ಮುಖ್ಯಮಂತ್ರಿ ಸ್ಥಾನಕ್ಕೆ ಆಸೆಪಟ್ಟು ಟಿಎಂಸಿ ಶಾಸಕ ಸುವೆಂದು ರಾಜೀನಾಮೆ - ಸಂಸದ ಕಲ್ಯಾಣ ಬ್ಯಾನರ್ಜಿ

9 ರಿಂದ 10 ಸಚಿವರುಗಳು ಪಕ್ಷತೊರೆಯಲ್ಲಿದ್ದಾರೆಂಬ ಮಾತುಕೇಳಿ ಬರುತ್ತಿದ್ದು, ಇದು ಬ್ಯಾನರ್ಜಿ ನೇತೃತ್ವದ ಸರ್ಕಾರಕ್ಕೆ ಚುನಾವಣೆಗೂ ಮುನ್ನವೇ ರಾಜೀನಾಮೆಯ ಬಿಸಿ ತಟ್ಟುವ ಸಾಧ್ಯತೆಯಿದೆ.
ಮುಖ್ಯಮಂತ್ರಿ ಸ್ಥಾನಕ್ಕೆ ಆಸೆಪಟ್ಟು ಟಿಎಂಸಿ ಶಾಸಕ ಸುವೆಂದು ರಾಜೀನಾಮೆ - ಸಂಸದ ಕಲ್ಯಾಣ ಬ್ಯಾನರ್ಜಿ

ಪಶ್ಚಿಮಬಂಗಾಳದ ತೃಣಮೂಲ ಕಾಂಗ್ರೆಸ್ ನಾಯಕ ಸುವೆಂದು ಬಿಜೆಪಿ ಸೇರುತ್ತಾರೆಂಬ ಗಾಳಿಸುದ್ದಿಯ ನಡುವೆಯೇ ನಿನ್ನೆ ಪಕ್ಷದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇನ್ನೂ ಕೆಲವೇ ದಿನಗಳಲ್ಲಿ ಟಿಎಂಸಿ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ನೀಡಲಿದ್ದಾರೆಂಬ ಸುದ್ದಿ ಆಪ್ತಮೂಲಗಳಿಂದ ತಿಳಿದುಬಂದಿದೆ.

ಒಂದು ತಿಂಗಳ ಹಿಂದೆ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಸುವೆಂದು ಇದೀಗ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡುವ ಮೂಲಕ ಪಕ್ಷದ ಎಲ್ಲಾ ಕೆಲಸ ಕಾರ್ಯಗಳಿಂದ ಹೊರ ಉಳಿದಿದ್ದಾರೆ. ಸದ್ಯದಲ್ಲಿಯೇ ಬಿಜೆಪಿ ಸೇರ್ಪಡೆಯಾಗುವ ಸಾಧ್ಯತೆಯಿದ್ದು, ಈ ಸಂಬಂಧ ಬಿಜೆಪಿ ರಾಷ್ಟೀಯ ಉಪಾಧ್ಯಕ್ಷ ಮುಕುಲ್ ರಾಯ್ ಸಂತಸ ವ್ಯಕ್ತಪಡಿಸಿ, ಬಿಜೆಪಿ ಸೇರ್ಪಡೆಗೆ ಮುಕ್ತವಾಗಿ ಸ್ವಾಗತಿಸಲಿದ್ದೇವೆಂಬ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ


ಮುಖ್ಯಮಂತ್ರಿ ಅಥವಾ ಉಪಮುಖ್ಯಮಂತ್ರಿಯಾಗಲು ಬಯಸಿದ ಸುವೆಂದುಗೆ ಪಕ್ಷದಲ್ಲಿ ಆ ಸ್ಥಾನ ಕೈತಪ್ಪಬಹುದೆಂಬ ನಿರಾಸೆಯಿಂದ ಅಧಿಕಾರದ ಆಸೆಯಿಂದ ಬಿಜೆಪಿಗೆ ಸೇರ ಬಯಸಿ ರಾಜೀನಾಮೆ ನೀಡಿದ್ದಾರೆಂದು ಟಿಎಂಸಿ ಸಂಸದ ಕಲ್ಯಾಣ ಬ್ಯಾನರ್ಜಿ ಪ್ರತಿಕ್ರಿಯಿಸಿದ್ದಾರೆ.

ಸಿಎಂ ಮಮತಾ ಬ್ಯಾನರ್ಜಿ ಆಪ್ತ ಹಾಗೂ ನಂದಿಗಾಮ್ರ್ ಆಂದೋಲನದ ಪ್ರಮುಖರಲ್ಲಿ ಒಬ್ಬರಾದ ಸುವೆಂದು ರಾಜೀನಾಮೆ ಬ್ಯಾನರ್ಜಿ ಸೇರಿದಂತೆ ಪಕ್ಷದ ಹಲವು ನಾಯಕರು, ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚು ಮತಗಳಿಂದ ಗೆಲುವ ಭರವಸೆ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ 9 ರಿಂದ 10 ಸಚಿವರುಗಳು ಪಕ್ಷತೊರೆಯಲ್ಲಿದ್ದಾರೆಂಬ ಮಾತುಕೇಳಿ ಬರುತ್ತಿದ್ದು, ಇದು ಬ್ಯಾನರ್ಜಿ ನೇತೃತ್ವದ ಸರ್ಕಾರಕ್ಕೆ ರಾಜೀನಾಮೆಯ ಬಿಸಿ ಮುಟ್ಟಿದಂತಾಗುತ್ತಿದೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com