ಟಿ ಆರ್ ಪಿಯ ಸುತ್ತ ಹಗರಣಗಳ ಹುತ್ತ..!
ಭ್ರಷ್ಟ ರಾಜಕೀಯ ವ್ಯಕಿಗಳಿಗೆ, ಭ್ರಷ್ಟ ಅಧಿಕಾರಿಗಳಿಗೆ ಸಿಂಹಸಪ್ನರಾಗಬೇಕಾಗಿದ್ದ ಸುದ್ದಿ ಮಾಧ್ಯಮಗಳು ತಾವೇ ಭ್ರಷ್ಟಾಚಾರದಲ್ಲಿ ತೊಡಗಿರುವುದು ಎಷ್ಟರಮಟ್ಟಿಗೆ ಸಮರ್ಥನೀಯ?
ಟಿ ಆರ್ ಪಿಯ ಸುತ್ತ ಹಗರಣಗಳ ಹುತ್ತ..!

ವಿರೋಧಪಕ್ಷವನ್ನು ಪ್ರಜಾಪ್ರಭುತ್ವದ ಕಾವಲು ನಾಯಿ ಅಂತ ಕರೆದರೆ, ಸ್ವತಂತ್ರ, ವೃತ್ತಿಪರ ಮತ್ತು ಜವಾಬ್ದಾರಿಯುತ ಮಾಧ್ಯಮವನ್ನು ಪ್ರಜಾಪ್ರಭುತ್ವದ ಬೆನ್ನೆಲುಬು ಅಂತ ಕರೆಯುತ್ತಾರೆ. ಪ್ರಜಾಪ್ರಭುತ್ವದ ಪ್ರಭುಗಳಾದ ಪ್ರಜೆಗಳಿಗೆ ವಸ್ತುನಿಷ್ಠವಾದ ವರದಿಯನ್ನು ನೀಡುವುದು ಮಾಧ್ಯಮಗಳ ಕರ್ತವ್ಯವಾಗಿದೆ. ಅಧಿಕಾರದಲ್ಲಿರುವವರು ಹಾದಿ ತಪ್ಪಿದಾಗ ಅವರನ್ನು ಮತ್ತೆ ಸರಿದಾರಿಗೆ ತರುವಲ್ಲಿ ಮಾಧ್ಯಮದ ವರದಿಗಳು ಮಹತ್ವದ ಪಾತ್ರವನ್ನು ವಹಿಸುತ್ತವೆ. ಮಾಧ್ಯಮ ಪ್ರಪಂಚಕ್ಕೆ ಭವ್ಯವಾದ ಒಂದು ಇತಿಹಾಸ ಇದೆ. ಒಂದು ಸರ್ಕಾರವನ್ನು ಅಲುಗಾಡಿಸಬಲ್ಲ ತಾಕತ್ತು ಮಾದ್ಯಮಕ್ಕೆ ಇದೆ ಅಂದ್ರೆ ಅತಿಶಯೋಕ್ತಿ ಅಲ್ಲ. ಆದರೆ ಇಂದಿನ ಪರಿಸ್ಥಿತಿ ಏನಾಗಿದೆ? ಹೇಳಲು ಬೇಸರವಾದರೂ ಮಾಧ್ಯಮಗಳು ಜನರ ನಂಬಿಕೆಯನ್ನು ಕಳೆದುಕೊಳ್ಳುತ್ತಿರುವುದು ಸುಳ್ಳಲ್ಲ.

ಇಂದು ಮಾಧ್ಯಮಗಳು ಆಡಳಿತ ಪಕ್ಷ ಹಾಗು ವಿರೋಧ ಪಕ್ಷದ ಪರ ಎಂದು ವಿಭಜನೆಗೊಂಡಿವೆ. ಸತ್ಯದ ಪರ ನಿಲ್ಲದೆ ಸುದ್ದಿಗಳನ್ನು ತಮ್ಮ ಅಗತ್ಯಕ್ಕೆ ತಕ್ಕಂತೆ ತಿದ್ದುಪಡಿ ಮಾಡಿ ಜನರ ಮುಂದಿಡುತ್ತಿದ್ದಾರೆ. ಬಹುತೇಕ ಮಾಧ್ಯಮಗಳು ರಾಜಕೀಯ ಪಕ್ಷಗಳ ತಾಳಕ್ಕೆ ಕುಣಿಯುವ ಗೊಂಬೆಗಳಾಗಿಬಿಟ್ಟಿದೆ ಎನ್ನುವುದು ನಿರಾಕರಿಸಲಾಗದ ಸತ್ಯ. ಮಾಧ್ಯಮಗಳು ಟಿ ಆರ್ ಪಿ ಹಿಂದೆ ಬಿದ್ದಿವೆ ಎಂದು ಆಗಾಗ ಕೆಲವರು ಮಾತನಾಡುವುದನ್ನು ನಾವು ಕೇಳಿದ್ದಿವೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಹಾಗಾದ್ರೆ ಏನಿದು ಟಿ ಆರ್ ಪಿ? ಟಿವಿ ಮಾಧ್ಯಮಗಳಿಗೆ ಏನಿದೆ ಇದರ ಅಗತ್ಯ? ಇದರ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನ ಇಲ್ಲಿದೆ. ಕಳೆದ ವಾರ ಎಲ್ಲ ಪ್ರಮುಖ ಮಾಧ್ಯಮಗಳಲ್ಲಿ ಟಿ ಆರ್ ಪಿ ಹಗರಣದ ಸುದ್ದಿ ತುಂಬಾ ಸದ್ದು ಮಾಡಿತು. ತನ್ನನ್ನು ತಾನೇ ಅಪ್ರತಿಮ ದೇಶಭಕ್ತನಂತೆ ಬಿಂಬಿಸಿಕೊಳ್ಳುತ್ತಿರುವ, ಅತಿಥಿ ಗಳನ್ನು ಚರ್ಚೆಗೆ ಕರೆದು ಅವರ ವಿಚಾರಮಂಡಿಸಲು ಅವಕಾಶಕೊಡದೆ ಅವಮಾನಿಸುವ, ಯಾವುದೇ ವಿಷಯವಿರಲಿ ಒಂದು ಪಕ್ಷದ ಅನುಕೂಲಕ್ಕೆ ತಕ್ಕಂತೆ ತಿರುಚಿ ವಾದ ಮಂಡಿಸುವ, ತನ್ನದು ನಂಬರ್ 1 ಟಿವಿ ಚಾನೆಲ್ ಎಂದು ಅರಚಾಡುವ ಒಬ್ಬ ಹಿರಿಯ ಪತ್ರಕರ್ತರ ಸಂಸ್ಥೆಯ ಮೇಲೆ ಒಂದು ಗುರುತರವಾದ ಆಪಾದನೆ ಕೇಳಿ ಬಂತು.

ಟಿವಿ ಮಾಧ್ಯಮ ಒಂದು ಬೃಹತ್ತಾದ ಉದ್ಯಮ. ಅದರ ಹಿಂದೆ ಹಾಗು ಮುಂದೆ ಕೆಲಸ ಮಾಡುವ ಉದ್ಯೋಗಿಗಳ ಒಂದು ದೊಡ್ಡ ತಂಡವೇ ಇರುತ್ತೆ. ಸುದ್ದಿ ಬಿತ್ತರಿಸಿದೊಡನೆ ಅವರಿಗೆ ಹಣ ಹರಿದು ಬರುವುದಿಲ್ಲ. ಸುದ್ದಿ ಸಂಸ್ಥೆಗಳ ಆದಾಯದ ಮೂಲ ಜಾಹಿರಾತುಗಳು. ರಾಜಕೀಯ ಪಕ್ಷಗಳಿಂದ ಹಣ ಹರಿದು ಬರುವುದು ಬೇರೆ ವಿಚಾರ! ಅದು ಅಧಿಕೃತವಾದ ಆದಾಯ ಮೂಲವಲ್ಲವಾದ್ದರಿಂದ ಅದರ ಚರ್ಚೆ ಇಲ್ಲೇ ಅಪ್ರಸ್ತುತ. ದೊಡ್ಡ ದೊಡ್ಡ ಸಂಸ್ಥೆಗಳು ಎಲ್ಲ ಮಾಧ್ಯಮಗಳಲ್ಲಿ ಜಾಹಿರಾತು ಕೊಡಲು ಮುಗಿಬೀಳೋದಿಲ್ಲ. ಸುದ್ದಿ ಸಂಸ್ಥೆಗಳ ಜನಪ್ರಿಯತೆಯ ಮೇಲೆ, ಅದನ್ನು ಎಷ್ಟು ಜನ ನೋಡುತ್ತಾರೆ ಎನ್ನುವುದರ ಮೇಲೆ ಜಾಹಿರಾತು ಕೊಡಬೇಕೇ ಬೇಡವೇ ಎಂದು ನಿರ್ಧರಿಸುತ್ತಾರೆ. ಹಾಗಾಗಿ ಸುದ್ದಿ ಸಂಸ್ಥೆಗಳು ತಮ್ಮ ಚಾನೆಲಿನ ಜನಪ್ರಿಯತೆ ಹೆಚ್ಚಿಸಿಕೊಳ್ಳಲು ಪ್ರಯತ್ನ ಪಡುತ್ತಲೇ ಇರುತ್ತವೆ. ತಮ್ಮ ಸಂಸ್ಥೆ ಜನಪ್ರಿಯವಾದಷ್ಟು ಆದಾಯ ಹೆಚ್ಚುತ್ತೆ ಎನ್ನುವುದು ಅವರಿಗೆ ಗೊತ್ತಿದೆ. ಹಾಗಾಗಿ ಕೆಲವೊಮ್ಮೆ ಅಡ್ಡದಾರಿ ಹಿಡಿಯಲು, ಸುಳ್ಳು ಸುದ್ದಿ ಬಿತ್ತರಿಸಲು ಕೂಡ ಹಿಂಜರಿಯುವುದಿಲ್ಲ.

ಟಿ ಆರ್ ಪಿಯ ಸುತ್ತ ಹಗರಣಗಳ ಹುತ್ತ..!
TRP ಹಗರಣ: ವಿಚಾರಣೆಗೆ ಹಾಜರಾದ Republic TV ಮುಖ್ಯಸ್ಥರು

ಜನಪರ ಕಾಳಜಿಯ ವಿಷಯಗಳ ಬಗ್ಗೆ ಚರ್ಚೆ ನಡೆಸದೆ, ಚಲನ ಚಿತ್ರ ತಾರೆಯರ ಉಡುಗೆ ತೊಡುಗೆ, ಊಟ, ಅಲಂಕಾರ ಇವುಗಳ ಬಗ್ಗೆ ಹೆಚ್ಚು ಚರ್ಚೆ ನಡೆಸೋದು ಕೂಡ ಇದೇ ಕಾರಣಕ್ಕೆ. ಜನಪ್ರಿಯ ವ್ಯಕ್ತಿಗಳ ಸುದ್ದಿ ಬಿತ್ತರಿಸಿದರೆ ಹೆಚ್ಚು ಜನ ನೋಡುತ್ತಾರೆ ಅದು ಬಿಟ್ಟು ಪಾಪ ಬಡ ರೈತನ ಕಷ್ಟಗಳ ಬಗ್ಗೆ ಚರ್ಚೆ ಮಾಡಿದರೆ ಯಾರು ನೋಡುತ್ತಾರೆ ಅಲ್ವೇ?

ಚಾನೆಲ್‌ನ ಜನಪ್ರಿಯತೆ ನಿರ್ಧಾರ ಆಗೋದು ಹೇಗೆ ?

TRP (ಟೆಲಿವಿಷನ್ ರೇಟಿಂಗ್ ಪಾಯಿಂಟ್) ಎನ್ನುವುದು ಟಿವಿ ಯಲ್ಲಿ ಬರುವ ಯಾವ ಕಾರ್ಯಕ್ರಮವನ್ನು ಜನ ಹೆಚ್ಚು ವಿಕ್ಷಿಸಿದ್ದಾರೆ ಎನ್ನುವುದನ್ನು ತೀರ್ಮಾನಿಸುವ ಒಂದು ಮಾಪನ. ಇದು ಒಂದು ಚಾನೆಲಿನ ಜನಪ್ರಿಯತೆಯ ಹಾಗು ಕಾರ್ಯಕ್ರಮಗಳ ಜನಪ್ರಿಯತೆಯ ಲೆಕ್ಕವನ್ನು ಕೊಡುತ್ತೆ. TRP ಲೆಕ್ಕ ಹಾಕಲು ಟಿವಿ ಸೆಟ್ಟಿಗೆ ಒಂದು ಸಾಧನವವನ್ನು ಅಳವಡಿಸುತ್ತಾರೆ. ಈ ಸಾಧನಕ್ಕೆ People's Meter ಅಂತ ಹೆಸರು. ಈ ಸಾಧನ ಒಂದು ದಿನದಲ್ಲಿ ಒಂದು ಮನೆಯಲ್ಲಿ ವೀಕ್ಷಿಸಿದ ಕಾರ್ಯಕ್ರಮ ಹಾಗು ವೀಕ್ಷಿಸಿದ ಸಮಯ ಇದರ ಲೆಕ್ಕ ಇಡುತ್ತೆ. ಹಾಗೆ ಒಂದು ತಿಂಗಳಿನ ಸರಾಸರಿಯಾ ಲೆಕ್ಕ ಹಾಕಿ ಯಾವ ಚಾನೆಲ್, ಯಾವ ಕಾರ್ಯಕ್ರಮ ಹೆಚ್ಚು ಜನಪ್ರಿಯವಾಗಿದೆ ಎನ್ನುವುದನ್ನು ನಿರ್ಧರಿಸುತ್ತಾರೆ. ಹೆಚ್ಚು ಜನಪ್ರಿಯವಾದ ಚಾನೆಲ್ ಹೆಚ್ಚು ಜನರು ನೋಡುತ್ತಿದ್ದಾರೆ ಎಂದರ್ಥ. ಹಾಗಾಗಿ ಸಹಜವಾಗಿ ಹೆಚ್ಚು ಜಾಹಿರಾತುದಾರನ್ನು ಆಕರ್ಷಿಸುತ್ತದೆ. ಆದಾಯ ಕೂಡ ಹೆಚ್ಚುತ್ತೆ.

ಟಿ ಆರ್ ಪಿಯ ಸುತ್ತ ಹಗರಣಗಳ ಹುತ್ತ..!
‘ಮೀಡಿಯಾ ಟ್ರಯಲ್’ ಹಿಂದಿರುವುದು ಕೇವಲ TRP ಹಪಾಹಪಿಯಲ್ಲ!

ಆದರೆ ಇಲ್ಲಿ ಒಂದು ವಿಚಾರ ಗಮನಿಸಬೇಕು. ಪ್ರತಿಯೊಬ್ಬರ ಮನೆಯಲ್ಲೂ ಈ ಸಾಧನವನ್ನು ಅಳವಡಿಸಲಾಗುವುದಿಲ್ಲ. ಕೆಲವು ಮನೆಗಳನ್ನು ಆರಿಸಿಕೊಂಡು ಆ ಮನೆಗಳಲ್ಲಿ ಮಾತ್ರ ಈ ಸಾಧನವನ್ನು ಅಳವಡಿಸುತ್ತಾರೆ. ಭಾರತದಲ್ಲಿ ಟಿ ಆರ್ ಪಿ ಯನ್ನು ನಿರ್ಧರಿಸುವ ಸಂಸ್ಥೆ BARC (Broadcast Audience Research Council). ಆದರೆ ಇವರು ನೇರವಾಗಿ ಸಾಧನವನ್ನು ಮನೆಗಳ ಟಿವಿ ಯಲ್ಲಿ ಅಳವಡಿಸುವುದಿಲ್ಲ. ಅದನ್ನು HANSA ಎನ್ನುವ ಮತ್ತೊಂದು ಸಂಸ್ಥೆಗೆ ವಹಿಸಿದ್ದಾರೆ. ಹಂಸದ ಕೆಲವು ಉದ್ಯೋಗಿಗಳು ಕೆಲವು ಚಾನೆಲ್ ಗಳೊಂದಿಗೆ ಒಳ ಒಪ್ಪಂದ ಮಾಡಿಕೊಂಡು ಟಿವಿಗೆ People's Meter ಅಳವಡಿಸಿದ ಕೆಲವು ಮನೆಯವರಿಗೆ ಹಣದ ಆಮಿಷ ಒಡ್ಡಿ ಕೆಲವು ನಿರ್ದಿಷ್ಟ ಚಾನೆಲ್ಗಳ ಕಾರ್ಯಕ್ರಮವನ್ನು ದಿನ ನಿತ್ಯ ಮನೆಯಲ್ಲಿ ಹಾಕುವಂತೆ ಒತ್ತಡ ಹೇರುತ್ತಾರೆ. ದುಡ್ಡಿನ ಆಸೆಗೆ ಆ ಮನೆಯವರು ಅವರು ಹೇಳಿದಂತೆ ಮಾಡುತ್ತಾರೆ. ಹೀಗಾಗಿ ಒಮ್ಮಿಂದೊಮ್ಮೆ ಆ ಚಾನೆಲ್ ಗಳ ಟಿ ಆರ್ ಪಿ ಹೆಚ್ಚುತ್ತದೆ.

ಸಂಶಯಕ್ಕೆ ಬಿದ್ದ BARC ಮತ್ತು HANSA ಆಂತರಿಕ ತನಿಖೆ ನಡೆಸಲಾರಂಭಿಸಿದಾಗ ಒಬ್ಬ ಉದ್ಯೋಗಿ ಕೆಲಸ ಬಿಡುತ್ತಾನೆ. ಸಂಶಯಗೊಂಡ BARC ಪೊಲೀಸರಿಗೆ ದೂರು ನೀಡುತ್ತದೆ. ಪೊಲೀಸ್ ತನಿಖೆ ಮುಂದುವರೆದಂತೆ ಮಹಾರಾಷ್ಟ್ರದ ಎರಡು ಸ್ಥಳೀಯ ಚಾನೆಲುಗಳು ಹಾಗು Republic Tvಯ ಹೆಸರು ಕೇಳಿಬರುತ್ತೆ.

ಟಿ ಆರ್ ಪಿಯ ಸುತ್ತ ಹಗರಣಗಳ ಹುತ್ತ..!
ಕರೋನಾ ಸಂಕಷ್ಟ ಕಾಲದ TRP ಜಿದ್ದಾಜಿದ್ದಿಯಲ್ಲಿ ಗೆದ್ದ ಪಬ್ಲಿಕ್ ಟಿವಿ ರಂಗಣ್ಣ!

ಇಲ್ಲಿ ಪ್ರಶ್ನೆ ಇರೋದು ಒಂದು ವೇಳೆ ಆರೋಪ ಸಾಬೀತಾದ್ರೆ, ತಾನೊಬ್ಬನೇ ದೊಡ್ಡ ರಾಷ್ಟ್ರಪ್ರೇಮಿ ಎಂದು ಬಿಂಬಿಸಿಕೊಳ್ಳುವ Republic TVಯ ಅರ್ನಾಬ್‌ ಗೋಸ್ವಾಮಿ ನಿಜವಾಗಿಯೂ ದೇಶಪ್ರೇಮಿಯೇ ಇಲ್ಲವೇ ಎಂಬುದು ಜನರ ವಿವೇಚನೆಗೆ ಬಿಟ್ಟದ್ದು. ಹೇಳುವುದು ಸದಾಚಾರ ಮಾಡುವುದು ಅನಾಚಾರ ಅಂತಲೂ ಹೇಳಬಹುದೇನೋ!

ಜನರಿಗೆ ಹಾಗು ತಮ್ಮ ಅನ್ನದಾತರಾದ ಜಾಹಿರಾತು ಕೊಡುವ ದೊಡ್ಡ ದೊಡ್ಡ ಕಂಪನಿಗಳಿಗೆ ಇವರು ಮಾಡುತ್ತಿರುವುದು ದ್ರೋಹ ತಾನೇ. ಭ್ರಷ್ಟ ರಾಜಕೀಯ ವ್ಯಕಿಗಳಿಗೆ, ಭ್ರಷ್ಟ ಅಧಿಕಾರಿಗಳಿಗೆ ಸಿಂಹಸಪ್ನರಾಗಬೇಕಾಗಿದ್ದ ಸುದ್ದಿ ಮಾಧ್ಯಮಗಳು ತಾವೇ ಭ್ರಷ್ಟಾಚಾರದಲ್ಲಿ ತೊಡಗಿರುವುದು ಎಷ್ಟರಮಟ್ಟಿಗೆ ಸಮರ್ಥನೀಯ? ಹಾಗಂದ ಮಾತ್ರಕ್ಕೆ ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿ ತೂಗಲಾಗುವುದಿಲ್ಲ.

ಅಷ್ಟಕ್ಕೂ ಆ ಅರ್ನಾಬ್‌ ಗೋಸ್ವಾಮಿ ನೀಡುತ್ತಿರುವ ಸಮರ್ಥನೆ ಏನೆಂದರೆ, ಸ್ಥಳೀಯ ಸರ್ಕಾರಕ್ಕೂ ನನಗೂ ಆಗಿ ಬರೋದಿಲ್ಲ. ಅವರ ಬಂಡವಾಳ ಹೊರಗೆ ತರುತ್ತಿದ್ದೇನೆ. ಹಾಗಾಗಿ ನನ್ನ ಸಂಸ್ಥೆ ಮೇಲೆ ಸುಳ್ಳು FIR ಹಾಕಿದ್ದಾರೆ ಎಂದು. ಒಬ್ಬ ಜಮಾಸಾಮಾನ್ಯರಾಗಿ ನಾವು ಅದನ್ನು ಹೀಗೂ ಅರ್ಥಮಾಡಿಕೊಳ್ಳಬಹುದು! ಮೊದಲಿನ ಹಾಗೆ ಸ್ಥಳೀಯ ಸರ್ಕಾರದೊಂದಿಗೆ ನೀವು ಚೆನ್ನಾಗಿದ್ದಿದ್ರೆ ನಿಮ್ಮ ಹಗರಣ ಜನಸಾಮಾನ್ಯರಿಗೆ ಗೊತ್ತೇ ಆಗುತಿರಲಿಲ್ಲ. ಹಾಗೆ ಮುಚ್ಚಿ ಹಾಕಿಬಿಡುತಿದ್ದರು. ಆದರೆ ನೀವು ಇವಾಗ ಕಿತ್ತಾಡಿಕೊಳ್ಳುತ್ತಿದ್ದೀರಾ! ಹಾಗಾಗಿ ಪರಸ್ಪರ ಬಂಡವಾಳ ಹೊರಗೆ ಬರುತಿದೆ ಅಲ್ವವೇ?

ಟಿ ಆರ್ ಪಿಯ ಸುತ್ತ ಹಗರಣಗಳ ಹುತ್ತ..!
ಮೀಡಿಯಾ ಟ್ರಯಲ್‌ನಿಂದ ನ್ಯಾಯಾಂಗ ವ್ಯವಸ್ಥೆಗೆ ಹಾನಿ – ಅಟಾರ್ನಿ ಜನರಲ್‌

ಆದ್ರೂ ಕೆಲವು ಒಳ್ಳೆ ಸುದ್ದಿ ಹೊರಗೆ ಬರುತ್ತಿದೆ. ಪಾರ್ಲೆ ಸಂಸ್ಥೆ ದ್ವೇಷ ಹರಡುವ ಚಾನೆಲುಗಳಿಗೆ ಜಾಹಿರಾತು ಕೊಡೋದಿಲ್ಲ ಅಂದಿದೆ. ಸಿನಿಮಾ ಮಂದಿಯೆಲ್ಲ ಒಗ್ಗಟಾಗಿ ಕೆಲವು ಚಾನೆಲಿನ ವಿರುದ್ಧ ಕೋರ್ಟಿನ ಮೊರೆ ಹೋಗಿದ್ದಾರೆ .ಇವೆಲ್ಲ ನಿಜವಾಗಿಯೂ ನೊಂದಿರುವ ರಾಷ್ಟ್ರ ಭಕ್ತರಿಗೆ ಮುಳುಗುತಿರುವಾಗ ಸಿಗುವ ಒಂದು ಆಸರೆಯ ಹುಲ್ಲುಕಡ್ಡಿಯಂತೆ ಕಂಡುಬರುತ್ತಿರುವುದು ಸುಳ್ಳಲ್ಲ. ಹೆಚ್ಚು ಜನರಿಗೆ ತಲುಪುತಿದ್ದಿವೆ ಎಂದು ಸುಳ್ಳಾಡುವ ಈ ಚಾನೆಲ್ ಗಳ ಪರದೆ ಕಳಚಿ ಸತ್ಯ ಹೊರಗೆ ಬರಬೇಕು. ಯಾವುದೇ ರಾಜಕೀಯ ಪಕ್ಷಗಳ ಮುಖವಾಣಿಯಂತೆ ವರ್ತಿಸುವ ಚಾನೆಲ್ ಗಳು ತಮಗೆ ಅನ್ನ ನೀಡುವ ಜನರಿಗೆ ಮಾಡುತ್ತಿರುವುದು ಅಪ್ಪಟ ದ್ರೋಹ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com