ಪಶ್ಚಿಮ ಬಂಗಾಳ ಚುನಾವಣೆ: ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ಅಗ್ನಿ ಪರೀಕ್ಷೆಯ ಕಾಲ

ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಬಿಜೆಪಿ ಅಧಿಕಾರದ ಗದ್ದುಗೆ ಹಿಡಿಯಲು ಹರಸಾಹಸ ಪಡುತ್ತಿದ್ದು, ತೃಣಮೂಲ ಕಾಂಗ್ರೆಸ್ ಸಿಪಿಎಂ ಮತ್ತು ಕಾಂಗ್ರೆಸ್ ಜೊತೆ ಮೈತ್ರಿಯಾಗುತ್ತಾ? ಅನ್ನೋ ಪ್ರಶ್ನೆ ಕುತೂಹಲಕ್ಕೆ ಎಡೆ ಮಾಡಿಕೊಡುತ್ತಿದೆ.
ಪಶ್ಚಿಮ ಬಂಗಾಳ ಚುನಾವಣೆ: ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ಅಗ್ನಿ ಪರೀಕ್ಷೆಯ ಕಾಲ

ಪಶ್ಚಿಮ ಬಂಗಾಳದ ಮುಂಬರುವ ವಿಧಾನಸಭೆ ಚುನಾವಣೆ TMC ಮತ್ತು ಬಿಜೆಪಿ ನಡುವೆ ತೀವ್ರ ಪೈಪೋಟಿಗೆ ಎಡೆಮಾಡಿಕೊಟ್ಟಿದೆ. ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಸರ್ಕಾರ ಬೀಳಿಸಲು ಬಿಜೆಪಿ ಸಜ್ಜಾದಂತಿದೆ. ಬಿಜೆಪಿಗರ ಆಮಿಷವೋ ಅಥವಾ ಅಧಿಕಾರದ ಆಸೆಗೋ ಅನೇಕ ಶಾಸಕರು, ಸಚಿವರುಗಳು ಟಿಎಂಸಿ ತೊರೆದು ಬಿಜೆಪಿ ಸೇರ್ಪೆಡೆಯಾಗುವ ಮೂಲಕ ದೀದಿ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದಾರೆ. ಕೆಲವು ದಿನದ ಹಿಂದೆ ಪ. ಬಂಗಾಳದಲ್ಲಿ ಅಮಿತ್ ಶಾ ಚುನಾವಣಾ ರ್ಯಾಲಿ ಹೆಚ್ಚು ಸದ್ದು ಮಾಡಿದ್ದು, ಈ ಬಾರಿ ಅಧಿಕಾರದ ಪಟ್ಟ ಏರುತ್ತೇವೆಂಬ ಭರವಸೆ ನೀಡುವ ಮುಖೇನ ದೀದಿ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದಾರೆ.

ಮಮತಾ ಬ್ಯಾನರ್ಜಿ ಓಟ್ ಬ್ಯಾಂಕ್ ಮೇಲೆ ಮೋದಿ-ಶಾ ಕಣ್ಣು

2011 ವಿಧಾನಸಭಾ ಚುನಾವಣೆಯಲ್ಲಿ 294 ಸ್ಥಾನಗಳಲಿ 184 ಸ್ಥಾನ ಬ್ಯಾನರ್ಜಿ ನೇತೃತ್ವದ ಟಿಎಂಸಿ ಪಕ್ಷ ಗೆದ್ದುಕೊಂಡಿತ್ತು. ಅಧಿಕಾರದ ಗದ್ದುಗೆ ಏರಲು 42 ಸ್ಥಾನಗೆದ್ದ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳಲಾಗಿತ್ತು. ಇಲ್ಲಿ ಟಿಎಂಸಿ ಮತ್ತು ಕಾಂಗ್ರೆಸ್ ಎರಡು ಪಕ್ಷಗಳ ಶೇಕಡವಾರು ಮತ ಪ್ರಮಾಣ 39.9 ರಷ್ಟಾಗಿತ್ತು.

ಇನ್ನು 2014 ರ ಲೋಕಸಭಾ ಚುನಾವಣೆಯಲ್ಲಿ ದೇಶದಲ್ಲಿ ಮೋದಿ ಅಲೆ ಹಬ್ಬಿತ್ತು. ಇದರ ಮಧ್ಯೆ ಪಶ್ಚಿಮ ಬಂಗಾಳದಲ್ಲಿ ಮಾತ್ರ ಬ್ಯಾನರ್ಜಿ ನೇತೃತ್ವದ ಟಿಎಂಸಿ 42 ಸ್ಥಾನಗಳಲ್ಲಿ 32 ಸ್ಥಾನಗಳನ್ನು ಗೆದ್ದು ಬೀಗಿತ್ತು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ


ಮತ್ತೆ 2016 ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ 294 ಸ್ಥಾನಗಳಲ್ಲಿ ಟಿಎಂಸಿ 211 ಸ್ಥಾನಗಳನ್ನು ಗೆದ್ದುಕೊಂಡು ಶೇಕಡಾ 45ರಷ್ಟು ಮತ ಪಡೆದಿತ್ತು.

2019 ರ ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನಿಯಂತ್ರಣ ಸಾಧಿಸುವ ಪ್ರಯತ್ನ ಮಾಡಿತ್ತು. ಬ್ಯಾನರ್ಜಿ ಸರ್ಕಾರದ ವಿರುದ್ಧ ಬಿಜೆಪಿ ತೀರ್ವ ಪೈಪೋಟಿ ನಡೆಸಿತ್ತು. ಇದರ ಮಧ್ಯೆಯೆ 42 ಸ್ಥಾನಗಳಲ್ಲಿ 22 ಸ್ಥಾನಗಳನ್ನು ಗೆದ್ದುಕೊಂಡು ಶೇಕಡಾ 44 ರಷ್ಟು ಮತಗಳನ್ನು ಪಡೆದಿತ್ತು. ಇಲ್ಲಿ ಬಿಜೆಪಿ 18 ಸ್ಥಾನಗಳನ್ನು ಗೆದ್ದುಕೊಳ್ಳುವ ಮೂಲಕ ಶೇಕಡಾ 40.64 ಮತ ಪಡೆದಿತ್ತು.

ಬಿರುಸುಗೊಂಡ ಅಮಿತ್‌ ಶಾ ಪ್ರಚಾರ ಕಾರ್ಯ

ಕಳೆದ ಹತ್ತು ವರ್ಷಗಳಲ್ಲಿಂದ ದೇಶಾದ್ಯಂತ ಬಿಜೆಪಿ ಮತ ಪಾಲನ್ನು ಹೆಚ್ಚಿಸಿಕೊಂಡಿದೆ. ಇತ್ತ 9 ವರ್ಷಗಳಿಂದ ಪಶ್ಚಿಮ ಬಂಗಾಳದಲ್ಲಿಯೂ ತನ್ನ ಸ್ಥಾನವನ್ನು ಹೆಚ್ಚಿಸಿಕೊಳ್ಳಲು ಹರಸಾಹಸ ಮಾಡುತ್ತಿದೆ. ಅದರಲ್ಲಿಯೂ ಮೋದಿ ಅಮಿತ್ ಶಾ ಬಂಗಾಳಿಗರನ್ನು ಭಾಷಾ ದೃಷಿಯಿಂದ ಸೆಳೆಯಲು ಮುಂದಾಗಿದ್ದಾರೆ. ಚುನಾವಣೆಯ ಸಂಬರ್ಧದಲ್ಲಿ ಮೋದಿ, ಶಾ ಹೆಚ್ಚಾಗಿ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿದ್ದು, ಇದೀಗ ಕೆಲವು ದಿನಗಳ ಹಿಂದೆ ಮುಂಬರುವ ವಿಧಾನ ಸಭಾ ಚುನಾವಣಾ ಗಮನದಲ್ಲಿಟ್ಟುಕೊಂಡು ಗೃಹ ಸಚಿವ ಅಮಿತ್ ಶಾ ರ್ಯಾಲಿ ನಡೆಸಿದ್ದಾರೆ. ಕೇರಳ ಮತ್ತು ತಮಿಳು ನಾಡಿನ ಚುನಾವಣೆಯೂ ಹತ್ತಿರವಾಗುತ್ತಿದ್ದು, ಆ ಕಡೆ ಗಮನಹರಿಸಿದ್ದು ಕಡಿಮೆಯೇ.

ಇತ್ತ ಮತದಾರರನ್ನು ಸೆಳೆಯಲು ಮತ್ತೊಂದು ವಿಚಾರ ಮುಖ್ಯವಾಗುತ್ತೆ. ಬಿಜೆಪಿ ಮತ್ತು ಜನಸಂಘದ ಸಂಸ್ಥಾಪಕ ಶ್ಯಾಮಾ ಪ್ರಸಾದ್ ಮುಖರ್ಜಿ ಪಶ್ಚಿಮಬಂಗಾಳ ಮೂಲದವರು ಇಲ್ಲಿ ಭಾವನಾತ್ಮಕವಾಗಿ ಜನರನ್ನು ಸೆಳೆಯುವುದು ಬಿಜೆಪಿ ತಂತ್ರವಾಗಿರ ಬಹುದು.

ಕುಂಟಿತಗೊಂಡ ಎಡಪಕ್ಷಗಳ ಮತ

2011 ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಎಂಸಿ ಯೊಂದಿಗೆ ಮೈತ್ರಿ ಮಾಡಿಕೊಂಡಿತ್ತು. 2014 ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 42 ಸ್ಥಾನಗಳಲ್ಲಿ 4 ಸ್ಥಾನ ಗೆದಿತ್ತು. ಮತ್ತೆ 2016 ರಲ್ಲಿ ಟಿಎಂಸಿ ಜೊತೆಗೆ ಮೈತ್ರಿ ಮಾಡಿಕೊಂಡರು. ನಂತರದ ದಿನ ಕಾಂಗ್ರೆಸ್ ಮತ್ತು ಎಡಪಂಥೀಯ ಪಕ್ಷಗಳ ಮತವೂ ಕಡಿಮೆಯಾಗ ತೊಡಗಿತು.

ಎಚ್ಚೆತ್ತು ಕೊಂಡ ಎಡಪಂಥೀಯ ಪಕ್ಷಗಳು

ಮುಂಬರು ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಸಿಪಿಎಂ ಪಕ್ಷಗಳು ತಮ್ಮ ಮತದಾನ ನೆಲೆಗಳನ್ನು ರಕ್ಷಿಸಲು ಈಗಿಂದಲೆ ಪಣತೊಡುತ್ತಿವೆ. ಈ ಬಾರಿಯ ಪ.ಬಂ. ಚುನಾವಣೆ ಬಿಜೆಪಿ ಅಧಿಕಾರದ ಗದ್ದುಗೆ ಹಿಡಿಯಲು ಹರಸಾಹಸ ಮಾಡುತ್ತಿದ್ದು, ತೃಣಮೂಲ ಕಾಂಗ್ರೆಸ್ ಸಿಪಿಎಂ ಮತ್ತು ಕಾಂಗ್ರೆಸ್ ಜೊತೆ ಮೈತ್ರಿಯಾಗುತ್ತಾ? ಅನ್ನೋ ಪ್ರಶ್ನೆ ಎದುರಾಗುತ್ತದೆ. ದಿ ಪ್ರಿಂಟ್‌ನ ಪ್ರಧಾನ ಸಂಪಾದಕ ಶೇಖರ್ ಗುಪ್ತಾ ಮಾಡಿದ ವರದಿಯಲ್ಲಿ ಪ್ರಸ್ತಾಪಿಸಿದ್ದಾರೆ.

ತೃಣಮೂಲ ಕಾಂಗ್ರೆಸ್‌ನ ಪ್ರಭಾವಿಗಳು ಬಿಜೆಪಿಗೆ ಸೇರ್ಪಡೆ

ತೃಣಮೂಲ ಕಾಂಗ್ರೆಸ್‌ನ ಪ್ರಭಾವಿ ನಾಯಕ ಸುವೆಂದು ಅಧಿಕಾರಿ ಸೇರಿದಂತೆ 13 ನಾಯಕರು ಡಿಸೆಂಬರ್ ತಿಂಗಳಲ್ಲಿ ಅಮಿತ್ ಶಾ ಪ.ಬಂ ಮಿಡ್ನಾಪುರ್ ರ್ಯಾಲಿ ಸಂದರ್ಭದಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಸೇಪರ್ಡೆಯಾದ ನಾಯಕರು ದೀದಿ ಸರ್ಕಾರ ಆಡಳಿತವನ್ನು ಟೀಕಿಸಿದ್ದಾರೆ. ಅಂದರೆ ಪಕ್ಷ ಅಸಂಘಟಿತಗೊಂಡಿದ್ದರಿಂದಾಗಿ ಬಿಜೆಪಿ ಸೇರ್ಪಡೆಯಾಗಲಾಗಿದೆ ಎಂಬುವುದು ಪಕ್ಷಾಂತರಗೊಂಡ ನಾಯಕರ ಅಭಿಪ್ರಾಯ.

ಇತ್ತ ಈ ಬಾರಿಯ ಪ.ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ 250 ಸ್ಥಾಗಳಲ್ಲಿ 200 ಸ್ಥಾನಗಳನ್ನು ಗೆದ್ದು, ಪ. ಬಂಗಾಳದ ಆಡಳಿತ ನಡೆಸುತ್ತೇವೆಂದು ಬಿಜೆಪಿಯ ಪ್ರಬಲ ನಾಯಕ ಅಮಿತ್ ಶಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದು 10 ವರ್ಷ ಅಧಿಕಾರದ ನಡೆಸಿದ ಬ್ಯಾನರ್ಜಿ ನೇತೃತ್ವದ ಟಿಎಂಸಿ, ಕಾಂಗ್ರೆಸ್, ಸಿಪಿಎಂ ಪಕ್ಷಕ್ಕೆ ಈ ಚುನಾವಣೆ ಅಗ್ನಿಪರೀಕ್ಷೆಯಂತಾಗಿದೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com