ಮೊಯೀನ್‌ ಅಲಿ ISIS‌ ಸೇರಬೇಕಿತ್ತು ಎಂದ ತಸ್ಲೀಮಾ ನಸ್ರೀನ್:‌ ಇಂಗ್ಲೆಂಡ್‌ ಕ್ರಿಕೆಟಿಗರಿಂದ ತಪರಾಕಿ

ತಸ್ಲೀಮಾ ನಸ್ರೀನ್‌ ಟ್ವೀಟ್‌ ವಿವಾದವಾಗುತ್ತಿರುವಂತೆಯೇ, ಇಂಗ್ಲೆಂಡ್‌ ಕ್ರಿಕೆಟಿಗರಾದ ಜೊಫ್ರಾ ಆರ್ಚರ್‌, ಸಾಮ್‌ ಬಿಲ್ಲಿಂಗ್ಸ್‌, ಬೆನ್‌ ಡಕೆಟ್‌, ಸಾಕಿಬ್‌ ಮಹಮೂದ್‌ ಮೊದಲಾದವರು ತಮ್ಮ ಸಹ-ಆಟಗಾರನ ಬೆಂಬಲಕ್ಕೆ ನಿಂತಿದ್ದಾರೆ.
ಮೊಯೀನ್‌ ಅಲಿ ISIS‌ ಸೇರಬೇಕಿತ್ತು ಎಂದ ತಸ್ಲೀಮಾ ನಸ್ರೀನ್:‌ ಇಂಗ್ಲೆಂಡ್‌ ಕ್ರಿಕೆಟಿಗರಿಂದ ತಪರಾಕಿ

ಬಾಂಗ್ಲಾದೇಶ ಮೂಲದ ವಿವಾದಾತ್ಮಕ ಲೇಖಕಿ ತಸ್ಲೀಮಾ ನಸ್ರೀನ್‌ ಮತ್ತೆ ವಿವಾದವನ್ನು ಮೇಲೆ ಎಳೆದುಕೊಂಡಿದ್ದಾರೆ. ಗುರುವಾರ, ಇಂಗ್ಲೆಂಡ್‌ ಕ್ರಿಕೆಟಿಗ ಮೊಯೀನ್‌ ಅಲಿ ವಿರುದ್ಧ ಮಾಡಿರುವ ಟ್ವೀಟ್‌ ಅಂತರಾಷ್ಟ್ರೀಯ ಮಟ್ಟದಲ್ಲಿ ವಿವಾದದ ಅಲೆಯನ್ನೇ ಎಬ್ಬಿಸಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಮುಂಬರುವ ಐಪಿಎಲ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ಪರ ಆಡಲಿರುವ ಮೊಯೀನ್‌ ಅಲಿ, ಮದ್ಯದ ಪ್ರಾಯೋಜಕತ್ವವನ್ನು ತನ್ನ ಜೆರ್ಸಿಯಲ್ಲಿ ಹಾಕಲು ನಿರಾಕರಿಸಿ ಸುದ್ದಿಯಲ್ಲಿದ್ದರು. ಮೊಯೀನ್‌ ಅಲಿ ನಿಲುವಿನ ಕುರಿತಂತೆ ಪರ-ವಿರೋಧ ಚರ್ಚೆ ಚಾಲ್ತಿಯಲ್ಲಿರುವಂತೆಯೇ ತಸ್ಲೀಮಾ ನಸ್ರೀನ್‌ ಮಾಡಿರುವ ಟ್ವೀಟ್‌ ತೀವ್ರ ವಿವಾದ ಸ್ವರೂಪ ಪಡೆದುಕೊಂಡಿದೆ.

ಮುಸ್ಲಿಂ ಮೂಲಭೂತವಾದವನ್ನು ವಿರುದ್ಧ ತೀಕ್ಷ್ಣ ಪ್ರತಿಕ್ರಿಯೆ ನೀಡುತ್ತಾ ಬಂದಿರುವ ನಸ್ರೀನ್‌, ಮೊಯೀನ್‌ ಅವರ ನಿಲುವನ್ನು ಮುಸ್ಲಿಂ ಮೂಲಭೂತವೆಂದು ಪರಿಗಣಿಸಿ, ʼಒಂದು ವೇಳೆ ಮೊಯೀನ್‌ ಕ್ರಿಕೆಟ್‌ ಆಟದಲ್ಲಿ ತೊಡಗಿಸಿಕೊಳ್ಳದಿದ್ದರೆ, ಅವರು ಐಸಿಸ್‌ (ಭಯೋತ್ಪಾದಕ ಸಂಘಟನೆ) ಜೊತೆ ಸೇರಲು ಸಿರಿಯಾಕ್ಕೆ ಹೋಗುತ್ತಿದ್ದರುʼ ಎಂದು ಟ್ವೀಟ್‌ ಮಾಡಿದ್ದರು.

ತಸ್ಲೀಮಾ ನಸ್ರೀನ್‌ ಟ್ವೀಟ್‌ ವಿವಾದವಾಗುತ್ತಿರುವಂತೆಯೇ, ಇಂಗ್ಲೆಂಡ್‌ ಕ್ರಿಕೆಟಿಗರಾದ ಜೊಫ್ರಾ ಆರ್ಚರ್‌, ಸಾಮ್‌ ಬಿಲ್ಲಿಂಗ್ಸ್‌, ಬೆನ್‌ ಡಕೆಟ್‌, ಸಾಕಿಬ್‌ ಮಹಮೂದ್‌ ಮೊದಲಾದವರು ತಮ್ಮ ಸಹ-ಆಟಗಾರನ ಬೆಂಬಲಕ್ಕೆ ನಿಂತಿದ್ದಾರೆ. ಮೊಯೀನ್‌ ವಿರುದ್ಧ ಅನಾರೋಗ್ಯಕರ ಟ್ವೀಟ್‌ ಹಾಕಿರುವ ತಸ್ಲೀಮಾ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ವ್ಯಾಪಕ ಆಕ್ರೋಶಕ್ಕೆ ತುತ್ತಾದ ನಸ್ರೀನ್‌ ಟ್ವೀಟ್‌ ಅನ್ನು, ಹಲವಾರು ಮಂದಿ ವಿರೋಧಿಸಿದ್ದು, ನಸ್ರೀನ್‌ ಖಾತೆ ಹಾಗೂ ಟ್ವೀಟ್‌ ಅನ್ನು ರಿಪೋರ್ಟ್‌ ಮಾಡಿದ್ದಾರೆ. ಜಾಲಾತಾಣದಾದ್ಯಂತ ಟೀಕೆಗೊಳಗಾದ ನಸ್ರೀನ್‌, ತಮ್ಮ ಟ್ವೀಟನ್ನು ಅಳಿಸಿ ಹಾಕಿ ಸ್ಪಷ್ಟಣೆ ನೀಡಿದ್ದು, ಇದೊಂದು ತಮಾಷೆಗೆ ಮಾಡಿದ್ದ ಟ್ವೀಟ್‌ ಆಗಿತ್ತು ಎಂದು ಸಮಜಾಯಿಷಿ ನೀಡಿದ್ದಾರೆ.

ಆದರೆ ಈ ಸಮಜಾಯಿಷಿಯನ್ನು ಒಪ್ಪದ ವೇಗಿ ಸಾಕಿಬ್‌ ಮಹ್ಮೂದ್‌, ತಸ್ಲೀಮಾ ನಸ್ರೀನ್‌ ಅನಾರೋಗ್ಯಕರ ಹಾಸ್ಯಪ್ರಜ್ಞೆಯಿಂದ ಬಳಲುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಸ್ಯಾಮ್ ಬಿಲ್ಲಿಂಗ್ಸ್ ಮತ್ತು ಸಾಕಿಬ್ ಮಹಮೂದ್ ಅವರು ನಸ್ರೀನ್ ಅವರ ಟ್ವೀಟ್‌ ಅನ್ನು "ಅಸಹ್ಯಕರ" ಎಂದು ಬಣ್ಣಿಸಿದ್ದಾರೆ. ಇನ್ನೋರ್ವ ಆಟಗಾರ ಜೊಫ್ರಾ ಆರ್ಚರ್‌ ನೀವು ಆರಾಮವಾಗಿದ್ದೀರ ಎಂದು ನನಗನ್ನಿಸುವುದಿಲ್ಲ ಎಂದು ನಸ್ರೀನ್‌ಗೆ ಪ್ರತಿಕ್ರಿಯಿಸಿದ್ದಾರೆ.

ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಬೆನ್‌ ಡಕೆಟ್‌, ಇದು ಈ ಅಪ್ಲಿಕೇಶನ್‌ನ ಸಮಸ್ಯೆ. ಇಲ್ಲಿ ಜನರು ಈ ರೀತಿಯ ವಿಷಯವನ್ನು ಹೇಳಲು ಸಾಧ್ಯವಾಗುತ್ತದೆ. ಅಸಹ್ಯಕರ. ಬದಲಾವಣೆಯಾಗಬೇಕಿದೆ, ದಯವಿಟ್ಟು ಈ ಖಾತೆಯನ್ನು ರಿಪೋರ್ಟ್‌ ಮಾಡಿ! ಎಂದಿದ್ದಾರೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com