GST ಕೊರತೆಯ ಸಾಲ ಪಡೆಯಲು ಕೇಂದ್ರವೇ ಮುಂದಾಗುವುದು ಸೂಕ್ತ

2017ರಲ್ಲಿ GST ಜಾರಿಗೆ ಬಂದಾಗ ರಾಜ್ಯಗಳಿಗೆ ಭರವಸೆ ನೀಡಿದಂತೆ ಕೆಲಸಗಳನ್ನು ಮಾಡಲು ಕೇಂದ್ರಕ್ಕೆ ಹೆಚ್ಚಿನ ಜವಾಬ್ದಾರಿ ಇದೆ.
GST ಕೊರತೆಯ ಸಾಲ ಪಡೆಯಲು ಕೇಂದ್ರವೇ ಮುಂದಾಗುವುದು ಸೂಕ್ತ

ಕಳೆದ 85 ವರ್ಷಗಳಲ್ಲಿ ಭಾರತ ಎಂದೂ ಏದುರಿಸಿಲ್ದದ ಆರ್ಥಿಕ ಹಿಂಜರಿತವು ದೇಶವನು ಇನ್ನಷ್ಟು ಸಂಕಷ್ಟಕ್ಕೆ ದೂಡಿದೆ. ಈ ರೀತಿಯ ಹಿಂಜರಿತದಿಂದ ದೇಶದಲ್ಲಿ ಕೋಟ್ಯಾಂತರ ಉದ್ಯೋಗಗಳೂ ನಷ್ಟವಾಗಿವೆ ಅಷ್ಟೇ ಅಲ್ಲ ನೂರಾರು ಕಂಪೆನಿಗಳೂ ಬಾಗಿಲು ಮುಚ್ಚಿವೆ. ಈ ಸಂದರ್ಭದಲ್ಲಿ ಕೃಷಿ ಕ್ಷೇತ್ರವೊಂದೇ ಒಂದಷ್ಟು ಸುಧಾರಿಸಿಕೊಳ್ಳುತ್ತಿದೆ. ಆದರೆ ಅದಕ್ಕೂ ಕೂಡ ಈಗ ತಿದ್ದುಪಡಿ ತಂದು ರೈತರ ಬದುಕನ್ನೂ ಸಂಕಷ್ಟಕ್ಕೆ ತಳ್ಳಲು ಹೊರಟಿದೆ. ಈಗ ದೇಶವು ಎದುರಿಸುತ್ತಿರುವ ಭೀಕರ ಆರ್ಥಿಕ ಹಿಂಜರಿತವನ್ನು ರಾಷ್ಟ್ರೀಯ ಆರ್ಥಿಕ ತುರ್ತು ಪರಿಸ್ಥಿತಿ ಎಂದು ಪರಿಗಣಿಸಲು ನರೇಂದ್ರ ಮೋದಿ ಸರ್ಕಾರ ಸಿದ್ಧವಿದ್ದರೆ, ಕೇಂದ್ರವು ಮಾರುಕಟ್ಟೆಯಿಂದ ಹೆಚ್ಚುವರಿ ಹಣವನ್ನು ಅಗ್ಗದ ಬಡ್ಡಿ ದರದಲ್ಲಿ ಪಡೆಯಬೇಕು ಮತ್ತು ರಾಜ್ಯಗಳಿಗೆ ಹಸ್ತಾಂತರಿಸಬೇಕು ಎಂದು ವಿವಿಧ ರಾಜ್ಯ ಸರ್ಕಾರಗಳು ಮಂಡಿಸಿರುವ ಬೇಡಿಕೆಯನ್ನು ಕೇಂದ್ರವು ಒಪ್ಪಿಕೊಳ್ಳಬೇಕಿದೆ.

GST (ಸರಕು ಮತ್ತು ಸೇವೆಗಳ ತೆರಿಗೆ) ಮಂಡಳಿಯಲ್ಲಿ ಕೇಂದ್ರ ಮತ್ತು ರಾಜ್ಯಗಳ ನಡುವೆ ಈ ವಿಷಯದ ಬಗ್ಗೆ ನಿರಂತರ ಭಿನ್ನಾಭಿಪ್ರಾಯ ಇದೆ. ಈ ಬಿಕ್ಕಟ್ಟಿನ ಮಧ್ಯೆ, ಮೋದಿ ಸರ್ಕಾರವು ಈ ಸಮಸ್ಯೆಯನ್ನು ಯಾವುದೇ ವಿಷಯವನ್ನು ಕೇಂದ್ರ ಮತ್ತು ರಾಜ್ಯ ಸಮಸ್ಯೆಯೆಂದು ಪರಿಗಣಿಸಲು ಸಾಧ್ಯವಿಲ್ಲ. ವಾಸ್ತವವಾಗಿ, 2008 ರ ಹಣಕಾಸು ಮಾರುಕಟ್ಟೆಯ ಹಿಂಜರಿತದ ನಂತರ, ಅಮೇರಿಕದ ಸರ್ಕಾರ, ಫೆಡರಲ್ ರಿಸರ್ವ್‌ ಮತ್ತು ಎಲ್ಲ ರಾಜ್ಯಗಳು ಒಂದೇ ಘಟಕವಾಗಿ ಕೆಲಸ ಮಾಡಿ ಸಮಸ್ಯೆ ಪರಿಹರಿಸಲು ಶ್ರಮಿಸಿವೆ. ಪ್ರಸ್ತುತ ಆರ್ಥಿಕ ಬಿಕ್ಕಟ್ಟು 2008 ರ ಆರ್ಥಿಕ ಹಿಂಜರಿತಕ್ಕಿಂತಲೂ ದೊಡ್ಡದಾಗಿದೆ. ಕೋವಿಡ್ 19 ಸಾಂಕ್ರಮಿಕವು ಹರಡುವ ಮುಂಚೆಯೇ ಖಾಸಗಿ ಹೂಡಿಕೆ ಮತ್ತು ಉದ್ಯೋಗದಂತಹ ಕ್ಷೇತ್ರದಲ್ಲಿ ತೀವ್ರ ಕುಸಿತದಿಂದಾಗಿ ಭಾರತದ ಆರ್ಥಿಕತೆಯು ಇತರ ಅನೇಕ ದೇಶಗಳಿಗಿಂತ ಹೆಚ್ಚು ತೀವ್ರವಾಗಿ ಕುಸಿದಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಇಂತಹ ಸಂದರ್ಭದಲ್ಲಿ,ಆರ್ಥಿಕತೆಯ ಮೂಲಭೂತ ಅಗತ್ಯಗಳಿಗೆ ಯಾವ ರೀತಿ ಸಂಪನ್ಮೂಲ ಕ್ರೋಢೀಕರಿಸಬೇಕು ಎಂಬ ಬಗ್ಗೆ ಕೇಂದ್ರ ಸರ್ಕಾರವು ಇನ್ನೂ ಖಚಿತ ನಿಲುವು ಹೊಂಧಿಲ್ಲ. ದೇಶದ ಆರ್ಥಿಕತೆಯ ವಾರ್ಷಿಕ 14% ಬೆಳವಣಿಗೆಯ ಆಧಾರದ ಮೇಲೆ ಸಂಪೂರ್ಣ ಪರಿಹಾರಕ್ಕಾಗಿ ರಾಜ್ಯಗಳ ಬೇಡಿಕೆಯನ್ನು ಈ ಹಣಕಾಸು ವರ್ಷದಲ್ಲಿ ಒಪ್ಪಿಕೊಳ್ಳಲೂ ಅಗುವುದಿಲ್ಲ. ಆದರೆ ಕೋವಿಡ್ 19 ರ ಸಂದರ್ಭದಲ್ಲಿ ಮೂಲಭೂತ ಅವಶ್ಯಕತೆ ಮತ್ತು ಇತರ ಖರ್ಚುಗಳನ್ನು ಪೂರೈಸಲು ಅಗತ್ಯವಾದ ಆದಾಯದ ಕೊರತೆಗಳನ್ನು ಸರಿದೂಗಿಸಲು ಕೇಂದ್ರವು ಮಾರುಕಟ್ಟೆ ಅಥವಾ ಆರ್‌ಬಿಐನಿಂದ ಸಾಲ ಪಡೆಯಬೇಕು ಎಂಬ ವಾದವು ಸಂಸಂಪೂರ್ಣವಾಗಿ ಸಮರ್ಥನೀಯ ಮತ್ತು ಅನಿವಾರ್ಯವೂ ಅಗಿದೆ. ಹಣಕಾಸಿನ ಜವಾಬ್ದಾರಿ ಮತ್ತು ಬಜೆಟ್ ನಿರ್ವಹಣೆ ಕಾಯ್ದೆಯು (ಎಫ್ ಆರ್ ಬಿ ಎಂ) ಪ್ರಕಾರ ದೇಶದ ಒಟ್ಟು ಜಿಡಿಪಿ -3% ಕ್ಕಿಂತ ಕಡಿಮೆಯಿದ್ದರೆ, ಬಜೆಟ್ ಅವಶ್ಯಕತೆಗಳನ್ನು ಪೂರೈಸಲು ಕೇಂದ್ರವು ಆರ್‌ಬಿಐನಿಂದ ಸಾಲ ಪಡೆಯಬಹುದು. ಆದ್ದರಿಂದ FRBM ಕಾಯ್ದೆಯ ಆ ನಿಬಂಧನೆಗಳನ್ನು ಕೇಂದ್ರ ಏಕೆ ಬಳಸುತ್ತಿಲ್ಲ ಎಂದು ಕೆಲವು ರಾಜ್ಯಗಳು ಕೇಳುತ್ತಿವೆ. ಈ ಹಿನ್ನೆಲೆಯಲ್ಲಿ, ರಾಜ್ಯ ಜಿಡಿಪಿಯ 3% ನ ಮಿತಿಯನ್ನು ಮೀರಿ ಸಾಲ ಪಡೆಯಲು ಎಲ್ಲಾ ರೀತಿಯ ಷರತ್ತುಗಳನ್ನು ವಿಧಿಸುವಾಗ ಕೇಂದ್ರಗಳು ರಾಜ್ಯಗಳನ್ನು ಸಾಲ ಪಡೆಯುವಂತೆ ಒತ್ತಾಯಿಸುವುದು ಅತ್ಯಂತ ದುರದೃಷ್ಟಕರ ಮತ್ತು ನಮ್ಮ ಫೆಡರಲ್ ವ್ಯವಸ್ತೆಗೆ ವಿರುದ್ಧವಾಗಿದೆ.

GST ಕೊರತೆಯ ಸಾಲ ಪಡೆಯಲು ಕೇಂದ್ರವೇ ಮುಂದಾಗುವುದು ಸೂಕ್ತ
GST ಪಾಲು ಕೇಳಿ, ಧೈರ್ಯವಿಲ್ಲದಿದ್ದರೆ ನಮ್ಮನ್ನು ಕರೆಯಿರಿ; BSY ಗೆ ಸಿದ್ದರಾಮಯ್ಯ ಸವಾಲು

ಬೆಳವಣಿಗೆ, ಹೂಡಿಕೆ, ಉದ್ಯೋಗ ಮತ್ತು ಆದಾಯದಲ್ಲಿನ ರಚನಾತ್ಮಕ ಕುಸಿತದ ಕಾರಣವು ಹೆಚ್ಚಾಗಿ ಮೋದಿಯವರ ಪ್ರಜಾಪ್ರಭುತ್ವ ವಿರೋಧಿ ಪ್ರಯೋಗಗಳ ಮೇಲೆ ಅವಲಂಬಿತವಾಗಿದೆ ಎಂದು ಕೇಂದ್ರವು ನೆನಪಿನಲ್ಲಿಡಬೇಕು. ಇದರ ನಂತರ ಜಾರಿಗೆ ಬಂದ ನೋಟು ನಿಷೇಧ ಮತ್ತು GST ಆರ್ಥಿಕತೆಯ ಮೇಲೆ ಗಂಭಿರ ಪರಿಣಾಮ ಬೀರಿದೆ. ಈಗಲೂ ಸಹ, ಕೃಷಿ ಸುಧಾರಣಾ ಮಸೂದೆಗಳು ಮತ್ತು ವಿದ್ಯುತ್ ಕಾನೂನುಗಳಲ್ಲಿನ ಬದಲಾವಣೆಗಳಂತಹ ದೊಡ್ಡ ನಿರ್ಧಾರಗಳಲ್ಲಿ ರಾಜ್ಯಗಳ ಜತೆ ಕೇಂದ್ರ ಸಮಾಲೋಚನೆ ನಡೆಸಿಲ್ಲ. ಕಳೆದ ಕೆಲವು ವರ್ಷಗಳಿಂದ ಕೇಂದ್ರವು ದೇಶದ ಆರ್ಥಿಕತೆಯನ್ನು ಕೆಟ್ಟದಾಗಿ ನಿರ್ವಹಿಸಿದೆ ಎಂಬುದರಲ್ಲಿ ಸಂದೇಹವಿಲ್ಲ. ಈ ಎಲ್ಲದರ ನಂತರ ಕೋವಿಡ್ 19 ರ ಹಿನ್ನೆಲೆಯ ವಿರುದ್ಧ ಅಗತ್ಯವಾದ ವೆಚ್ಚವನ್ನು ಪೂರೈಸಲು ರಾಜ್ಯಗಳ ಹೆಚ್ಚುವರಿ ಸಾಲ ಅಗತ್ಯತೆಯ ಮೇಲೆ ಕೇಂದ್ರವು ಕಠಿಣ ಷರತ್ತುಗಳನ್ನು ವಿಧಿಸಿದರೆ, ಅದು ಕೇಂದ್ರ ಸರ್ಕಾರದ ಉದ್ದೇಶಪೂರ್ವಕವಾಗಿ ಫೆಡರಲಿಸಂ ತತ್ವಗಳನ್ನು ಕಡೆಗಣಿಸಿದಂತಾಗುತ್ತದೆ.

GST ಕೊರತೆಯ ಸಾಲ ಪಡೆಯಲು ಕೇಂದ್ರವೇ ಮುಂದಾಗುವುದು ಸೂಕ್ತ
GST ಬಾಕಿ ಉಳಿಸಿಕೊಂಡ ಕೇಂದ್ರ; ಸ್ಥಗಿತವಾದ ದಕ್ಷಿಣ ರಾಜ್ಯಗಳ ಅಭಿವೃದ್ಧಿ ಇಂಜಿನ್

ಕಳೆದ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಭಾರತದ ಆರ್ಥಿಕತೆಯು 24% ರಷ್ಟು ಕುಸಿತ ದಾಖಲಿಸಿರುವುದರಿಂದ ಭಾರಿ ತೆರಿಗೆ ಆದಾಯದ ಕೊರತೆಯಿದೆ. ಒಟ್ಟಾರೆ ಆದಾಯವು ಈಗಾಗಲೇ ಬಜೆಟ್ ನಲಿ ನಿರೀಕ್ಷಿಸಿದ್ದಕ್ಕಿಂತ 25-35% ಕಡಿಮೆ ಆಗಿದೆ. ಇದು ರಾಜ್ಯ ಸರ್ಕಾರದ ನಿರ್ವಹಣೆಗೆ ಬರುವ ಆರೋಗ್ಯ, ಶಿಕ್ಷಣ, ನೈರ್ಮಲ್ಯ, ಕಾನೂನು ಮತ್ತು ಸುವ್ಯವಸ್ಥೆ - ಇವುಗಳೆಲ್ಲವೂ ಕುಂಠಿತಗೊಂಡಿವೆ. ಪ್ರಸ್ತುತ 2.35 ಲಕ್ಷ ಕೋಟಿ ರೂ.ಗಳ GST ಪರಿಹಾರದ ಕೊರತೆ ಇದೆ ಎಂದು ಕೇಂದ್ರವು ಒಪ್ಪಿಕೊಂಡಿದೆ. ಮತ್ತು, ಸೆಸ್ ಪರಿಹಾರವನ್ನು 2022 ನೇ ವರ್ಷ ಮೀರಿ ವಿಸ್ತರಿಸಲು ಅದು ಒಪ್ಪಿಕೊಂಡಿದೆ. ಆದರೆ ಅಲ್ಪಾವಧಿಯ ಧನಸಹಾಯದ ಅಗತ್ಯವನ್ನು ನಿಭಾಯಿಸಲು, ಮಾರುಕಟ್ಟೆಯಿಂದ ತಮ್ಮ ಸ್ವಂತ ಬಲದಿಂದ ಅದನ್ನು ಪಡೆಯಲು ಕೇಂದ್ರವು ರಾಜ್ಯಗಳನ್ನು ಒತ್ತಾಯಿಸುವಂತಿಲ್ಲ. ಮೊದಲೇ ಹೇಳಿದಂತೆ, ಇದು ರಾಷ್ಟ್ರೀಯ ಬಿಕ್ಕಟ್ಟಾಗಿರುವುದರಿಂದ ಯಾರು ಸಾಲ ಪಡೆಯುತ್ತಾರೆ ಎಂಬುದು ನಿಜಕ್ಕೂ ಅಪ್ರಸ್ತುತವಾಗುತ್ತದೆ.

GST ಕೊರತೆಯ ಸಾಲ ಪಡೆಯಲು ಕೇಂದ್ರವೇ ಮುಂದಾಗುವುದು ಸೂಕ್ತ
ಕೇಂದ್ರ ಸರಕಾರ ಬಾಕಿ ಹಣ ನೀಡಿದ್ದಲ್ಲಿ ರಾಜ್ಯಗಳ ಕರೋನಾ ವಿರುದ್ಧದ ಹೋರಾಟಕ್ಕೆ ಆನೆಬಲ!

ಯಾರು ಹೆಚ್ಚು ಅಗ್ಗವಾಗಿ ಮತ್ತು ಪರಿಣಾಮಕಾರಿಯಾಗಿ ಸಾಲ ಪಡೆಯಬಹುದು ಎಂಬುದು ಮುಖ್ಯವಾಗುತ್ತದೆ. ಮಾರುಕಟ್ಟೆಯಿಂದ ಅಗ್ಗವಾಗಿ ಸಾಲ ಪಡೆಯಲು ಕೇಂದ್ರ ಸರ್ಕಾರವೇ ಅತ್ಯುತ್ತಮ ಸ್ಥಿತಿಯಲ್ಲಿ ಇದೆ ಎಂದು ರಾಜ್ಯ ಸರ್ಕಾರಗಳು ವಾದಿಸುತ್ತವೆ. ಆರ್‌ಬಿಐ ರಚಿಸಿದ ವಿಶೇಷ ಘಟಕದ ಮೂಲಕ 1 ಲಕ್ಷ ಕೋಟಿ ರೂ.ಗಳಿಗಿಂತ ಹೆಚ್ಚಿನ ಹಣವನ್ನು ಸಾಲ ಪಡೆಯಲು ರಾಜ್ಯಗಳಿಗೆ ಸಹಾಯ ಮಾಡಲು ಕೇಂದ್ರವು ಮುಂದಾಗಿದೆ. ಕೇಂದ್ರವು ಬಡ್ಡಿ ವೆಚ್ಚಗಳಿಗೆ ಸಬ್ಸಿಡಿ ನೀಡಲು ಮುಂದಾಗಿದೆ ಮತ್ತು ಸೆಸ್ ಮೂಲಕ ಸೇವಾ ರಾಜ್ಯಗಳ ಸಾಲ ಸೇವೆಗೆ ಸಹ ಒಪ್ಪಿದೆ. ಇಂತಹ ಸಂಕರ‍್ಣ ವ್ಯವಸ್ಥೆಗಳಿಗೆ ಸಿಲುಕುವ ಬದಲು ಕೇಂದ್ರವು ನೇರವಾಗಿ ಸಾಲ ಪಡೆದು ಹಣವನ್ನು ರಾಜ್ಯಗಳಿಗೆ ಕೊಡುವುದು ಉತ್ತಮ. ಆದರೆ ಮೋದಿ ಅವರಿಗೆ ಹಾಗೆ ಮಾಡಲು ಇಷ್ಟವಿಲ್ಲ. ಇದರಿಂದ GST ಸುಧಾರಣೆಗಳನ್ನು ಜಾರಿಗೆ ತರಲು ಕೇಂದ್ರ ಮತ್ತು 31 ರಾಜ್ಯಗಳನ್ನು ಒಂದು ದೊಡ್ಡ ವ್ಯವಸ್ಥೆ ಅಡಿ ತಂದ ಫೆಡರಲಿಸಂನ ಸ್ಪೂರ್ತಿಯನ್ನು ಇದು ಕೊನೆಗಾಣಿಸುವ ಬೆದರಿಕೆ ಇದೆ.

GST ಕೊರತೆಯ ಸಾಲ ಪಡೆಯಲು ಕೇಂದ್ರವೇ ಮುಂದಾಗುವುದು ಸೂಕ್ತ
2,669 ಕೋಟಿ ಕಬ್ಬು ಬಾಕಿ ಉಳಿಸಿಕೊಂಡ ಸಕ್ಕರೆ ಕಾರ್ಖಾನೆಗಳು; ಸರ್ಕಾರದ ಕ್ರಮ?

2017ರಲ್ಲಿ GST ಜಾರಿಗೆ ಬಂದಾಗ ರಾಜ್ಯಗಳಿಗೆ ಭರವಸೆ ನೀಡಿದಂತೆ ಕೆಲಸಗಳನ್ನು ಮಾಡಲು ಕೇಂದ್ರಕ್ಕೆ ಹೆಚ್ಚಿನ ಜವಾಬ್ದಾರಿ ಇದೆ. ಮೊದಲ ಬಾರಿಗೆ ಕನಿಷ್ಠ 10 ರಾಜ್ಯಗಳು ಪ್ರಸ್ತುತ ವಿವಾದವನ್ನುಭಾರಿ ಆದಾಯದ ಕೊರತೆಯನ್ನು ಸರಿದೂಗಿಸಲು ಹಣವನ್ನು ಸಾಲ ಪಡೆಯುವ ವಿಷಯವನ್ನು GST ಮಂಡಳಿಯಲ್ಲಿ ಮತ ಚಲಾಯಿಸುವ ಬೆದರಿಕೆ ಹಾಕಿವೆ. ಆದರೆ ಸುಮಾರು 20 ಬಿಜೆಪಿ ಆಡಳಿತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಬೆಂಬಲವನ್ನು ಹೊಂದಿರುವ ಕೇಂದ್ರವು ಮತದಾನವನ್ನು ತಪ್ಪಿಸಲು ಬಯಸಿದೆ. ಏಕೆಂದರೆ ಇದುವರೆಗೆ GST ಮಂಡಳಿಯ ಚರ್ಚೆಗಳ ಮೂಲಕ ಮತ್ತು ಒಮ್ಮತವನ್ನು ಪ್ರದರ್ಶಿಸುವ ಮೂಲಕ ವಿವಾದಗಳನ್ನು ಬಗೆಹರಿಸಿದೆ. ಮತ ಚಲಾಯಿಸಿದರೆ, ಕೇಂದ್ರಕ್ಕೆ 75% ಮತಗಳು ಖಂಡಿತ ದೊರೆಯಬಹುದು. ಆದರೆ ರಾಜ್ಯ ಮತ್ತು ಕೇಂದ್ರಗಳ ನಡುವಿನ ಸೌಹಾರ್ದಯುತ ಸಂಭಂದ ಕ್ಕೆ ಖಂಡಿತ ಧಕ್ಕೆ ಆಗಲಿದೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com