ಬಂಗಾಳದ ಚುನಾವಣಾ ಕಣದಲ್ಲಿ ಈಗ ಖೇಲಾ ಹೋಬ್; ಆಟ ರಂಗೇರಿದೆ

ಸದ್ಯದ ಚಿತ್ರಣದಂತೆ ಈ ಬಾರಿ ಬಂಗಾಳದ ನೆಲದಲ್ಲಿ ಆಟ ರಂಗೇರಿದ್ದು, ಬಿಜೆಪಿ ಮತ್ತು ಟಿಎಂಸಿ ನಡುವೆ ಪ್ರಮುಖವಾಗಿ ತೀವ್ರ ಹಣಾಹಣಿ ಏರ್ಪಡಲಿದೆ. ‘ಮಹಿಷಾಸುರ ಎಂದೂ ದುರ್ಗೆಯನ್ನು ಮಣಿಸಲಾರ’ ಎಂಬ ಕೂಗು, ‘ಖೇಲಾ ಹೋಬ್’ ಜೊತೆಗೆ ಮಾರ್ದನಿಸತೊಡಗಿದೆ. ಮೋದಿ ವರ್ಸಸ್ ದೀದಿ ಕದನ ಕುತೂಹಲ ಕಾವೇರಿದೆ.
ಬಂಗಾಳದ ಚುನಾವಣಾ ಕಣದಲ್ಲಿ ಈಗ ಖೇಲಾ ಹೋಬ್; ಆಟ ರಂಗೇರಿದೆ

ಶತಾಯಗತಾಯ ಈ ಬಾರಿ ಅಧಿಕಾರ ಹಿಡಿಯಲೇಬೇಕು ಎಂಬ ಜಿದ್ದಿಗೆ ಬಿದ್ದಿರುವ ಬಿಜೆಪಿಯ ಕಾರಣಕ್ಕಾಗಿ ಇಡೀ ದೇಶದ ಕಣ್ಣು ಈಗ ಬಂಗಾಳದ ಚುನಾವಣೆಯ ಮೇಲೆ ನೆಟ್ಟಿದೆ. ಬಿಜೆಪಿಯ ಭರ್ಜರಿ ಪ್ರಚಾರ, ತಂತ್ರಗಾರಿಕೆ ಮತ್ತು ಅದಕ್ಕೆ ಪ್ರತಿಯಾಗಿ ತೃಣಮೂಲ ಕಾಂಗ್ರೆಸ್ ಅಧಿನಾಯಕಿ ಮಮತಾ ಬ್ಯಾನರ್ಜಿ ಹೂಡುತ್ತಿರುವ ಪ್ರತಿತಂತ್ರ ಮತ್ತು ಕೆಚ್ಚಿನ ಹೋರಾಟ ಈ ಕಣದಲ್ಲಿ ‘ಖೇಲಾ ಹೋಬ್’ ಕೂಗೆಬ್ಬಿಸಿದೆ. ಒಟ್ಟಾರೆ, ಆಟ ರಂಗೇರಿದೆ.

ಬಂಗಾಳದ ಚುನಾವಣಾ ಕಣದಲ್ಲಿ ಈಗ ಖೇಲಾ ಹೋಬ್; ಆಟ ರಂಗೇರಿದೆ
ನಂದಿಗ್ರಾಮ: ನಾಮಪತ್ರ ಸಲ್ಲಿಕೆಯ ನಂತರ ಮಮತಾ ಬ್ಯಾನರ್ಜಿ ಮೇಲೆ ದಾಳಿ

ಈ ನಡುವೆ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಮಗೆ ರಾಜಕೀಯ ಪುನರ್ ಜನ್ಮ ನೀಡಿದ ರೈತ ಹೋರಾಟದ ನೆಲ ನಂದಿಗ್ರಾಮದಿಂದ ಕಣಕ್ಕಿಳಿಯಲು, ನಿರೀಕ್ಷೆಯಂತೆ ಬುಧವಾರ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ತಮ್ಮ ಮೇಲೆ ಕೆಲವರು ಹಲ್ಲೆಗೆ ಯತ್ನಿಸಿದರು. ಅಗತ್ಯ ಪ್ರಮಾಣದ ಪೊಲೀಸ್ ಭದ್ರತೆ ಕೂಡ ತಮಗಿರಲಿಲ್ಲ. ಹಾಗಾಗಿ, ಇದೊಂದು ಯೋಜಿತ ಸಂಚು. ಘಟನೆಯಲ್ಲಿ ತಮ್ಮ ಕಾಲಿಗೆ ಪೆಟ್ಟಾಗಿದೆ ಎಂದು ಮಮತಾ ಬಿಜೆಪಿಯ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ನಂದಿಗ್ರಾಮದಲ್ಲಿ ಟಿಎಂಸಿ ತೊರೆದು ಇತ್ತೀಚೆಗಷ್ಟೇ ಬಿಜೆಪಿ ಸೇರಿರುವ ಹಿರಿಯ ನಾಯಕ ಸುವೇಂಧು ಅಧಿಕಾರಿ ಬಿಜೆಪಿಯ ಅಭ್ಯರ್ಥಿಯಾಗಿ ಮಮತಾ ವಿರುದ್ಧ ಕಣಕ್ಕಿಳಿದಿದ್ದಾರೆ. ಆ ಕಾರಣಕ್ಕೆ ನಂದಿಗ್ರಾಮ ದೇಶದ ಗಮನ ಸೆಳೆದಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಒಂದು ಕಡೆ ಮಮತಾ ದೀದಿ ನಂದಿಗ್ರಾಮದಲ್ಲಿ ನಾಮಪತ್ರ ಸಲ್ಲಿಸುವ ಹೊತ್ತಿಗೆ, ಮತ್ತೊಂದು ಕಡೆ ಪಶ್ಚಿಮಬಂಗಾಳದ ಪೊಲೀಸ್ ಮುಖ್ಯಸ್ಥರನ್ನು ಚುನಾವಣಾ ಆಯೋಗ ಎತ್ತಂಗಡಿ ಮಾಡಿದೆ. ಆಡಳಿತಾರೂಢ ಟಿಎಂಸಿ ಪರ ಅವರು ಪಕ್ಷಪಾತಿ ಧೋರಣೆ ಹೊಂದಿದ್ದಾರೆ ಎಂಬ ದೂರು ಬಂದ ಹಿನ್ನೆಲೆಯಲ್ಲಿ ಅವರನ್ನು ಬದಲಾಯಿಸುವಂತೆ ಮತ್ತು ಆ ಬಗ್ಗೆ ತತಕ್ಷಣಕ್ಕೆ ಕ್ರಮ ಜರುಗಿಸುವಂತೆ ಚುನಾವಣಾ ಆಯೋಗ ರಾಜ್ಯ ಸರ್ಕಾರಕ್ಕೆ ಸೂಚಿಸಿತ್ತು. ಆ ಹಿನ್ನೆಲೆಯಲ್ಲಿ ದಿಢೀರ್ ಬದಲಾವಣೆ ಮಾಡಲಾಗಿದೆ. ಆ ಬದಲಾವಣೆಯ ಬೆನ್ನಲ್ಲೇ ಸಿಎಂ ಮಮತಾ ಮೇಲೆಯೇ ಹಲ್ಲೆ ಯತ್ನ ನಡೆದಿರುವ ಗಂಭೀರ ಘಟನೆ ವರದಿಯಾಗಿದೆ.

ಬಂಗಾಳದ ಚುನಾವಣಾ ಕಣದಲ್ಲಿ ಈಗ ಖೇಲಾ ಹೋಬ್; ಆಟ ರಂಗೇರಿದೆ
BJP ಸವಾಲು ಸ್ವೀಕರಿಸಿದ ಮಮತಾ ಬ್ಯಾನರ್ಜಿ: ನಂದಿಗ್ರಾಮದಿಂದ ಸ್ಪರ್ಧೆಗೆ ಸಿದ್ಧತೆ

ಬಿಜೆಪಿಯ ಆಕ್ರಮಣಕಾರಿ ರಾಜಕೀಯ ತಂತ್ರಗಾರಿಕೆ ಮತ್ತು ಅದಕ್ಕೆ ತಿರುಗೇಟು ನೀಡುವ ತೃಣಮೂಲ ಕಾಂಗ್ರೆಸ್ಸಿನ ಪ್ರತಿರೋಧದ ರಾಜಕಾರಣದ ಕಾರಣಕ್ಕೆ ದೇಶದ ಚಿತ್ತ ಈಗ ಹೂಗ್ಲಿ ನದಿಯ ಇಕ್ಕೆಲಗಳ ಮೇಲಿನ ಬೆಳವಣಿಗೆಗಳತ್ತ ನೆಟ್ಟಿದೆ.

ಮತ್ತೊಂದು ಬೆಳವಣಿಗೆಯಲ್ಲಿ ದೆಹಲಿಯಲ್ಲಿ ಬಿಜೆಪಿ ಸರ್ಕಾರದ ಪಾಲಿಗೆ ಮಗ್ಗುಲಮುಳ್ಳಾಗಿರುವ ರೈತ ಹೋರಾಟದ ನಾಯಕರು ಕೂಡ ಬಂಗಾಳದ ಚುನಾವಣಾ ಕಣದಲ್ಲಿ ದನಿ ಎತ್ತಲು ನಿರ್ಧರಿಸಿದ್ದಾರೆ. ಸಂಯುಕ್ತ ಕಿಸಾನ್ ಮೋರ್ಚಾದ ನಾಯಕ ಯೋಗೇಂದ್ರ ಯಾದವ್ ಈ ವಿಷಯವನ್ನು ಸ್ಪಷ್ಟಪಡಿಸಿದ್ದು, ‘ರೈತ ವಿರೋಧಿ ಬಿಜೆಪಿಯ ವಿರುದ್ಧ ಪಶ್ಚಿಮಬಂಗಾಳದಲ್ಲಿ ರೈತ ಚಳವಳಿಯ ನಾಯಕರು ಪ್ರಚಾರ ನಡೆಸಲಿದ್ದಾರೆ. ರೈತರ ವಿಷಯದಲ್ಲಿ ಬಿಜೆಪಿಯ ಕೇಂದ್ರ ಸರ್ಕಾರ ಎಷ್ಟು ಅಮಾನುಷವಾಗಿ ಮತ್ತು ಸರ್ವಾಧಿಕಾರಿಯ ವರಸೆಯಲ್ಲಿ ನಡೆದುಕೊಂಡಿದೆ. ಕೃಷಿಗೆ ಮಾರಕವಾದ ಕಾನೂನುಗಳನ್ನು ರೂಪಿಸಿ ಹೇಗೆ ದಬ್ಬಾಳಿಕೆ ಪ್ರದರ್ಶಿಸುತ್ತಿದೆ. ಹೋರಾಟ ಹತ್ತಿಕ್ಕಲು ಎಂತಹ ದಮನ ನೀತಿ ಅನುಸರಿಸುತ್ತಿದೆ ಎಂಬುದನ್ನು ಬಂಗಾಳದ ಜನರಿಗೆ ಮನವರಿಕೆ ಮಾಡುತ್ತೇವೆ. ಬಿಜೆಪಿ ಮತ ನೀಡಬೇಡಿ ಎಂದು ನಾವು ಬಂಗಾಳಿಗರನ್ನು ಕೋರುತ್ತೇವೆ. ಆದರೆ, ಮತ್ತಾವುದೇ ಪಕ್ಷಕ್ಕೆ ಮತ ನೀಡಿ ಎಂದು ಕೇಳುವುದಿಲ್ಲ. ನಮ್ಮ ಪ್ರಯತ್ನದ ಫಲವಾಗಿ ಬಿಜೆಪಿಗೆ ಅದು ಪಡೆಯಲಿರುವ ಮತಗಳ ಪೈಕಿ ಶೇ.2ರಷ್ಟು ಕಡಿತವಾದರೂ, ಅದರ ಪಾಲಿಗೆ ದೊಡ್ಡ ಪೆಟ್ಟು ಬೀಳಲಿದೆ’ ಎಂದಿದ್ದಾರೆ.

ಬಂಗಾಳದ ಚುನಾವಣಾ ಕಣದಲ್ಲಿ ಈಗ ಖೇಲಾ ಹೋಬ್; ಆಟ ರಂಗೇರಿದೆ
ಪಶ್ಚಿಮ ಬಂಗಾಳ: ಟಿಎಂಸಿ ಪರ ಒಲವು ಆರೋಪ, ಡಿಜಿಪಿ ವರ್ಗಾವಣೆ

ಈ ನಡುವೆ, ವಿವಿಧ ಚುನಾವಣಾ ಪೂರ್ವ ಸಮೀಕ್ಷೆಗಳು ಬಿಜೆಪಿಯ ಉಮೇದಿಗೆ ನೀರೆರಚಿದ್ದು, ಬಹುತೇಕ ಸಮೀಕ್ಷೆಗಳು ಬಿಜೆಪಿ ಅಧಿಕಾರಕ್ಕೆ ಬರಲಾರದು ಎಂದಿವೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೇವಲ ಮೂರು ಸ್ಥಾನ ಪಡೆದಿದ್ದ ಬಿಜೆಪಿ, ಈ ಬಾರಿ 100 ಸ್ಥಾನಗಳ ಸಮೀಪಕ್ಕೆ ಹೋಗಬಹುದು ಎಂದು ಸಮೀಕ್ಷೆಗಳು ಹೇಳಿವೆ. ಆ ದೃಷ್ಟಿಯಲ್ಲಿ ಪಕ್ಷದ ಗಳಿಕೆಯ ವಿಷಯದಲ್ಲಿ ಬಿಜೆಪಿಗೆ ದೊಡ್ಡ ಮಟ್ಟದ ಲಾಭವಾಗಲಿದೆ. ಆದರೆ, ಅಧಿಕಾರ ಹಿಡಿಯಲೇಬೇಕು ಎಂಬ ಅದರ ಕನಸು ನನಸಾಗಲೂ ಅದು ಕನಿಷ್ಟ ಇನ್ನೂ ಕೆಲವು ವರ್ಷ ಕಾಯಬೇಕಾಗಬಹುದು ಎಂಬುದು ಸಮೀಕ್ಷೆಗಳ ಸಾರ. ಅದೇ ಹೊತ್ತಿಗೆ ತೃಣಮೂಲ ಕಾಂಗ್ರೆಸ್ ಈ ಬಾರಿಯೂ ಅಧಿಕಾರ ಉಳಿಸಿಕೊಳ್ಳಲಿದೆ. ಆದರೆ, ಕಳೆದ ಚುನಾವಣೆಯಲ್ಲಿ ಸಿಕ್ಕ ಅಭೂತಪೂರ್ವ ದಿಗ್ವಿಜಯ ಸಾಧ್ಯವಿಲ್ಲ. ಬಿಜೆಪಿಯ ಪೈಪೋಟಿಯ ಕಾರಣಕ್ಕೆ ಅದು ಸಾಕಷ್ಟು ಸ್ಥಾನಗಳನ್ನು ಕಳೆದುಕೊಳ್ಳಲಿದೆ. ಹಾಗಾಗಿ, ಕಳೆದ ಬಾರಿ 211 ಸ್ಥಾನಗಳಲ್ಲಿ ಗೆಲುವು ಪಡೆದಿದ್ದ ಟಿಎಂಸಿ, ಈ ಬಾರಿ 160ರ ಸಮೀಪಕ್ಕೆ ಹೋಗಬಹುದು ಎಂದಿವೆ. ಒಟ್ಟು 294 ಸದಸ್ಯಬಲದ ಪಶ್ಚಿಮಬಂಗಾಳದ ವಿಧಾನಸಭೆಯಲ್ಲಿ ಅಧಿಕಾರಕ್ಕೇರಲು 148 ಸ್ಥಾನಗಳ ಸರಳ ಬಹುಮತ ಅಗತ್ಯವಿದೆ.

ಬಂಗಾಳದ ಚುನಾವಣಾ ಕಣದಲ್ಲಿ ಈಗ ಖೇಲಾ ಹೋಬ್; ಆಟ ರಂಗೇರಿದೆ
ಚುನಾವಣೆ ಹೊಸ್ತಿಲಲ್ಲಿ ಪಶ್ಚಿಮ ಬಂಗಾಳ: ಬಿಜೆಪಿಯೆಡೆಗೆ ಇನ್ನೂ ನಿಲ್ಲದ ಟಿಎಂಸಿ ನಾಯಕರ ವಲಸೆ

ಸಮೀಕ್ಷೆಗಳ ಇಂತಹ ಭವಿಷ್ಯದ ನಡುವೆಯೂ ತೃಣಮೂಲ ಕಾಂಗ್ರೆಸ್ ಪಾಳೆಯದಲ್ಲಿ ಆತಂಕ ಮನೆ ಮಾಡಿದ್ದು, ಮುಖ್ಯವಾಗಿ 291 ಕ್ಷೇತ್ರಗಳಿಗೆ ತನ್ನ ಉಮೇದುವಾರರ ಅಂತಿಮ ಪಟ್ಟಿ ಹೊರಬಿದ್ದ ಬೆನ್ನಲ್ಲೇ ಪಕ್ಷದ ಘಟಾನುಘಟಿ ನಾಯಕರು, ಸಚಿವರು, ಶಾಸಕರು ಸೇರಿದಂತೆ ಹಲವರು ಬಿಜೆಪಿ ಕಡೆಗೆ ಸಾಮೂಹಿಕ ವಲಸೆ ಆರಂಭಿಸಿರುವುದು ತಲೆನೋವಾಗಿ ಪರಿಣಮಿಸಿದೆ. ಸ್ವತಃ ಸಿಎಂ ಮಮತಾ ವಿರುದ್ಧ ನಂದಿಗ್ರಾಮದಲ್ಲಿ ಕಣಕ್ಕಿಳಿದಿರುವ ಸುವೇಂಧು ಅಧಿಕಾರಿ ಸೇರಿದಂತೆ, ಸುಮಾರು 20ಕ್ಕೂ ಹೆಚ್ಚು ಮಂದಿ ಹಾಲಿ ಸಚಿವರು ಮತ್ತು ಶಾಸಕರು ತೃಣಮೂಲದಿಂದ ಬಿಜೆಪಿಗೆ ಪಕ್ಷಾಂತರ ಮಾಡಿದ್ದಾರೆ. ಅದರಲ್ಲೂ ಪ್ರಮುಖರಾದ ಅರಿಂದಮ್ ಭಟ್ಟಾಚಾರ್ಯ, ರಾಜೀವ್ ಬ್ಯಾನರ್ಜಿ, ವೈಶಾಲಿ ದಾಲ್ಮಿಯಾ, ಜೀತೇಂದ್ರ ತಿವಾರಿ, ದಿನೇಶ್ ತ್ರಿವೇದಿ, ಜಾತೂ ಲಹಿರಿ, ಸೊನಾಲಿ ಗುಹಾ, ರವೀಂದ್ರ ಭಟ್ಟಾಚಾರ್ಯ, ತನುಶ್ರೀ ಚಕ್ರವರ್ತಿ ಮುಂತಾದವರು ತಂಡೋಪತಂಡವಾಗಿ ಕೇಸರಿಪಡೆ ಸೇರಿರುವುದು ಚುನಾವಣಾ ಕಣದಲ್ಲಿ ಭಾರೀ ಪೆಟ್ಟು ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಆದರೆ, ಮಮತಾ ಬ್ಯಾನರ್ಜಿ ಅವರ ಕಠಿಣ ನಿಲುವು ಮತ್ತು ಸ್ವಜನಪಕ್ಷಪಾತದ ಕಾರಣಕ್ಕೆ ಹೀಗೆ ವಲಸೆ ಹೋಗುವ ವಿದ್ಯಮಾನ ಹೊಸದೇನಲ್ಲ. ಮುಕುಲ್ ರಾಯ್ ಅವರಂಥ ಹಿರಿಯ ನಾಯಕ ಭ್ರಷ್ಟಾಚಾರ ಪ್ರಕರಣದಂತಹ ತೂಗುಗತ್ತಿಯಿಂದ ಪಾರಾಗಲು ಬಿಜೆಪಿ ಸೇರಿದ ದಿನಗಳಿಂದಲೂ ಇಂತಹ ವಲಸೆ ನಡೆಯುತ್ತಲೇ ಇದೆ. ಆದರೆ, ಹಾಗೆ ಹೋದವರೆಲ್ಲಾ ಜೊಳ್ಳುಗಳೇ. ಸ್ವತಃ ಚುನಾವಣೆಗೆ ನಿಂತು ಗೆಲ್ಲುವ ಭರವಸೆ ಕಳೆದುಕೊಂಡಿರುವವರೇ ಹೆಚ್ಚಿದ್ದಾರೆ. ಜೊತೆಗೆ ಬಿಜೆಪಿ ಒಡ್ಡಿರುವ ಬೆದರಿಕೆ ಮತ್ತು ಆಮಿಷಕ್ಕೆ ತಲೆಬಾಗಿ ಕೆಲವರು ಪಕ್ಷಾಂತರ ಮಾಡಿದ್ದಾರೆ. ಹಾಗಾಗಿ ಜೊಳ್ಳುಗಳು ತೂರಿಹೋಗಿ, ಗಟ್ಟಿ ಕಾಳುಗಳು ಪಕ್ಷದಲ್ಲಿ ಉಳಿದಿವೆ. ಈ ಬಾರಿ ಟಿಕೆಟ್ ಹಂಚಿಕೆಯಲ್ಲೂ ಯಾವ ಮುಲಾಜಿಲ್ಲದೆ ಇಂತಹ ಜೊಳ್ಳುಗಳನ್ನು, ವಿಶ್ವಾಸಘಾತುಕರನ್ನು ಮತ್ತು ಭ್ರಷ್ಟರನ್ನು ದೂರವಿಡಲಾಗಿದೆ ಎಂಬುದು ಟಿಎಂಸಿ ನಾಯಕರ ಸಮರ್ಥನೆ.

ಬಂಗಾಳದ ಚುನಾವಣಾ ಕಣದಲ್ಲಿ ಈಗ ಖೇಲಾ ಹೋಬ್; ಆಟ ರಂಗೇರಿದೆ
ಪಶ್ಚಿಮ ಬಂಗಾಳ ವಿಶೇಷ ನ್ಯಾಯಾಲಯದಿಂದ ಅಮಿತ್‌ ಶಾಗೆ ಸಮನ್ಸ್‌ ಜಾರಿ

ಇಂತಹ ಸಮರ್ಥನೆಗಳು ಏನೇ ಇದ್ದರೂ, ತಂತ್ರ- ಕುತಂತ್ರಗಳ ಮೂಲಕ ಬಿಜೆಪಿ, ಚುನಾವಣಾ ಕಣದಲ್ಲೂ ತೃಣಮೂಲ ಕಾಂಗ್ರೆಸ್ಸಿಗರಿಗೆ ಬಲೆ ಬೀಸುತ್ತಲೇ ಇದೆ ಮತ್ತು ಟಿಎಂಸಿ ಪಾಳೆಯದಿಂದ ಹಾಗೆ ಒಡ್ಡಿದ ಬಲೆಗೆ ಬೀಳುವವರ ಪ್ರಮಾಣ ಕೂಡ ಹೆಚ್ಚಿದೆ. ಅಂತಿಮವಾಗಿ ಈ ವಲಸೆ ಕಣದಲ್ಲಿ ಟಿಎಂಸಿಗೆ ಗಣನೀಯ ಪೆಟ್ಟು ನೀಡಲಿದೆ ಎಂಬುದನ್ನು ತಳ್ಳಿಹಾಕಲಾಗದು ಎಂಬುದು ರಾಜಕೀಯ ವಿಶ್ಲೇಷಕರ ಮಾತು.

ಈ ನಡುವೆ, ಕಾಂಗ್ರೆಸ್ ಮತ್ತು ಎಡಪಕ್ಷಗಳ ಮೈತ್ರಿಗೆ ಈ ಬಾರಿಯೂ ಆಘಾತಕಾರಿ ಸುದ್ದಿಗಳು ಕಾದಿವೆ ಎಂಬುದು ಇತ್ತೀಚಿನ ಸಮೀಕ್ಷೆಗಳ ಸಾರ. ಈ ಮೈತ್ರಿಕೂಟ ಈ ಬಾರಿ ಬಿಜೆಪಿ ಮತ್ತು ತೃಣಮೂಲ ಸಂಘರ್ಷದಲ್ಲಿ, ಇಬ್ಬರ ಜಗಳದಲ್ಲಿ ಮೂರನೆಯವರಿಗೆ ಲಾಭವಾಗಬಹುದು ಎಂಬ ನಿರೀಕ್ಷೆಯಲ್ಲಿ ಇವೆ. ಆದರೆ, ಚುನಾವಣಾ ಪೂರ್ವ ಸಮೀಕ್ಷೆಗಳು ಹೇಳುವ ಲೆಕ್ಕಾಚಾರಗಳು, ಅಂತಹ ನಿರೀಕ್ಷೆಗಳನ್ನು ತಲೆಕೆಳಗು ಮಾಡುವ ಹಾದಿಯಲ್ಲಿವೆ. ಕಾಂಗ್ರೆಸ್, ಸಿಪಿಎಂ, ಸಿಪಿಐ ಹಾಗೂ ಹೊಸ ಪಕ್ಷ ಇಂಡಿಯನ್ ಸೆಕ್ಯುಲರ್ ಫ್ರಂಟ್(ಐಎಸ್ ಎಫ್) ಒಳಗೊಂಡ ಈ ಮೈತ್ರಿ, ಈ ಬಾರಿ ಕಳೆದ ಚುನಾವಣೆಯಲ್ಲಿ ಪಡೆದದ್ದಕ್ಕಿಂತ ಕಡಿಮೆ ಸ್ಥಾನಗಳನ್ನು ಪಡೆಯಲಿದೆ ಎಂದು ಇತ್ತೀಚಿನ ಸಮೀಕ್ಷೆಗಳು ಹೇಳಿವೆ.

ಹಾಗಾಗಿ, ಸದ್ಯದ ಚಿತ್ರಣದಂತೆ ಈ ಬಾರಿ ಬಂಗಾಳದ ನೆಲದಲ್ಲಿ ಆಟ ರಂಗೇರಿದ್ದು, ಬಿಜೆಪಿ ಮತ್ತು ಟಿಎಂಸಿ ನಡುವೆ ಪ್ರಮುಖವಾಗಿ ತೀವ್ರ ಹಣಾಹಣಿ ಏರ್ಪಡಲಿದೆ. ‘ಮಹಿಷಾಸುರ ಎಂದೂ ದುರ್ಗೆಯನ್ನು ಮಣಿಸಲಾರ’ ಎಂಬ ಕೂಗು, ‘ಖೇಲಾ ಹೋಬ್’ ಜೊತೆಗೆ ಮಾರ್ದನಿಸತೊಡಗಿದೆ. ಮೋದಿ ವರ್ಸಸ್ ದೀದಿ ಕದನ ಕುತೂಹಲ ಕಾವೇರಿದೆ

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com