ಜಗತ್ತಿನೆದುರಿಗೆ ಭಾರತ ತಲೆ ತಗ್ಗಿಸುವಂತೆ ನಡೆದುಕೊಂಡ ಉತ್ತರಪ್ರದೇಶ

ಮನೀಷಾ ವಾಲ್ಮಿಕಿಯ ಅತ್ಯಾಚಾರ ಮತ್ತು ಹತ್ಯೆಗಿಂತ ಅಮಾನುಷವಾದದ್ದು ಆ ಪ್ರಕರಣವನ್ನು ಯೋಗಿ ಸರಕಾರ ಮುಚ್ಚಿಹಾಕಲು ಪಟ್ಟ ಪ್ರಯತ್ನ.
ಜಗತ್ತಿನೆದುರಿಗೆ ಭಾರತ ತಲೆ ತಗ್ಗಿಸುವಂತೆ ನಡೆದುಕೊಂಡ ಉತ್ತರಪ್ರದೇಶ

ಉತ್ತರಪ್ರದೇಶ ಮೊದಲಿನಿಂದಲೂ ಅದೊಂದು ಅಸಂಸ್ಕ್ರತ ರಾಜ್ಯ. ಹಿಂದೆ ಕಲ್ಯಾಣಸಿಂಗ್ ಆಡಳಿತದಲ್ಲೂ ಅಲ್ಲಿ ಅನೇಕ ಅಸಂಗತ ಘಟನೆಗಳು ನಡೆದದ್ದಿದೆ. ಮಾಯಾವತಿˌ ಮುಲಾಯಂ ಇವರ ಆಡಳಿತವೂ ಅದಕ್ಕೆ ಹೊರತಲ್ಲ. ಅದಕ್ಕೆ ಕಾರಣ ಆ ರಾಜ್ಯದಲ್ಲಿ ರಾಜಕೀಯವನ್ನು ನಿಯಂತ್ರಿಸುವ ಅಲ್ಲಿನ ಬಹು ಸಾಂದ್ರತೆಯುಳ್ಳ ಪಂಡಿತ ಸಮುದಾಯ. ಪಂಡಿತರು ಅಲ್ಲಿನ ಹಿಂದುಳಿದ ವರ್ಗ ಮತ್ತು ದಲಿತ ದಮನಿತರನ್ನು ಶೋಷಿಸುವುದು ಆ ರಾಜ್ಯದ ಶೂದ್ರ ಮೇಲ್ವರ್ಗ ರಾಜಪೂತರ ಮೂಲಕ. ಠಾಕೂರಗಳೆಂದು ಕರೆಸಿಕೊಳ್ಳುವ ಜಮೀನ್ದಾರಿ ರಜಪೂತರು ಸಂಪೂರ್ಣವಾಗಿ ಪಂಡಿತರ ಅಣತಿಯಂತೆ ನಡೆದುಕೊಳ್ಳುತ್ತಾರೆ. ಆ ಕಾರಣದಿಂದಲೇ ಅಲ್ಲಿ ಬಹುಜನ ಸಮುದಾಯಗಳು ಅಮಾನುಷವಾಗಿ ಶೋಷಣೆಗೊಳಗಾಗುತ್ತ ಬಂದಿವೆ.

ಜಗತ್ತಿನೆದುರಿಗೆ ಭಾರತ ತಲೆ ತಗ್ಗಿಸುವಂತೆ ನಡೆದುಕೊಂಡ ಉತ್ತರಪ್ರದೇಶ
ಉತ್ತರಪ್ರದೇಶದಲ್ಲಿ ಯೋಗಿ ಕಟ್ಟುತ್ತಿರುವ ‘ರಾಮರಾಜ್ಯ’ದ ಕರಾಳ ಇತಿಹಾಸ

ತೊಂಬತ್ತರ ದಶಕದ ನಂತರ ವಿ. ಪಿ. ಸಿಂಗ್ ಕಾಂಗ್ರೆಸ್ ತೊರೆದು ಜನತಾ ಪರಿವಾರ ಸೇರಿದ ಮೇಲೆ ಪ್ರಧಾನಿಯಾಗ್ತಾರೆ. ಆನಂತರ ಮೂಲ ಜನತಾ ಪರಿವಾರದ ಹಿಂದುಳಿದ ವರ್ಗದ ಮತ್ತು ದಲಿತ ನಾಯಕತ್ವಕ್ಕೆ ಇಡೀ ಉತ್ತರ ಭಾರತದಾದ್ಯಂತ ಚಾಲನೆ ಸಿಗ್ತದೆ. ಮುಲಾಯಂˌ ಪಾಸ್ವಾನˌ ಲಾಲುˌ ಮುಂತಾದ ನಾಯಕರು ಬೆಳೆದದ್ದೇ ಆ ಕಾಲಘಟ್ಟದಲ್ಲಿ. ಅವರ ಆಳ್ವಿಕೆ ಅಲ್ಲಿನ ಬಹುಜನರ ಆರ್ಥಿಕˌ ರಾಜಕೀಯ ಮತ್ತು ಶೈಕ್ಷಣಿಕ ಅಭಿವ್ರದ್ದಿಯ ಜೊತೆಗೆ ಅವರಲ್ಲಿ ಒಂದಷ್ಟು ರಾಜಕೀಯ ಪ್ರಜ್ಞೆ ನೆಲೆಗೊಳಿಸುತ್ತದೆ. ಆಗ ಅಲ್ಲಿನ ಪಂಡಿತ ಸಮುದಾಯ ಕುದ್ದು ಹೋಗುತ್ತದೆ. ಆ ಕಾರಣದಿಂದಲೇ ಪಂಡಿತ ನಿಯಂತ್ರಿತ ಭಾರತೀಯ ಮಾಧ್ಯಗಳು ಈ ಎಲ್ಲ ನಾಯಕರು ಕಡು ಭ್ರಷ್ಟರು ಎನ್ನುವಂತೆ ಬಿಂಬಿಸುವಲ್ಲಿ ಯಶಸ್ವಿಯಾಗ್ತವೆ. ಮುಂದೆ ಪಾಸ್ವಾನ ಅಂತವರು ಅಧಿಕಾರದ ಲಾಲಸೆಯಿಂದ ಅದೇ ಪಂಡಿತರ ಅಡಿಯಾಳಾಗಿ ಬಿಜೆಪಿ ಸಖ್ಯ ಹೊಂದಿ ಅಲ್ಲಿನ ದಲಿತ ದಮನಿತರನ್ನು ವಂಚಿಸುತ್ತಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಉತ್ತರ ಭಾರತದ ಶೂದ್ರ ಮೇಲ್ವರ್ಗಗಳಾದ ರಜಪೂತರುˌ ಕಾಯಸ್ಥರುˌ ಝಾಟರಿಗೆ ಶ್ರೇಷ್ಠತೆಯ ವ್ಯಸನಕ್ಕೆ ದೂಡುವ ಅಲ್ಲಿನ ಸಂಘಪರಿವಾರದ ಪಂಡಿತರು ಅವರ ಮೂಲಕ ಅಲ್ಲಿನ ಬಹುಜನರನ್ನು ಶೋಷಿಸಲಾರಂಭಿಸುತ್ತಾರೆ. ಮುಂದೆ ದಲಿತ ಪ್ರಜ್ಞೆ ಹುಟ್ಚು ಹಾಕುತ್ತಿದ್ದ ಕಾನ್ಸಿರಾಮ ಮತ್ತು ಮಾಯಾವತಿಯವರೊಡನೆ ಸಖ್ಯ ಮಾಡುವ ಸಂಘಿ ಪಂಡಿತರು ಆ ಪಕ್ಷದ ಭವಿಷ್ಯವನ್ನು ಹಾಳು ಮಾಡುವುದಲ್ಲದೆ ಅಲ್ಲಿ ಕಾಂಗ್ರೆಸ್ ಪಕ್ಷದ ಮತಬ್ಯಾಂಕನ್ನು ವಿಭಜಿಸುವ ಮೂಲಕ ಅದರ ನೆಲೆಯನ್ನು ದುರ್ಬಲಗೊಳಿಸುತ್ತಾರೆ. ಆ ಮೂಲಕ ತಮ್ಮದೇ ಹಿತಾಸಕ್ತಿಗಾಗಿ ಸ್ಥಾಪಿಸಲಾದ ಬಿಜೆಪಿಯನ್ನು ಎದ್ದು ನಿಲ್ಲಿಸುತ್ತಾರೆ.

ಜಗತ್ತಿನೆದುರಿಗೆ ಭಾರತ ತಲೆ ತಗ್ಗಿಸುವಂತೆ ನಡೆದುಕೊಂಡ ಉತ್ತರಪ್ರದೇಶ
ಅತ್ಯಾಚಾರ ನಡೆದಿಲ್ಲ ಎನ್ನುವ ಮೂಲಕ ಉತ್ತರ ಪ್ರದೇಶ ಪೊಲೀಸರು ಸಾಧಿಸಹೊರಟಿರುವುದೇನು ?

ಇವೆಲ್ಲವುದರ ಫಲಿತಾಂಶವೇ ಇಂದು ಉತ್ತರಪ್ರದೇಶ ಕಾವಿಧಾರಿ ಠಾಕೂರನೊಬ್ಬನ ದುರಾಡಳಿತಕ್ಕೆ ಸಿಲುಕಿ ನಲುಗುತ್ತಿವುದು. ಆದಿತ್ಯನಾಥ ಆಡಳಿತ ಆ ರಾಜ್ಯವನ್ನು ಎಷ್ಟೊಂದು ಅರಾಜಕತೆಗೆ ತಳ್ಳಿದೆ ಎಂದರೆ ಅಲ್ಲಿ ಪ್ರತಿ ದಿನ ಒಂದೊಂದು ಮಹಿಳೆಯರ ಮೇಲೆ ಅತ್ಯಾಚಾರˌ ಗುಂಪು ಹಲ್ಲೆ, ದಲಿತರು ಮತ್ತು ಅಲ್ಪಸಂಖ್ಯಾತರ ಮೇಲೆ ಹಲ್ಲೆಗಳು ವರದಿಯಾಗ್ತವೆ. ಹೋದ ವಾರ ಹಥ್ರಾಸ್ ನಲ್ಲಿ ಮನೀಷಾ ವಾಲ್ಮಿಕಿ ಎಂಬ ಯುವತಿಯ ಮೇಲೆ ನಡೆದ ಅತ್ಯಾಚಾರ ಮತ್ತು ಹತ್ಯೆˌ ಆನಂತರ ನಡೆದ ವಿದ್ಯಮಾನಗಳು ಉತ್ತರ ಪ್ರದೇಶ ಜಾಗತಿಕ ಮಟ್ಟದಲ್ಲಿ ಭಾರತ ತಲೆ ತಗ್ಗಿಸುವಂತೆ ಮಾಡಿದೆ. ಮನೀಷಾ ವಾಲ್ಮಿಕಿಯ ಅತ್ಯಾಚಾರ ಮತ್ತು ಹತ್ಯೆಗಿಂತ ಅಮಾನುಷವಾದದ್ದು ಆ ಪ್ರಕರಣವನ್ನು ಯೋಗಿ ಸರಕಾರ ಮುಚ್ಚಿಹಾಕಲು ಪಟ್ಟ ಪ್ರಯತ್ನ. ಆ ನಂತರ ಆ ಹಳ್ಳಿಗೆ ಮಾನವ ಹಕ್ಕುಗಳ ಕಾರ್ಯಕರ್ತರುˌ ರಾಜಕಾರಣಿಗಳˌ ವಕೀಲರುˌ ಮಾಧ್ಯಮದವರು ಯಾರೊಬ್ಬರೂ ಹೋಗದಂತೆ ತಡೆದ ಯೋಗಿ ಆಡಳಿತ ಅತ್ಯಾಚಾರ ಮತ್ತು ಹತ್ಯೆಯ ಆರೋಪಿಗಳಾದ ಠಾಕೂರ ಯುವಕರನ್ನು ರಕ್ಷಿಸಲು ನಿರ್ಲಜ್ಜೆಯಿಂದ ಪ್ರಯತ್ನಿಸಿದೆ.

ಜಗತ್ತಿನೆದುರಿಗೆ ಭಾರತ ತಲೆ ತಗ್ಗಿಸುವಂತೆ ನಡೆದುಕೊಂಡ ಉತ್ತರಪ್ರದೇಶ
ಹಥ್ರಾಸ್: ಪತ್ರಕರ್ತ ಸೇರಿ ನಾಲ್ವರ ಮೇಲೆ UAPA, ದೇಶದ್ರೋಹ ಪ್ರಕರಣ ದಾಖಲು

ಮರಣೋತ್ತರ ಪರೀಕ್ಷೆಯ ನಂತರ ಯುವತಿಯ ಮೃತದೇಹವನ್ನು ಅವರ ಕುಟುಂಬಕ್ಕೆ ಹಸ್ತಾಂತರಿಸದೆ ಪೋಲಿಸರೆ ಅನುಮಾನಾಸ್ಪದವಾಗಿ ಆಕೆಯ ಪಾಲಕರನ್ನು ಬಲವಂತವಾಗಿ ಅವರ ಮನೆಯಲ್ಲಿ ಕೂಡುಹಾಕಿ ಶವ ಸಂಸ್ಕಾರ ಮಾಡಿ ಮುಗಿಸಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿದ್ದಲ್ಲದೆ ಇಡೀ ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸಿದ್ದಂತೂ ನಿಚ್ಚಳವಾಗಿ ಗೋಚರಿಸುತ್ತದೆ. ಆದಾಗ್ಯೂ ಅಂತ ವಿಷಮ ಪರಿಸ್ಥಿತಿಯಲ್ಲೂ ತನುಶ್ರೀ ಪಾಂಡೆ ಎನ್ನುವ ಇಂಡಿಯಾ ಟುಡೆ (ಆಜ್ ತಕ್) ವಾಹಿನಿಯ ವರದಿಗಾರ್ತಿ ಈ ಪ್ರಕರಣ ವರದಿ ಮಾಡದೆ ಹೋಗಿದ್ದರೆ ಬಹುಶಃ ಈ ಪ್ರಕರಣ ಹೊರ ಜಗತ್ತಿಗೆ ತಿಳಿಯುತ್ತಲೇ ಇರಲಿಲ್ಲ. ಇದು ಯೋಗಿ ಆಡಳಿತದ ಅರಾಜಕತೆಯ ಚಿತ್ರಣ ತೆರೆದಿಟ್ಟ ಘಟನೆ. ಶುಸಾಂತ ಸಿಂಗ್ ಎಂಬ ನಟನೊಬ್ಬನ ಅನುಮಾನಾಸ್ಪದ ಸಾವನ್ನು ಕೊಲೆ ಎಂದು ನಿರೂಪಿಸಲು ತಿಂಗಳಾನುಗಟ್ಟಲೆ ಪ್ರಯತ್ನಿಸುತ್ತಿರುವ ಕೂಗುಮಾರಿ ಮಾಧ್ಯಮಗಳು ಈ ಪ್ರಕರಣವನ್ನು ಕಾಟಾಚಾರಕ್ಕೆ ವರದಿ ಮಾಡಿ ಸುಮ್ಮನಾಗುವ ಮೂಲಕ ತಮ್ಮನ್ನು ಸಾಕುತ್ತಿರುವ ಧಣಿಗಳಿಗೆ ಕ್ರತಜ್ಞತೆ ತೋರಿಸುತ್ತವೆ.

ಜಗತ್ತಿನೆದುರಿಗೆ ಭಾರತ ತಲೆ ತಗ್ಗಿಸುವಂತೆ ನಡೆದುಕೊಂಡ ಉತ್ತರಪ್ರದೇಶ
ಹಾಥ್ರಾಸ್ ಹೇಯ ಘಟನೆ ಮತ್ತು ʼಉತ್ತರಪ್ರದೇಶʼ ಎಂಬ ಭವಿಷ್ಯದ ಭಾರತದ ಮಾದರಿ!

ಕೇಂದ್ರದಲ್ಲಿ ಮೋದಿ ನೇತ್ರತ್ವದ ಬಿಜೆಪಿ ಆಡಳಿತ ಪ್ರತಿಷ್ಠಾಪನೆಯಾದ ನಂತರ ಮತ್ತು ಉತ್ತರ ಪ್ರದೇಶದಲ್ಲಿ ಯೋಗಿ ನೇತ್ರತ್ವದ ಅದೇ ಪಕ್ಷದ ಸರಕಾರ ಅಧಿಕಾರಕ್ಕೆ ಚುಕ್ಕಾಣಿ ಹಿಡಿದ ಮೇಲೆ ಇಡೀ ದೇಶದಲ್ಲಿ ಅದರಲ್ಲೂ ವಿಶೇಷವಾಗಿ ಊತ್ತರಪ್ರದೇಶದಲ್ಲಿ ಹಿಂದೆ ಅಫಘಾನಿಸ್ತಾನದಲ್ಲಿ ಮುಸ್ಲಿಂ ಮೂಲಭೂತವಾದಿ ತಾಲಿಬಾನಿಗಳ ಆಡಳಿತ ಮರುಕಳಿಸಿಂತೆ ತೋರುತ್ತಿದೆ. ಬಲಪಂಥೀಯ ಸನಾತನ ಮೂಲಭೂತವಾದಿಗಳು ಮತ್ತೆ ಶ್ರೇಣೀಕ್ರತ ಜಾತಿ ವ್ಯವಸ್ಥೆ ಮತ್ತು ಪುರುಷ ಪ್ರಧಾನ ಸಮಾಜವನ್ನು ಜಾರಿತರಲು ಮಾಡುತ್ತಿರುವ ಪ್ರಯತ್ನದ ಲಕ್ಷಣಗಳು ಸ್ಪಷ್ಟವಾಗಿ ಗೋಚರವಾಗ್ತವೆ. ಸ್ತ್ರೀಯರ ಮೇಲಿನˌ ಅಲ್ಪಸಂಖ್ಯಾತರ ಮೇಲಿನˌ ದಲಿತ ದಮನಿತರ ಮೇಲಿನ ದೌರ್ಜನ್ಯಗಳು ಮೇಳೈಸುತ್ತಿರುವ ಉತ್ತರ ಪ್ರದೇಶವನ್ನು ನೋಡಿದಾಗˌ ಬಿಜೆಪಿಯನ್ನು ನಿಯಂತ್ರಿಸುವ ಸನಾತನಿ ಮೂಲಭೂತವಾದಿ ಸಂಘಟನೆಗಳು ವ್ಯವಸ್ಥಿತವಾಗಿ ವೇದಕಾಲದ ಮನುಸ್ಮ್ರತಿ ಕಾನೂನನನ್ನು ಮರು ಜಾರಿಗೆ ತರುವ ಪ್ರಯೋಗಶಾಲೆಯಾಗಿ ಊತ್ತರ ಪ್ರದೇಶವನ್ನು ಆಯ್ದುಕೊಂಡವೆ ಎನ್ನುವ ಅನುಮಾನ ಕಾಡಲಾರಂಭಿಸುತ್ತದೆ.

ಜಗತ್ತಿನೆದುರಿಗೆ ಭಾರತ ತಲೆ ತಗ್ಗಿಸುವಂತೆ ನಡೆದುಕೊಂಡ ಉತ್ತರಪ್ರದೇಶ
ಯೋಗಿ ಆದಿತ್ಯನಾಥ್ ಕನ್ನಡಿಯಲ್ಲಿ ಅವರ ಮುಖವನ್ನು ಅವರೇ ನೋಡಿಕೊಳ್ಳಬಲ್ಲರೆ?

ಈ ಹಿಂದೆ ದಿಲ್ಲಿಯಲ್ಲಿ ನಡೆದ ನಿರ್ಭಯ ಅತ್ಯಾಚಾರ ಪ್ರಕರಣಕ್ಕೆ ವ್ಯಾಪಕ ಪ್ರಚಾರ ಕೊಟ್ಟ ಮನುವಾದಿ ಸಂಘಟನೆಗಳುˌ ಬಿಜೆಪಿˌ ಮನುವಾದಿ ಮಾಧ್ಯಮಗಳು ಮತ್ತು ಕಳ್ಳೋದ್ಯಮಿಗಳು ಅಂದಿನ ಸರಕಾರಕ್ಕೆ ಕೆಟ್ಟ ಹೆಸರೂ ತರುವಲ್ಲಿ ಸಫಲವಾಗಿದ್ದವು. ಈಗ ಅದೇ ದುಷ್ಟ ಶಕ್ತಿಗಳು ಯುಪಿಯ ಹಾಥ್ರಾಸ್‌ ಘಟನೆ ಸಮರ್ಥಿಸಿಕೊಳ್ಳುತ್ತ ಏನೂ ಆಗಿಯೇ ಇಲ್ಲ ಎನ್ನುವಂತೆ ಆ ಅಮಾನವಿಯ ಪ್ರಕರಣಕ್ಕೆ ಪ್ರಚಾರ ಸಿಗದಂತೆ ಇಡೀ ಪ್ರಕರಣ ಮುಚ್ಚಿ ಹಾಕುವಲ್ಲಿ ನಿರತವಾಗಿವೆ. ಅಂದು ಇಂತದ್ದೇ ಅತ್ಯಾಚಾರ ಪ್ರಕರಣವನ್ನು ರಾಜಕೀಯಕ್ಕೆ ಬಳಸಿದ ಈ ಮನುವಾದಿಗಳು ಇಂದು ಮೌನ ತಾಳಿವೆ. ಪ್ರಜಾಪ್ರಭುತ್ವ ವಿರೋಧಿˌ ಮಹಿಳಾ ವಿರೋಧಿˌ ಮತ್ತು ಈ ದೇಶದ ಸಂವಿಧಾನ ವಿರೋಧಿಗಳಾದ ಕೋಮುವಾದಿಗಳು ದೇಶವನ್ನು ಎಲ್ಲ ರಂಗಗಳಲ್ಲಿ ವಿಫಲಗೊಳಿಸಿ ಜನರನ್ನು ಶಿಲಾಯುಗದ ಕಡೆಗೆ ಕೊಂಡೊಯ್ಯುತ್ತಿವೆ.

ಜಗತ್ತಿನೆದುರಿಗೆ ಭಾರತ ತಲೆ ತಗ್ಗಿಸುವಂತೆ ನಡೆದುಕೊಂಡ ಉತ್ತರಪ್ರದೇಶ
CBI ತನಿಖೆ ನಡುವೆಯೇ ಹತ್ರಾಸ್ ಪ್ರಕರಣದ ದಿಕ್ಕು ತಪ್ಪಿಸಲೆತ್ನಿಸುತ್ತಿರುವ ಆದಿತ್ಯನಾಥ್, ಮತ್ತವರ ಪೊಲೀಸರು

ಬಿಜೆಪಿ ಆಡಳಿತದಲ್ಲಿ ದೇಶ ಎಂದಿಗೂ ಕಂಡರಿಯದ ದಿವಾಳಿ ಅಂಚಿಗೆ ಬಂದು ನಿಂತಿದೆ. ದೇಶದ ಆರ್ಥಿಕ ಸ್ಥಿತಿ ಹೀನಾಯವಾಗಿ ನೆಲಕಚ್ಚಿದ್ದರು ಕಳ್ಳೋದ್ಯಮಿಗಳು ಕೊಬ್ಬಿ ಮೆರೆಯುತ್ತಿದ್ದಾರೆ. ಸರಕಾರಿ ಸ್ವಾಮ್ಯದ ಎಲ್ಲ ಸಾರ್ವಜನಿಕ ಉದ್ಯಮಗಳುˌ ಸಂಸ್ಥೆಗಳು ಖಾಸಗಿ ಕಳ್ಳೋದ್ಯಮಿಗಳಿಗೆ ಮಾರಲಾಗುತ್ತಿದೆ. ಒಟ್ಟಾರೆ ಭಾರತದ ವರ್ತಮಾನ ಮತ್ತು ಭವಿಷ್ಯ ಸುಧಾರಿಸಲಾರದಷ್ಟು ಹಾಳು ಮಾಡಲಾಗಿದೆ. ಈಗ ಇತಿಹಾಸವನ್ನು ಕೂಡ ಕೆಡಿಸಲು ಮೋದಿ ಸರಕಾರ ಸಮಿತಿಯೊಂದನ್ನು ರಚಿಸಿದೆ. ಈ ದೇಶವನ್ನು ಮನುವಾದಿಗಿಂದ ರಕ್ಷಿಸದಿದ್ದರೆ ಬಹುಶಃ ಮುಂದಿನ ಪೀಳಿಗೆಗೆ ಭಾರತ ಉಳಿಯಲಿರದೇನೊ ಎನ್ನುವ ಅನುಮಾನಗಳು ದಟ್ಟವಾಗುತ್ತಿವೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com