ಐಸಿಸಿ ವಿಶ್ವಕಪ್‌ | ಟಾಪ್ 1 ಸ್ಥಾನದಲ್ಲಿ ನ್ಯೂಜಿಲೆಂಡ್‌ ತಂಡ
ಕ್ರೀಡೆ

ಐಸಿಸಿ ವಿಶ್ವಕಪ್‌ | ಟಾಪ್ 1 ಸ್ಥಾನದಲ್ಲಿ ನ್ಯೂಜಿಲೆಂಡ್‌ ತಂಡ

ಅನುಭವಿ ಆಟಗಾರ ರಾಸ್ ಟೇಲರ್‍ರ ರೋಚಕ ಅರ್ಧ ಶತಕದ ನೆರವಿನಿಂದಾಗಿ ಕಿವೀಸ್ ತಂಡ ಬಾಂಗ್ಲಾದೇಶದ ವಿರುದ್ಧ ಅದ್ಭುತ ಜಯ ಸಾಧಿಸಿದ್ದು, ಪಾಯಿಂಟ್ಸ್ ಪಟ್ಟಿಯಲ್ಲಿ ಕೇನ್ ಪಡೆ ಟಾಪ್ 1 ಸ್ಥಾನಕ್ಕೇರಿದೆ.

ಪ್ರತಿಧ್ವನಿ ವರದಿ

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ವಿಶ್ವದ ನಂಬರ್ 1 ಅಲೌಂಡರ್ ಶಕೀಬ್ ಹಲ್ ಹಸನ್‍ರ ಆಕರ್ಷಕ ಅರ್ಧಶತಕ ಹಾಗೂ ಅಂತಿಮ ಓವರ್‍ಗಳಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡಿದ ಮೊಹಮ್ಮದ್ ಶೈಫುದ್ದೀನ್ ಆಟದ ನೆರವಿನಿಂದ ಕೇನ್ ವಿಲಿಯಮ್ಸ್‍ರ ನ್ಯೂಜಿಲೆಂಡ್ ಪಡೆಗೆ 245ರನ್‍ಗಳ ಗೆಲುವಿನ ಗುರಿಯನ್ನು ನೀಡಿತು.

ನ್ಯೂಜಿಲೆಂಡ್‍ನ ಆರಂಭಿಕ ಆಟಗಾರರಾದ ಮಾರ್ಟಿನ್ ಗುಪ್ಟಿಲ್ ಹಾಗೂ ಮುನ್ರೊ ಬಾಂಗ್ಲಾ ದೇಶದ ಬೌಲಿಂಗ್ ಪಡೆ ಎದುರು ರನ್‍ಗಳ ಸುರಿಮಳೆಯನ್ನು ಸುರಿಸಿದರು. ಗುಪ್ಟಿಲ್ ಔಟಾದ ನಂತರ ಸ್ಫೋಟಕ ಬ್ಯಾಟಿಂಗ್ ಮಾಡುತ್ತಿದ್ದ ಮುನ್ರೊ 10ನೆ ಓವರ್‍ನಲ್ಲಿ ಶಕೀಬ್‍ಗೆ ವಿಕೆಟ್ ಒಪ್ಪಿಸಿ ಹೊರ ನಡೆದರು. ನಾಯಕ ಕೇನ್ ವಿಲಿಯಮ್ಸ್ ಹಾಗೂ ರಾಸ್ ಟೇಲರ್ ತಾಳ್ಮೆಯ ಆಟ ಪ್ರದರ್ಶಿಸಿ ಇನ್ನಿಂಗ್ಸ್ ಕಟ್ಟಿದರು.

ಒಂದೆಡೆ ವಿಕೆಟ್ ಉರುಳಿದರೂ ಕ್ರೀಸ್‍ನಲ್ಲಿ ನೆಲೆಯೂರಿದ್ದ ರಾಸ್ ಟೇಲರ್‍ರ ಆಕರ್ಷಕ ಅರ್ಧಶತಕ (82 ರನ್, 9 ಬೌಂಡರಿ), ಬಾಲಂ ಗೋಚಿಗಳಾದ ಗ್ರಾಂಡ್‍ಹೋಮೆ (25 ರನ್, 2 ಬೌಂಡರಿ, 1 ಸಿಕ್ಸರ್) ಹಾಗೂ ಸ್ಯಾನೆಟರ್(17 ರನ್,2 ಬೌಂಡರಿ)ರ ಆಟದಿಂದಾಗಿ ನ್ಯೂಜಿಲೆಂಡ್ 47.1 ಓವರ್‍ಗಳಲ್ಲಿ 248 ರನ್‍ಗಳನ್ನು ಬಾರಿಸುವ ಮೂಲಕ ಗೆಲುವಿನ ಕೇಕೆ ಹಾಕಿತು.

Click here Support Free Press and Independent Journalism

Pratidhvani
www.pratidhvani.com