ಬಿಹಾರ ಚುನಾವಣೆ ನೆನಪಿಸಿದ ಪ್ರಾದೇಶಿಕ ಪಕ್ಷಗಳ ಮಹತ್ವ

ತನ್ನ ಸ್ವಂತ ಸಾಮರ್ಥ್ಯದಿಂದ ಪ್ರಜೆಗಳ ಮನ್ನಣೆ ಪಡೆದು ಕೇಂದ್ರದಿಂದ ರಾಜ್ಯಕ್ಕೆ ಸಲ್ಲಬೇಕಾದ ಸಹಕಾರವನ್ನು ಭಿಕ್ಷೆಯಿಂದ ಪಡೆಯದೇ, ಸ್ವಾಭಿಮಾನದಿಂದ ಪಡೆಯುವುದಕ್ಕಾಗಿ ಬಲಿಷ್ಟ ಪ್ರಾದೇಶಿಕ ಪಕ್ಷ ಬೇಕು ಪ್ರಾದೇಶಿಕವಾಗಿ ಬೆಳೆದಂತಹ ನಾಯಕ ಬೇಕು.
ಬಿಹಾರ ಚುನಾವಣೆ ನೆನಪಿಸಿದ ಪ್ರಾದೇಶಿಕ ಪಕ್ಷಗಳ ಮಹತ್ವ

ದೇಶದಾದ್ಯಂತ ನಡೆದ ಚುನಾವಣೆಗಳ ಫಲಿತಾಂಶ ಹೊರಬಂದಿದೆ. ಬಹುತೇಕ ಎಲ್ಲಾ ಕಡೆಯು ರಾಷ್ಟ್ರೀಯ ಪಕ್ಷ ಬಿಜೆಪಿ ತನ್ನ ಪ್ರಾಬಲ್ಯವನ್ನು ಮೆರೆದಿದೆ. ಆದರೆ, ಬಿಹಾರದಲ್ಲಿ ಪ್ರಾದೇಶಿಕ ಪಕ್ಷಗಳ ಸಹಾಯವಿಲ್ಲದೇ, ರಾಷ್ಟ್ರೀಯ ಪಕ್ಷಗಳು ಸರ್ಕಾರ ರಚಿಸಲು ಸಾಧ್ಯವೇ ಇಲ್ಲ. ಇದು ಕೇವಲ ಬಿಹಾರದ ಸ್ಥಿತಿಗತಿ ಮಾತ್ರವಲ್ಲ. ಬಹುತೇಕ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ಚುನಾವಣಾ ಸಂದರ್ಭದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

ಬಿಹಾರದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾದಾಗ ಅಥವಾ ಯಾವುದೇ ಇನ್ನಿತರ ಪ್ರಾಕೃತಿಕ ವಿಕೋಪಗಳು ಸಂಭವಿಸಿದರೆ, ಕೇಂದ್ರ ಸರ್ಕಾರ ತಕ್ಷಣವೇ ಪರಿಹಾರ ಬಿಡುಗಡೆ ಮಾಡುತ್ತದೆ. ಆದರೆ, ಬಿಹಾರದ ಮೇಲಿರುವ ಕನಿಕರ ಕರ್ನಾಟಕದ ಮೇಲಿಲ್ಲ ಏಕೆ? ಇಲ್ಲಿ ನೆರೆ ಹಾವಳಿಯಿಂದ ಬೇಸತ್ತ ಜನರು ಭಾರತದ ಭಾಗವಲ್ಲವೇ? ಅಥವಾ ಇಲ್ಲಿ ಅಧಿಕಾರದಲ್ಲಿರುವ ರಾಷ್ಟ್ರೀಯ ಪಕ್ಷದ ಮುಖಂಡರಿಗೆ ತಮ್ಮ ಹಕ್ಕನ್ನು ಕೇಳುವ ಧೈರ್ಯವಿಲ್ಲವೇ?

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಈ ಕಾರಣಕ್ಕಾಗಿಯೇ ಅಲ್ಲಿನ ಜನರು ಮತ್ತೆ ಮತ್ತೆ ಪ್ರಾದೇಶಿಕ ಪಕ್ಷಗಳಿಗೆ ಮಣೆ ಹಾಕುತ್ತವೆ. ಅಲ್ಲಿನ ಸ್ಥಳೀಯ ವಿಚಾರಗಳನ್ನು ಮುಂದಿಟ್ಟುಕೊಂಡು ಚುನಾವಣೆಯನ್ನು ಎದುರಿಸುವ ಪ್ರಾದೇಶಿಕ ಪಕ್ಷಗಳ ಎದುರು ರಾಷ್ಟ್ರ ಮಟ್ಟದ ವಿಚಾರವನ್ನು ಪ್ರಚಾರಕ್ಕಾಗಿ ಬಳಸುವ ರಾಷ್ಟ್ರೀಯ ಪಕ್ಷಗಳು ಬೆಸ್ತು ಬೀಳುತ್ತವೆ. ಮತ್ತು ಅನಿವಾರ್ಯವಾಗಿ ಪ್ರಾದೇಶಿಕ ಪಕ್ಷಗಳ ಬೇಡಿಕೆಯನ್ನು ಈಡೇರಿಸುವ ಒತ್ತಡಕ್ಕೆ ಸಿಲುಕಿಕೊಳ್ಳುತ್ತವೆ.

ಬಿಹಾರ ಚುನಾವಣೆ ನೆನಪಿಸಿದ ಪ್ರಾದೇಶಿಕ ಪಕ್ಷಗಳ ಮಹತ್ವ
ಪ್ರಾದೇಶಿಕ ಪಕ್ಷವಾಗಿ ಅಧಿಕಾರ ಹಿಡಿಯಲು ಜೆಡಿಎಸ್ ಗೆ ಎಲ್ಲಾ ಅವಕಾಶವಿದೆ, ಆದರೆ...

ಇಂತಹ ಸಂದರ್ಭಗಳು ದೇಶದಲ್ಲಿ ಪ್ರಾದೇಶಿಕ ಪಕ್ಷದ ಅಗತ್ಯತೆಯನ್ನು ಮತ್ತೆ ಮತ್ತೆ ನೆನಪಿಸುತ್ತವೆ. ಹಾಗೆ ನೋಡಿದರೆ ಪ್ರಾದೇಶಿಕವಾಗಲಿ ಅಥವಾ ರಾಷ್ಟ್ರೀಯ ಪಕ್ಷವಾಗಿರಲಿ ಅವು ತನ್ನ ನಾಯಕನ ಕ್ಷಮತೆ, ಸಾಮರ್ಥ್ಯ ಮತ್ತು ನಾಯಕತ್ವದ ಗುಣದ ಮೇಲೆ ನಿಂತಿವೇ ಹೊರತು ಕೇವಲ ಪಕ್ಷದ ಸಿದ್ದಾಂತ ಮತ್ತು ಚಿಹ್ನೆಯ ಮೇಲೆ ಅಲ್ಲ. ಸ್ಥಳೀಯ ಸಮಸ್ಯೆಗಳಿಗೆ ಹಾಗೂ ವಿಕಾಸಕ್ಕೆ ಸ್ಪಂದಿಸುವ ನಾಯಕತ್ವ ಸ್ಥಳೀಯವಾಗಿ ಬೆಳೆಯಬೇಕಾದ ಅಗತ್ಯತೆ ಇದೆ.

ಬಿಹಾರ ಚುನಾವಣೆ ನೆನಪಿಸಿದ ಪ್ರಾದೇಶಿಕ ಪಕ್ಷಗಳ ಮಹತ್ವ
ಜಮ್ಮು ಕಾಶ್ಮೀರ ರಾಜಕೀಯ ಪಡಸಾಲೆಯಲ್ಲಿ ಉದಯಿಸಿದ ಹೊಸ ರಾಜಕೀಯ ಪಕ್ಷ ʼಅಪ್ನಿ ಪಾರ್ಟಿʼ

ದೂರದಲ್ಲಿ ಕೂತಿರುವವರ ಬಲದಿಂದ ಹಾಗೂ ಅವರ ಸಾಮರ್ಥ್ಯದ ಹೆಸರಿನ ಮೇಲೆ ಗೆದ್ದು ನಂತರ ಅವರ ಮುಂದೆ ಕೈಕಟ್ಟಿ ನಿಂತು, ಜೀ ಹುಝುರ್ ಎಂದು ಸಂಪೂರ್ಣ ಶರಣಾಗಿ, ಕಾಡಿ ಬೇಡಿ ಅವರು ತಥಾಸ್ತು ಅನ್ನುವವರೆಗೂ ಕಾದು, ಅಸ್ತು ಅನ್ನದಿದ್ದರೆ ಪೇಚು ಮೊರೆ ಹಾಕಿಕೊಂಡು ಇಲ್ಲಿ ಅದನ್ನು ಮುಚ್ಚಿಹಾಕಲು ಇನ್ನೊಂದು ಸುಳ್ಳು ಹೇಳಿ ಸಾಗ ಹಾಕುವ ನಾಯಕನ ಅಗತ್ಯತೆ ಈಗಿಲ್ಲ. ಅದರ ಬದಲು ತನ್ನ ಸ್ವಂತ ಸಾಮರ್ಥ್ಯದಿಂದ ಪ್ರಜೆಗಳ ಮನ್ನಣೆ ಪಡೆದು ಕೇಂದ್ರದಿಂದ ರಾಜ್ಯಕ್ಕೆ ಸಲ್ಲಬೇಕಾದ ಸಹಕಾರವನ್ನು ಭಿಕ್ಷೆಯಿಂದ ಪಡೆಯದೇ, ಸ್ವಾಭಿಮಾನದಿಂದ ಪಡೆಯುವುದಕ್ಕಾಗಿ ಬಲಿಷ್ಟ ಪ್ರಾದೇಶಿಕ ಪಕ್ಷ ಬೇಕು ಪ್ರಾದೇಶಿಕವಾಗಿ ಬೆಳೆದಂತಹ ನಾಯಕ ಬೇಕು. ಇದು ಇಂದಿನ ಅಗತ್ಯತೆ.

ಇಂದು ಒಂದು ರಾಷ್ಟ್ರೀಯ ಪಕ್ಷ ಇಡೀ ರಾಷ್ಟ್ರದಲ್ಲಿ ತನ್ನ ಅಧಿಕಾರ ವ್ಯಾಪ್ತಿಯನ್ನು ಹಬ್ಬಲು, ಅದರ ರಾಷ್ಟ್ರೀಯ ನಾಯಕನ ಕಾರ್ಯಕ್ಷಮತೆ ಮತ್ತು ಸಾಮರ್ಥ್ಯ ಇತರೆ ಪಕ್ಷಗಳಿಗಿಂತ ಉತ್ತಮವಾಗಿದೆ ಎಂದಿರಬಹುದೇ ವಿನಹ, ತಾನೊಂದು ರಾಷ್ಟ್ರೀಯ ಪಕ್ಷವೆಂಬ ಕಾರಣದಿಂದಲ್ಲ.

ಬಿಹಾರ ಚುನಾವಣೆ ನೆನಪಿಸಿದ ಪ್ರಾದೇಶಿಕ ಪಕ್ಷಗಳ ಮಹತ್ವ
ಏರುದಾರಿಯಲ್ಲಿ ಲಾಲೂ ಪಕ್ಷ- `ಮೇಲ್ಜಾತಿ’ಗೆ ಮಣೆ

ಪ್ರಾದೇಶಿಕ ಪಕ್ಷದಲ್ಲಿ ಕೂಡ ಉತ್ತಮ ನಾಯಕತ್ವ ಕಂಡಲ್ಲಿ ಕೇಂದ್ರ ಸರ್ಕಾರದಿಂದ ಮಂಡಿಯೂರಿ ಭಿಕ್ಷೆ ಬೇಡಿ, ಕೊಟ್ಟಷ್ಟು ಭಿಕ್ಷೆಯನ್ನು ತೆಗೆದುಕೊಂಡು ಬರದೇ, ಸ್ವಾಭಿಮಾನದಿಂದ ಹಕ್ಕು ಚಲಾಯಿಸಿ, ಬರಬೇಕಿದ್ದನ್ನು ಗಿಟ್ಟಿಸಿಕೊಂಡು ಬರಬಹುದು. ಹಾಗಾಗಿ ಈ ಕನ್ನಡ ನಾಡಿನ ವಿಕಾಸಕ್ಕಾಗಿ, ಸ್ವಾಭಿಮಾನಿ ಕರ್ನಾಟಕಕ್ಕಾಗಿ ಸಮರ್ಥ ಪ್ರಾದೇಶಿಕ ಪಕ್ಷ ಬೇಕೇ ಬೇಕು. ಕೇವಲ ಅಧಿಕಾರದ ಹಪಾಹಪಿಗೆ ಪ್ರಾದೇಶಿಕ ಪಕ್ಷಗಳನ್ನು ಕಟ್ಟಿ ಬೆಳೆಸುವ ಬದಲು, ನಾಡಿನ ಹಿತಕ್ಕಾಗಿ ದುಡಿಯಲು ಸಜ್ಜಾಗಿರುವ ನಾಯಕತ್ವದಿಂದ ಪ್ರಾದೇಶಿಕ ಪಕ್ಷಗಳು ಬೆಳೆಯಬೇಕಾಗಿವೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com