ತಮಿಳುನಾಡು ಚುನಾವಣೆ ಗೆಲ್ಲಲು ಕಾಂಗ್ರೆಸ್‌ ಭರ್ಜರಿ ತಯಾರಿ

ಕಳೆದ ಸಲ ಚುನಾವಣೆಯಲ್ಲಿ ಗೆದ್ದ ಸೀಟುಗಳಿಗಿಂತ ಹೆಚ್ಚು ಸ್ಥಾನಗಳು ಗೆಲ್ಲಬೇಕು. ಸ್ಪರ್ಧಿಸಿ ಸೋತ ಸ್ಥಾನಗಳಲ್ಲಿಯೂ ನಮ್ಮ ಛಾಪು ಮೂಡಿಸಬೇಕೆಂದು ತಮಿಳುನಾಡು ಕಾಂಗ್ರೆಸ್‌ ಹೊರಟಿದೆ.
ತಮಿಳುನಾಡು ಚುನಾವಣೆ ಗೆಲ್ಲಲು ಕಾಂಗ್ರೆಸ್‌ ಭರ್ಜರಿ ತಯಾರಿ

ತಮಿಳುನಾಡು ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳುಗಳು ಮಾತ್ರ ಬಾಕಿಯಿವೆ. ಒಂದೆಡೆ ಆಡಳಿತಾರೂಢ ಎಐಎಡಿಎಂಕೆಯೊಂದಿಗೆ ಮೈತ್ರಿಯಾಗಿ ಬಿಜೆಪಿ ತನ್ನ ಖಾತೆ ತೆರೆಯಲು ಮುಂದಾಗಿದ್ದರೆ, ಇನ್ನೊಂದೆಡೆ ಡಿಎಂಕೆ ಜತೆ ಸೇರಿ ಕಾಂಗ್ರೆಸ್‌ ಈ ಬಾರಿ ತಮಿಳುನಾಡಿನಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಯತ್ನಿಸುತ್ತಿದೆ. ಅದಕ್ಕಾಗಿಯೇ ವಿಧಾನಸಭಾ ರಣರಂಗಕ್ಕೆ ಕಾಂಗ್ರೆಸ್‌ ಭರ್ಜರಿ ತಯಾರಿ ನಡೆಸಿಕೊಳ್ಳುತ್ತಿದೆ. ಹೀಗಾಗಿ ಚುನಾವಣೆಯ ಕಾರ್ಯತಂತ್ರಗಳು ಹೇಗಿರಬೇಕು? ಎಂಬುದರ ಕುರಿತಂತೆ ಹೈಕಮಾಂಡ್ ಜೊತೆ ಚರ್ಚಿಸಲು ರಾಜ್ಯ ತಮಿಳುನಾಡು ನಾಯಕರು ದೆಹಲಿಗೆ ದೌಡಾಯಿಸಿದ್ದಾರೆ ಎನ್ನಲಾಗಿದೆ.

ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ರಾಜ್ಯ ಕಾಂಗ್ರೆಸ್‌ ನಾಯಕರೊಂದಿಗೆ ಸದ್ಯದಲ್ಲೇ ಸಮಾಲೋಚನೆ ಸಭೆ ನಡೆಯಲಿದೆ. ಕಾಂಗ್ರೆಸ್ ತಮಿಳುನಾಡು ಉಸ್ತುವಾರಿ ದಿನೇಶ್ ಗುಂಡೂರಾವ್ ಸೇರಿದಂತೆ ರಾಜ್ಯದ ಶಾಸಕರು, ಪರಿಷತ್ ಸದಸ್ಯರು, ಸಂಸದರು, ವಿವಿಧ ಮುಖಂಡರು, ಪದಾಧಿಕಾರಿಗಳು ದೆಹಲಿಗೆ ದೌಡಾಯಿಸಿದ್ದಾರೆ. ಇಲ್ಲಿ ಮುಂದಿನ ವಿಧಾನಸಭಾ ಚುನಾವಣೆಗೆ ವಿವಿಧ ಸಮುದಾಯದವರ ಮತ ಹೇಗೆ? ಸೆಳೆಯಬೇಕೆಂದು ಕಾರ್ಯತಂತ್ರ ರೂಪಿಸಲಿದ್ದಾರೆ. ಈ ನಿಟ್ಟಿನಲ್ಲಿ ಕಾಂಗ್ರೆಸ್‌ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಯಲಿದೆ ಎನ್ನುತ್ತಿವೆ ಮೂಲಗಳು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ


ಮಹಾಸಮರಕ್ಕೆ ಸಜ್ಜು:

ರಾಜ್ಯದಲ್ಲಿ ಎಐಎಡಿಎಂಕೆ-ಬಿಜೆಪಿ ಮೈತ್ರಿ, ಕಮಲ್‌, ರಜನೀಕಾಂತ್‌ ಪಕ್ಷಗಳನ್ನು ಹೇಗೆ ಎದುರಿಸಬೇಕು; ಚುನಾವಣೆ ಮಹಾಸಮರಕ್ಕೆ ನಡೆಸಿಕೊಳ್ಳಬೇಕಾದ ಪೂರ್ವ ಸಿದ್ಧತೆ; ವಿರೋಧ ಪಕ್ಷಗಳನ್ನು ಸೆದೆ ಬಡಿಯುವುದು ಹೇಗೆ?; ಗೆಲ್ಲಲು ರಣತಂತ್ರ, ಪ್ರಣಾಳಿಕೆ ಸಿದ್ಧತೆ ಜೊತೆಗೆ ಹಲವು ವಿಚಾರಗಳನ್ನು ಚರ್ಚಿಸಲಿದ್ದಾರೆ. ಹಾಗೆಯೇ ಕಳೆದ ವರ್ಷ ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿಯನ್ನು ಹೇಗೆ ಸೋಲಿಸಿದೆವು, ಹಾಗೆಯೇ ತಮಿಳುನಾಡಿನಲ್ಲೂ ಬಿಜೆಪಿಗೆ ಸೋಲುಣಿಸಬೇಕು ಎಂದು ಚರ್ಚೆ ನಡೆಯಲಿದೆ ಎಂದು ಹೇಳಲಾಗುತ್ತಿದೆ.

ಅಭ್ಯರ್ಥಿಗಳ ಆಯ್ಕೆ ಮಾನದಂಡ:

ಈಗಾಗಲೇ ರಾಜ್ಯದ ಎಲ್ಲಾ ವಿಧಾನಸಭಾ ಚುನಾವಣೆಗೆ ನಿಲ್ಲಲು ಉತ್ಸುಕರಾಗಿರುವ ಅಭ್ಯರ್ಥಿಗಳ ಕುರಿತಂತೆ ಸ್ಥಳೀಯ ನಾಯಕರಿಂದ ಹೈಕಮಾಂಡ್ ಮಾಹಿತಿ ಸಂಗ್ರಹಿಸಿದೆ. ಅಭ್ಯರ್ಥಿಗಳ ಸ್ಥಿತಿಗತಿ ಹೇಗಿದೆ? ಎಂಬ ಬಗೆಗಿನ ಮಾಹಿತಿಯೂ ಕಲೆ ಹಾಕಿದ್ದಾರೆ. ಸ್ಥಳೀಯ ನಾಯಕರ ಅಭಿಪ್ರಾಯವೂ ಕಾರ್ಯಕಾರಿಣಿ ಸಭೆಯಲ್ಲಿ ಮುಂದಿಡಲಿದ್ದಾರೆ. ಈ ಸಂದರ್ಭದಲ್ಲಿ ಅಭ್ಯರ್ಥಿಗಳ ಆಯ್ಕೆ ಮಾನದಂಡ? ಯಾರಿಗೆ ಅವಕಾಶ ನೀಡಬೇಕು? ಯಾವ ಹಾಲಿ ಶಾಸಕರನ್ನು ಕೈ ಬಿಡಬೇಕೆಂದು ನಿರ್ಧರಿಸಲಿದ್ದಾರೆ.

ಇನ್ನು ದೇಶಾದ್ಯಂತ ಬಿಜೆಪಿ ವಿರೋಧಿ ಪಡೆ ಪುಟಿದೇಳುತ್ತಿದೆ. ಬಿಜೆಪಿಯೂ ಕೇಂದ್ರ ವಿರೋಧ ಪಕ್ಷಗಳಿಗೆ ಬಗ್ಗು ಬಡೆಯಲು ಮುಂದಾಗಿದೆ. ಹೇಗಾದರೂ ಸರಿ ತಮಿಳುನಾಡು ಚುನಾವಣೆ ಗೆಲ್ಲುವ ಉದ್ದೇಶದಿಂದ ಬಿಜೆಪಿ ಹಲವು ರಣತಂತ್ರಗಳನ್ನು ರೂಪಿಸುತ್ತಿದೆ. ಹಾಗಾಗಿ, ನಾವು ಬಿಜೆಪಿಯನ್ನು ಟಾರ್ಗೆಟ್‌ ಮಾಡಬೇಕು. ತಮಿಳುನಾಡಿನಲ್ಲಿ ಕನಿಷ್ಠ 100 ದಿನಗಳು ಸಾಲುಸಾಲು ಕಾರ್ಯಕ್ರಮಗಳನ್ನು ನಡೆಸಬೇಕು ಎಂದು ತೀರ್ಮಾನಿಸುವ ಸಾಧ್ಯತೆ ಇದೆ.ಸೋತ ಕ್ಷೇತ್ರಗಳನ್ನು ಗೆಲ್ಲಲು ಯೋಜನೆ:

ಕಳೆದ ಬಾರಿ ಸೋತ ಕ್ಷೇತ್ರಗಳನ್ನು ಮತ್ತೆ ಗೆಲ್ಲಬೇಕಿದೆ. ಇಲ್ಲಿ ಎದುರಾಳಿ ಬಿಜೆಪಿಯನ್ನು ಮಣಿಸಬೇಕಿದೆ. ಹೇಗಾದರೂ ಮತ್ತೆ ಮತದಾರರನ್ನು ತಲುಪುವ ಯೋಜನೆಗಳನ್ನು ಹಾಕಿಕೊಳ್ಳಬೇಕಿದೆ. ಕಳೆದ ಸಲ ಚುನಾವಣೆಯಲ್ಲಿ ಗೆದ್ದ ಸೀಟುಗಳಿಗಿಂತ ಹೆಚ್ಚು ಸ್ಥಾನಗಳು ಗೆಲ್ಲಬೇಕು. ಸ್ಪರ್ಧಿಸಿ ಸೋತ ಸ್ಥಾನಗಳಲ್ಲಿಯೂ ನಮ್ಮ ಛಾಪು ಮೂಡಿಸಬೇಕೆಂದು ತಮಿಳುನಾಡು ಕಾಂಗ್ರೆಸ್‌ ಹೊರಟಿದೆ.

ಇನ್ನು 2014ರ ಚುನಾವಣೆಯಲ್ಲಿ ಪಶ್ಚಿಮ ಬಂಗಾಳ, ಅಸ್ಸಾಂ, ಒಡಿಶಾಗಳ ಒಟ್ಟು 77 ಲೋಕಸಭಾ ಕ್ಷೇತ್ರಗಳ ಪೈಕಿ ಕೇವಲ 10 ಸ್ಥಾನಗಳನ್ನು ಮಾತ್ರ ಬಿಜೆಪಿ ಮಡಿಲಿಗೆ ಹಾಕಿಕೊಂಡಿತ್ತು. ಹಾಗೆಯೇ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳದಲ್ಲಿಯೂ ಭಾರೀ ಕಡಿಮೆ ಪ್ರಮಾಣದಲ್ಲಿ ಗೆಲ್ಲುವಂತಾಯ್ತು. ಹೀಗಾಗಿ ಮುಂಬರುವ ಚುನಾವಣೆಯಲ್ಲಿ ಮೇಲಿನ ರಾಜ್ಯಗಳಲ್ಲಿ ಹೆಚ್ಚು ಸ್ಥಾನಗಳು ಬಿಜೆಪಿಗೆ ಒಲಿಯುವಂತೆ ಮಾಡಲು ಕೇಸರಿ ಪಡೆ ಯೋಜನೆಯನ್ನು ಹಾಕಿಕೊಂಡಿದೆ. ಈ ಹಿನ್ನೆಲೆಯಲ್ಲಿ ಇಂದು ರಾಷ್ಟ್ರೀಯ ಬಿಜೆಪಿ ಕಾರ್ಯಕಾರಿಣಿಸಿ ಸಭೆ ನಡೆಸುತ್ತಿದ್ದು, ಎಲ್ಲಾ ವಿಚಾರಗಳ ಬಗ್ಗೆ ಚರ್ಚಿಸಲಿದ್ದಾರೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com