ಯತ್ನಾಳ್ ವಿರುದ್ದ ಶಿಸ್ತು ಕ್ರಮಕ್ಕೆ ಬಿಜೆಪಿ ಹೈಕಮಾಂಡ್ ಹಿಂದೇಟು ಹಾಕಲು ಕಾರಣವೇನು?

ಈಗ ಯತ್ನಾಳ್ ಅವರು ಪಂಚಮಸಾಲಿಗಳ ನಾಯಕರಾಗಿ ಹೊರಹೊಮ್ಮಿದ್ದು ಬಿಜೆಪಿ ಹೈಕಮಾಂಡ್ ತುಂಬಾ ಎಚ್ಚರಿಕೆಯ ಹೆಜ್ಜೆ ಇಡುವತ್ತ ತನ್ನ ದೃಷ್ಟಿ ನೆಟ್ಟಿದೆ.
ಯತ್ನಾಳ್ ವಿರುದ್ದ ಶಿಸ್ತು ಕ್ರಮಕ್ಕೆ ಬಿಜೆಪಿ ಹೈಕಮಾಂಡ್ ಹಿಂದೇಟು ಹಾಕಲು ಕಾರಣವೇನು?

ಕರ್ನಾಟಕದ ಮಾಜಿ ಸಚಿವರು ಮತ್ತು ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ರಾಮಗೌಡ ಪಾಟೀಲ್ ಯತ್ನಾಲ್ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ದ ಸಾಕಷ್ಟು ಭಾರಿ ಟೀಕಾಸ್ತ್ರಗಳನ್ನು ಬಿಡುತ್ತಲೇ ಇದ್ದಾರೆ. ಯತ್ನಾಳ್ ಅವರು ತಾವು ಮುಖ್ಯ ಮಂತ್ರಿ ಹುದ್ದೆಯ ಆಕಾಂಕ್ಷಿ ಎಂದು ಅನೇಕ ಬಾರಿ ಹೇಳಿಕೊಂಡಿದ್ದೂ ಅಲ್ಲದೇ ಯಡಿಯೂರಪ್ಪ ಅವರ ಕುಟುಂಬದ ವಿರುದ್ದ ಸಾಕಷ್ಟು ಆರೋಪಗಳನ್ನೂ ಮಾಡಿದ್ದಾರೆ. ಆದರೆ ಬಿಜೆಪಿ ಹೈಕಮಾಂಡ್ ಯತ್ನಾಳ್ ಅವರ ಆರೋಪಗಳನ್ನು ಪದೇ ಪದೇ ನಿರ್ಲಕ್ಷಿಸಿದೆ. ಕಳೆದ ಫೆಬ್ರುವರಿ 12 ರಂದು ಪಕ್ಷದ ಹೈಕಮಾಂಡ್ ಅವರಿಗೆ ಶೋಕಾಸ್ ನೋಟೀಸ್ ಜಾರಿ ಮಾಡಿ ಪಕ್ಷದ ವಿಷಯಗಳನ್ನು ಪಕ್ಷದ ವೇದಿಕೆಯಲ್ಲೇ ಚರ್ಚಿಸುವಂತೆ ಸೂಚಿಸಿದೆ. ಇದಾದ ಒಂದು ಒಂದು ತಿಂಗಳ ನಂತರ, ಯತ್ನಾಳ್ ಮತ್ತೆ ಯಡಿಯೂರಪ್ಪ ವಿರುದ್ದ ಆರೋಪ ಮಾಡಿದ್ದಾರೆ.

ಅವರು ಆಗಾಗ ಆರೋಪ ಮಾಡುತಿದ್ದರೂ ಅವರು ಯಡಿಯೂರಪ್ಪ ಅವರನ್ನು ದೂಷಿಸಿದ ತೀವ್ರತೆ ಯನ್ನು ನಿರ್ಲಕ್ಷಿಸಲು ಬಿಜೆಪಿಗೆ ಕಷ್ಟಕರವಾಗಬಹುದು. ಕಳೆದ ಮಾರ್ಚ್ 1 ರಂದು ಪಂಚಮಸಾಲಿ ಲಿಂಗಾಯತರು ನಡೆಸಿದ ಪ್ರತಿಭಟನೆಯ ಸಂದರ್ಭದಲ್ಲಿ ಯತ್ನಾಳ್ ಅವರು ಯಡಿಯುರಪ್ಪ ತನಗೆ ಕಿರಿಯ ಎಂದು ಹೇಳಿದರು. ಪ್ರಸ್ತುತ ಪಂಚಮಸಾಲಿ ಲಿಂಗಾಯಿತ ಸಮುದಾಯವು ತನ್ನ ಮೀಸಲಾತಿ ಕೋಟಾ ಪರಿಷ್ಕರಣೆಗಾಗಿ ಒತ್ತಾಯಿಸುತ್ತಿರುವ ಸಮೂಹ ಆಗಿದೆ. ಇದೇ ಪಂಗಡಕ್ಕೆ ಸೇರಿರುವ ಯತ್ನಾಳ್ ಅವರು ಮೀಸಲಾತಿ ಸ್ಥಾನಮಾನವನ್ನು ಕೋರಿ ಪ್ರತಿಭಟನೆ ನಡೆಸುತ್ತಿರುವ ನಾಯಕರಲ್ಲಿ ಒಬ್ಬರಾಗಿದ್ದಾರೆ. ಈ ಸಮೂಹವು ಶಿಕ್ಷಣ ಸಂಸ್ಥೆಗಳು ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಹಾಲಿ ಶೇಕಡಾ 5 ರಷ್ಟು ಮೀಸಲಾತಿಯನ್ನು ಹೊಂದಿದ್ದು ಇದನ್ನು ಶೇಕಡಾ 15 ಕ್ಕೆ ಹೆಚ್ಚಿಸಲು ಸರ್ಕಾರವನ್ನು ಒತ್ತಾಯಿಸುತ್ತಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಕರ್ನಾಟಕದ ಬಿಜೆಪಿಯ ಪ್ರಮುಖ ವೋಟ್ ಬ್ಯಾಂಕ್ ನಲ್ಲಿ ಲಿಂಗಾಯತರಲ್ಲಿ ಶೇ 70 ರಷ್ಟು ಪಂಚಮಸಾಲಿಗಳು ಇದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಕೂಡ ಲಿಂಗಾಯತರಾಗಿದ್ದು ಅವರು ವೀರಶೈವ ಪಂಥಕ್ಕೆ ಸೇರಿದವರಾಗಿದ್ದಾರೆ. ಮುಖ್ಯಮಂತ್ರಿ ಮತ್ತು ಅವರ ಸರ್ಕಾರವು ಈಗ ಒಂದು ಸಂದಿಗ್ದದಲ್ಲಿದೆ. ಪಂಚಮಸಾಲಿಗಳ ಬೇಡಿಕೆಗಳಿಗೆ ಮಣಿಯದಿರುವುದು ಅವರನ್ನು ಕೋಪಗೊಳಿಸಬಹುದು ಆದರೆ ಅವರ ಮೀಸಲಾತಿಯನ್ನು ಹೆಚ್ಚಿಸುವುದರಿಂದ ಇತರ ಲಿಂಗಾಯತ ಸಮುದಾಯಗಳಿಂದ ವಿರೋಧ ಬರಬಹುದು. ಯಡಿಯೂರಪ್ಪ ಅವರು ಸದ್ಯಕ್ಕೆ ಪಂಚಮಸಾಲಿಗಳ ಬೇಡಿಕೆಯ ಬಗ್ಗೆ ಏನೂ ಮಾಡಲು ಸಾಧ್ಯವಿಲ್ಲ ಎಂದು ಸದನದಲ್ಲಿ ಹೇಳಿದ್ದರೂ ಈ ಸಮಸ್ಯೆಯನ್ನು ಬಗೆಹರಿಸುವ ಭರವಸೆ ನೀಡಿದ್ದಾರೆ. ಆದರೆ ಯಡಿಯುರಪ್ಪ ಅವರ ಸಮಸ್ಯೆಗಳು ಯತ್ನಾಳ್ ಅವರ ಪ್ರತಿಭಟನೆಯ ಕಾರಣದಿಂದ ಉಲ್ಬಣಗೊಂಡಿವೆ. ಮಾರ್ಚ್ ಒಂದರಂದು ಯತ್ನಾಳ್ ಅವರು ಹೊರ ಹಾಕಿದ ಆಕ್ರೋಶಕ್ಕೂ ಮುಂಚಿತವಾಗಿ ಫೆಬ್ರವರಿ 21 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಪಂಚಮಸಾಲಿ ಬೃಹತ್ ರ್ಯಾಲಿಯನ್ನು ಮುನ್ನಡೆಸಿದ ನಾಯಕರಲ್ಲಿ ಯತ್ನಾಳ್ ಕೂಡ ಇದ್ದರು. ರ್ಯಾಲಿಯಲ್ಲಿ, ಅವರು ವಿಧಾನಸಭೆಯ ಬಜೆಟ್ ಅಧಿವೇಶನದ ಆರಂಭಿಕ ದಿನವಾದ ಮಾರ್ಚ್ 4 ರಂದು ತಮ್ಮ ಬೇಡಿಕೆಯನ್ನು ಅಧಿವೇಶನದಲ್ಲೇ ತೀವ್ರವಾಗಿ ಪ್ರತಿಭಟಿಸುವುದಾಗಿ ಸರ್ಕಾರಕ್ಕೆ ಗಡುವನ್ನೂ ನೀಡಿದ್ದರು. ಇವೆಲ್ಲವೂ ಬಿಜೆಪಿಯ ಶಾಸಕರ ಗಮನಕ್ಕೆ ಬಂದಿದೆ.

ಯತ್ನಾಳ್ ಅವರು ಹಲವಾರು ವರ್ಷಗಳಿಂದ ತಳಮಟ್ಟದ ನಾಯಕರಾಗಿ ದುಡಿಯುತಿದ್ದು ಈಗ ಅವರು ಇದ್ದಕ್ಕಿದ್ದಂತೆ ಮುಖ್ಯಮಂತ್ರಿಯಾಗಬೇಕೆಂಬ ತಮ್ಮ ಆಕಾಂಕ್ಷೆಯನ್ನು ಬಹಿರಂಗವಾಗಿ ವ್ಯಕ್ತಪಡಿಸಲು ಪ್ರಾರಂಭಿಸಿದ್ದಾರೆ ಎಂದು ಬಿಜೆಪಿ ಮುಖಂಡರೊಬ್ಬರು ಹೇಳಿದರು. ಯತ್ನಾಳ್ ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್ಎಸ್) ಬೆಂಬಲವನ್ನು ಹೊಂದಿದ್ದಾರೆ, ಇದೇ ಕಾರಣಕ್ಕೆ ಯಡಿಯೂರಪ್ಪ ಅವರನ್ನು ಟೀಕಿಸುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ. ಯಡಿಯೂರಪ್ಪ ಮತ್ತು ಆರ್ಎಸ್ಎಸ್ ನಡುವಿನ ಭಿನ್ನಾಭಿಪ್ರಾಯವನ್ನು ಅವರು ಜಾಣತನದಿಂದ ತಮ್ಮ ಲಾಭಕ್ಕಾಗಿ ಬಳಸುತ್ತಿದ್ದಾರೆ ಎಂದು ಬಿಜೆಪಿಯ ಹಿರಿಯ ಕಾರ್ಯಕರ್ತರೊಬ್ಬರು ಹೇಳಿದರು. ಯಡಿಯೂರಪ್ಪ ಅವರ ಕಾರ್ಯವೈಖರಿಯ ಬಗ್ಗೆ ಆರ್ಎಸ್ಎಸ್ ನಾಯಕರು ಸಂತೋಷವಾಗಿಲ್ಲ ಎಂದು ಯತ್ನಾಳ್ ಅವರು ತಿಳಿದಿದ್ದಾರೆ ಮತ್ತು ಮುಖ್ಯ ಮಂತ್ರಿ ಅವರನ್ನು ಟೀಕಿಸಲು ಸರಿಯಾದ ಅಭ್ಯರ್ಥಿಯಾಗಿ ಕೆಲಸ ಮಾಡುತಿದ್ದಾರೆ ಎಂದೂ ಅವರು ಹೇಳಿದರು.

58 ವರ್ಷದ ಯತ್ನಾಳ್ ಅವರು 1994 ರಲ್ಲಿ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದರು. ಎರಡು ಅವಧಿಯ ಸಂಸದರಾಗಿದ್ದ ಅವರು ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಕೇಂದ್ರ ಸಚಿವರಾಗಿದ್ದರು. ಅವರು ಕಳೆದ 2018 ರಿಂದ ವಿಜಯಪುರ ಶಾಸಕರಾಗಿದ್ದಾರೆ. 2019 ರಲ್ಲಿ ಕರ್ನಾಟಕದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದಾಗಿನಿಂದ ಅವರು ಯಡಿಯೂರಪ್ಪ ಅವರ ಮೇಲೆ ಟೀಕಾ ಪ್ರಹಾರ ನಡೆಸುತ್ತಿದ್ದಾರೆ. ಕಳೆದ ವರ್ಷ ಅಕ್ಟೋಬರ್ನಲ್ಲಿ ಯಡಿಯೂರಪ್ಪ ಅವರು ದೀರ್ಘಕಾಲ ಸಿಎಂ ಆಗಿರುವುದಿಲ್ಲ ಎಂದು ಹೇಳಿದ ಅವರು, ಡಿಸೆಂಬರ್‌ನಲ್ಲಿ ಇದೇ ರೀತಿಯ ಪ್ರತಿಪಾದನೆ ನೀಡಿ, ಪಕ್ಷವು ನಾಯಕತ್ವ ಬದಲಾವಣೆಯನ್ನು ಯೋಚಿಸುತ್ತಿದೆ ಎಂದು ಹೇಳಿದರು. ನಂತರ ಪಕ್ಷದ ಹೈಕಮಾಂಡ್ ಇದಕ್ಕೆ ಪ್ರತಿಕ್ರಿಯೆ ನೀಡಿ ವದಂತಿಗಳನ್ನು ತಳ್ಳಿ ಹಾಕಬೇಕಾಯಿತು. ಆದರೆ ಅದು ಯತ್ನಾಳ್ ವಿರುದ್ಧ ಯಾವುದೇ ಶಿಸ್ತು ಕ್ರಮ ಕೈಗೊಂಡಿಲ್ಲ. ಮುಖ್ಯ ಮಂತ್ರಿ ಅಗುವ ಮಹತ್ವಾಕಾಂಕ್ಷೆಯನ್ನು ಹೊಂದಿರುವ ಅವರು ನಾನು ಮುಖ್ಯಮಂತ್ರಿಯಾಗಲು ಸಾಧ್ಯವಿಲ್ಲ ಎಂದು ಯಾರು ಹೇಳಿದರು? ಇದು ನನ್ನ ಹಣೆಬರಹವಾಗಿದ್ದರೆ ನಾನು ಆಗಬಹುದು ಎಂದು ಡಿಸೆಂಬರ್ನಲ್ಲಿ ನಡೆದ ರ್ಯಾಲಿಯಲ್ಲಿ ಗೃಹ ಸಚಿವ ಅಮಿತ್ ಶಾ ದಕ್ಷಿಣ ರಾಜ್ಯಕ್ಕೆ ಭೇಟಿ ನೀಡುವ ಮುನ್ನ ಹೇಳಿದರು.

ಈ ವರ್ಷದ ಜನವರಿಯಲ್ಲಿ, ಮುಖ್ಯಮಂತ್ರಿ ಜೆಡಿ(ಎಸ್) ಮತ್ತು ಕಾಂಗ್ರೆಸ್ ಬಂಡುಕೋರರು ಮುಖ್ಯ ಮಂತ್ರಿ ಕುಟುಂಬದ ವಿರುದ್ಧ ಸಿಡಿ ಹೊಂದಿದ್ದರಿಂದ ಅವರಿಗೆ ಬಹುಮಾನ ನೀಡುತ್ತಿದ್ದಾರೆ ಎಂದು ಯತ್ನಾಳ್ ಹೇಳಿದ್ದಾರೆ. ಜನವರಿ 13 ರಂದು ವಿಜಯಪುರದಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಯತ್ನಾಲ್ ಅವರು ಯಡಿಯೂರಪ್ಪ ಅವರಿಗೆ ಮತ್ತು ಅವರ ಮಗ ಬಿ.ವೈ. ವಿಜಯೇಂದ್ರ ಅವರಿಗೆ ಲಂಚ ನೀಡುವ ಬ್ಲ್ಯಾಕ್ಮೇಲರ್‌ಗಳು ಮತ್ತು ಭ್ರಷ್ಟ ರಾಜಕಾರಣಿಗಳಿಗೆ ಹೊಸ ಕೋಟಾ ಹೊಂದಿದ್ದಾರೆ ಎಂದು ಆರೋಪಿಸಿದ್ದರು. ಸರ್ಕಾರವನ್ನು ಉರುಳಿಸುವ ಉದ್ದೇಶದಿಂದ ಜನವರಿಯಲ್ಲಿ ಬೆಂಗಳೂರಿನ ಹೊರವಲಯದಲ್ಲಿರುವ ನೆಲಮಂಗಲದಲ್ಲಿರುವ ಅತಿಥಿಗೃಹವೊಂದರಲ್ಲಿ ಬಿಜೆಪಿ ನಾಯಕರ ಗುಂಪೊಂದು ತಮ್ಮನ್ನು ಭೇಟಿಯಾಗಿತ್ತು ಎಂದು ಅವರು ಹೇಳಿಕೊಂಡಿದ್ದರು. ನಾನೂ ಸಿಡಿ ಇಟ್ಟುಕೊಂಡಿರುವವರ ಜತೆ ಸೇರಿಕೊಂಡಿದ್ದಿದ್ದರೆ ಈವಾಗ ಉಪ ಮುಖ್ಯ ಮಂತ್ರಿ ಆಗಿರುತಿದ್ದೆ ಎಂದು ಅವರು ಹೇಳಿದ್ದರು.

ದೆಹಲಿಯ ಹಿರಿಯ ಬಿಜೆಪಿ ನಾಯಕರು ಯತ್ನಾಳ್ ವಿರುದ್ಧ ಯಾವುದೇ ಕಠಿಣ ಕ್ರಮ ಕೈಗೊಂಡರೆ, ಅದು ಗಂಭೀರ ಪರಿಣಾಮಗಳನ್ನು ಉಂಟುಮಾಡಬಹುದು ಎಂದು ಮೂಲಗಳು ತಿಳಿಸಿವೆ, ಅದರಲ್ಲೂ ವಿಶೇಷವಾಗಿ ಅವರು ಈಗ ಪಂಚಮಸಾಲಿಗಳ ನಾಯಕರಾಗಿ ಹೊರಹೊಮ್ಮಿದ್ದು ಬಿಜೆಪಿ ಹೈಕಮಾಂಡ್ ತುಂಬಾ ಎಚ್ಚರಿಕೆಯ ಹೆಜ್ಜೆ ಇಡುವತ್ತ ತನ್ನ ದೃಷ್ಟಿ ನೆಟ್ಟಿದೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com