ಬಿಜೆಪಿಯ ಅಮೇರಿಕನ್‌ ಸದಸ್ಯರು ಚುನಾವಣಾ ರ‍್ಯಾಲಿಯಲ್ಲಿ ಬಿಜೆಪಿ ಹೆಸರು ಬಳಸುವಂತಿಲ್ಲ
Evan Vucci
ಅಭಿಮತ

ಬಿಜೆಪಿಯ ಅಮೇರಿಕನ್‌ ಸದಸ್ಯರು ಚುನಾವಣಾ ರ‍್ಯಾಲಿಯಲ್ಲಿ ಬಿಜೆಪಿ ಹೆಸರು ಬಳಸುವಂತಿಲ್ಲ

ಅಮೇರಿಕದಲ್ಲಿ ಇರುವ ವಿದೇಶೀ ಕಾರ್ಯಕರ್ತರು ತಮ್ಮ ದೇಶದ ಸರ್ಕಾರಗಳು ಅಥವಾ ರಾಜಕೀಯ ಪಕ್ಷಗಳ ಚಟುವಟಿಕೆಯಲ್ಲಿ ತೊಡಗಬಹುದಾಗಿದೆ ಆದರೆ ಇದಕ್ಕೆ ಕಡ್ಡಾಯವಾಗಿ ವಿದೇಶೀ ಏಜೆಂಟರೆಂದು ನೋಂದಾವಣೆ ಮಾಡಿಕೊಳ್ಳಬೇಕಿದೆ.

ಕೋವರ್ ಕೊಲ್ಲಿ ಇಂದ್ರೇಶ್

ಭಾರತೀಯರು ವಿಶ್ವದ ಬಹುತೇಕ ಎಲ್ಲ ದೇಶಗಳಲ್ಲೂ ನೆಲೆಸಿದ್ದಾರೆ. ಅದರಲ್ಲೂ ವಿದೇಶದಲ್ಲಿ ಉತ್ತನ ಶಿಕ್ಷಣ ಮತ್ತು ಉದ್ಯೋಗ ಪಡೆಯಬಯಸುವ ಜನರ ಹಾಟ್‌ ಸ್ಪಾಟ್‌ ವಿಶ್ವದ ಅತ್ಯಂತ ದೊಡ್ಡ ಆರ್ಥಿಕತೆ ಹೊಂದಿರುವ ಅಮೇರಿಕ ಎಂಬ ಶ್ರೀಮಂತ ದೇಶವೇ ಆಗಿದೆ. ಅದರೆ ನಮ್ಮ ಸಂವಿಧಾನದ ಮೂಲ ನಿಯಮಗಳ ಪ್ರಕಾರ ಯಾವುದೇ ವಿದೇಶದ ಚುನಾವಣೆಯಲ್ಲಿ ನಮ್ಮ ಸರ್ಕಾರ ಯಾವುದೇ ರೀತಿಯಲ್ಲೂ ಪ್ರತ್ಯಕ್ಷ ಅಥವಾ ಪರೋಕ್ಷ ಪಾತ್ರ ವಹಿಸಕೂಡದು. ಭಾರತದ ಜತೆ ಎಷ್ಟೇ ಸ್ನೇಹ ಅಥವಾ ಅನುಕೂಲ ಮಾಡಿಕೊಟ್ಟಿದ್ದರೂ ಆ ವ್ಯಕ್ತಿಯು ಚುನಾವಣೆಯಲ್ಲಿ ಸ್ಪರ್ಧಿಸಿದರೆ ಅವರ ಪರ ಪರೋಕ್ಷವಾಗಿಯೂ ಪ್ರಚಾರ ನಡೆಸುವುದು ಮತದಾರರ ಮೇಲೆ ಪ್ರಭಾವ ಬೀರುವುದು ನಿಷಿದ್ದವಾಗಿದೆ.

ದೇಶದ ಅತೀ ದೊಡ್ಡ ಪಕ್ಷ ಎಂದು ಗುರುತಿಸಿಕೊಂಡಿರುವ ಬಿಜೆಪಿಯು ಅಮೇರಿಕದಲ್ಲೂ ತನ್ನ ಶಾಖೆಯನ್ನು ಹೊಂದಿದೆ. ಈ ಶಾಖೆಯು ಕಳೆದ ಕೆಲ ವಾರಗಳಿಂದ ಕೆಲವು ಗಮನಾರ್ಹ ಬದಲಾವಣೆಗಳನ್ನು ಮಾಡಿಕೊಂಡಿದೆ. ಅದರಲ್ಲಿ ಬಹುಮುಖ್ಯವಾದುದು ಏನೆಂದರೆ ಅಮೇರಿಕದಲ್ಲಿ ಮುಂಬರುವ ಅದ್ಯಕ್ಷೀಯ ಚುನಾವಣೆಯಲ್ಲಿ ಪ್ರಚಾರ ಮಾಡಬಯಸುವ ಬಿಜೆಪಿ ಸದಸ್ಯರು ಎಲ್ಲೂ ಕೂಡ ಬಿಜೆಪಿ ಹೆಸರನ್ನು ಬಳಸುವಂತಿಲ್ಲ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಪಿಟಿಐ ವರದಿಯ ಪ್ರಕಾರ, ಬಿಜೆಪಿಯ ವಿದೇಶಾಂಗ ವ್ಯವಹಾರಗಳ ವಿಭಾಗದ ಮುಖ್ಯಸ್ಥರಾಗಿರುವ ವಿಜಯ್ ಚೌಥೈವಾಲೆ ಅವರು ಮುಂಬರುವ ಅಮೆರಿಕನ್ ಚುನಾವಣೆಯಲ್ಲಿ ಪಾಲ್ಗೊಳ್ಳ ಬಯಸುವ ಅದರ ಸದಸ್ಯರು ಪಕ್ಷದ ಅಥವಾ ಬಿಜೆಪಿಯ ಸಾಗರೋತ್ತರ ಸ್ನೇಹಿತರ ಹೆಸರನ್ನು ಬಳಸದಂತೆ ನೋಡಿಕೊಳ್ಳುವಂತೆ ಅಮೆರಿಕನ್ ವಿಭಾಗಕ್ಕೆ ಸೂಚನೆ ನೀಡಿದ್ದಾರೆ. ಬಿಜೆಪಿಯ ಅಮೇರಿಕದ ಸದಸ್ಯರು ಅಲ್ಲಿನ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಬಹುದು ಮತ್ತು ಯಾವುದೇ ಅಭ್ಯರ್ಥಿ ಅಥವಾ ಪಕ್ಷವನ್ನು ತಮ್ಮ ವೈಯಕ್ತಿಕ ಸಾಮರ್ಥ್ಯದಲ್ಲಿ ಬೆಂಬಲಿಸಬಹುದು ಆದರೆ ಪ್ರಚಾರದ ಸಮಯದಲ್ಲಿ ಬಿಜೆಪಿ ಹೆಸರನ್ನು ಬಳಸದಂತೆ ಅವರಿಗೆ ಸೂಚನೆ ನೀಡಲಾಗಿದೆ" ಎಂದು ಅವರು ಹೇಳಿದರು. ಚೌಥೈವಾಲೆ ಉಭಯ ದೇಶಗಳ ನಡುವಿನ ಸುಧೀರ್ಘ ಕಾರ್ಯತಂತ್ರದ ಸಂಬಂಧಗಳು ಮತ್ತು ಅಮೇರಿಕದಲ್ಲಿನ ಈ ಸಂಬಂಧಗಳಿಗೆ ಉಭಯಪಕ್ಷೀಯ ಬೆಂಬಲವನ್ನು ಉಲ್ಲೇಖಿಸಿ ಯಾವುದೇ ಚುನಾವಣೆಯು ಕೇವಲ ಆ ದೇಶದ ದೇಶೀಯ ಪ್ರಕ್ರಿಯೆಯಾಗಿದೆ ಮತ್ತು ಈ ಪ್ರಕ್ರಿಯೆಯಲ್ಲಿ ಬಿಜೆಪಿಗೆ ಯಾವುದೇ ಪಾತ್ರವಿಲ್ಲ ಎಂದು ಹೇಳಿದ್ದಾರೆ.

ಅಮೇರಿಕಾದ 1938 ರ ಹಿಂದಿನ ವಿದೇಶಿ ಏಜೆಂಟರ ನೋಂದಣಿ ಕಾಯ್ದೆ, ಪ್ರಕಾರ ಅಮೇರಿಕದ ಹೊರಗಿನ ದೇಶಗಳಲ್ಲಿನ ರಾಜಕೀಯ ಅಥವಾ ಅರೆ-ರಾಜಕೀಯ ಸಂಪರ್ಕವನ್ನು ಹೊಂದಿರುವ ಸಂಸ್ಥೆಗಳು ಅಮೇರಿಕಾದಲ್ಲಿ ಚುನಾವಣಾ ಪ್ರಕ್ರಿಯೆಯಲ್ಲಿ ಯಾವುದೇ ಪಾತ್ರ ವಹಿಸುವಂತಿಲ್ಲ. ಅದರೆ ಅಮೇರಿಕದಲ್ಲಿ ಇರುವ ವಿದೇಶೀ ಕಾರ್ಯಕರ್ತರು ತಮ್ಮ ದೇಶದ ಸರ್ಕಾರಗಳು ಅಥವಾ ರಾಜಕೀಯ ಪಕ್ಷಗಳ ಚಟುವಟಿಕೆಯಲ್ಲಿ ತೊಡಗಬಹುದಾಗಿದೆ ಆದರೆ ಇದಕ್ಕೆ ಕಡ್ಡಾಯವಾಗಿ ವಿದೇಶೀ ಏಜೆಂಟರೆಂದು ನೋಂದಾವಣೆ ಮಾಡಿಕೊಳ್ಳಬೇಕಿದೆ ಇಲ್ಲದಿದ್ದಲ್ಲಿ ಅಮೇರಿಕನ್‌ ಕಾನೂನಿನ , ಕಾನೂನನ್ನು ಉಲ್ಲಂಘಿಸಿದ್ದಕ್ಕಾಗಿ ಕ್ರಿಮಿನಲ್ ಮೊಕದ್ದಮೆ ಹೂಡಬಹುದು.

ವಾಸ್ತವವಾಗಿ, ಕಳೆದ ಕೆಲವು ವರ್ಷಗಳಿಂದ ಅಮೇರಿಕ ಸರ್ಕಾರವು ತನ್ನ ಫರಾ ಕಾಯ್ದೆಯ ಉಲ್ಲಂಘನೆಗಳ ವಿಷಯದಲ್ಲಿ ಹೆಚ್ಚು ನಿಗಾ ಇಟ್ಟಿದೆ. ಏಕೆಂದರೆ ಅಮೇರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದ ಅನೇಕ ಅಧಿಕಾರಿಗಳು ಕಾನೂನನ್ನು ಉಲ್ಲಂಘಿಸಿದ್ದಾರೆಂದು ಕಂಡುಬಂದಿದೆ. ಇದರಿಂದ ಅಮೇರಿಕ ನ್ಯಾಯಾಂಗ ಇಲಾಖೆಯ ಕಾನೂನನ್ನು ಜಾರಿಗೊಳಿಸಲು ಹೆಚ್ಚಿನ ಸಿಬ್ಬಂದಿಗಳನ್ನು ನಿಯೋಜನೆ ಮಾಡಿದೆ. ಇದರಿಂದಾಗಿ ಕಾನೂನು ಉಲ್ಲಂಘಿಸುವವರ ಸಂಖ್ಯೆ ಕಡಿಮೆ ಆಗಿ ಎಲ್ಲರೂ ನೋಂದಾಯಿಸಿಕೊಳ್ಲಲು ಮುಂದಾಗಿದ್ದಾರೆ ಎನ್ನಲಾಗಿದೆ.

Evan Vucci

ಬಿಜೆಪಿಯ ಅಮೇರಿಕ ವಿಭಾಗವು ಫರಾ ಕಾನೂನಿನಡಿಯಲ್ಲಿ ನೋಂದಾಯಿಸಿದೆ ಎಂಬ ಸುದ್ದಿ ಹೊರಬಂದ ಕೆಲವೇ ದಿನಗಳಲ್ಲಿ, ಚೌಥೈವಾಲೆ ಅವರು ಅಮೆರಿಕದಲ್ಲಿರುವ ಕಾಂಗ್ರೆಸ್ ಘಟಕವೂ ಇದನ್ನೇ ಮಾಡುತ್ತದೆಯೇ ಎಂದು ಕೇಳುವ ಟ್ವೀಟ್ ಅನ್ನು ಪೋಸ್ಟ್ ಮಾಡಿದ್ದಾರೆ. ಅಲ್ಲಿನ ಮುಂದಿನ ಅದ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರ ಆಪ್ತ ಸ್ನೇಹಿತನಾಗಿ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತದ ಚಿತ್ರಣವನ್ನು ನಿರ್ಮಿಸಲು ಭಾರೀ ಹುಮ್ಮಸ್ಸಿನಿಂದ ಇರುವ ಬಿಜೆಪಿಗೆ ನವೆಂಬರ್‌ ನಲ್ಲಿ ನಡೆಯಲಿರುವ ಅಮೇರಿಕದ ಅದ್ಯಕ್ಷೀಯ ಚುನಾವಣೆ ಮಹತ್ವದ್ದಾಗಿದೆ.

ಟ್ರಂಪ್‌ರೊಂದಿಗಿನ ರ‍್ಯಾಲಿಗಳಲ್ಲಿ ಮೋದಿ ಎರಡು ಬಾರಿ ಭಾಗವಹಿಸಿದ್ದಾರೆ. ಅಲ್ಲಿ ನಾಯಕರು ಬಳಸುವ ವಾಕ್ಚಾತುರ್ಯ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ವಿದೇಶಿ ನಾಯಕರು ಬಳಸುವ ಸಾಮಾನ್ಯ ಭಾಷೆಗಿಂತ ರಾಜಕೀಯ ಪ್ರಚಾರದಂತೆ ತೋರುತ್ತದೆ. 2019 ರಲ್ಲಿ ಟೆಕ್ಸಾಸ್‌ನ ಹೂಸ್ಟನ್‌ನಲ್ಲಿ ನಡೆದ ರ್ಯಾಲಿಯಲ್ಲಿ “ಅಬ್ ಕಿ ಬಾರ್, ಟ್ರಂಪ್ ಸರ್ಕಾರ್” ('ಈ ಬಾರಿ, ಟ್ರಂಪ್ ಸರ್ಕಾರ') ಎಂದು ಹೇಳುವ ಮೂಲಕ ಮೋದಿ ಅವರು ಟ್ರಂಪ್‌ಗೆ ಬೆಂಬಲ ನೀಡುವಂತೆ ತೋರಿದ್ದರು. ಮೋದಿ ಕೇವಲ ಟ್ರಂಪ್ ಹೆಸರನ್ನು ಉಲ್ಲೇಖಿಸುತ್ತಿದ್ದಾರೆ ಎಂದು ಹೇಳಲು ಪಕ್ಷ ಪ್ರಯತ್ನಿಸಿದರೂ ಕೂಡ ಇದು 2014 ರಿಂದ 2016 ರ ವರೆಗೆ ಭಾರತದ ಪ್ರಧಾನ ಮಂತ್ರಿಯ ಪ್ರಚಾರ ಟ್ಯಾಗ್‌ಲೈನ್‌ನ ಉಲ್ಲೇಖವಾಗಿದೆ ಇದನ್ನು ಹೊರತುಪಡಿಸಿ ಯಾವುದನ್ನೂ ನೋಡುವುದು ಸಾದ್ಯವಿಲ್ಲ.

ಈ ವರ್ಷದ ಟ್ರಂಪ್ ಅವರ ಅಭಿಯಾನವು ಭಾರತೀಯ ಅಮೆರಿಕನ್ ಸಮುದಾಯವನ್ನು ತಲುಪುವ ಮಾರ್ಗವಾಗಿ ಮೋದಿಯವರ ಮಾತುಗಳ ಮೇಲೆ ಹೆಚ್ಚು ಒಲವು ತೋರಿಸಲು ಪ್ರಯತ್ನಿಸಿದೆ. ಟ್ರಂಪ್ ಅಭಿಯಾನದ ಉನ್ನತ ನಿಧಿಸಂಗ್ರಹಕಳು ಮತ್ತು ಅವರ ಹಿರಿಯ ಮಗನ ಗೆಳತಿ ಕಿಂಬರ್ಲಿ ಗಿಲ್ಫಾಯ್ಲ್ ಕಳೆದ ಆಗಸ್ಟ್‌ ನಲ್ಲಿ ಮಾಡಿದ ಟ್ವೀಟ್‌ ನಲ್ಲಿ ಹೂಸ್ಟನ್‌ ರ್ಯಾಲಿ ಪ್ರಚಾರದ ವೀಡಿಯೊದಂತೆ ತೋರುತ್ತಿದೆ ಎಂದು ಹೇಳಿದ್ದಾರೆ.

ಟ್ರಂಪ್ ಅವರ ಎದುರಾಳಿ, ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಮತ್ತು ಅಮೆರಿಕದ ಮಾಜಿ ಉಪಾಧ್ಯಕ್ಷ ಜೋ ಬಿಡನ್ ಅವರು ಮೋದಿಯವರ ಭಾರತದೊಂದಿಗೆ ಕಟು ನಿಲುವನ್ನೇ ಹೊಂದಿದ್ದಾರೆ. ಆದರೆ ಅಮೆರಿಕನ್ ಭಾರತೀಯ ಸಮುದಾಯವನ್ನೂ ಸಹ ತಲುಪಿದ್ದಾರೆ - ಅವರ ಪಕ್ಷದ ಉಪಾಧ್ಯಕ್ಷ ಅಭ್ಯರ್ಥಿ ಕಮಲಾ ಹ್ಯಾರಿಸ್ ಅವರು ಈ ಬಾರಿ ಗೆದ್ದರೆ ಅಮೇರಿಕದ ಉಪಾದ್ಯಕ್ಷ ಸ್ಥಾನವನ್ನು ಅಲಂಕರಿಸಲಿರುವ ಮೊದಲ ಭಾರತೀಯ ಅಮೆರಿಕನ್‌ ಎಂಬ ಗೌರವಕ್ಕೆ ಪಾತ್ರವಾಗುತ್ತಾರೆ ಎಂದು ಪ್ರಚಾರ ಮಾಡುತಿದ್ದಾರೆ. ಅಮೆರಿಕದ ಪ್ರಮುಖ ಚುನಾವಣೆಗಳ ರಿಯಲ್‌ ಕ್ಲಿಯರ್‌ ಪಾಲಿಟಿಕ್ಸ್ ವರದಿ ಸರಾಸರಿಯ ಪ್ರಕಾರ ಜೋ ಬಿಡೆನ್ ಪ್ರಸ್ತುತ ಟ್ರಂಪ್‌ಗಿಂತ 7 ಪಾಯಿಂಟ್‌ಗಳಷ್ಟು ಮುಂದಿದ್ದಾರೆ, ಆದರೆ ಅಮೇರಿಕದಲ್ಲಿ ಚುನಾವಣೆ ನಡೆಯುವುದಕ್ಕೂ ಮುನ್ನ ಈ ಸರಾಸರಿ ಬದಲಾಗುವ ಸಾದ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ನವೆಂಬರ್ 3 ರ ನಡುವೆ ಅದು ಬದಲಾಗಲೂಬಹುದು.

Click here to follow us on Facebook , Twitter, YouTube, Telegram

Pratidhvani
www.pratidhvani.com