ಒಂಟಿತನ ಅನುಭವಿಸುವವರ ಮೆದುಳಿನಲ್ಲಿ ವ್ಯತ್ಯಾಸಗಳಿವೆ: ಅಧ್ಯಯನ ವರದಿ

ಒಂಟಿತನ ಅನುಭವಿಸುವವರ ಮೆದುಳಿನಲ್ಲಿ ವ್ಯತ್ಯಾಸಗಳಿವೆ: ಅಧ್ಯಯನ ವರದಿ

ಈ ಶೋಧನೆಯಲ್ಲಿ ಸಂಶೋಧಕರು ಒಂಟಿತನ ಅನುಭವಿಸುವವರ ಮೆದುಳಿನಲ್ಲಿ ಅನೇಕ ವ್ಯತ್ಯಾಸಗಳಿರುವುದನ್ನು ಕಂಡುಹಿಡಿದಿದ್ದಾರೆ.

ಕರೋನಾ ಬಂದ ಮೇಲೆ ದೈಹಿಕ ಅಂತರ ಅನಿವಾರ್ಯವಾದದ್ದರಿಂದ ನಮಲ್ಲನೇಕರು ಅದರಲ್ಲೂ ಹಿರಿಯ ನಾಗರಿಕರು ಅನುಭವಿಸಿದ ಒಂಟಿತನ ಅಷ್ಟಿಷ್ಟಲ್ಲ. ಸಾಮಾಜಿಕ ಒಟ್ಟುಗೂಡುವಿಕೆಯೇ ಅಸಾಧ್ಯವಾದಾಗ ಸಹಜವಾಗಿಯೇ ಹಿರಿಯ ನಾಗರಿಕರನ್ನು ಒಂಟಿತನ ಕಾಡಿದೆ. ಒಂಟಿಯಾಗಿರುವವರ ಮೆದುಳಿನ ಬಗ್ಗೆ ನಡೆಸಿದ ಹೊಸ ಸಂಶೋಧನೆಯೊಂದು ಇತರರಲ್ಲಿರದ ವಿಶೇಷವೊಂದು ಅವರ ಮೆದುಳಿನಲ್ಲಿ ಇರುವುದನ್ನು ರುಜುವಾತು ಪಡಿಸಿದೆ.

ಸಂಶೋಧಕರ ತಂಡವೊಂದು 40,000 ಮಂದಿ ಮಧ್ಯ ವಯಸ್ಕರ MRI ಮಾಹಿತಿ, ವಂಶವಾಹಿ ಮತ್ತು ಮನಶಾಸ್ತ್ರೀಯ ಮೌಲ್ಯ ಮಾಪನಗಳನ್ನು ಪರಿಶೀಲಿಸಿ ಪರೀಕ್ಷಿಸಿದ್ದಾರೆ.ಆನಂತರ ಒಂಟಿಯಾಗಿರುವವರ MRI ಮಾಹಿತಿಯನ್ನು ಇತರರ ಮಾಹಿತಿಗಳೊಂದಿಗೆ ಹೋಲಿಸಲಾಗಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಈ ಶೋಧನೆಯಲ್ಲಿ ಸಂಶೋಧಕರು ಒಂಟಿತನ ಅನುಭವಿಸುವವರ ಮೆದುಳಿನಲ್ಲಿ ಅನೇಕ ವ್ಯತ್ಯಾಸಗಳಿರುವುದನ್ನು ಕಂಡುಹಿಡಿದಿದ್ದಾರೆ.

ಆಂತರಿಕ ಯೋಚನೆಗಳಾದ ನೆನಪಿಸಿಕೊಳ್ಳುವಿಕೆ, ಭವಿಷ್ಯದ ಯೋಜನೆ, ಇತರರ ಬಗ್ಗೆ ಯೋಚಿಸುವುದನ್ನು ನಿಯಂತ್ರಿಸುವ ಮೆದುಳಿನ ನರಮಂಡಲಗಳಲ್ಲಿ ಮನುಷ್ಯನ ಬಹುಪಾಲು ಅಭಿಪ್ರಾಯಗಳು ರೂಪುಗೊಳ್ಳುತ್ತವೆ. ಏಕಾಂಗಿಯಾಗಿರುವವರಲ್ಲಿ ನರಮಂಡಲದ ನರಗಳು‌ ಹೆಚ್ಚು ಒತ್ತೊತ್ತಾಗಿದ್ದು ಬೂದು ದ್ರವ್ಯ(grey matter)ದ ಪ್ರಮಾಣವೂ ಹೆಚ್ಚಿದೆ.

ಕಳೆದು‌ಹೋದ ದಿನಗಳನ್ನು ನೆನಪಿಸಿಕೊಳ್ಳಲು, ಭವಿಷ್ಯವನ್ನು ಕಲ್ಪಿಸಿಕೊಳ್ಳಲು ನಾವು ನರಮಂಡಲವನ್ನು ಬಳಸಿಕೊಳ್ಳುತ್ತೇವೆ. ಸಾಮಾಜಿಕ ಪ್ರತ್ಯೇಕಿಕರಣದಿಂದಾಗಿ ಒಂಟಿಯಾಗಿರುವವರು‌ ಹೆಚ್ಚಾಗಿ ಭವಿಷ್ಯದ ಬಗ್ಗೆ ಭರವಸೆ, ಭೂತದ ನೆನಪಿಸಿಕೊಳ್ಳುವಿಕೆ ಮತ್ತು ಕಲ್ಪನೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಅವರ ನರಮಂಡಲ ಕ್ರಿಯಾಶೀಲವಾಗಿರುತ್ತದೆ.

"ಸಾಮಾಜಿಕ ಅನುಭವಗಳ ಅನುಪಸ್ಥಿತಿಯಲ್ಲಿ ಒಂಟಿಯಾಗಿರುವವರು ಕೇವಲ ಆಂತರಿಕ ನಿರ್ದೇಶನದೆಡೆಗೆ ಪಕ್ಷಪಾತಿಯಾಗುವ ಸಾಧ್ಯತೆ ಇದೆ" ಎನ್ನುತ್ತಾರೆ ಮೆಕ್ ಗಿಲ್ ಯುನಿವರ್ಸಿಟಿಯ ನಾತನ್ ಸ್ಪ್ರೆಂಗ್.

ಪ್ರಪಂಚದಾದ್ಯಂತ ಒಂಟಿತನವನ್ನು ದಿನೇ ದಿನೇ ಹೆಚ್ಚುತ್ತಿರುವ ಆರೋಗ್ಯ ಸಮಸ್ಯೆಯೆಂದು ಗುರುತಿಸಲಾಗಿದೆ. ಹಿಂದಿನ ಕೆಲವು ಅಧ್ಯನಗಳ ಪ್ರಕಾರ ಒಂಟಿತನ ಅನುಭವಿಸುತ್ತಿರುವ ಹಿರಿಯ ನಾಗರಿಕರು ಬುದ್ಧಿಮಾಂದ್ಯತೆ ಮತ್ತು ತಿಳಿವಳಿಕೆಯ ಕೊರತೆಗೆ ಒಳಗಾಗುವ ಸಾಧ್ಯತೆ ಇದೆ. ಒಂಟಿತನವು ಮೆದುಳಿನ‌ ಅಭಿವ್ಯಕ್ತಿಯನ್ನು ಹೇಗೆ ಪ್ರಭಾವಿಸುತ್ತದೆ ಎಂಬುವುದು ಅರ್ಥವಾದರೆ ಹಲವು ನರಸಂಬಂಧಿತ ಕಾಯಿಲೆಗಳನ್ನು ನಿಯಂತ್ರಿಸಬಹುದು, ತಡೆಗಟ್ಟಬಹುದು ಮತ್ತು ಒಳ್ಳೆಯ ಚಿಕಿತ್ಸೆಯನ್ನು ಕೊಡಿಸಬಹುದು ಎಂದು ಸಂಶೋಧನೆಯು ಅಭಿಪ್ರಾಯ ಪಟ್ಟಿದೆ.

"ಮೆದುಳಿನ ಮೇಲೆ ಒಂಟಿತನವು ಹೇಗೆ ಪ್ರಭಾವ ಬೀರುತ್ತದೆ ಎಂಬುವುದನ್ನು ಅರ್ಥಮಾಡಿಕೊಳ್ಳುವಲ್ಲಿ ನಾವು ಆರಂಭಿಕ ಹಂತದಲ್ಲಿದ್ದೇವೆ. ಈ ನಿಟ್ಟಿನಲ್ಲಿ ನಮ್ಮ ಜ್ಞಾನವನ್ನು ವಿಸ್ತರಿಸಿಕೊಳ್ಳುವುದರಿಂದ ಇವತ್ತಿನ ಸಮಾಜದಲ್ಲಿ ಒಂಟಿತನವನ್ನು ಹೇಗೆ ಕಡಿಮೆ ಮಾಡಿಕೊಳ್ಳಬಹುದು ಎಂದು ಅಭ್ಯಸಿಸಬಹುದು" ಎನ್ನುತ್ತಾರೆ ಈ ಅಧ್ಯಯನ‌ ತಂಡದ ಹಿರಿಯ ಸಂಶೋಧಕ ಹಾಗೂ 'The Neuro and The Quebec Artificial Intelligence'ನ ಡ್ಯಾನಿಲೊ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com