ಉಪಚುನಾವಣೆ: ಕಾಂಗ್ರೆಸ್‌ ʼಕೈʼ ಹಿಡಿಯುವುದೇ ಡಿಕೆಶಿ ಜಾತಿ ಲೆಕ್ಕಾಚಾರ?

ರಾಜರಾಜೇಶ್ವರಿ ನಗರ ಕ್ಷೇತ್ರವನ್ನು ಮತ್ತೆ ತನ್ನ ತೆಕ್ಕೆಗೆ ಪಡೆದುಕೊಳ್ಳುವುದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಅವರಿಗೆ ಪ್ರತಿಷ್ಟೆಯ ವಿಚಾರ. ಹಾಗಾಗಿ ಅವರು ಉಪಚುನಾವಣೆ ಗೆಲ್ಲಲು ಸಾಕಷ್ಟು ತಯಾರಿಯಲ್ಲಿದ್ದಾರೆ.
ಉಪಚುನಾವಣೆ: ಕಾಂಗ್ರೆಸ್‌ ʼಕೈʼ ಹಿಡಿಯುವುದೇ ಡಿಕೆಶಿ ಜಾತಿ ಲೆಕ್ಕಾಚಾರ?

ರಾಜರಾಜೇಶ್ವರಿ ನಗರ ಹಾಗೂ ಶಿರಾ ಕ್ಷೇತ್ರದಲ್ಲಿ ನಡೆಯಲಿರುವ ಉಪಚುನಾವಣೆ ಭಾರೀ ಕುತೂಹಲ ಮೂಡಿಸಿದೆ. ರಾಜರಾಜೇಶ್ವರಿ ನಗರದಲ್ಲಿ ಮುನಿರತ್ನ ಹಣ ಮತ್ತು ಜನಬಲದೊಂದಿಗೆ ಪ್ರಭಾವಿಯಾಗಿದ್ದರೂ, ಡಿಕೆ ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ರಾಜಕೀಯ ಚದುರಂಗದಾಟದಲ್ಲಿ ಹಿಂದೆ ಬಿದ್ದಿಲ್ಲ.

ಕಾಂಗ್ರೆಸ್ ರಾಜರಾಜೇಶ್ವರಿ ನಗರ ಕ್ಷೇತ್ರವನ್ನು ತನ್ನಲ್ಲೇ ಉಳಿಸಿಕೊಳ್ಳಬೇಕೆಂಬ ಹಪಾಹಪಿಯಲ್ಲಿದೆ. ಪ್ರಸ್ತುತ ಬಿಜೆಪಿ ಅಭ್ಯರ್ಥಿ ಮುನಿರತ್ನ ಕಾಂಗ್ರೆಸ್‌ ನಿಂದ ಇದೇ ಕ್ಷೇತ್ರದಲ್ಲಿ ಗೆದ್ದಿದ್ದವರು. ಕಾಂಗ್ರೆಸ್‌ ಬಲದಿಂದ ಮುನಿರತ್ನ ಗೆದ್ದಿದ್ದರೆ ಅಥವಾ ಮುನಿರತ್ನ ಪ್ರಭಾವದಿಂದ ಕಾಂಗ್ರೆಸ್‌ ಈ ಕ್ಷೇತ್ರವನ್ನು ಪಡೆದುಕೊಂಡಿತ್ತೇ ಎನ್ನುವುದು ಉಪಚುನಾವಣೆ ಫಲಿತಾಂಶದಲ್ಲಿ ತಿಳಿಯಲಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ರಾಜರಾಜೇಶ್ವರಿ ನಗರದಲ್ಲಿ ಒಕ್ಕಲಿಗ ಮತಗಳು ನಿರ್ಣಾಯಕವಾಗಲಿದ್ದು, ಒಕ್ಕಲಿಗ ಮತದ ಮೇಲೆಯೇ ಕಾಂಗ್ರೆಸ್ ಗಮನವಿಟ್ಟು ಒಕ್ಕಲಿಗ ಅಭ್ಯರ್ಥಿ ಕುಸುಮಾರನ್ನು ಕಣಕ್ಕಿಳಿಸಿದೆ. ಹೇಳಿ ಕೇಳಿ ಕುಸುಮಾ ಅವರು ಜೆಡಿಎಸ್‌ ಮಾಜಿ ಮುಖಂಡ ಹನುಮಂತರಾಯಪ್ಪ ಅವರ ಪುತ್ರಿ. ಸಾಲದೆಂಬಂತೆ, ಡಿಕೆ ಸುರೇಶ್ ನೇತೃತ್ವದಲ್ಲಿ ರಾಜರಾಜೇಶ್ವರಿ ನಗರ ಘಟಕಾಧ್ಯಕ್ಷ ಬೆಟ್ಟಸ್ವಾಮಿ ಗೌಡ ಸೇರಿದಂತೆ ಸುಮಾರು ಇನ್ನೂರಕ್ಕೂ ಹೆಚ್ಚು ಜೆಡಿಎಸ್‌ ಕಾರ್ಯಕರ್ತರು ಜೆಡಿಎಸ್‌ ತೊರೆದು ಕಾಂಗ್ರೆಸ್‌ ಪಕ್ಷ ಸೇರ್ಪಡೆಗೊಂಡಿದ್ದಾರೆ. ಹಾಗಾಗಿ ಜೆಡಿಎಸ್‌ ಮತಗಳು ಛಿದ್ರಗೊಂಡು ಕಾಂಗ್ರೆಸ್‌ ಪಾಲಾಗುವುದು ಬಹುತೇಕ ಖಚಿತ.

ಉಪಚುನಾವಣೆ: ಕಾಂಗ್ರೆಸ್‌ ʼಕೈʼ ಹಿಡಿಯುವುದೇ ಡಿಕೆಶಿ ಜಾತಿ ಲೆಕ್ಕಾಚಾರ?
ವ್ಯಕ್ತಿಗಳ ಪಾಲಿಗಲ್ಲದಿದ್ದರೂ ಈ ಉಪಚುನಾವಣೆ ಪಕ್ಷಗಳ ಪಾಲಿಗೆ ಪ್ರತಿಷ್ಠೆಯೇ!

ರಾಜರಾಜೇಶ್ವರಿ ನಗರ ಕ್ಷೇತ್ರವನ್ನು ಮತ್ತೆ ತನ್ನ ತೆಕ್ಕೆಗೆ ಪಡೆದುಕೊಳ್ಳುವುದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಅವರಿಗೆ ಪ್ರತಿಷ್ಟೆಯ ವಿಚಾರ. ಹಾಗಾಗಿ ಅವರು ಉಪಚುನಾವಣೆ ಗೆಲ್ಲಲು ಸಾಕಷ್ಟು ತಯಾರಿಯಲ್ಲಿದ್ದಾರೆ. ಶತಾಯಗತಾಯ ಗೆಲ್ಲಲೇ ಬೇಕೆಂಬ ಯೋಜನೆಯೊಂದಿಗೆ ನೇರವಾಗಿ ಅಖಾಡಕ್ಕೆ ಧುಮುಕಿದ್ದಾರೆ.

ರಾಜರಾಜೇಶ್ವರಿ ನಗರದಲ್ಲಿ ವಲಸಿಗ ಅಭ್ಯರ್ಥಿಗೆ ಟಿಕೇಟ್‌ ನೀಡಿರುವುದು ಬಿಜೆಪಿಯ ಮೂಲ ಕಾರ್ಯಕರ್ತರಲ್ಲಿ ಅಸಮಾಧಾನ ಮೂಡಿಸಿದೆ. ಈ ಅಸಮಾಧಾನವನ್ನು ಡಿಕೆಶಿ ನೇತೃತ್ವದ ಕಾಂಗ್ರೆಸ್‌ ತನ್ನ ಬಲ ವೃಧ್ದಿಸಲು ಬಳಸಿಕೊಳ್ಳುವ ಯೋಜನೆಯನ್ನು ಹಾಕಿಕೊಂಡಿದೆ. ಅದಾಗ್ಯೂ ಕಳೆದ ಬಾರಿ ಮುನಿರತ್ನ ವಿರುದ್ಧ ಸೋತಿದ್ದ ಬಿಜೆಪಿ ಅಭ್ಯರ್ಥಿ ತುಳಸಿ ಮುನಿರಾಜು ದೇಶ ಮೊದಲು ಪಕ್ಷ ಮೊದಲು ಎಂದು ಪಕ್ಷದ ವರಿಷ್ಟರ ತೀರ್ಮಾನಕ್ಕೆ ಬದ್ಧರಾಗಿರುವುದಾಗಿರುವುದಾಗಿ ಘೋಷಿಸಿಕೊಂಡಿದ್ದಾರೆ.

ಉಪಚುನಾವಣೆ: ಕಾಂಗ್ರೆಸ್‌ ʼಕೈʼ ಹಿಡಿಯುವುದೇ ಡಿಕೆಶಿ ಜಾತಿ ಲೆಕ್ಕಾಚಾರ?
ಉಪಚುನಾವಣೆ; ರಾಜ್ಯದಲ್ಲಿ ಕಾವೇರಿದ ರಾಜಕೀಯ ಚಟುವಟಿಕೆ

ರಾಜರಾಜೇಶ್ವರಿ ನಗರದಲ್ಲಿ ಕಳೆದ ಬಾರಿ ಜೆಡಿಎಸ್‌ನಿಂದ ಪ್ರಜ್ವಲ್‌ ರೇವಣ್ಣ ಸ್ಪರ್ಧಿಸುತ್ತಾರೆ ಎನ್ನುವ ಸುದ್ದಿ ಹರಿದಾಡಿತ್ತು. ಮುನಿರತ್ನ ಹಾಗೂ ಎಚ್‌ ಡಿ ಕುಮಾರಸ್ವಾಮಿ ಒಳ ಒಪ್ಪಂದದಿಂದ ಪ್ರಜ್ವಲ್‌ ಬದಲು ರಾಮಚಂದ್ರ ಅವರನ್ನು ಜೆಡಿಎಸ್‌ನಿಂದ ಕಣಕ್ಕಿಳಿಸಿಲಾಗಿದೆ ಎನ್ನುವ ಮಾತುಗಳು ಕೇಳಿಬಂದಿದ್ದವು. ಪ್ರಜ್ವಲ್‌ ನಿಂತಿದ್ದರೆ ಈ ಕ್ಷೇತ್ರ ಜೆಡಿಎಸ್‌ ಪಾಲಿಗೆ ಸುಲಭದ ತುತ್ತಾಗಿರುತ್ತಿತ್ತು. ಆದರೆ ರಾಮಚಂದ್ರರ ಪ್ರಭಾವ ಮುನಿರತ್ನರನ್ನು ಸೋಲಿಸಲು ಸಾಧ್ಯವಾಗಿಲ್ಲ. ಅಲ್ಲದೆ ಒಕ್ಕಲಿಗ ಸಮುದಾಯದ ತುಳಸಿ ಮುನಿರಾಜು ಬಿಜೆಪಿಯಿಂದ ಸ್ಪರ್ಧಿಸಿದ್ದು ಜೆಡಿಎಸ್‌ಗೆ ಹಿನ್ನಡೆಯಾಗಿತ್ತು.

ಈ ಬಾರಿ ಒಕ್ಕಲಿಗ ಸಮುದಾಯದಿಂದಲೇ ಬಂದಿರುವ ಡಿಕೆ ಶಿವಕುಮಾರ್‌ ಜಾತಿ ಲೆಕ್ಕಾಚಾರದಲ್ಲೇ ತನ್ನ ಯೋಜನೆ ರೂಪಿಸಿಕೊಂಡಿರುವುದು ಮೇಲ್ನೋಟಕ್ಕೆ ಸಾಬೀತಾಗುತ್ತದೆ. ಡಿಕೆಶಿ ಲೆಕ್ಕಾಚಾರ ಯಶಸ್ವಿಯಾದರೆ ರಾಜರಾಜೇಶ್ವರಿ ನಗರದ ಶಾಸಕ ಸ್ಥಾನ ಕುಸುಮಾ ಅವರ ಪಾಲಿಗೆ ಬರುವುದರಲ್ಲಿ ಸಂಶಯವಿಲ್ಲ. ಆದರೆ ಎರಡು ಬಾರಿ ರಾಜರಾಜೇಶ್ವರಿ ನಗರದಿಂದ ಶಾಸಕರಾಗಿ ಆಯ್ಕೆಯಾಗಿರುವ ಮುನಿರತ್ನರನ್ನು ಸೋಲಿಸುವ ಛಾತಿ ಕುಸುಮಾ ಹಾಗೂ ಕಾಂಗ್ರೆಸ್‌ ಪಾಳಯಕ್ಕೆ ಇದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

ಉಪಚುನಾವಣೆ: ಕಾಂಗ್ರೆಸ್‌ ʼಕೈʼ ಹಿಡಿಯುವುದೇ ಡಿಕೆಶಿ ಜಾತಿ ಲೆಕ್ಕಾಚಾರ?
ಆರ್‌ಆರ್‌ ನಗರ ಉಪಚುನಾವಣೆ; ಬಿಜೆಪಿ ಅಭ್ಯರ್ಥಿ ಮುನಿರತ್ನ ಆಸ್ತಿಯಲ್ಲಿ ಭಾರಿ ಏರಿಕೆ

ಶಿರಾದಲ್ಲಿ ತೆನೆಹೊತ್ತ ಮಹಿಳೆಗೆ ಸಿಗುವುದೇ ಅವಕಾಶ?

ಶಿರಾ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುವ ಸಾಧ್ಯತೆ ಕಡಿಮೆ. 2018 ರ ಚುನಾವಣೆಯಲ್ಲಿ 63,973 ಮತಗಳನ್ನು ಪಡೆದು ಕಾಂಗ್ರೆಸ್‌ ಅಭ್ಯರ್ಥಿ ಟಿ.ಬಿ ಜಯಚಂದ್ರ ಸೋತಿದ್ದರೆ, 74,338 ಮತ ಪಡೆದು ಜೆಡಿಎಸ್‌ ಅಭ್ಯರ್ಥಿ ಸತ್ಯನಾರಾಯಣ ವಿಜಯ ಪತಾಕೆ ಹಾರಿಸಿದ್ದರು. ಈ ವೇಳೆ ಬಿಜೆಪಿ ಗಳಿಸಿಕೊಂಡಿದ್ದು ಕೇವಲ 16 ಸಾವಿರದಷ್ಟು ಮತ.

ಶಿರಾ ಕ್ಷೇತ್ರದಲ್ಲಿ ಅಕಾಲಿಕ ಮರಣಗೊಂಡ ಸತ್ಯನಾರಾಯಣ ಅವರ ಪತ್ನಿ ಅಮ್ಮಾಜಮ್ಮರನ್ನು ಜೆಡಿಎಸ್‌ ಕಣಕ್ಕಿಳಿಸಿದೆ. ಆ ಮೂಲಕ ಅನುಕಂಪದ ಆಧಾರದ ಮೇಲೆ ಕ್ಷೇತ್ರವನ್ನು ಗೆಲ್ಲುವ ಯೋಜನೆಯನ್ನು ಜೆಡಿಎಸ್‌ ಹಾಕಿಕೊಂಡಿದೆ. ಕಾಂಗ್ರೆಸ್‌ ಅಭ್ಯರ್ಥಿ ಟಿ.ಬಿ ಜಯಚಂದ್ರ ಅವರಿಗೆ ಹೋಲಿಸಿಕೊಂಡರೆ ಅಮ್ಮಾಜಮ್ಮ ಅಷ್ಟೇನೂ ಪ್ರಭಾವಿ ಅಭ್ಯರ್ಥಿಯಲ್ಲ. ಟಿಬಿ ಜಯಚಂದ್ರ ಈ ಹಿಂದೆ ಎರಡು ಬಾರಿ ಇದೇ ಕ್ಷೇತ್ರದಿಂದ ಶಾಸಕರಾಗಿ ಸಚಿವ ಸ್ಥಾನವನ್ನೂ ಅಲಂಕರಿಸಿದ್ದವರು. ಹಾಗಾಗಿ ಶಿರಾ ಕ್ಷೇತ್ರ ಇನ್ನೊಮ್ಮೆ ಟಿಬಿ ಜಯಚಂದ್ರರ ಪಾಲಾಗಬಹುದು ಎಂಬುದು ರಾಜಕೀಯ ತಜ್ಞರ ಲೆಕ್ಕಾಚಾರ.

ಉಪಚುನಾವಣೆ: ಕಾಂಗ್ರೆಸ್‌ ʼಕೈʼ ಹಿಡಿಯುವುದೇ ಡಿಕೆಶಿ ಜಾತಿ ಲೆಕ್ಕಾಚಾರ?
ಶಿರಾ ಉಪಚುನಾವಣೆ: ನಾಮಪತ್ರ ಸಲ್ಲಿಸಿದ ಕಾಂಗ್ರೆಸ್‌ ಅಭ್ಯರ್ಥಿ ಟಿ ಬಿ ಜಯಚಂದ್ರ

ಸಿಎಂ ಬಿಎಸ್‌ವೈಗೆ ಅಗ್ನಿಪರೀಕ್ಷೆ:

ಉಪಚುನಾವಣೆ ನಡೆಯಲಿರುವ ಎರಡು ಕ್ಷೇತ್ರಗಳಲ್ಲಿ ಒಂದರಲ್ಲಾದರೂ ಗೆಲ್ಲಬೇಕಾದ ಅನಿವಾರ್ಯತೆ ಯಡಿಯೂರಪ್ಪ ಅವರಿಗೆ ಇದೆ. ಅದರಲ್ಲೂ ವಿಜಯೇಂದ್ರ ಹಗರಣ, ಸರ್ಕಾರದಲ್ಲಿ ವಿಜಯೇಂದ್ರರ ಹಸ್ತಕ್ಷೇಪದ ಆರೋಪಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ ಉಪಚುನಾವಣೆಯಲ್ಲಿ ಒಂದರಲ್ಲಿ ಗೆಲುವು ಸಾಧಿಸಲೇಬೇಕಾದ ಒತ್ತಡದಲ್ಲಿ ಯಡಿಯೂರಪ್ಪ ಹಾಗೂ ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ ಇದ್ದಾರೆ. ಹೈಕಮಾಂಡ್‌ ಕೂಡಾ ಒಂದನ್ನು ಗೆಲ್ಲಿಸಿಕೊಡುವಂತೆ ಕೇಳಿಕೊಂಡಿದೆ ಎಂಬ ಮಾತುಗಳು ರಾಜಕೀಯ ಪಡಸಾಲೆಯಿಂದ ಕೇಳಿಬರುತ್ತಿವೆ. ಈ ಚುನಾವಣೆಯಲ್ಲಿ ವ್ಯತಿರಿಕ್ತ ಫಲಿತಾಂಶ ಬಂದರೆ ಯಡಿಯೂರಪ್ಪ ಅವರ ಸಿಎಂ ಸ್ಥಾನಕ್ಕೂ ಕುತ್ತು ಬರುವ ಸಾಧ್ಯತೆ ಇದೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com