ಪಂಚರಾಜ್ಯ ಚುನಾವಣೆ: ಮತದಾನದ ಹಕ್ಕು ಚಲಾಯಿಸಲಿರುವ 5 ರಾಜ್ಯಗಳ ಸುಮಾರು 20 ಕೋಟಿ ಮತದಾರರು

ಇಂದು ಬೆಳಿಗ್ಗೆ 9 ಗಂಟೆಯ ವೇಳೆಗೆ ತಮಿಳುನಾಡಿನಲ್ಲಿ 13.8% ಮತದಾರರು ಮತದಾನದಲ್ಲಿ ಭಾಗವಹಿಸಿದ್ದಾರೆ. ಕೇರಳದಲ್ಲಿ 13.88, ಪಶ್ಚಿಮ ಬಂಗಾಳದಲ್ಲಿ 14.62 ಮತ್ತು ಅಸ್ಸಾಂನಲ್ಲಿ 12.83 ಶೇಕಡಾ ಮತದಾನವಾಗಿದೆ. ಎಲ್ಲಾ ರಾಜ್ಯಗಳ ಫಲಿತಾಂಶವು ಮೇ 2ರಂದು ಪ್ರಕಟವಾಗಲಿದೆ.
ಪಂಚರಾಜ್ಯ ಚುನಾವಣೆ: ಮತದಾನದ ಹಕ್ಕು ಚಲಾಯಿಸಲಿರುವ 5 ರಾಜ್ಯಗಳ ಸುಮಾರು 20 ಕೋಟಿ ಮತದಾರರು

ಪ್ರಜಾಪ್ರಭುತ್ವದ ಹಬ್ಬವೆಂದೇ ಹೇಳಲಾಗುವ ಚುನಾವಣೆಯಲ್ಲಿ ಇಂದು ದೇಶದ ಸುಮಾರು 20 ಕೋಟಿ ಮತದಾರರು ಪಾಲ್ಗೊಳ್ಳಲಿದ್ದಾರೆ. ಅಸ್ಸಾಂ, ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು ಮತ್ತು ಪುದುಚೆರಿಯಲ್ಲಿ ನಡೆಯಲಿರುವ ಚುನಾವಣೆಯನ್ನು ಇಡೀ ದೇಶವೇ ಎದುರು ನೋಡುತ್ತಿದೆ. ಈ ರಾಜ್ಯಗಳಲ್ಲಿ ಕೇರಳ, ತಮಿಳುನಾಡು ಮತ್ತು ಪುದುಚೆರಿಯಲ್ಲಿ ಒಂದೇ ಹಂತದಲ್ಲಿ ಮತದಾನ ಪ್ರಕ್ರಿಯೆ ಮುಕ್ತಾಯವಾಗಲಿದ್ದು, ಅಸ್ಸಾಂಗೆ ಇದು ಮೂರನೇ ಹಾಗೂ ಕೊನೇಯ ಹಂತವಾಗಿದೆ. ಪಶ್ಚಿಮ ಬಂಗಾಳದಲ್ಲಿ ಇನ್ನೂ 5 ಹಂತದ ಮತದಾನ ಬಾಕಿಯಿದೆ.

ಪಶ್ಚಿಮ ಬಂಗಾಳದ 31 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ತೃಣಮೂಲ ಕಾಂಗ್ರೆಸ್‌ ಹಾಗೂ ಬಿಜೆಪಿ ಈ ಎಲ್ಲಾ 31 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದೆ. ಎಡಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿರುವ ಕಾಂಗ್ರೆಸ್‌ 7 ಸ್ಥಾನಗಳಲ್ಲಿ, ಸಿಪಿಎಂ 13 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದ್ದರೆ, ಉಳಿದ ಸ್ಥಾನಗಳಲ್ಲಿ ಸಣ್ಣ ಪ್ರಾದೇಶಿಕ ಪಕ್ಷಗಳಾದ ಐಎಸ್‌ಎಫ್‌, ಎಐಎಫ್‌ಬಿ ಮತ್ತು ಆರ್‌ಎಸ್‌ಬಿ ಸ್ಪರ್ಧಿಸುತ್ತಿದೆ. 2016ರಲ್ಲಿ ನಡೆದ ಚುನಾವಣೆಯಲ್ಲಿ ಈ ಕ್ಷೇತ್ರಗಳಲ್ಲಿ ಟಿಎಂಸಿ 29 ಸ್ಥಾನಗಳನ್ನು ಗೆದ್ದುಕೊಂಡಿತ್ತು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಪಂಚರಾಜ್ಯ ಚುನಾವಣೆ: ಮತದಾನದ ಹಕ್ಕು ಚಲಾಯಿಸಲಿರುವ 5 ರಾಜ್ಯಗಳ ಸುಮಾರು 20 ಕೋಟಿ ಮತದಾರರು
ತಮಿಳುನಾಡು ಚುನಾವಣೆ ಗೆಲ್ಲಲು ಕಾಂಗ್ರೆಸ್‌ ಭರ್ಜರಿ ತಯಾರಿ

ತಮಿಳುನಾಡಿನಲ್ಲಿ 234 ಕ್ಷೇತ್ರಗಳಿಗೆ ಒಂದೇ ಹಂತದ ಚುನಾವಣೆ ನಡೆಯಲಿದ್ದು, ಡಿಎಂಕೆ ಮತ್ತು ಎಡಿಎಂಕೆ ನಡುವೆ ತೀವ್ರ ಹಣಾಹಣಿ ನಿರೀಕ್ಷಿಸಲಾಗುತ್ತಿದೆ. ಎಡಿಎಂಕೆ 191 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದ್ದರೆ, ಮಿತ್ರ ಪಕ್ಷಗಳಾದ ಪಿಎಂಕೆ ಮತ್ತು ಬಿಜೆಪಿ ಕ್ರಮವಾಗಿ 23 ಮತ್ತು 20 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ.

ಪಂಚರಾಜ್ಯ ಚುನಾವಣೆ: ಮತದಾನದ ಹಕ್ಕು ಚಲಾಯಿಸಲಿರುವ 5 ರಾಜ್ಯಗಳ ಸುಮಾರು 20 ಕೋಟಿ ಮತದಾರರು
ತಮಿಳುನಾಡು ಚುನಾವಣೆ ಗೆಲ್ಲಲು ಬಿಜೆಪಿ ತಯಾರಿ; ಮಿಷನ್‌ 'ಟಾರ್ಗೆಟ್‌ 200'

ಡಿಎಂಕೆ ಮೈತ್ರಿಕೂಟದಲ್ಲಿಯೂ, ಡಿಎಂಕೆ 188 ಸ್ಥಾನಗಳಲ್ಲಿ ಸ್ಪರ್ಧಿಸಿದರೆ, ಕಾಂಗ್ರೆಸ್‌ 25 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. ಉಳಿದ ಕ್ಷೇತ್ರಗಳು ಇತರೆ ಪ್ರಾದೇಶಿಕ ಪಕ್ಷಗಳಿಗೆ ಹಂಚಿಕೆ ಮಾಡಲಾಗಿದೆ. ಆದರೆ, 142 ಸ್ಥಾನಗಳಲ್ಲಿ ಸ್ಪರ್ಧಿಸಲಿರುವ ಕಮಲ್‌ ಹಾಸನ್‌ ನೇತೃತ್ವದ ಎಂಎನ್‌ಎಂ ಹಾಗೂ ಇದರ ಮಿತ್ರ ಪಕ್ಷಗಳು ಈ ಬಾರಿ ಚುನಾವಣೆಯಲ್ಲಿ ಎಷ್ಟು ಮತಗಳನ್ನು ಪಡೆಯುತ್ತಾರೆ ಎಂಬುದು ನಿಜಕ್ಕೂ ಕುತೂಹಲ ಕೆರಳಿಸಿದೆ.

ಪಂಚರಾಜ್ಯ ಚುನಾವಣೆ: ಮತದಾನದ ಹಕ್ಕು ಚಲಾಯಿಸಲಿರುವ 5 ರಾಜ್ಯಗಳ ಸುಮಾರು 20 ಕೋಟಿ ಮತದಾರರು
ತಮಿಳುನಾಡು ಚುನಾವಣೆ: ಎಲೆ ಚಿಗುರುವುದೇ? ಅಥವಾ ಸೂರ್ಯ ಉದಯಿಸುವನೇ?

ಇನ್ನು ಕೇರಳದ 140 ಕ್ಷೇತ್ರಗಳಿಗೂ ಒಂದೇ ಹಂತದಲ್ಲಿ ಮತದಾನವಾಗಲಿದೆ. ಪಿನರಾಯಿ ವಿಜಯನ್‌ ನೇತೃತ್ವದ ಎಲ್‌ಡಿಎಫ್‌ ಈ ಭಾರಿಯೂ ಅಧಿಕಾರವನ್ನು ಉಳಿಸಿಕೊಳ್ಳುವ ವಿಶ್ವಾಸದಲ್ಲಿದೆ. ಸಿಪಿಎಂ 77 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದ್ದು, ಸಿಪಿಐ 21 ಸ್ಥಾನಗಳಲ್ಲಿ ಸ್ಪರ್ಧೆ ಮಾಡುತ್ತಿದೆ. ಜೆಡಿಎಸ್‌ ನಾಲ್ಕು ಹಾಗೂ ಎನ್‌ಸಿಪಿ ಮೂರು ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ. ಇದರೊಂದಿಗೆ 11 ಸ್ವತಂತ್ರ ಅಭ್ಯರ್ಥಿಗಳನ್ನು ಕೂಡಾ ಎಲ್‌ಡಿಎಫ್‌ ಬೆಂಬಲಿಸುತ್ತಿದೆ.

ಪಂಚರಾಜ್ಯ ಚುನಾವಣೆ: ಮತದಾನದ ಹಕ್ಕು ಚಲಾಯಿಸಲಿರುವ 5 ರಾಜ್ಯಗಳ ಸುಮಾರು 20 ಕೋಟಿ ಮತದಾರರು
ಕೇರಳ ಚುನಾವಣೆ; ಎಡ ಮೈತ್ರಿ ಗೆಲುವು, ಕಾಂಗ್ರೆಸ್‌ಗೆ ಭಾರೀ ಹಿನ್ನಡೆ, ಪ್ರಗತಿ ಸಾಧಿಸಿದ ಬಿಜೆಪಿ

ಇನ್ನೊಂದೆಡೆ ಯುಡಿಎಫ್‌ ಮೈತ್ರಿಕೂಟದಲ್ಲಿ ಕಾಂಗ್ರೆಸ್‌ 93 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದ್ದರೆ, ಐಯುಎಂಎಲ್‌ 25 ಮತ್ತು ಕೇರಳ ಕಾಂಗ್ರೆಸ್‌ 10 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ. ಪ್ರಸ್ತುತ ಕೇರಳದಲ್ಲಿ ಕೇವಲ ಒಂದು ಸ್ಥಾನ ಮಾತ್ರ ಹೊಂದಿರುವ ಬಿಜೆಪಿ 113 ಸ್ಥಾನಗಳಿಗೆ ಸ್ಪರ್ಧಿಸುತ್ತಿದೆ.

ಪಂಚರಾಜ್ಯ ಚುನಾವಣೆ: ಮತದಾನದ ಹಕ್ಕು ಚಲಾಯಿಸಲಿರುವ 5 ರಾಜ್ಯಗಳ ಸುಮಾರು 20 ಕೋಟಿ ಮತದಾರರು
ಕೇರಳ: ಗೃಹಿಣಿಯರಿಗೆ ಪೆನ್ಷನ್, ಯುವಕರಿಗೆ 40 ಲಕ್ಷ ಉದ್ಯೋಗ; LDF ಭರವಸೆ

ಅಸ್ಸಾಂನ ಕೊನೆಯ 40 ವಿಧಾನಸಭಾ ಕ್ಷೇತ್ರಗಳಿಗೆ ಇಂದು ಚುನಾವಣೆ ನಡೆಯಲಿದೆ. ಪ್ರಮುಖ ವಿರೋಧ ಪಕ್ಷವಾಗಿರುವ ಕಾಂಗ್ರೆಸ್‌ 24 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದ್ದರೆ ಮೈತ್ರಿ ಪಕ್ಷವಾಗಿರುವ ಬದ್ರುದ್ದಿನ್‌ ಅಜ್ಮಲ್‌ ಅವರ ಎಐಯುಎಫ್‌ 12 ಸ್ಥಾನಗಳಲ್ಲಿ ಸ್ಪರ್ಧೆ ಮಾಡುತ್ತಿದೆ. ಬಿಪಿಎಫ್‌ ಹಾಗೂ ಸಿಪಿಎಂ ತಲಾ ಒಂದು ಸ್ಥಾನಗಳಲ್ಲಿ ಸ್ಪರ್ಧೆ ಮಾಡುತ್ತಿವೆ.

ಪಂಚರಾಜ್ಯ ಚುನಾವಣೆ: ಮತದಾನದ ಹಕ್ಕು ಚಲಾಯಿಸಲಿರುವ 5 ರಾಜ್ಯಗಳ ಸುಮಾರು 20 ಕೋಟಿ ಮತದಾರರು
ಕಾಂಗ್ರೆಸ್ ಮತ್ತು ಬಿಜೆಪಿ, ಎರಡೂ ಪಕ್ಷಗಳಲ್ಲೂ ಭರವಸೆ ಮೂಡಿಸಿರುವ ಅಸ್ಸಾಂ

ಬಿಜೆಪಿ 20 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದ್ದು, ಇದರ ಮೈತ್ರಿ ಪಕ್ಷಗಳಾದ ಎಜಿಪಿ ಹಾಗೂ ಯುಪಿಪಿಎಲ್‌ ಕ್ರಮವಾಗಿ 13 ಮತ್ತು 8 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದೆ. 2016 ಬಿಜೆಪಿ-ಎಜಿಪಿ ಮೈತ್ರಿಕೂಟವು ಈ 40 ಕ್ಷೇತ್ರಗಳಲ್ಲಿ 15ನ್ನು ಗೆದ್ದುಕೊಂಡಿತ್ತು. ಕಾಂಗ್ರೆಸ್‌ 11 ಗೆದ್ದರೆ, ಬಿಪಿಎಫ್‌ 8 ಕ್ಷೇತ್ರಗಳಲ್ಲಿ ಮತ್ತು ಎಐಯುಡಿಎಫ್‌ ಆರು ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು.

ಪಂಚರಾಜ್ಯ ಚುನಾವಣೆ: ಮತದಾನದ ಹಕ್ಕು ಚಲಾಯಿಸಲಿರುವ 5 ರಾಜ್ಯಗಳ ಸುಮಾರು 20 ಕೋಟಿ ಮತದಾರರು
WB‌ & ಅಸ್ಸಾಂ: ಮೊದಲ ದಿನವೇ ಕೇಳಿ ಬಂದ ಗುಂಡಿನ ಸದ್ದು: ಒಂದು ಮತಗಟ್ಟೆಯಲ್ಲಿ ಮತದಾನ ರದ್ದು

ನಾಟಕೀಯ ಬೆಳವಣಿಗೆಗಳಿಂದ ಪತನಗೊಂಡಿದ್ದ ಪುದುಚೆರಿ ಸರ್ಕಾರವನ್ನು ಸದ್ಯಕ್ಕೆ ರಾಷ್ಟ್ರಪತಿಗಳೇ ನಡೆಸುತ್ತಿದ್ದಾರೆ. ಇಂದು 30 ಸ್ಥಾನಗಳಿಗೆ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, 14 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಸ್ಪರ್ಧೆ ಮಾಡುತ್ತಿದೆ. 13 ಕ್ಷೇತ್ರಗಳಲ್ಲಿ ಡಿಎಂಕೆ ಸ್ಪರ್ಧಿಸುತ್ತಿದೆ. ಉಳಿದ ಸ್ಥಾನಗಳನ್ನು ಮೈತ್ರಿಕೂಟದ ಇತರ ಪಕ್ಷಗಳಿಗೆ ಹಂಚಿಕೆ ಮಾಡಲಾಗಿದೆ.

ಎನ್‌ಡಿಎ ಮೈತ್ರಿಕೂಟದಲ್ಲಿ ಬಿಜೆಪಿ 9 ಸ್ಥಾನಗಳಲ್ಲಿ ಸ್ಪರ್ಧೆ ಮಾಡುತ್ತಿದ್ದು, 14 ಕ್ಷೇತ್ರಗಳಲ್ಲಿ ಎಡಿಎಂಕೆ ಸ್ಪರ್ಧಿಸುತ್ತಿದೆ. ಉಳಿದ ಸ್ಥಾನಗಳನ್ನು ಮೈತ್ರಿಕೂಟದ ಇತರ ಪಕ್ಷಗಳಿಗೆ ಹಂಚಿಕೆ ಮಾಡಲಾಗಿದೆ.

ಇಂದು ಬೆಳಿಗ್ಗೆ 9 ಗಂಟೆಯ ವೇಳೆಗೆ ತಮಿಳುನಾಡಿನಲ್ಲಿ 13.8% ಮತದಾರರು ಮತದಾನದಲ್ಲಿ ಭಾಗವಹಿಸಿದ್ದಾರೆ. ಕೇರಳದಲ್ಲಿ 13.88, ಪಶ್ಚಿಮ ಬಂಗಾಳದಲ್ಲಿ 14.62 ಮತ್ತು ಅಸ್ಸಾಂನಲ್ಲಿ 12.83 ಶೇಕಡಾ ಮತದಾನವಾಗಿದೆ. ಎಲ್ಲಾ ರಾಜ್ಯಗಳ ಫಲಿತಾಂಶವು ಮೇ 2ರಂದು ಪ್ರಕಟವಾಗಲಿದೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com