ಜಗತ್ತಿನ‌ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಪದೇಪದೇ ಸ್ಥಗಿತಗೊಳ್ಳುವ ಇಂಟರ್ನೆಟ್

ಮಾಹಿತಿಯ ಹಂಚುವಿಕೆ, ಪಡೆದುಕೊಳ್ಳುವಿಕೆ, ವ್ಯಾಪಾರ, ವ್ಯವಹಾರ ಎಲ್ಲಕ್ಕೂ ಇಂಟರ್ನೆಟ್ ಮಾಧ್ಯಮವಾಗಿರುವಾಗ ಅದನ್ನು ಸ್ಥಗಿತಗೊಳಿಸುವುದು, ಸರ್ಕಾರ ಅನುಕೂಲಕ್ಕೆ ಮಾತ್ರ ಅನುವಾಗುವಂತೆ ಬಳಸಿಕೊಳ್ಳುವುದು ವ್ಯಕ್ತಿಯೊಬ್ಬರ ವೈಯಕ್ತಿಕ ಸ್ವಾತಂತ್ರ್ಯವನ್ನು ಕಿತ್ತುಕೊಂಡಂತೆ.
ಜಗತ್ತಿನ‌ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಪದೇಪದೇ ಸ್ಥಗಿತಗೊಳ್ಳುವ ಇಂಟರ್ನೆಟ್

ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವವಾಗಿರುವ ಭಾರತವು ತನ್ನ ಪ್ರಜೆಗಳು ಇಂಟರ್ನೆಟ್ ಬಳಸುವ ವಿಚಾರದಲ್ಲಿ ಪ್ರಜಾಸತ್ತಾತ್ಮಕವಾಗಿ ನಡೆದುಕೊಳ್ಳುತ್ತಿಲ್ಲ. 2020ರಲ್ಲಿ ಒಂದಿಡೀ ರಾಜ್ಯದಲ್ಲಿ ಅಥವಾ ಜಿಲ್ಲೆಗಳಲ್ಲಿ ಒಟ್ಟು 83 ಬಾರಿ ಇಂಟರ್ನೆಟ್ ಕಡಿತಗೊಳಿಸಲಾಗಿದೆ.

2021 ಶುರುವಾದದ್ದಷ್ಟೇ, ರೈತರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಹರ್ಯಾಣದ ಹಲವು ಜಿಲ್ಲೆಗಳಲ್ಲಿ ಇಂಟರ್ನೆಟ್ ಕಡಿತಗೊಳಿಸಲಾಗಿದೆ. ಭಾರತದ ಬಹುತೇಕ ಇಂಟರ್ನೆಟ್ ಕಡಿತಗಳು ಸಾರ್ವಜನಿಕರ ಧ್ವನಿಯನ್ನು ಉಡುಗಿಸಲು, ಕಾನೂನು ಸುವ್ಯವಸ್ಥೆ ಕಾಪಾಡುವ ನೆಪದಲ್ಲಿ ಪ್ರಯೋಗಿಸಲಾಗಿದೆ.

ಅತಿ ಅನಿವಾರ್ಯವಲ್ಲದ ಸಮಯದಲ್ಲೂ ಇಂಟರ್ನೆಟ್ ಕಡಿತಕ್ಕೆ ಭಾರತ ಸಾಕ್ಷಿಯಾದದ್ದೂ ಇದೆ. ಅಕ್ಟೋಬರ್ ತಿಂಗಳಲ್ಲಿ ಅರುಣಾಚಲ ಪ್ರದೇಶದ ಹದಿನೈದೂ ಜಿಲ್ಲೆಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಲಿರುವ ಕಾರಣ ನೀಡಿ ಇಂಟರ್ನೆಟ್ ಕಡಿತಗೊಳಿಸಲಾಗಿತ್ತು.

ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಗುಜ್ಜರ್ ಸಮುದಾಯದ ನಾಯಕರು ತಮ್ಮನ್ನು 'ಹಿಂದುಳಿದ ವರ್ಗ'ವೆಂದು ಗುರುತಿಸಿ ಉದ್ಯೋಗ ಮೀಸಲಾತಿ ನೀಡಬೇಕೆಂದು ಆಗ್ರಹಿಸಿ ಪ್ರತಿಭಟನೆ ಕೈಗೊಳ್ಳಲಾಗತ್ತದೆ ಎಂದು ಪ್ರಕಟಿಸಿದಾಗ ರಾಜಸ್ಥಾನದಲ್ಲೂ ಅಕ್ಟೋಬರ್‌ನಲ್ಲಿ ಸಾಮಾಜಿಕ ಜಾಲತಾಣ ಮತ್ತು ಮೊಬೈಲ್ ಡಾಟಾ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು.

ಅಂತರ್ಜಾಲದ ಬಳಕೆಯ, ಸ್ಥಗಿತಗೊಳಿಸುವಿಕೆಯ ಬಗೆಗಿನ ಕಾನೂನುಗಳು ಭಾರತದಲ್ಲಿ ಪ್ರಬಲವಾಗಿದ್ದರೂ ಇಂಟರ್ನೆಟ್ ಸ್ಥಗಿತ ಮಾಡುವುದನ್ನು ಸರ್ಕಾರಗಳು ಮುಂದುವರಿಸಿವೆ. ಕಳೆದ ಜನವರಿಯಲ್ಲಿ ಸಂವಿಧಾನದ ಆರ್ಟಿಕಲ್ 19 (1) (ಎ) ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ, 19 (1) (g)ಯ ಅಡಿಯಲ್ಲಿ ಇಂಟರ್ನೆಟ್ ಬಳಸಿಕೊಂಡು ವ್ಯವಹಾರ ನಡೆಸುವ ಹಕ್ಕನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ.


ಅಂತರ್ಜಾಲ ಸೇವೆಯನ್ನು ಅನಿರ್ದಿಷ್ಟಾವಧಿಗೆ ಸ್ಥಗಿತಗೊಳಿಸುವುದಕ್ಕೆ ಕೋರ್ಟ್ ಅನುಮತಿ ನೀಡುವುದಿಲ್ಲ ಎಂದಿದ್ದರೂ ಐದು ತಿಂಗಳುಗಳಿಗಿಂತ ಹೆಚ್ಚು ಕಾಲ ಕಾಶ್ಮೀರದಲ್ಲಿ ಇಂಟರ್ನೆಟ್ ಸ್ಥಗಿತಗೊಳಿಸಿರುವುದನ್ನು ತೆಗೆದುಹಾಕಲು ಕೋರ್ಟ್ ಆದೇಶಿಸಲಿಲ್ಲ. ಆದರೆ ಇಂಟರ್ನೆಟ್ ಸ್ಥಗಿತಗೊಳಿಸುವ ಎಲ್ಲಾ ಆದೇಶಗಳನ್ನು ಪುನರ್‌ಪರಿಶೀಸಲು ಆದೇಶ ನೀಡಿದೆ.

ಮೂಲಭೂತ ಹಕ್ಕುಗಳೇ ಪ್ರಶ್ನಾರ್ಹ ಅನ್ನಿಸುತ್ತಿರುವ ಸಂದರ್ಭಗಳಲ್ಲಿ ಪಾರದರ್ಶಕತೆ ಮತ್ತು ಇಂಟರ್ನೆಟ್‌ನ್ನು ಯಾವ ಕಾರಣಕ್ಕೆ ಸ್ಥಗಿತಗೊಳಿಸಲಾಗುತ್ತಿದೆ ಎಂಬುವುದನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು ಎಂಬುವುದಕ್ಕೆ ಸುಪ್ರೀಂ ಕೋರ್ಟೂ ಒತ್ತು ನೀಡುತ್ತದೆ.

ಆದರೆ ಇಂಟರ್ನೆಟ್ ಸ್ಥಗಿತಕ್ಕೆ ಸಂಬಂಧಿಸಿದ ಬಹುತೇಕ ನಿರ್ಧಾರಗಳನ್ನು ಸಾರ್ವಜನಿಕರ ಅವಗಾಹನೆಗೆ ತರದೆ ಜಾರಿಗೊಳಿಸಲಾಗಿದೆ. ಕಾಶ್ಮೀರದಲ್ಲಿ ಮಾರ್ಚ್ 2020ರಿಂದಲೂ ಕೆಲವು ಕಡೆ 2g ಮಾತ್ರ ಲಭ್ಯವಿದೆ.

'ದೂರ ಸಂಪರ್ಕ ಸೇವೆಗಳ ತಾತ್ಕಾಲಿಕ ತಡೆಹಿಡಿಯುವಿಕೆ'ಯ ಬಗ್ಗೆ 2017ರಲ್ಲಿ ಸರ್ಕಾರ ಹೊರಡಿಸಿದ ಆದೇಶದಂತೆ ಹದಿನೈದು ದಿನಗಳಿಗೊಮ್ಮೆ ಸ್ಥಗಿತಕ್ಕೆ ಸಂಬಂಧಿಸಿದ ವಿಚಾರವನ್ನು ಪರಾಮರ್ಶಿಸಬೇಕು. ಆದರೆ ಕಾಶ್ಮೀರದಲ್ಲಿ ಪ್ರತಿ ಹದಿನೈದು ದಿನಗಳಿಗೊಮ್ಮೆ ಸ್ಥಗಿತವನ್ನು ಮುಂದುವರಿಸಲಾಗುತ್ತಿದೆ. ಜಮ್ಮು ಮತ್ತು ಕಾಶ್ಮೀರದಾದ್ಯಂತ 2020ರಲ್ಲಿ 213 ದಿನಗಳ ಕಾಲ ಅಂತರ್ಜಾಲ ವ್ಯವಸ್ಥೆಯನ್ನು ತಡೆಹಿಡಿಯಲಾಗಿತ್ತು.

ಜಗತ್ತಿನ‌ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಪದೇಪದೇ ಸ್ಥಗಿತಗೊಳ್ಳುವ ಇಂಟರ್ನೆಟ್
ಇಂಟರ್ನೆಟ್ ಸ್ಥಗಿತಗೊಳಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಛೀಮಾರಿ ಹಾಕಿಸಿಕೊಂಡ ಮೋದಿ ಸರ್ಕಾರ

ಇಂಟರ್ನೆಟ್ ಸಂಪರ್ಕವನ್ನು ಈಗಿನ ಕಾಲಘಟ್ಟದಲ್ಲಿ ಜೀವನಾವಶ್ಯ ಎಂದೇ‌ ಪರಿಗಣಿಸಲಾಗುತ್ತಿದೆ. ಮಾಹಿತಿಯ ಹಂಚುವಿಕೆ, ಪಡೆದುಕೊಳ್ಳುವಿಕೆ, ವ್ಯಾಪಾರ, ವ್ಯವಹಾರ ಎಲ್ಲಕ್ಕೂ ಇಂಟರ್ನೆಟ್ ಮಾಧ್ಯಮವಾಗಿರುವಾಗ ಅದನ್ನು ಸ್ಥಗಿತಗೊಳಿಸುವುದು, ಸರ್ಕಾರ ಅನುಕೂಲಕ್ಕೆ ಮಾತ್ರ ಅನುವಾಗುವಂತೆ ಬಳಸಿಕೊಳ್ಳುವುದು ವ್ಯಕ್ತಿಯೊಬ್ಬರ ವೈಯಕ್ತಿಕ ಸ್ವಾತಂತ್ರ್ಯವನ್ನು ಕಿತ್ತುಕೊಂಡಂತೆ. ಪರೀಕ್ಷೆಯಲ್ಲಿ ಅವ್ಯವಹಾರ ಆಗುತ್ತದೆ ಎಂದು ಇಂಟರ್ನೆಟ್ ಸ್ಥಗಿತಗೊಂಡ ಪ್ರಪಂಚದ ಏಕೈಕ ರಾಷ್ಟ್ರ ಭಾರತವೇ ಏನೋ! ಆಡಳಿತ ಯಂತ್ರದ ವೈಫಲ್ಯಕ್ಕೆಲ್ಲಾ ಜನತೆಯನ್ನು ಹೊಣೆಯಾಗಿಸುವುದು, ಅದರ ಹೊರೆಯನ್ನು ಜನತೆಯ ಮೇಲೆ ಹೇರುವುದು ಹೊಸ ಭಾರತದ ವೈಶಿಷ್ಟ್ಯ.

ಇಂಟರ್ನೆಟ್ ಅಥವಾ ಇನ್ನಾವುದೇ ಸೇವೆಯಾದರೂ ಸರಿ, ಸರ್ಕಾರದ ಬಳಿ ಇರುವ ಕಾನೂನಾತ್ಮಕ ಹಕ್ಕು, ಅಧಿಕಾರಗಳು ಏನೇ‌ ಇದ್ದರೂ ಅಂತಿಮವಾಗಿ ಜನ ಸಾಮಾನ್ಯರ ಉಪಯೋಗವೇ‌ ಎಲ್ಲಾ ಸೇವೆಗಳ ಗುರಿಯಾಗಿರುತ್ತದೆ, ಗುರಿಯಾಗಿರಬೇಕು. ಹಾಗಾಗಿ ಸರ್ಕಾರಗಳು ತನಗೆ ಬೇಕೆಂದಾಗೆಲ್ಲಾ ಕಾನೂನಿನೆಡೆ ಕೈ ತೋರಿಸಿ ಇಂಟರ್ನೆಟ್ ಸ್ಥಗಿತಗೊಳಿಸುವುದನ್ನು ನಿಲ್ಲಿಸಬೇಕು.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com