ಐಸಿಸಿ ವಿಶ್ವ ಕಪ್‌ | ಎಬಿಡಿ ಆಟಕ್ಕೂ ಇಲ್ಲ, ಲೆಕ್ಕಕ್ಕೂ ಇಲ್ಲ
ಕ್ರೀಡೆ

ಐಸಿಸಿ ವಿಶ್ವ ಕಪ್‌ | ಎಬಿಡಿ ಆಟಕ್ಕೂ ಇಲ್ಲ, ಲೆಕ್ಕಕ್ಕೂ ಇಲ್ಲ

ಸ್ಫೋಟಕ ಬ್ಯಾಟ್ಸಮನ್‌ ಎಬಿ ಡಿವಿಲಿಯರ್ಸ್‌ಗೆ ಪ್ರಸ್ತುತ ಐಸಿಸಿ ವಿಶ್ವಕಪ್‌ನಲ್ಲಿ ಆಡುವ ಆಸೆ ಇತ್ತು.

ಪ್ರತಿಧ್ವನಿ ವರದಿ

ಸ್ಫೋಟಕ ಬ್ಯಾಟ್ಸಮನ್‌ ಎಬಿ ಡಿವಿಲಿಯರ್ಸ್‌ಗೆ ಪ್ರಸ್ತುತ ಐಸಿಸಿ ವಿಶ್ವಕಪ್‌ನಲ್ಲಿ ಆಡುವ ಆಸೆ ಇತ್ತು. ಅದಕ್ಕಾಗಿ ನಿವೃತ್ತಿ ತ್ಯಜಿಸುವುದಕ್ಕೂ ಮುಂದಾಗಿದ್ದರು.

ಐಪಿಎಲ್‌ನಲ್ಲಿ ಮಿಂಚಿದ ಆಟಗಾರ ಎಬಿ ಡಿವಿಲಿಯರ್ಸ್‌ ಸದ್ಯ ನಿವೃತ್ತಿ ಜೀವನ ನಡೆಸುತ್ತಿದ್ದಾರೆ. ಐಸಿಸಿ ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ಸತತ ಮೂರು ಪಂದ್ಯಗಳಲ್ಲಿ ಸೋಲು ಕಂಡ ಹಿನ್ನೆಲೆಯಲ್ಲಿ ನಿವೃತ್ತಿ ತ್ಯಜಿಸಿ ಮೈದಾನಕ್ಕೆ ಇಳಿಯುವ ಇಂಗಿತವನ್ನು ವ್ಯಕ್ತಪಡಿಸಿದರು. ಆದರೆ ಸಿಕ್ಕ ಉತ್ತರ 'ಬೇಡ' !!

ಹೌದು, ಕ್ರಿಕೆಟ್‌ ದಕ್ಷಿಣ ಆಫ್ರಿಕಾ, ಮ್ಯಾಜಿಕ್ ಸ್ಫೋಟಕ ಬ್ಯಾಟ್ಸಮನ್‌ ಎಬಿಡಿ ಅವರ ಮನವಿ ತಿರಸ್ಕರಿಸಿದೆ. 2019ರ ವಿಶ್ವಕಪ್ ಗೆ ದಕ್ಷಿಣ ಆಫ್ರಿಕಾ ತಂಡವನ್ನು ಪ್ರಕಟಿಸಿದ್ದ ಬೆನ್ನಲ್ಲೇ ಡಿವಿಲಿಯರ್ಸ್ ಮ್ಯಾನೆಜ್ ಮೆಂಟ್ ಅವರನ್ನು ಸಂಪರ್ಕಿಸಿ ನಾನು ವಿಶ್ವಕಪ್ ತಂಡದಲ್ಲಿ ಆಡುತ್ತೇನೆ ಎಂದು ಕೇಳಿಕೊಂಡಿದ್ದರು. ಅದಕ್ಕೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಅವರ ಮನವಿ ತಿರಸ್ಕರಿಸಿತು.

ದಕ್ಷಿಣ ಆಫ್ರಿಕಾ ತಂಡದ ನಾಯಕ ಫಾಫ್ ಡುಪ್ಲೆಸಿಸ್, ಕೋಚ್ ಒಟ್ಟಿಸ್ ಗಿಬ್ಬನ್ ಮತ್ತು ಆಯ್ಕೆ ಸಮಿತಿ ಅಧ್ಯಕ್ಷ ಲಿಂಡಾ ಝೊಂಡಿ ಅವರ ಜೊತೆ ಡಿವಿಲಿಯರ್ಸ್ ಮಾತನಾಡಿದ್ದರು. ಆದರೆ ಎಬಿಡಿ ಮಾತಿಗೆ ಒತ್ತು ನೀಡದೆ ಅವರನ್ನು ವಿಶ್ವಕಪ್ ತಂಡಕ್ಕೆ ಸೇರಿಸಿಕೊಂಡಿಲ್ಲ.

2018ರ ಮೇ ತಿಂಗಳಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಡಿವಿಲಿಯರ್ಸ್ ವಿದಾಯ ಹೇಳಿದ್ದರು.

Click here Support Free Press and Independent Journalism

Pratidhvani
www.pratidhvani.com