ಛತ್ತೀಸ್‌ಘಡ್‌: ತಮ್ಮ ವಶದಲ್ಲಿರುವ ಯೋಧನ ಭಾವಚಿತ್ರ ಬಿಡುಗಡೆಗೊಳಿಸಿದ ನಕ್ಸಲರು

ನಿಷೇಧಿತ ಸಂಘಟನೆಯಾದ ದಂಡಕಾರಣ್ಯ ವಿಶೇಷ ವಲಯ ಸಮಿತಿ(DSZC) ಅಪಹರಣ ಮಾಡಿದ ಯೋಧನ ಹಸ್ತಾಂತರ ಕುರಿತು ಹಾಗು ಸರ್ಕಾರ ಈಡೇರಿಸಿಬೇಕಾದ ಬೇಡಿಕೆ ಮುಂದಿಟ್ಟು, ಏಪ್ರಿಲ್‌ 6 ರಂದು ಪತ್ರಿಕಾ ಪ್ರಕಟಣೆ ಹೊರಡಿಸಿದ ಮರುದಿನವೇ ಸೆರೆಯಲ್ಲಿರುವ ಯೋಧನ ಭಾವಚಿತ್ರ ಬಿಡುಗಡೆಗೊಳಿಸಿದೆ.
ಛತ್ತೀಸ್‌ಘಡ್‌: ತಮ್ಮ ವಶದಲ್ಲಿರುವ ಯೋಧನ ಭಾವಚಿತ್ರ ಬಿಡುಗಡೆಗೊಳಿಸಿದ ನಕ್ಸಲರು

ಛತ್ತೀಸ್‌ಘಡದಲ್ಲಿ ನಕ್ಸಲರು ಹಾಗೂ ಭದ್ರತಾ ಪಡೆಯ ನಡುವೆ ನಡೆದೆ ಕಾಳಗದಲ್ಲಿ ಕಾಣೆಯಾದ ಯೋಧರೊಬ್ಬರು ತಮ್ಮ ವಶದಲ್ಲಿರುವುದನ್ನು ನಕ್ಸಲರ ತಂಡ ಧೃಡಪಡಿಸಿದೆ. ತಮ್ಮ ವಶದಲ್ಲಿರುವ ಯೋಧನ ಭಾವಚಿತ್ರವನ್ನು ಹೊರಡಿಸಿರುವ ನಕ್ಸ ಗುಂಪು, ಯೋಧನನ್ನು ಬಿಡುಗಡೆಗೊಳಿಸಲು ಮಧ್ಯವರ್ತಿಯೊಬ್ಬರನ್ನು ಕಳಿಸುವಂತೆ ಬೇಡಿಕೆ ಇಟ್ಟಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಏಪ್ರಿಲ್‌ 3 ರಂದು ಛತ್ತೀಸ್‌ಘಡದ ಸುಕ್ಮಾ ಮತ್ತು ಬಿಜಾಪುರ ಜಿಲ್ಲೆಯ ಗಡಿಭಾಗದ ಅರಣ್ಯ ಪ್ರದೇಶದಲ್ಲಿ ಭದ್ರತಾ ಪಡೆ ಮತ್ತು ಮಾವೋವಾದಿಗಳ ನಡುವೆ ಗುಂಡಿನ ದಾಳಿ ನಡೆದಿದ್ದು, ಯೋಧರೊಬ್ಬರು ಕಾಣೆಯಾಗಿದ್ದರು. ಹಾಗು ದಾಳಿಯಲ್ಲಿ 22 ಭದ್ರತಾ ಸಿಬ್ಬಂದಿಗಳು ಹತಾತ್ಮರಾಗಿದ್ದರು. ನಂತರ ಕಾಣೆಯಾದ ಯೋಧನನ್ನು ಮಾವೋವಾದಿಗಳು ಅಪಹರಣ ಮಾಡಿರುವುದಾಗಿ ತಿಳಿದುಬಂದಿತ್ತು.

ನಿಷೇಧಿತ ಸಂಘಟನೆಯಾದ ದಂಡಕಾರಣ್ಯ ವಿಶೇಷ ವಲಯ ಸಮಿತಿ(DSZC) ಅಪಹರಣ ಮಾಡಿದ ಯೋಧನ ಹಸ್ತಾಂತರ ಕುರಿತು ಹಾಗು ಸರ್ಕಾರ ಈಡೇರಿಸಿಬೇಕಾದ ಬೇಡಿಕೆ ಮುಂದಿಟ್ಟು, ಏಪ್ರಿಲ್‌ 6 ರಂದು ಪತ್ರಿಕಾ ಪ್ರಕಟಣೆ ಹೊರಡಿಸಿದ ಮರುದಿನವೇ ಸೆರೆಯಲ್ಲಿರುವ ಯೋಧನ ಭಾವಚಿತ್ರ ಬಿಡುಗಡೆಗೊಳಿಸಿದೆ. ಈ ಯೋಧ ಸಿಆರ್‌ಪಿಎಫ್‌ನ 210 ನೇ ಕೋಬ್ರಾ ಬೆಟಾಲಿಯನ್‌ನ ಕಾನ್‌ಸ್ಟೆಬಲ್ ರಾಕೇಶ್ವರ್ ಸಿಂಗ್ ಮನ್ಹಾಸ್ ಎಂದು ಗುರುತಿಸಲಾಗಿದೆ.

ಯೋಧ ರಾಕೇಶ್ವರ್ ಸಿಂಗ್ ಮನ್ಹಾಸ್ ಮಾವೋವಾದಿಗಳ ವಶದಲ್ಲಿರುವುದರ ಬಗ್ಗೆ ಪತ್ರಕರ್ತರೊಬ್ಬರಿಗೆ ಏಪ್ರಿಲ್‌ 5 ರಂದು ಮಾಹಿತಿ ಸಿಕ್ಕಿದ್ದು, ಏಪ್ರಿಲ್‌ 6 ರಂದು ಮಾವೋವಾದಿಗಳು ಯೋಧ ನಮ್ಮ ಸೆರೆಯಲ್ಲಿ ಸುರಕ್ಷಿತವಾಗಿದ್ದು, ಆತನಿಗೆ ಯಾವುದೇ ರೀತಿಯ ತೊಂದರೆ ಮಾಡಿಲ್ಲ ಎಂದು ಧೃಡಪಡಿಸಲಾಗಿದೆ. ಯೋಧನನ್ನು ಸುರಕ್ಷಿತವಾಗಿ ಬಿಡುಗಡೆಗೊಳಿಸಲು ಸರ್ಕಾರ ಮಧ್ಯವರ್ತಿಯೊಬ್ಬರನ್ನು ನೇಮಕ ಮಾಡಬೇಕೆಂದು ತಿಳಿಸಿದೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com