಟಿ-20 ವಿಶ್ವ ಕಪ್‌, 2010 ಮತ್ತು 2016 ರಲ್ಲಿ ಏಷಿಯಾ ಕಪ್‌, 2011 ರಲ್ಲಿ ಕ್ರಿಕೆಟ್‌ ವರ್ಲ್ಡ್‌ ಕಪ್‌, 2013 ರಲ್ಲಿ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಪಡೆದುಕೊಂಡಿತ್ತು.

ಮಹೇಂದ್ರ ಸಿಂಗ್‌ ಧೋನಿ ನಿವೃತ್ತಿ ಬೆನ್ನಲ್ಲಿ ಭಾರತದ ಇನ್ನೋರ್ವ ಆಟಗಾರ ಸುರೇಶ್‌ ರೈನಾ (Suresh Raina) ಕೂಡಾ ಅಂತರಾಷ್ಟ್ರೀಯ ಕ್ರಿಕೆಟ್‌ ಪಂದ್ಯಾಟಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಉತ್ತಮ ಬ್ಯಾಟ್ಸ್‌ಮ್ಯಾನ್‌ ಆಗಿರುವ ರೈನಾ, ತನ್ನ ಫೀಲ್ಡಿಂಗ್‌ ಚಳಕಕ್ಕೆ ಪ್ರಸಿದ್ಧರು. ಒಟ್ಟಿನಲ್ಲಿ ಭಾರತದ ಪ್ರತಿಭಾವಂತ ಎರಡು ಆಟಗಾರರು ಇನ್ನುಮುಂದೆ ಅಂತರಾಷ್ಟ್ರೀಯ ಕ್ರಿಕೆಟ್‌ ಪಂದ್ಯಾಟದಲ್ಲಿ ಭಾರತ ತಂಡವನ್ನು ಪ್ರತಿನಿಧಿಸುವುದಿಲ್ಲ. ಇದು ವಿಶ್ವಾದ್ಯಂತ ಹಬ್ಬಿಕೊಂಡಿರುವ ಈರ್ವರ ಅಭಿಮಾನಿಗಳಲ್ಲಿ ನಿರಾಶೆ ಉಂಟು ಮಾಡಿದೆ.

Click here to follow us on Facebook , Twitter, YouTube, Telegram

Pratidhvani
www.pratidhvani.com