ವೈದ್ಯಕೀಯ ಬಳಕೆಗಾಗಿ ಗಾಂಜಾ: ಭಾರತದಲ್ಲೂ ಕಾನೂನುಬದ್ದ ಅನುಮತಿ ಸಿಗುವುದೇ?
ಅಭಿಮತ

ವೈದ್ಯಕೀಯ ಬಳಕೆಗಾಗಿ ಗಾಂಜಾ: ಭಾರತದಲ್ಲೂ ಕಾನೂನುಬದ್ದ ಅನುಮತಿ ಸಿಗುವುದೇ?

ವೈದ್ಯಕೀಯ ಉಪಯೋಗಕ್ಕಾಗಿ ಗಾಂಜಾ ಸೇವನೆಗೆ ಅನೇಕ ರಾಷ್ಟ್ರಗಳಲ್ಲಿ ಅನುಮತಿ ನೀಡಲಾಗಿದೆ. ಭಾರತದ ಪತಂಜಲಿ ಸಂಸ್ಥೆ ಕೂಡಾ ಈ ಹಿಂದೆ ವೈದ್ಯಕೀಯ ಬಳಕೆಗಾಗಿ ಗಾಂಜಾ ಬೆಳೆಸಲು ಹಾಗೂ ಸೇವಿಸಲು ಅನುಮತಿ ನೀಡುವಂತೆ ಕೇಳಿಕೊಂಡಿತ್ತು. ಭಾರತದಲ್ಲಿ ಗಾಂಜಾ ಬಳಕೆಯ ಇತಿಹಾಸ ಮತ್ತು ಇತರ ದೇಶಗಳಲ್ಲಿ ಗಾಂಜಾವನ್ನು ಯಾವ ರೀತಿ ಕಾನೂನು ಬದ್ದವಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂಬುದರ ಕುರಿತು ಮಾಹಿತಿ ಚೆಲ್ಲುವ ಲೇಖನ.

ಕೃಷ್ಣಮಣಿ

ಗಾಂಜಾ ಈ ಹೆಸರು ಕೇಳುತ್ತಿದ್ದ ಹಾಗೆ ಇದೊಂದು ಮಾದಕ ವಸ್ತು, ಇದನ್ನು ಸೇವಿಸುವುದು ಆದರೆ ಗಾಂಜಾವನ್ನು ಮಾದಕ ವಸ್ತುಗಳ ಪಟ್ಟಿಯಲ್ಲಿ ಸೇರಿಸಬಾರದು. ಭಾರತೀಯ ಪುರಾತನ ಕಾಲದಿಂದ ಗಾಂಜಾ ಬಳಕೆಯಲ್ಲಿದ್ದು, ಸಾಮಾನ್ಯವಾಗಿ ಗಾಂಜಾ ಗಿಡವನ್ನು ವೇದದಲ್ಲಿ ಪ್ರಸ್ತಾಪ ಮಾಡಲಾಗಿದ್ದು, ಪವಿತ್ರ ಸಸ್ಯವಾಗಿದ್ದು, ಅಧ್ಯಾತ್ಮಿಕ ಹಾಗೂ ಧಾರ್ಮಿಕ ಸಸ್ಯವೆಂದು ಪರಿಗಣಿಸಲಾಗಿದೆ. ಸಮುದ್ರ ಮಂಥನ ಸಮಯದಲ್ಲಿ ಹಾಲಹಲ ಬಿಡುಗಡೆ ಆಯ್ತು. ಜಗವನ್ನು ರಕ್ಷಣೆ ಮಾಡಲು ಸಾಕ್ಷಾತ್ ಶಿವನು ವಿಷ ಸೇವನೆ ಮಾಡಿದನು ಎನ್ನಲಾಗುತ್ತದೆ. ಆ ಸಮಯದಲ್ಲಿ ಶಿವನನ್ನು ರಕ್ಷಿಸಲು ದೇವ ಸಂಕುಲ ಔಷಧಿಯಾಗಿ ಬಳಕೆ ಮಾಡಿದ್ದು ಇದೇ ಗಾಂಜಾ ಸಸ್ಯದ ರಸ ಎನ್ನುವುದು ವಿಶೇಷ. ಆದರೂ ಭಾರತದಲ್ಲಿ ಗಾಂಜಾ ಗಿಡ ನಿಷೇಧಿತ ಪದಾರ್ಥ. ಈ ನಿಷೇಧವು ಜನರ ವಿರೋಧಕ್ಕೆ ಕಾರಣವಾಗಿದೆ ಕೂಡಾ.

ಅಮೆರಿಕದಲ್ಲಿ ಗಾಂಜಾ ಮಾರಾಟಕ್ಕೆ ಅವಕಾಶ ಇದೆಯಾ..?

ಅಮೆರಿಕದಲ್ಲಿ ಗಾಂಜಾ ಬೆಳೆಯಲು ಹಾಗೂ ಮಾರಾಟ ಮಾಡಲು ಎರಡಕ್ಕೂ ಅವಕಾಶವಿದೆ. ಅಮೆರಿಕದಲ್ಲಿ ಗಾಂಜಾ ಅಧಿಕೃತ ಮಾರಾಟಗಾರರೇ ಇದ್ದಾರೆ. ಆರೋಗ್ಯ ಸಮಸ್ಯೆಗೆ ಔಷಧಿಯಾಗಿ ಗಾಂಜಾವನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ. ಕ್ಯಾನ್ಸರ್‌, ತಲೆನೋವು, ಹೊಟ್ಟೆನೋವು, ಸ್ನಾಯು ಸೆಳೆತ, ಹೊಟ್ಟೆ ನೋವು ಸೇರಿದಂತೆ ಸಾಕಷ್ಟು ಕಾಯಿಲೆಗಳಿಗೆ ಮರಿಜುವಾನ್ನಾ ಬಳಿಕೆ ಮಾಡಲಾಗ್ತಿದೆ. ಇದನ್ನು ಬಳಸುವುದಕ್ಕಾಗಿ ಅಮೆರಿಕದ 27 ರಾಜ್ಯಗಳು ಕಾನೂನಿಗೆ ತಿದ್ದುಪಡಿಯನ್ನು ಮಾಡಿಕೊಂಡಿದ್ದಾರೆ.

ಯಾವುದೇ ಓರ್ವ ವ್ಯಕ್ತಿ ತನ್ನ ಸಮಸ್ಯೆ ಬಗ್ಗೆ ಹೇಳಿಕೊಂಡಾಗ ವೈದ್ಯರಿಗೆ ಸಮಸ್ಯೆ ಇರುವುದು ಹೌದು ಎಂದಾದರೆ ಗಾಂಜಾ ಕಾರ್ಡ್‌ ಕೊಡುತ್ತಾರೆ. ಆ ಕಾರ್ಡ್‌ ಇದ್ದವರು ಗಾಂಜಾವನ್ನು ಖರೀದಿ ಮಾಡಿ ಬಳಕೆ ಮಾಡಬಹುದಾಗಿದೆ. ಗಾಂಜಾ ಹೊಗೆ ಸೇವನೆ ಮಾಡುವುದು, ಅಡುಗೆಯಲ್ಲಿ ಬಳಕೆ ಮಾಡುವುದು ಅಥವಾ ಬಿಸಿ ನೀರಿಗೆ ಹಾಕಿ ಅದರ ಆವಿಯನ್ನು ಗ್ರಹಿಸುವುದರಿಂದ ಆರೋಗ್ಯ ಸಮಸ್ಯೆ ನಿವಾರಣೆ ಮಾಡಿಕೊಳ್ಳಬಹುದಾಗಿದೆ. ಆದರೆ ಗಾಂಜಾ ಸೇವನೆಯಿಂದ ತಲೆ ಸುತ್ತುವಿಕೆ, ತಾತ್ಕಾಲಿಕ ಜ್ಞಾಪಕ ಕಳೆದುಕೊಳ್ಳುವುದು, ಅರೆನಿದ್ರಾವಸ್ಥೆಗೆ ತಲುತ್ತಾರೆ. 18 ವರ್ಷದ ಕೆಳಗಿನವರಿಗೆ ಇದರ ಬಳಕೆ ನಿಷಿದ್ಧ. ಗರ್ಭಿಣಿಯರು, ಹೃದ್ರೋಗಿಗಳು, ಮಾನಸಿಕ ರೋಗಿಗಳು ಇದನ್ನು ಬಳಸುವಂತಿಲ್ಲ.

ಎಷ್ಟು ದೇಶಗಳಲ್ಲಿ ಗಾಂಜಾ ಬಳಸಲು ಅವಕಾಶವಿದೆ..?

ಕೆನಡ, ಅಮೆರಿಕ, ಮೆಕ್ಸಿಕೋ, ಬಿಲೈಜ್‌, ಕೋಸ್ಟ್‌ ರಿಕಾ, ಜಮೈಕಾ, ಅರ್ಜೆಂಟೈನಾ, ಕೊಲಂಬಿಯಾ, ಈಕ್ವೆಡಾರ್‌, ಪೆರು, ಉರುಗ್ವೆ, ಕಾಂಬೋಡಿಯಾ, ಲಾವೋಸ್‌, ನಾರ್ತ್‌ ಕೊರಿಯಾ, ಬೆಲ್ಜಿಯಂ, ಇಟಲಿ, ದಿ ನೆದರಲ್ಯಾಂಡ್‌, ಪೋರ್ಚುಗಲ್‌, ಸ್ಪೈನ್‌, ಉಕ್ರೇನ್‌, ಆಸ್ಟ್ರೇಲಿಯಾ, ರಷ್ಯಾ, ಜೆಕ್‌ ಗಣರಾಜ್ಯ, ಈಸ್ಟೋನಿಯಾ ಸೇರಿದಂತೆ 40ಕ್ಕೂ ಹೆಚ್ಚು ರಾಷ್ಟ್ರಗಳು ಗಾಂಜಾ ಬೆಳೆಯನ್ನು ಬೆಳೆಯಲು ಹಾಗೂ ಮಾರಾಟ ಮಾಡಲು ಅವಕಾಶ ಮಾಡಿಕೊಟ್ಟಿವೆ. ಅದಕ್ಕೆ ಬೇಕಾದ ಕಾನೂನು ತಿದ್ದುಪಡಿಯನ್ನು ಮಾಡಿಕೊಂಡಿವೆ. ಅತಿ ಹೆಚ್ಚು ರಾಷ್ಟ್ರಗಳಲ್ಲಿ ಗಾಂಜಾ ಸೊಪ್ಪನ್ನು ಔಷಧಿಯ ಸಸ್ಯವಾಗಿ ಬಳಕೆ ಮಾಡುತ್ತಿದ್ದಾರೆ.

ಇಂಗ್ಲೆಂಡ್‌ಗೆ ಈ ಸಸ್ಯ ಪರಿಚಯವಾಗಿದ್ದು ಹೇಗೆ..?

ಭಾರತದಲ್ಲಿ ಈಸ್ಟ್‌ ಇಂಡಿಯಾ ಕಂಪನಿ ಬೀಡು ಬಿಟ್ಟಿದ್ದ ವೇಳೆ ಚಿಕಿತ್ಸೆ ನೀಡಲು ಎಂದು ಬ್ರಿಟನ್‌ ನಿಂದ್‌ ಓರ್ವ ವೈದ್ಯನನ್ನು ಕರೆತರಲಾಗಿತ್ತು. ಆತನ ಹೆಸರು ವೈಟ್‌ಲಾ ಆನ್‌ಸ್ಲೇ, ಆತ ಅಂದಿನ ಮದ್ರಾಸ್‌ ನಲ್ಲಿ ವಾಸವಾಗಿದ್ದನು. ಆ ವೇಳೆ ಭಾರತದಲ್ಲಿ ಹೆಚ್ಚು ಪ್ರಚಲಿತದಲ್ಲಿದ್ದ ಆಯುರ್ವೇದ ಔಷಧಿ ಹಾಗೂ ಮುಸ್ಲಿಂ ಸಮುದಾಯದಲ್ಲಿ ಬಳಕೆಯಲ್ಲಿಯಲ್ಲಿ ಗಿಡಮೂಲಿಕೆ ಔಷಧದ ಮೇಲೆ ಆತನ ಕಣ್ಣು ಹೊರಳಿತ್ತು. ಸಾಕಷ್ಟು ರೋಗಗಳಿಗೆ ಬಳಕೆಯಾಗುತ್ತಿದ್ದ ಗಾಂಜಾ ಸೊಪ್ಪಿನ ಬಗ್ಗೆ ಅಧ್ಯಯನ ಶುರು ಮಾಡಿದನು. ಜೊತೆಗೆ ಓರ್ವ ಐರಿಶ್‌ ವೈದ್ಯನನ್ನು ಭಾರತಕ್ಕೆ ಕರೆಸಿಕೊಂಡು ಆತನನ್ನು ಕೊಲ್ಕತ್ತಾ ಸೇನೆಗೆ ಸೇರಿಸಲಾಯ್ತು. ಕಾಲಾರಾಗೆ ಚಿಕಿತ್ಸೆ ನೀಡುತ್ತಿದ್ದ ಈ ಯುವ ವೈದ್ಯ, ಕೊಲ್ಕತ್ತಾ ವೈದ್ಯಕೀಯ ಕಾಲೇಜಿನಲ್ಲಿ ಕಲಿಸಲಾಯಿತು. ಅವರ ಆಸಕ್ತಿಯೆಂದರೆ ಆಯುರ್ವೇದದಂತಹ ಸಾಂಪ್ರದಾಯಿಕ ಔಷಧಿ ಮತ್ತು ಇಸ್ಲಾಮಿಕ್ ಗಿಡಮೂಲಿಕೆಗಳ ಚಿಕಿತ್ಸೆ ಕಲಿತುಕೊಳ್ಳುವುದು.

ಒ ಶೌಗ್ನೆಸ್ಸಿ ಗಾಂಜಾ ಸೊಪ್ಪನ್ನು ವಿವಿಧ ಪ್ರಾಣಿಗಳ ಮೇಲೆ ಪ್ರಯೋಗ ಮಾಡಲು ಶುರು ಮಾಡಿದನು. ಅದರ ಜೊತೆಗೆ ಅದರಿಂದ ಪ್ರಾಣಿಗಳಲ್ಲಿ ಆಗುತ್ತಿದ್ದ ಬದಲಾವಣೆಗಳನ್ನು ದಾಖಲಿಸಿಕೊಳ್ಳುತ್ತಾ ಸಾಗಿದನು. ಮತ್ತು ಅಡ್ಡಪರಿಣಾಮಗಳನ್ನು ದಾಖಲಿಸಿಕೊಂಡನು. 1842 ರಲ್ಲಿ ಅವರು Bengal Dispensatory and Companion to the Pharmacopoeia ಪುಸ್ತಕ ಪ್ರಕಟಿಸಿದರು. ಅಂತಿಮವಾಗಿ ಆತ ತನ್ನ ಮೇಲೆಯೇ ಪ್ರಯೋಗ ಮಾಡಿಕೊಂಡನು. ಬಳಿಕ ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ಇತರರ ಮೇಲೂ ಪ್ರಯೋಗಕ್ಕೆ ಮುಂದಾದನು. ಮೊದಲು ಸಂಧಿವಾತದ ಚಿಕಿತ್ಸೆಗೆ ಬಳಿಸಿಕೊಂಡ. ರೇಬೀಸ್ ರೋಗಕ್ಕೂ ಇದು ರಾಮಬಾಣ ಎನ್ನುವುದನ್ನು ಅರಿತನು. ಕಾಲರಾದಿಂದ ಬಳಲುತ್ತಿರುವವರಿಗೂ ಗಂಜಿಯೊಂದಿಗೆ ಚಿಕಿತ್ಸೆ ನೀಡಿ ವಾಂತಿ ಮತ್ತು ಅತಿಸಾರವನ್ನು ಕಡಿಮೆ ಮಾಡುತ್ತಿದ್ದನು. 1841 ರಲ್ಲಿ ರಜೆ ಪಡೆದು ಇಂಗ್ಲೆಂಡ್‌ ವಾಪಸ್‌ ಆದ ವೈದ್ಯನು ಸೆಣಬು ಹಾಗೂ ಗಾಂಜಾ ಸಸ್ಯವನ್ನು ತನ್ನೊಂದಿಗೆ ತೆಗೆದುಕೊಂಡು ಹೋದನು. ಅಲ್ಲಿ ವಿಕ್ಟೋರಿಯಾ ರಾಣಿಗೆ ತನ್ನ ಮುಟ್ಟಿನ ಸಮಯದಲ್ಲಿ ಉಂಟಾಗುತ್ತಿದ್ದ ಸಮಸ್ಯೆ ಪರಿಹಾರವಾಗಿ ಗಾಂಜಾವನ್ನು ಸೂಚಿಸಲಾಯಿತು. ನಂತರ, ಹೆಚ್ಚಿನ ಅಪಾಯದ ಗರ್ಭಧಾರಣೆಯ ಮಹಿಳೆಯರಿಗೆ ಮತ್ತು ಮಾನಸಿಕ ಆಶ್ರಯದಲ್ಲೂ ಇದನ್ನು ಬಳಸಲಾಯಿತು.

ಭಾರತದಲ್ಲಿ ಗಾಂಜಾ ನಿಷೇಧ ಮಾಡಿದ್ದು ಯಾಕೆ..?

ಭಾರತಲ್ಲಿ ಗಾಂಜಾ ಸೊಪ್ಪನ್ನು ಬೆಳೆಯುವುದು ಹಾಗೂ ವೈದ್ಯಕೀಯವಾಗಿ ಬಳಸುವುದಕ್ಕೆ ಯಾವುದೇ ಅಡ್ಡಿ ಇರಲಿಲ್ಲ. ಆದರೆ ಅಮೆರಿಕ ಸೇರಿದಂತೆ ಮುಂದುವರಿದ ರಾಷ್ಟ್ರಗಳು ಗಾಂಜಾ ಸೇರಿದಂತೆ ಸಾಕಷ್ಟು ಮತ್ತುಕಾರಕ ಸಸ್ಯಗಳ ವಿರುದ್ಧ ಸಮರ ಸಾರಿದ್ದರು. 1961 ರಿಂದಲೂ ಅಮೆರಿಕ ಭಾರತದ ಮೇಲೆ ಒತ್ತಡ ಹೇರುತ್ತಲೇ ಬಂದಿತ್ತು. ಹಾಗಾಗಿ ಭಾರತದ ಸಾಂಪ್ರಾಯಿಕ ಜೀವನ ಕ್ರಮವಾಗಿದ್ದ ಗಾಂಜಾ, ಚರಸ್ ಮತ್ತು ಭಾಂಗ್ ಅನ್ನೂ ನಿಷೇಧ ಮಾಡುವಂತೆ ಒತ್ತಡ ಬಂದಿತ್ತು. 1985ರಲ್ಲಿ ಅನಿವಾರ್ಯವಾಗಿ ರಾಜೀವ್‌ ಗಾಂಧಿ ಸರ್ಕಾರ Narcotic Drugs & Psychotropic Substances (NDPS) ಕಾಯ್ದೆ ಜಾರಿ ಮಾಡಿತು. 100ಕ್ಕೂ ಹೆಚ್ಚು ಕಾಯಿಲೆಗಳಿಗೆ ರಾಮಬಾಣವಾಗಿದ್ದ ಗಾಂಜಾ ಬೆಳೆಯನ್ನು ಭಾರತದಲ್ಲಿ ಬೆಳೆಯದಂತೆ ಮಾಡಲಾಯ್ತು.

ಭಾರತದಲ್ಲಿ ಮತ್ತೆ ಚಾಲ್ತಿಗೆ ಬರುತ್ತಾ ಗಾಂಜಾ ಔಷಧಿ..!

ಈಗಾಗಲೇ ಭಾರತದಲ್ಲಿ ಗಾಂಜಾ ಸಸ್ಯವನ್ನು ಬೆಳೆಯುವುದಕ್ಕೆ ಅವಕಾಶ ಕೊಡಬೇಕು ಎನ್ನುವ ಕೂಗು ಎದ್ದಿದೆ. ಬಾಬಾ ರಾಮದೇವ್‌ ಅವರ ಪತಂಜಲಿ ಸಂಸ್ಥೆ ಗಾಂಜಾ ಬೆಳೆಯಲು ಅವಕಾಶ ಕೊಡುವಂತೆ ಆಗ್ರಹ ಮಾಡಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿದ್ದ ಮನೇಕಾ ಗಾಂಧಿ ಅವರು ಔಷಧಿಕಾರಣಕ್ಕಾಗಿ ಗಾಂಜಾಗೆ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ಯಾವ ದೇಶ ಭಾರತದಲ್ಲಿ ಗಾಂಜಾ ನಿಷೇಧಕ್ಕೆ ಆಗ್ರಹ ಮಾಡಿತ್ತೋ ಅದೇ ದೇಶದಲ್ಲಿ ಇಂದು 2020ರಲ್ಲಿ 44 ಬಿಲಿಯನ್‌ ಗಾಂಜಾ ವ್ಯವಹಾರ ನಡೆದಿದೆ ಎಂದರೆ ನಾವೆಲ್ಲರೂ ನಂಬಲೇ ಬೇಕಿದೆ.

ವಾಷಿಂಗ್ಟನ್‌ ಪೋಸ್ಟ್‌ ಮಾಡಿರುವ ವರದಿಯ ಪ್ರಕಾರ ಗಾಂಜಾ ಕಾನೂನು ಮಾನ್ಯತೆ ಕೊಟ್ಟ ಬಳಿಕ ಶೇಕಡ 15 ರಷ್ಟು ಮದ್ಯ ಸೇವನೆ ಮಾಡುತ್ತಿದ್ದವರು ಕಡಿಮೆ ಆಗಿದ್ದಾರೆ ಎನ್ನಲಾಗಿದೆ. ಜೊತೆಗೆ ಗುಟ್ಕಾ ಹಾಗೂ ಹಲವಾರು ಔಷಧಿಗಳ ಮಾರಾಟದಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ ಎನ್ನುವುದು ಕಂಡು ಬಂದಿದೆ. ಇನ್ನೊಂದು ಅಚ್ಚರಿಯ ವಿವರ ಎಂದರೆ ಗಾಂಜಾ ಸೇವನೆ ಆಲ್ಕೋಹಾಲ್ ಮತ್ತು ಸಿಗರೇಟ್ ಸೇವನೆಗಿಂತ 114 ಪಟ್ಟು ಕಡಿಮೆ ಹಾನಿಕಾರಕ ಎನ್ನಲಾಗಿದೆ.

ಭಾರತದಲ್ಲಿ ಗಾಂಜಾ ಗಿಡವನ್ನು ಬೆಳೆದರೆ ಯಾರಿಗೆ ನಷ್ಟ?

ಗಾಂಜಾ ಸೇವನೆ ಕಾನೂನು ಬಾಹಿರ ಅಲ್ಲ ಎಂದು ಘೋಷಿಸಿದರೆ ಮದ್ಯಪಾನ ಹಾಗೂ ತಂಬಾಕು ಮಾರಾಟದಲ್ಲಿ ಗಣನೀಯ ಕುಸಿತ ಆಗಲಿದೆ. ಆದರೆ, ಭಾರತ ಕೃಷಿ ಆಧಾರಿತ ರಾಷ್ಟ್ರವಾಗಿದ್ದು ಗಾಂಜಾ ಸಸ್ಯವನ್ನು ಬೆಳೆಯುವುದಕ್ಕೆ ಅವಕಾಶ ಕೊಡುವ ಮೂಲಕ ರಫ್ತು ಮಾಡುವ ಅವಕಾಶ ಭಾರತದ ಬಳಿಯಿದೆ. ಸಿಗರೇಟ್‌, ಮದ್ಯ ಹಾಗೂ ತಂಬಾಕು, ಗುಟ್ಕಾ ಮಾರಾಟ ಕಡಿಮೆಯಾದರೂ ಗಾಂಜಾ ಸೇವನೆಯಿಂದ ಅಷ್ಟೇ ಪ್ರಮಾಣದ ಮತ್ತು ಸಿಗಲಿದೆ. ಆದರೆ ಆರೋಗ್ಯಕ್ಕೆ ಹಾನಿಯಾಗುವುದು ತಪ್ಪಲಿದೆ. ಆದರೆ ಮೆಡಿಸಿನ್‌ ಮಾಫಿಯಾ ಹಾಗೂ ಖಾಸಗಿ ಆಸ್ಪತ್ರೆಗಳ ಲಾಬಿಗೆ ಸರ್ಕಾರ ಮಣಿಯದಿದ್ದರೆ ಗಾಂಜಾವನ್ನು ಔಷಧೀಯ ಬಳಕೆಗಾಗಿ ಕಾನೂನು ತಿದ್ದುಪಡಿ ಮಾಡಬಹುದು.

Click here to follow us on Facebook , Twitter, YouTube, Telegram

Pratidhvani
www.pratidhvani.com