ಏಪ್ರಿಲಲ್ಲಿ ಸಂಪುಟ ವಿಸ್ತರಣೆ: ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡ ಸಿಎಂ

ಏಪ್ರಿಲಲ್ಲಿ ಸಂಪುಟ ವಿಸ್ತರಣೆ: ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡ ಸಿಎಂ

ಇಂದಿರಾತನಯ

ಬಜೆಟ್ ಅಧಿವೇಶನದ ನಂತರ ಸಂಪುಟ ವಿಸ್ತರಣೆ ಮಾಡುವುದಾಗಿ ಹೇಳುವ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಚಿವಾಕಾಂಕ್ಷಿಗಳಲ್ಲಿ ನಿರಾಶೆ ತಂದಿದ್ದರೂ ಅಸಮಾಧಾನ ಬಗೆಹರಿಸಿಕೊಳ್ಳುವ ತಮ್ಮ ಕೆಲಸವನ್ನು ಅವರು ಆಕಾಂಕ್ಷಿಗಳಿಗೂ ಹಂಚಿದ್ದಾರೆ. ಜತೆಗೆ ವರಿಷ್ಠರಿಗೂ ಗೊಂದಲ ಬಗೆಹರಿಸಲು ನೀವು ಮಧ್ಯೆಪ್ರವೇಶಿಸಿ ಎಂಬ ಸಂದೇಶ ನೀಡಿದ್ದಾರೆ.

ಕೊನೇ ಕ್ಷಣದಲ್ಲಿ ಮನಸ್ಸು ಬದಲಿಸಿದ BSY, ಟ್ರಂಪ್‌  ಔತಣಕೂಟದಲ್ಲಿ ಪಾಲ್ಗೊಳ್ಳುತ್ತಿರುವುದೇಕೆ?

ಕೊನೇ ಕ್ಷಣದಲ್ಲಿ ಮನಸ್ಸು ಬದಲಿಸಿದ BSY, ಟ್ರಂಪ್‌  ಔತಣಕೂಟದಲ್ಲಿ ಪಾಲ್ಗೊಳ್ಳುತ್ತಿರುವುದೇಕೆ?

ಇಂದಿರಾತನಯ

ಡೊನಾಲ್ಡ್ ಟ್ರಂಪ್ ಗೌರವಾರ್ಥ ಏರ್ಪಡಿಸಿರುವ ಔತಣಕೂಟದಲ್ಲಿ ಪಾಲ್ಗೊಂಡರೆ ವರಿಷ್ಠರನ್ನು ಸಂತೃಪ್ತಿಪಡಿಸಿದಂತೆಯೂ ಆಗುತ್ತದೆ. ಸಮಯ ಸಿಕ್ಕಿದರೆ ಕೇಂದ್ರ ಸಚಿವರ ಜತೆ ರಾಜ್ಯದ ವಿದ್ಯಮಾನಗಳ ಬಗ್ಗೆ ಮಾತುಕತೆ ನಡೆಸಬಹುದು. ಅಮೆರಿಕಾ ಅಧಿಕಾರಿಗಳ ಗಮನ ಸೆಳೆದು ಬೆಂಗಳೂರಿಗೆ ಇನ್ನಷ್ಟು ಅನುಕೂಲ ಕಲ್ಪಿಸಬಹುದು ಎಂಬುದು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಯೋಚನೆಯೇ?

ಸಿ ಪಿ ಯೋಗೇಶ್ವರ್‌ಗೆ ಸಚಿವ ಸ್ಥಾನ ಕೈ ತಪ್ಪಲು ಕಾರಣವೇನು?

ಸಿ ಪಿ ಯೋಗೇಶ್ವರ್‌ಗೆ ಸಚಿವ ಸ್ಥಾನ ಕೈ ತಪ್ಪಲು ಕಾರಣವೇನು?

ಕೃಷ್ಣಮಣಿ

ಮೊದಲ ಬಾರಿಗೆ ಸಚಿವ ಸಂಪುಟ ವಿಸ್ತರಣೆ ಆದಾಗ ಯೋಗೇಶ್ವರ್‌ ಹೆಸರು ಪಟ್ಟಿಯಲ್ಲಿ ಇರಲಿಲ್ಲ. ಆ ಬಳಿಕ ವಿಸ್ತರಣೆ ವೇಳೆ ಸಚಿವ ಸ್ಥಾನ ಸಿಗುತ್ತೆ ಎನ್ನುವ ನಂಬಿಕೆ ಇಟ್ಟುಕೊಂಡಿದ್ದ ಯೋಗೇಶ್ವರ್‌ಗೆ ಆಶ್ಚರ್ಯ ಕಾದಿತ್ತು. ವಿಜಯೇಂದ್ರ ಆಪ್ತನಾಗಿದ್ದ ಯೋಗೇಶ್ವರ್‌ಗೆ ಸಚಿವ ಸ್ಥಾನ ಕೈ ತಪ್ಪಲು ಕಾರಣ ಏನು ಎನ್ನುವ ಬಗ್ಗೆಯೂ ಬಹಳ ಚರ್ಚೆ ನಡೆದಿತ್ತು.

ಮಹದಾಯಿ ಐ-ತೀರ್ಪಿನ ಅಧಿಸೂಚನೆ ವಿಚಾರದಲ್ಲಿ ಮತ್ತೆ ಗೋವಾ ಪರ ವಾಲುವುದೇ ಕೇಂದ್ರ?

ಮಹದಾಯಿ ಐ-ತೀರ್ಪಿನ ಅಧಿಸೂಚನೆ ವಿಚಾರದಲ್ಲಿ ಮತ್ತೆ ಗೋವಾ ಪರ ವಾಲುವುದೇ ಕೇಂದ್ರ?

ಇಂದಿರಾತನಯ

ಮಹದಾಯಿ ನ್ಯಾಯಾಧಿಕರಣದ ಐ-ತೀರ್ಪಿನ ಕುರಿತು ಅಧಿಸೂಚನೆ ಹೊರಡಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಸೂಚಿಸಿದ ಬೆನ್ನಲ್ಲೇ ಹೇಗಾದರೂ ಮಾಡಿ ಇದಕ್ಕೆ ಅವಕಾಶವಾಗದಂತೆ ನೋಡಿಕೊಳ್ಳಲು ಗೋವಾ ಪ್ರಯತ್ನಿಸುತ್ತಿದೆ. ಹೀಗಾಗಿ ಕೇಂದ್ರ ಕೈಗೊಳ್ಳಬಹುದಾದ ನಿಲುವಿನ ಬಗ್ಗೆ ಕರ್ನಾಟಕ ಆತಂಕದಲ್ಲಿ ಕಾಲ ತಳ್ಳುವಂತಾಗಿದೆ.

ರಾಜ್ಯ ಬಿಜೆಪಿಯಲ್ಲಿನ ಬಂಡಾಯ ಯಡಿಯೂರಪ್ಪನವರ ಸಿಎಂ ಸ್ಥಾನಕ್ಕೆ ಕುತ್ತು ತರುವುದೇ?

ರಾಜ್ಯ ಬಿಜೆಪಿಯಲ್ಲಿನ ಬಂಡಾಯ ಯಡಿಯೂರಪ್ಪನವರ ಸಿಎಂ ಸ್ಥಾನಕ್ಕೆ ಕುತ್ತು ತರುವುದೇ?

ಕೃಷ್ಣಮಣಿ

ಯಡಿಯೂರಪ್ಪ ವಿರುದ್ಧ ಅನಾಮಧೇಯ ಪತ್ರವೊಂದು ಬಹಿರಂಗವಾಯ್ತು. ಸಿಎಂ ಯಡಿಯೂರಪ್ಪ ಅವರಿಗೆ ವಯಸ್ಸಾಗಿದೆ. ವಯೋ ಸಹಜ ಮರೆವಿನಿಂದ ಬಳಲುತ್ತಿದ್ದಾರೆ. ಅಸಮರ್ಥ ಆಡಳಿತ, ವಿಪಕ್ಷಗಳ ಟೀಕೆಗೆ ಉತ್ತರ ಕೊಡಲಾಗುತ್ತಿಲ್ಲಎಂದು ಟೀಕಿಸಲಾಗಿದೆ.

ದಿನೇಶ್ ಗುಂಡೂರಾವ್-ಸೋನಿಯಾ ಗಾಂಧಿ ಭೇಟಿ ಹಿಂದಿನ ಮರ್ಮವೇನು?

ದಿನೇಶ್ ಗುಂಡೂರಾವ್-ಸೋನಿಯಾ ಗಾಂಧಿ ಭೇಟಿ ಹಿಂದಿನ ಮರ್ಮವೇನು?

ಇಂದಿರಾತನಯ

ರಾಜ್ಯ ಕಾಂಗ್ರೆಸ್ಸಿನಲ್ಲಿ ನಾಯಕತ್ವ ಬದಲಾವಣೆ ವಿಳಂಬವಾಗುತ್ತಿರುವುದು ಹಿರಿಯ ಕಾಂಗ್ರೆಸ್ಸಿಗರಲ್ಲಿ ಅಸಮಾಧಾನವನ್ನು ಹೆಚ್ಚಿಸಿದೆ. ದಿನೇಶ್ ಗುಂಡೂರಾವ್ ಅವರನ್ನು ದೆಹಲಿಗೆ ಕರೆಸಿಕೊಂಡಿರುವ ಸೋನಿಯಾ ಗಾಂಧಿ ಅವರು ಅಭಿಪ್ರಾಯ ಸಂಗ್ರಹಿಸಿರುವುದು ನಾಯಕತ್ವ ಬದಲಾವಣೆ ಕುರಿತ ಕುತೂಹಲ ಹೆಚ್ಚುವಂತೆ ಮಾಡಿದೆ

ಮಾ. 5ರೊಳಗೆ ಮತ್ತೊಂದು ಸುತ್ತಿನ ಸಂಪುಟ ವಿಸ್ತರಣೆಗೆ ಸಂಧಾನದ ಮೂಲಕ ಪ್ರಯತ್ನ!

ಮಾ. 5ರೊಳಗೆ ಮತ್ತೊಂದು ಸುತ್ತಿನ ಸಂಪುಟ ವಿಸ್ತರಣೆಗೆ ಸಂಧಾನದ ಮೂಲಕ ಪ್ರಯತ್ನ!

ಇಂದಿರಾತನಯ

ಕಳೆದ ಸೋಮವಾರ ಸಚಿವ ಜಗದೀಶ್ ಶೆಟ್ಟರ್ ನಿವಾಸದಲ್ಲಿ ಕೆಲವು ಶಾಸಕರು ಸಭೆ ಸೇರಿದ ಬಗ್ಗೆ ನಾನಾ ರೀತಿಯ ಊಹಾಪೋಹಗಳು ಸೃಷ್ಟಿಯಾಗಿವೆ. ಮತ್ತೆ ಬಂಡಾಯ ಶುರುವಾಗಿದೆ. ಕೆಲವರನ್ನು ಕೈಬಿಟ್ಟು ಸಂಪುಟ ಪುನಾರಚನೆಯಾಗುತ್ತದೆ ಎಂದೆಲ್ಲಾ ಹೇಳಲಾಗುತ್ತಿದೆ. ಆದರೆ, ಆ ಸಭೆಯ ನಿಜವಾದ ಉದ್ದೇಶವೇನಿತ್ತು?

ಸೋಮಣ್ಣ ಹಾಗು ವಿಜಯೇಂದ್ರ ನಡುವೇ ಶುರುವಾಯಿತೇ ಮಾತಿನ ಸಮರ?

ಸೋಮಣ್ಣ ಹಾಗು ವಿಜಯೇಂದ್ರ ನಡುವೇ ಶುರುವಾಯಿತೇ ಮಾತಿನ ಸಮರ?

ಕೃಷ್ಣಮಣಿ

ತನ್ನ ಕೆಲಸ ಕಾರ್ಯಕ್ರಮಗಳ ಉಸ್ತುವಾರಿಯಾಗಿ ಯಡಿಯೂರಪ್ಪ, ವಿಜಯೇಂದ್ರ ಅವರನ್ನು ಅವಲಂಭಿಸಿದ್ದಾರೆ. ಪ್ರಮುಖ ಕೆಲಸಗಳಲ್ಲಿ ಯಡಿಯೂರಪ್ಪ ಜೊತೆ ನಿಲ್ಲುತ್ತಾರೆ. ಇದೀಗ ವಿಜಯೇಂದ್ರ ಹಾಗು ಸೋಮಣ್ಣನ ಡುವಿನ ವಾಕ್ಸಮರ ಮತ್ತೊಂದು ಆಂತರಿಕ ಭಿನ್ನಾಭಿಪ್ರಾಯಕ್ಕೆ ಕಾರಣವಾಗುವ ಎಲ್ಲಾ ಸಾಧ್ಯತೆಗಳು ಎದುರಾಗಿವೆ.

ಬಿಜೆಪಿಯಲ್ಲಿ ಮಧ್ಯರಾತ್ರಿ ಬುಗಿಲೆದ್ದ ಬಂಡಾಯ?!

ಬಿಜೆಪಿಯಲ್ಲಿ ಮಧ್ಯರಾತ್ರಿ ಬುಗಿಲೆದ್ದ ಬಂಡಾಯ?!

ಕೃಷ್ಣಮಣಿ

ಮಾಜಿ ಸಿಎಂ ಜಗದೀಶ್ ಶೆಟ್ಟರ್ ನಿವಾಸದಲ್ಲಿ ಅತೃಪ್ತ ಮನಸ್ಸುಗಳು ಒಟ್ಟಿಗೆ ಸೇರಿ ಭೋಜನದ ನೆಪದಲ್ಲಿ ಭಿನ್ನರ ಸಭೆ ನಡೆದಿದೆ. ಬಜೆಟ್ ಅಧಿವೇಶನದ ಬಳಿಕ ಸಂಪುಟ ಪುನರಚನೆ ಮಾಡುವ ಬಗ್ಗೆ ಬಿಜೆಪಿಯಲ್ಲಿ ಮಾತುಗಳು ಶುರುವಾಗಿದ್ದು, ಕೆಲವು ಹಿರಿಯರನ್ನು ಕೈಬಿಟ್ಟು ಉಳಿದವರಿಗೆ ಸಚಿವ ಸ್ಥಾನ ಕೊಡುತ್ತಾರೆ ಎನ್ನಲಾಗಿದೆ

ಈ ಸರ್ಕಾರದಲ್ಲಿ ಹೇಳಿಕೊಳ್ಳುವಂತಹದ್ದೇನೂ ಇಲ್ಲ ಎನ್ನುವಂತಾದ ರಾಜ್ಯಪಾಲರ ಭಾಷಣ!

ಈ ಸರ್ಕಾರದಲ್ಲಿ ಹೇಳಿಕೊಳ್ಳುವಂತಹದ್ದೇನೂ ಇಲ್ಲ ಎನ್ನುವಂತಾದ ರಾಜ್ಯಪಾಲರ ಭಾಷಣ!

ಇಂದಿರಾತನಯ

ರಾಜ್ಯ ವಿಧಾನಮಂಡಲದ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಜ್ಯಪಾಲರು ಭಾಷಣ ಮುಗಿಸಿದ್ದಾರೆ. ಈ ಹಿಂದಿನಂತೆಯೇ ಸರ್ಕಾರದ ಸಾಧನೆಗಳನ್ನು ಹೇಳಿಕೊಳ್ಳುವುದಕ್ಕಷ್ಟೇ ಭಾಷಣ ಸೀಮಿತವಾಗಿತ್ತು. ಸರ್ಕಾರದ ಮುಂದಿನ ಗುರಿ, ಆದ್ಯತೆಗಳ ಬಗ್ಗೆಯೂ ಭಾಷಣದಲ್ಲಿ ಯಾವುದೇ ಸ್ಪಷ್ಟತೆ ಇರದೆ ನೀರಸ ಭಾಷಣ ಎನ್ನುವಂತಾಗಿತ್ತು.