ಲಾಕ್‌ಡೌನ್‌ನಿಂದಾಗಿ ಕಟಾವು ಮಾಡಲಾಗದೇ ತೋಟದಲ್ಲಿಯೇ ನಾಶವಾಗತ್ತಿರುವ ದ್ರಾಕ್ಷಿ ಕೃಷಿ
Admin
ಅಭಿಮತ

ಲಾಕ್‌ಡೌನ್‌ನಿಂದಾಗಿ ಕಟಾವು ಮಾಡಲಾಗದೇ ತೋಟದಲ್ಲಿಯೇ ನಾಶವಾಗತ್ತಿರುವ ದ್ರಾಕ್ಷಿ ಕೃಷಿ

ಲಾಕ್‌ಡೌನ್‌ನಿಂದಾಗಿ ದ್ರಾಕ್ಷಿ ಬೆಳಗಾರರ ಸಂಕಷ್ಟ ಹೇಳತೀರದಾಗಿದೆ. ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಹೋಬಳಿಯ ಬಳಿ ಸುಮಾರು ಐವತ್ತು ಎಕರೆಗೂ ಮಿಕ್ಕಿರುವ ದ್ರಾಕ್ಷಿ ಬೆಳೆ ಕಟಾವು ಮಾಡಲಾಗದೇ, ತೋಟದಲ್ಲಿಯೇ ಕೊಳೆಯುವ ಪರಿಸ್ಥಿತಿ ಎದುರಾಗಿದೆ.

ಲಾಯ್ಡ್‌ ಡಾಯಸ್

ಲಾಯ್ಡ್‌ ಡಾಯಸ್

ಒಂದು ಎಕರೆಗೆ ಕಡಿಮೆಯೆಂದರೂ ಒಂದು ಲಕ್ಷ ಖರ್ಚಾಗುತ್ತದೆ. ಕಟಾವು ಮಾಡದಿದ್ದರೆ ಸಂಪೂರ್ಣ ನಷ್ಟವಾಗುತ್ತದೆ. ಈಗಾಗಲೇ ಕಟಾವು ಮಾಡಬೇಕಾದ ಸಮಯ ಬಂದಿದೆ. ಇನ್ನು ನಾಲ್ಕು ದಿನದಲ್ಲಿ ಕಟಾವು ಮಾಡದಿದ್ದರೆ ದ್ರಾಕ್ಷೆಗಳು ಉದುರಿಹೋಗುತ್ತದೆ. ನಮ್ಮ ಹೋಬಳಿಯಲ್ಲಿ ಸುಮಾರು ಐವತ್ತು ಎಕರೆ ಜಮೀನಿನಲ್ಲಿ ದ್ರಾಕ್ಷಿ ಬೆಳೆ ಬೆಳೆದಿದ್ದಾರೆ. ಎಲ್ಲವೂ ನಷ್ಟವಾಗಲಿದೆಯೆಂದು ದ್ರಾಕ್ಷಿ ಬೆಳೆಗಾರ ಹರೀಶ್‌ ಹೇಳಿದ್ದಾರೆ.ನಮ್ಮ ಕಷ್ಟಗಳನ್ನು ಯಾರ ಬಳಿಯೂ ಪ್ರಯೋಜನವಿಲ್ಲ, ನಮ್ಮ ಅಹವಾಲು ಸ್ವೀಕರಿಸಿದವರು ಯಾರು ನಮ್ಮ ಕಡೆ ತಿರುಗಿ ನೋಡುವುದಿಲ್ಲವೆಂದು ಅಹವಾಲು ತೋಡಿಕೊಂಡರು.

Click here Support Free Press and Independent Journalism

Pratidhvani
www.pratidhvani.com