ಧರಣಿನಿರತ ರೈತರ ಸರಣಿ ಸಾವು ಮತ್ತು ಮೋದಿ-ಮಾಧ್ಯಮದ ಮೌನ!

ಮಾಧ್ಯಮಗಳು ಕೂಡ ರೈತರ ಸರಣಿ ಸಾವಿನ ಬಗ್ಗೆಯಾಗಲೀ, ದೆಹಲಿ ಕೊರೆಯುವ ಚಳಿ ಮತ್ತು ಶೀತಗಾಳಿ ಅನ್ನದಾತರ ಜೀವಕ್ಕೆ ಒಡ್ಡಿರುವ ಅಪಾಯದ ಬಗ್ಗೆಯಾಗಲೀ, ಕನಿಷ್ಟಪಕ್ಷ ಇಂತಹ ಕೂಗುಮಾರಿಗಳ ಬಗ್ಗೆಯಾಗಲೀ ಸುದ್ದಿಮಾಡುವುದೇ ಇಲ್ಲ!
ಧರಣಿನಿರತ ರೈತರ ಸರಣಿ ಸಾವು ಮತ್ತು ಮೋದಿ-ಮಾಧ್ಯಮದ ಮೌನ!

ತಮಗೇ ಬೇಡವಾಗಿರುವ ಕಾಯ್ದೆಯನ್ನು ತಮ್ಮ ಮೇಲೆ ಹೇರುತ್ತಿರುವ ಮೋದಿ ಸರ್ಕಾರದ ವಿರುದ್ಧ ಪಟ್ಟು ಹಿಡಿದು ಕಳೆದ 20 ದಿನಗಳಿಂದ ನಿರಂತರ ಧರಣಿ ನಡೆಸುತ್ತಿರುವ ರೈತರು ಒಂದು ಕಡೆ ಜೀವ ಪಣಕ್ಕಿಟ್ಟು ಹೋರಾಡುತ್ತಿದ್ದರೆ, ಮತ್ತೊಂದು ಕಡೆ ಬಿಜೆಪಿ ಮತ್ತು ಅದರ ಪರಿವಾರಗಳು ಅನ್ನದಾತರ ಐತಿಹಾಸಿಕ ಪ್ರತಿಭಟನೆಯ ವಿರುದ್ಧ ಇನ್ನಿಲ್ಲದ ಕುತಂತ್ರಗಳನ್ನು ಹೆಣೆಯುತ್ತಾ ದಿನಕ್ಕೊಂದು ಬೆದರಿಕೆ, ಅಪ್ರಚಾರದಲ್ಲಿ ತೊಡಗಿವೆ.

ಈ ನಡುವೆ, ದಿನಕ್ಕೊಬ್ಬರಂತೆ ಪ್ರತಿಭಟನಾನಿರತರು ಜೀವ ಕಳೆದುಕೊಳ್ಳುತ್ತಿದ್ದು, ಈವರೆಗೆ ಕಳೆದ 20 ದಿನಗಳಲ್ಲಿ ಬರೋಬ್ಬರಿ 22 ಮಂದಿ ರೈತರು ಧರಣಿ ಸ್ಥಳದಲ್ಲಿ ಮತ್ತು ಧರಣಿಯ ಹೋಗಿ-ಬರುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಮಂಗಳವಾರ ಕೂಡ ಪಂಜಾಬಿನಲ್ಲಿ ನಡೆದ ಎರಡು ಪ್ರತ್ಯೇಕ ರಸ್ತೆ ಅಪಘಾತದಲ್ಲಿ ಧರಣಿ ಸ್ಥಳದಿಂದ ತಮ್ಮ ಊರಿಗೆ ವಾಪಸ್ಸಾಗುತ್ತಿದ್ದ ನಾಲ್ವರು ರೈತರು ಮೃತಪಟ್ಟಿದ್ದಾರೆ. ಒಟ್ಟಾರೆ ಈವರೆಗೆ ಎಂಟು ಮಂದಿ ಧರಣಿನಿರತ ರೈತರು ರಸ್ತೆ ಅಪಘಾತಗಳಲ್ಲಿ ಸಾವುಕಂಡಿದ್ದರೆ, ಇಬ್ಬರು ರೈತ ಮಹಿಳೆಯರು ಸೇರಿದಂತೆ 12 ಮಂದಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಮತ್ತು ಇಬ್ಬರು ದೆಹಲಿಯ ಕೊರೆವ ಚಳಿಗೆ ಜೀವ ಬಿಟ್ಟಿದ್ದಾರೆ. ಹಲವಾರು ಮಂದಿ ವಿವಿಧ ಅಪಘಾತಗಳಲ್ಲಿ ಗಾಯಗೊಂಡಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ


ತಮ್ಮ ಬದುಕು ಮತ್ತು ದುಡಿಮೆಯನ್ನು ಕಿತ್ತುಕೊಳ್ಳುವ ಹುನ್ನಾರ ಕೇಂದ್ರ ಸರ್ಕಾರದ ಮೂರು ಹೊಸ ಕೃಷಿ ಕಾಯ್ದೆಗಳ ಹಿಂದಿದೆ. ದೇಶದ ಕೃಷಿ ಭೂಮಿಯನ್ನು ರೈತರಿಂದ ಕಿತ್ತುಕೊಂಡು ಮೋದಿ ಆಪ್ತ ಅಂಬಾನಿ ಮತ್ತು ಅದಾನಿ ಸೇರಿದಂತೆ ಕಾರ್ಪೊರೇಟ್ ಕುಳಗಳಿಗೆ ನೀಡುವ ಮೂಲಕ ತಮ್ಮನ್ನು ತಮ್ಮ ಹೊಲದಲ್ಲಿಯೇ ಗೇಣಿದಾರರನ್ನಾಗಿಸುವ, ಕೂಲಿಯಾಳುಗಳನ್ನಾಗಿಸುವ ಹುನ್ನಾರ ಅಡಗಿದೆ. ಎಪಿಎಂಸಿ ವ್ಯವಸ್ಥೆ ನಾಶ ಮಾಡುವ, ಬೆಂಬಲ ಬೆಲೆ ವ್ಯವಸ್ಥೆ ತೆಗೆದುಹಾಕುವ, ಅಗತ್ಯವಸ್ತು ಪಟ್ಟಿಯಿಂದ ಕೃಷಿ ಉತ್ಪನ್ನ ತೆಗೆದು, ಕಾರ್ಪೊರೇಟ್ ಕಂಪನಿಗಳು ಕೃತಕ ಅಭಾವ ಸೃಷ್ಟಿಸಿ ಒಂದು ಕಡೆ ರೈತರನ್ನೂ, ಮತ್ತೊಂದು ಕಡೆ ಗ್ರಾಹಕರನ್ನೂ ಶೋಷಿಸಿ ತಾವು ಹಣ ಮಾಡುವ ವ್ಯವಸ್ಥೆಗೆ ಪೂರಕ ಕಾನೂನುಗಳನ್ನು ಮೋದಿ ಸರ್ಕಾರ ಜಾರಿಗೆ ತರುತ್ತಿದೆ. ಇದು ಹಂತಹಂತವಾಗಿ ದೇಶದ ಕೃಷಿಕರನ್ನು ದಿವಾಳಿ ಎಬ್ಬಿಸುವ ಕಾರ್ಯತಂತ್ರದ ಭಾಗ ಎಂಬುದು ರೈತರ ಆಕ್ರೋಶ.

ಧರಣಿನಿರತ ರೈತರ ಸರಣಿ ಸಾವು ಮತ್ತು ಮೋದಿ-ಮಾಧ್ಯಮದ ಮೌನ!
ಅನ್ನದಾತರ ಆಕ್ರೋಶದ ಮುಂದೆ ಬೆತ್ತಲಾದ ‘ಗೋದಿ ಮೀಡಿಯಾ’

ಆದರೆ, ಕಳೆದ ಇಪ್ಪತ್ತು ದಿನಗಳಿಂದ ದೆಹಲಿಯ ಗಡಿಗಳಲ್ಲಿ ಕೊರೆವ ಚಳಿ, ಗಾಳಿ, ಬಿಸಿಲ ನಡುವೆ ಬೀದಿಯಲ್ಲೇ ಹೋರಾಟದಲ್ಲಿ ನಿರತರಾಗಿದ್ದರೂ, ಕನಿಷ್ಠ ಅವರನ್ನು ದೆಹಲಿಯ ಒಳಗೆ ಬಿಟ್ಟು, ಮೈದಾನದಲ್ಲಿ ಧರಣಿಗೆ ಅವಕಾಶ ನೀಡುವಮಟ್ಟಿನ ಮಾನವೀಯತೆಯನ್ನಾಗಲೀ, ಪ್ರಜಾಸತ್ತಾತ್ಮಕ ನಡತೆಯನ್ನಾಗಲೀ ತೋರುವಲ್ಲಿ ನರೇಂದ್ರ ಮೋದಿಯವರ ಸರ್ಕಾರ ವಿಫಲವಾಗಿದೆ. ರೈತರ ಆದಾಯ ದುಪ್ಪಟ್ಟು ಮಾಡುವ, ದೇಶದವನ್ನು ವಿಶ್ವಗುರು ಮಾಡುವ ಬಡಾಯಿ ಮಾತುಗಳ ಬದಲಿಗೆ ಈಗ ರೈತರಿಗೆ ಬೇಕಿರುವುದು ಅವರನ್ನು ವಿಶ್ವಾಸಕ್ಕೆ ಪಡೆದು ಚರ್ಚಿಸುವ, ಅವರ ಅನುಮಾನ, ಆತಂಕಗಳನ್ನು ದೂರಮಾಡುವ ನೈಜ ಪ್ರಜಾತಾಂತ್ರಿಕ ನಡವಳಿಕೆ.

ಆದರೆ, ಪ್ರಧಾನಿ ಮೋದಿಯವರು ಮಂಗಳವಾರ ತಾನೆ ಯಾವುದೇ ಕಾರಣಕ್ಕೂ ಕೃಷಿ ಕಾಯ್ದೆಗಳನ್ನು ವಾಪಸು ಪಡೆಯುವ ಪ್ರಶ್ನೆಯೇ ಇಲ್ಲ ಎಂದು ಪುನರುಚ್ಛರಿಸಿದ್ದಾರೆ. ಅಂದರೆ, ತಾವು ರೂಪಿಸುವ ಕಾನೂನುಗಳನ್ನು ಪ್ರಶ್ನೆ ಮಾಡದೇ ಪಾಲಿಸುವುದು ರೈತರೂ ಸೇರಿದಂತೆ ದೇಶದ ಜನಸಾಮಾನ್ಯರ ಕರ್ತವ್ಯ. ಜನ ಒಪ್ಪಲೀ ಬಿಡಲಿ ತಾವು ತಮ್ಮ ಮೂಗಿನ ನೇರಕ್ಕೆ ಕಾಯ್ದೆ-ಕಾನೂನು ಮಾಡಿಯೇ ಸಿದ್ಧ ಎಂಬ ಸಂದೇಶ ರವಾನಿಸಿದ್ದಾರೆ. ಆದರೆ, ಪ್ರಶ್ನೆ ಇರುವುದು ಈ ಮೂರು ಕಾಯ್ದೆಗಳು, ಯಾವುದೇ ಸಂಚಾರ ನಿಯಮದಂತೆಯೋ, ಆರೋಗ್ಯ ಸುರಕ್ಷೆಯಂತೆಯೋ ದೇಶದ ಎಲ್ಲಾ ನಾಗರಿಕರ ಹಿತ ಕಾಯುವ ಉದ್ದೇಶದವು ಅಲ್ಲ. ಈ ಕಾಯ್ದೆಗಳು ಕೃಷಿ ಮತ್ತು ಕೃಷಿಯಲ್ಲಿ ತೊಡಗಿರುವ ರೈತರಿಗೆ ನೇರವಾಗಿ ಸಂಬಂಧಪಟ್ಟವು.

ಧರಣಿನಿರತ ರೈತರ ಸರಣಿ ಸಾವು ಮತ್ತು ಮೋದಿ-ಮಾಧ್ಯಮದ ಮೌನ!
‘ಮೀಡಿಯಾ ಟ್ರಯಲ್’ ಹಿಂದಿರುವುದು ಕೇವಲ TRP ಹಪಾಹಪಿಯಲ್ಲ!

ಹಾಗಿರುವಾಗ ಆ ಕಾಯ್ದೆಗಳು ಯಾರನ್ನು ಉದ್ದೇಶಿಸಿ ರಚಿಸಲ್ಪಟ್ಟಿವೆಯೋ ಅವರೇ ಅದನ್ನು ಪ್ರಶ್ನಿಸುತ್ತಿದ್ದಾರೆ, ಜೀವ ಪಣಕ್ಕಿಟ್ಟು ವಿರೋಧಿಸುತ್ತಿದ್ದಾರೆ. ಮುಖ್ಯವಾಗಿ ಯಾವುದೋ ಒಂದು ಗುಂಪು, ಯಾವುದೋ ಒಂದು ಪ್ರದೇಶದಲ್ಲಿ ಮಾತ್ರವಲ್ಲದೆ ದೇಶಾದ್ಯಂತ ರೈತರು ಪಕ್ಷ, ಸಿದ್ಧಾಂತ, ಪ್ರಾಂತಗಳನ್ನೆಲ್ಲಾ ಮೀರಿ ಒಕ್ಕೊರಲಿನಿಂದ ದನಿ ಎತ್ತಿದ್ದಾರೆ. ಹಾಗಿದ್ದರೂ ಸರ್ಕಾರ ಮೊಂಡು ಹಠಕ್ಕೆ ಬಿದ್ದು ಕಾಯ್ದೆ ವಾಪಸು ಪಡೆಯುವುದಿಲ್ಲ ಎನ್ನುತ್ತಿದೆ ಎಂದರೆ ನಿಜಕ್ಕೂ ಅದು ಯಾರ ಹಿತ ಕಾಯುತ್ತಿದೆ? ಯಾರ ಹಿತಕ್ಕಾಗಿ ಈ ಕಾಯ್ದೆ ತಂದಿದೆ? ಎಂಬ ಪ್ರಶ್ನೆಗಳು ಸಹಜ. ಮೋದಿಯವರು ಮತ್ತು ಅವರ ಸರ್ಕಾರ ಇಂತಹ ಪ್ರಶ್ನೆಗಳಿಂದ ಯಾಕೆ ಪಲಾಯನ ಮಾಡುತ್ತಿದ್ಧಾರೆ ಎಂಬುದು ಒಗಟೇನಲ್ಲ!

ಈ ನಡುವೆ ಸಂಘಪರಿವಾರ ಪ್ರತಿಭಟನಾನಿರತ ರೈತರ ಹೋರಾಟಕ್ಕೆ ಮಸಿ ಬಳಿಯಲು ಇನ್ನಿಲ್ಲದ ಪ್ರಯತ್ನಗಳನ್ನು ಮುಂದುವರಿಸಿದೆ. ಆ ಪಟ್ಟಿಗೆ ಹೊಸ ಸೇರ್ಪಡೆ ರಾಗಿಣಿ ತಿವಾರಿ ಎಂಬ ಸಂಘಪರಿವಾರದ ಮಹಿಳೆಯ ಬೆದರಿಕೆ. ತನ್ನನ್ನು ತಾನು ಹಿಂದುತ್ವ ನಾಯಕಿ ಎಂದು ಕರೆದುಕೊಂಡಿರುವ ಆಕೆ ದೆಹಲಿ ರಸ್ತೆಗಳನ್ನು ಬಂದ್ ಮಾಡಿರುವ ರೈತರು ಕೂಡಲೇ ಅಲ್ಲಿಂದ ಜಾಗ ಖಾಲಿ ಮಾಡದೇ ಇದ್ದಲ್ಲಿ, ಮತ್ತೊಂದು ಜಾಫ್ರಬಾದ್ ಮಾದರಿ ದಾಳಿ ನಡೆಯಲಿದೆ ಎಂದು ಸಾಮಾಜಿಕ ಜಾಲತಾಣದ ಮೂಲಕ ಬೆದರಿಕೆ ಒಡ್ಡಿದ್ದಾಳೆ. ಕಳೆದ ಫೆಬ್ರವರಿಯಲ್ಲಿ ಸಿಎಎ-ಎನ್ ಆರ್ ಸಿ ಪ್ರತಿಭಟನೆಯ ನಡುವೆ ದೆಹಲಿ ಚುನಾವಣೆಗೆ ಮುನ್ನ ಭುಗಿಲೆದ್ದಿದ್ದ ಕೋಮುಗಲಭೆಯಲ್ಲಿ ಮುಸ್ಲಿಂ ಬಾಹುಳ್ಯದ ಪ್ರದೇಶದ ಮೇಲೆ ಪೊಲೀಸರ ಕಣ್ಣೆದುರೇ ವ್ಯಾಪಕ ದಾಳಿ ನಡೆದಿತ್ತು. ಇಡೀ ಪ್ರದೇಶಕ್ಕೆ ಬೆಂಕಿ ಹಚ್ಚಲಾಗಿತ್ತು. ಆ ಘಟನೆಯನ್ನು ಉಲ್ಲೇಖಿಸಿ ರಾಗಿಣಿ ತಿವಾರಿ, ಆ ದಾಳಿಯಂತದೇ ದಾಳಿಯನ್ನು ಅನ್ನದಾತರ ಮೇಲೆ ನಡೆಸುವುದಾಗಿ ಹೇಳಿದ್ದಾಳೆ. ಆ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಧರಣಿನಿರತ ರೈತರ ಸರಣಿ ಸಾವು ಮತ್ತು ಮೋದಿ-ಮಾಧ್ಯಮದ ಮೌನ!
ಮೀಡಿಯಾ ಟ್ರಯಲ್‌ನಿಂದ ನ್ಯಾಯಾಂಗ ವ್ಯವಸ್ಥೆಗೆ ಹಾನಿ – ಅಟಾರ್ನಿ ಜನರಲ್‌

ಆಕೆ ಅಂತಹ ಪ್ರಚೋದನಕಾರಿ ಹೇಳಿಕೆ ನೀಡಿ ಬರೋಬ್ಬರಿ ಐದು ದಿನ ಕಳೆದರೂ ದೆಹಲಿ ಪೊಲೀಸರಾಗಲೀ, ಕೇಂದ್ರ ಗೃಹ ಸಚಿವಾಲಯವಾಗಲೀ ಅಥವಾ ರೈತರ ಹಿತ ಕಾಯುವುದಾಗಿ ಹೇಳುವ ಪ್ರಧಾನಿಗಳಾಗಲೀ ಆ ಬಗ್ಗೆ ಈವರೆಗೆ ಯಾವುದೇ ಕ್ರಮಕೈಗೊಂಡಿಲ್ಲ.

ಈ ನಡುವೆ ನಮ್ಮ ಮಾಧ್ಯಮಗಳು ಕೂಡ ರೈತರ ಸರಣಿ ಸಾವಿನ ಬಗ್ಗೆಯಾಗಲೀ, ದೆಹಲಿ ಕೊರೆಯುವ ಚಳಿ ಮತ್ತು ಶೀತಗಾಳಿ ಅನ್ನದಾತರ ಜೀವಕ್ಕೆ ಒಡ್ಡಿರುವ ಅಪಾಯದ ಬಗ್ಗೆಯಾಗಲೀ, ಕನಿಷ್ಟಪಕ್ಷ ಇಂತಹ ಕೂಗುಮಾರಿಗಳ ಬಗ್ಗೆಯಾಗಲೀ ಸುದ್ದಿಮಾಡುವುದೇ ಇಲ್ಲ. ಕೃಷಿ ಕಾಯ್ದೆಗಳನ್ನು ವಾಪಸು ಪಡೆಯುವ ಪ್ರಶ್ನೆಯೇ ಇಲ್ಲ ಎಂಬ ಪ್ರಧಾನಿಗಳ ಮಾತನ್ನು ಮುಖಪುಟದಲ್ಲಿ ದೊಡ್ಡದೊಡ್ಡ ಅಕ್ಷರಗಳಲ್ಲಿ ಮುದ್ರಿಸುವ, ವೈರಲ್ ಕಂಟೆಂಟ್ ಮಾಡಿ ಹಂಚುವ ಮಾಧ್ಯಮಗಳು, ಟಿವಿಯಲ್ಲಿ ಬ್ರೇಕಿಂಗ್ ನ್ಯೂಸ್ ಮಾಡುವ ಸುದ್ದಿವಾಹಿನಿಗಳು 20 ದಿನದಲ್ಲಿ 22 ಮಂದಿ ರೈತರು ಧರಣಿ ವೇಳೆ ಜೀವಬಿಟ್ಟಿದ್ದಾರೆ ಎಂಬುದನ್ನು ಗಟ್ಟಿಯಾಗಿ ಹೇಳಿದ ನಿದರ್ಶನವಿಲ್ಲ. ಮಂಗಳವಾರ ಒಂದೇ ದಿನ ನಾಲ್ವರು ಧರಣಿನಿರತರು ಮೃತಪಟ್ಟ ಸುದ್ದಿ ಕೂಡ ಬಹುತೇಕ ಮುಖ್ಯವಾಹಿನಿ ಮಾಧ್ಯಮಗಳಲ್ಲಿ ಕಾಣೆಯಾಗಿದೆ.

ಅದೇ ರೈತರ ಜಾಗದಲ್ಲಿ ಯಾವುದೋ ಸಂಘಪರಿವಾರದ ಸಂಘಟನೆಗಳಿದ್ದಿದ್ದರೆ, ಅಥವಾ ಬಿಜೆಪಿ ಹೊರತುಪಡಿಸಿ ಇತರ ಸರ್ಕಾರಗಳ ವಿರುದ್ಧದ ಹೋರಾಟದಲ್ಲಿ ಹೀಗೆ ಸರಣಿ ಸಾವುಗಳಾಗಿದ್ದರೆ ಈ ‘ಗೋಧಿ ಮಾಧ್ಯಮ’ಗಳು ಹೇಗೆ ಬಾಯಿಬಡಿದುಕೊಳ್ಳುತ್ತಿದ್ದವು ಎಂಬುದನ್ನು ಯಾರು ಬೇಕಾದರೂ ಊಹಿಸಬಹುದು. ಮಾರಿಕೊಂಡ ಮಾಧ್ಯಮಗಳು, ಕಾರ್ಪೊರೇಟ್ ಕಂಪನಿಗಳ ಮಧ್ಯವರ್ತಿಗಳಂತೆ ವರ್ತಿಸುತ್ತಿರುವ ಸರ್ಕಾರ ಮತ್ತು ಆಳುವ ಮಂದಿಯ ನಡುವೆ ದೇಶದ ಅನ್ನ ಬೆಳೆಯುವ ರೈತ ತನ್ನದೇ ಹೊಲ, ತನ್ನದೇ ಫಸಲಿನ ಮೇಲಿನ ಹಕ್ಕನ್ನು ತನಗೆ ಉಳಿಸಿಕೊಳ್ಳಲು ಬೀದಿ ಹೆಣವಾಗುತ್ತಿದ್ದಾನೆ. ಅನ್ನ ತಿನ್ನುವವರ ಬದಲು ಅಣಬೆ ತಿನ್ನುವವರೇ ಹೆಚ್ಚುತ್ತಿರುವ ಕೆಡುಗಾಲದಲ್ಲಿ ಅನ್ನದಾತನೇ ಭಯೋತ್ಪಾದಕನಂತೆ, ದೇಶದ್ರೋಹಿಯಂತೆ ಬಿಂಬಿತನಾಗುತ್ತಿದ್ದಾನೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com