11 ರಾಜ್ಯಗಳಲ್ಲಿ ಉಪಚುನಾವಣೆ: ಬಹುಪಾಲು ಗೆಲುವು ಬಿಜೆಪಿಗೆ

ಮಧ್ಯಪ್ರದೇಶದಲ್ಲಿ 28 ಕ್ಷೇತ್ರಗಳಿಗೆ ಉಪಚುನಾವಣೆ ನಡೆದಿದ್ದರಿಂದ ಈ ಉಪಚುನಾವಣೆ ಮಧ್ಯ ಪ್ರದೇಶ ಸರ್ಕಾರದ ಅಳಿವು ಉಳಿವಿನ ಪ್ರಶ್ನೆಯಾಗಿತ್ತು.
11 ರಾಜ್ಯಗಳಲ್ಲಿ ಉಪಚುನಾವಣೆ: ಬಹುಪಾಲು ಗೆಲುವು ಬಿಜೆಪಿಗೆ

ಬಿಹಾರದ ವಾಲ್ಮೀಕಿ ನಗರ ಲೋಕಸಭೆ ಉಪಚುನಾವಣೆ ಫಲಿತಾಂಶದೊಂದಿಗೆ ದೇಶದಾದ್ಯಂತ 58 ವಿಧಾನಸಭೆ ಉಪಚುನಾವಣೆಗಳ ಫಲಿತಾಂಶವೂ ನವೆಂಬರ್‌ 10 ಕ್ಕೆ ಪ್ರಕಟಗೊಂಡಿದೆ. ಇದರಲ್ಲಿ ಬಹುತೇಕ ಸ್ಥಾನಗಳನ್ನು ಬಿಜೆಪಿ ಪಡೆದುಕೊಂಡಿದೆ.

ನವೆಂಬರ್‌ ಹತ್ತು ಕೇವಲ ಬಿಹಾರ ವಿಧಾನಸಭೆಗೆ ನಿರ್ಣಾಯಕ ದಿನ ಮಾತ್ರವಾಗಿರಲಿಲ್ಲ, ಮಧ್ಯಪ್ರದೇಶದ ಶಿವರಾಜ್‌ ಸಿಂಗ್‌ ಚೌಹಾನ್‌ ಸರ್ಕಾರಕ್ಕೂ ನಿರ್ಣಾಯಕ ದಿನವಾಗಿತ್ತು. 11 ರಾಜ್ಯಗಳಲ್ಲಿ ಉಪಚುನಾವಣೆ ನಡೆದಿದ್ದರೂ, ಮಧ್ಯಪ್ರದೇಶದಲ್ಲಿ 28 ಕ್ಷೇತ್ರಗಳಿಗೆ ಉಪಚುನಾವಣೆ ನಡೆದಿದ್ದರಿಂದ ಈ ಉಪಚುನಾವಣೆ ಮಧ್ಯ ಪ್ರದೇಶ ಸರ್ಕಾರದ ಅಳಿವು ಉಳಿವಿನ ಪ್ರಶ್ನೆಯಾಗಿತ್ತು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಮಧ್ಯಪ್ರದೇಶದಲ್ಲಿ ಶಿವರಾಜ್‌ ಸಿಂಗ್‌ ಚೌಹಾನ್‌ ಅವರ ಸರ್ಕಾರಕ್ಕೆ ಸರಳ ಬಹುಮತ ಸಾಬೀತು ಪಡಿಸಲು ಕನಿಷ್ಟ 9 ಸ್ಥಾನಗಳ ಅನಿವಾರ್ಯತೆ ಇದ್ದು, ಕಾಂಗ್ರೆಸ್‌ಗೆ ಸರ್ಕಾರ ರಚಿಸಲು 28 ಸ್ಥಾನಗಳನ್ನೂ ಗೆಲ್ಲಬೇಕಾದ ಅನಿವಾರ್ಯತೆ ಇತ್ತು. ಮಂಗಳವಾರ ರಾತ್ರಿ 10:30 ಗೆ ಚುನಾವಣಾ ಆಯೋಗ ನೀಡಿರುವ ಮಾಹಿತಿ ಪ್ರಕಾರ ಬಿಜೆಪಿ 16 ರಲ್ಲಿ ಗೆಲುವು ಸಾಧಿಸಿ ಸರ್ಕಾರವನ್ನು ಭದ್ರಪಡಿಸಿಕೊಂಡಿದೆ. ಇನ್ನೂ ಮೂರು ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ. ಕಾಂಗ್ರೆಸ್‌ ಆರು ಕ್ಷೇತ್ರಗಳಲ್ಲಿ ಗೆದ್ದುಕೊಂಡಿದೆ. ಇನ್ನೂ ಮೂರು ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದೆ.

ಉತ್ತರ ಪ್ರದೇಶದಲ್ಲಿ 7 ವಿಧಾನಸಭಾ ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆದಿದ್ದು 6 ಕ್ಷೇತ್ರದಲ್ಲಿ ಆಡಳಿತರೂಢ ಬಿಜೆಪಿ ಗೆದ್ದಿದೆ. ಒಂದು ಕ್ಷೇತ್ರ ಸಮಾಜವಾದಿ ಪಾರ್ಟಿ ಗೆದ್ದುಕೊಂಡಿದೆ.

11 ರಾಜ್ಯಗಳಲ್ಲಿ ಉಪಚುನಾವಣೆ: ಬಹುಪಾಲು ಗೆಲುವು ಬಿಜೆಪಿಗೆ
ಬಿಹಾರದಲ್ಲಿ ಮುಂದುವರಿದ ಹಾವು ಏಣಿ ಆಟ; ಬಿಜೆಪಿಯ ವಿರುದ್ಧ ಫಲಿತಾಂಶ ತಿರುಚುವ ಆರೋಪ!

ಛತ್ತೀಸಗಢದಲ್ಲಿ ಒಂದು ಕ್ಷೇತ್ರಕ್ಕೆ ಉಪಚುನಾವಣೆ ನಡೆದಿದ್ದು ಕಾಂಗ್ರೆಸ್‌ ಗೆದ್ದುಕೊಂಡಿದೆ.

ಗುಜರಾತಿನಲ್ಲಿ ಎಂಟು ಕ್ಷೇತ್ರಗಳಿಗೆ ಉಪಚುನಾವಣೆ ನಡೆದಿದ್ದು ಎಂಟೂ ಕ್ಷೇತ್ರವನ್ನು ಆಡಳಿತರೂಢ ಬಿಜೆಪಿ ಗೆದ್ದುಕೊಂಡಿದೆ.

ಹರ್ಯಾಣದಲ್ಲಿ ಒಂದು ಕ್ಷೇತ್ರಕ್ಕೆ ಉಪಚುನಾವಣೆ ನಡೆದಿದ್ದು ಕಾಂಗ್ರೆಸ್‌ ಗೆದ್ದುಕೊಂಡಿದೆ.

ಜಾರ್ಖಂಡ್‌ನಲ್ಲಿ ಎರಡು ಕ್ಷೇತ್ರಕ್ಕೆ ಉಪಚುನಾವನೆ ನಡೆದಿದ್ದು ಒಂದರಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಿದರೆ, ಇನ್ನೊಂದರಲ್ಲಿ ಪ್ರಾದೇಶಿಕ ಪಕ್ಷ ಜಾರ್ಖಂಡ್‌ ಮುಕ್ತಿ ಮೋರ್ಚಾ ಗೆದ್ದುಕೊಂಡಿದೆ.

ಕರ್ನಾಟಕದಲ್ಲಿ ಎರಡು ವಿಧಾನಸಭೆ ಕ್ಷೇತ್ರದಲ್ಲಿ ಉಪಚುನಾವಣೆ ನಡೆದಿದ್ದು ಎರಡೂ ಕ್ಷೇತ್ರವನ್ನು ಬಿಜೆಪಿ ಗೆದ್ದುಕೊಂಡಿದೆ.

11 ರಾಜ್ಯಗಳಲ್ಲಿ ಉಪಚುನಾವಣೆ: ಬಹುಪಾಲು ಗೆಲುವು ಬಿಜೆಪಿಗೆ
ಬಿಹಾರದ ಗದ್ದುಗೆ ಹಿಡಿಯುವತ್ತ ಬಿಜೆಪಿ, ಮಹಾಘಟಬಂಧನಕ್ಕೆ ಅನಿರೀಕ್ಷಿತ ಹಿನ್ನಡೆ

ಮಣಿಪುರದಲ್ಲಿ ಐದು ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆದಿದ್ದು ಬಿಜೆಪಿ 4 ಸ್ಥಾನಗಳನ್ನು ಗೆದ್ದುಕೊಂಡರೆ, ಒಂದು ಸ್ಥಾನದಲ್ಲಿ ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.

ನಾಗಾಲ್ಯಾಂಡ್‌ ನಲ್ಲಿ ಎರಡು ಸ್ಥಾನಗಳಿಗೆ ಉಪಚುನಾವಣೆ ನಡೆದಿದ್ದುಒಂದು ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಗೆದ್ದುಕೊಂಡರೆ, ಎನ್‌ಡಿಪಿಪಿ ಇನ್ನೊಂದು ಸ್ಥಾನವನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ.

ಒಡಿಸಾದಲ್ಲಿ ಎರಡು ಕ್ಷೇತ್ರದಲ್ಲಿ ಉಪಚುನಾವಣೆ ನಡೆದಿದ್ದು ಎರಡರಲ್ಲೂ ಬಿಜು ಜನತಾ ದಳ ಗೆದ್ದಿದೆ.

ತೆಲಂಗಾಣದಲ್ಲಿ ಒಂದು ಕ್ಷೇತ್ರದಲ್ಲಿ ಉಪಚುನಾವಣೆ ನಡೆದಿದ್ದು ಬಿಜೆಪಿ ಗೆಲುವು ಸಾಧಿಸಿದೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com