ಜಾಟ್-ಮುಸ್ಲಿಂ-ದಲಿತ ಸಮುದಾಯಗಳನ್ನು ಒಗ್ಗೂಡಿಸಲು 'ಬೈಚರಾ ಜಿಂದಾಬಾದ್' ಆಯೋಜಿಸಿದ RLD

ಸರ್ಕಾರದ ವಿರುದ್ಧ ಎಲ್ಲಾ ಪ್ರತಿಪಕ್ಷಗಳನ್ನೂ ಒಂದುಗೂಡಿಸುವ ಸಮಯ ಬಂದಿದೆ. ಏಕತೆ ನಮ್ಮ ಮೊದಲ ಆದ್ಯತೆಯಾಗಿದೆ. ಆದ್ದರಿಂದ ನಾವು ಈ ಅಭಿಯಾನವನ್ನು ಯೋಜಿಸುತ್ತಿದ್ದೇವೆ ಎಂದು RLD ಉಪಾಧ್ಯಕ್ಷ ಹೇಳಿದ್ದಾರೆ
ಜಾಟ್-ಮುಸ್ಲಿಂ-ದಲಿತ ಸಮುದಾಯಗಳನ್ನು ಒಗ್ಗೂಡಿಸಲು 'ಬೈಚರಾ ಜಿಂದಾಬಾದ್' ಆಯೋಜಿಸಿದ RLD

ದೇಶದ ಪಂಚ ರಾಜ್ಯಗಳಲ್ಲಿ ಚುನಾವಣೆ ಪ್ರಕ್ರಿಯೆ ನಡೆಯುತ್ತಿರುವ ಬೆನ್ನಲ್ಲೇ ಉತ್ತರ ಪ್ರದೇಶದಲ್ಲಿ ರಾಷ್ಟ್ರೀಯ ಲೋಕದಳ ಪಕ್ಷವು ಜಾಟ್ ಸಮುದಾಯದ ಜತೆಗೇ ಮುಸ್ಲಿಂ ಮತ್ತು ಇತರ ಹಿಂದುಳಿದ ವರ್ಗಗಳನ್ನು ಒಂದುಗೂಡಿಸಲು ಯೋಜನೆ ಹಾಕಿಕೊಂಡಿದೆ. ಇದನ್ನು ‘ಭೈಚರಾ ಜಿಂದಾಬಾದ್’ ಎಂಬ ಶೀರ್ಷಿಕೆಯ ಅಭಿಯಾನವು ಈ ತಿಂಗಳ ಕೊನೆಯಲ್ಲಿ ಪ್ರಾರಂಭವಾಗಲಿದೆ. ಈ ಅಭಿಯಾನದ ಉದ್ದೇಶದ ಬಗ್ಗೆ ಕವನಗಳು, ನಾಟಕಗಳು ಮತ್ತು ಚರ್ಚೆಗಳನ್ನು ನಡೆಸಲು ಸಾಮಾಜಿಕ-ಸಾಂಸ್ಕೃತಿಕ ವೇದಿಕೆಯನ್ನು ಸಿದ್ದಪಡಿಸಲಾಗಿದೆ. ಇದು ಮುಖ್ಯವಾಗಿ ಜಾಟ್ಗಳು ಮತ್ತು ಮುಸ್ಲಿಮರು, ದಲಿತರು ಮತ್ತು ಇತರ ದುರ್ಬಲ ವರ್ಗಗಳ ನಡುವೆ ಇರುವ ಅಂತರವನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತದೆ.

ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿದ ರಾಜ್ಯ RLD ಉಪಾಧ್ಯಕ್ಷ ಜಯಂತ್ ಚೌಧರಿ ರೈತರ ಪ್ರತಿಭಟನೆ ನಡೆಯುತ್ತಿರುವುದರಿಂದ, ಸರ್ಕಾರದ ವಿರುದ್ಧ ಎಲ್ಲಾ ಪ್ರತಿಪಕ್ಷಗಳನ್ನೂ ಒಂದುಗೂಡಿಸುವ ಸಮಯ ಬಂದಿದೆ. ಏಕತೆ ನಮ್ಮ ಮೊದಲ ಆದ್ಯತೆಯಾಗಿದೆ. ಆದ್ದರಿಂದ ನಾವು ಈ ಅಭಿಯಾನವನ್ನು ಯೋಜಿಸುತ್ತಿದ್ದೇವೆ ಎಂದರು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಅಭಿಯಾನದ ಬಗ್ಗೆ ವಿವರಗಳನ್ನು ನೀಡಿದ ಚೌಧರಿ ಸಂಘಟನಾ ಸಮಿತಿಯನ್ನು ರಚಿಸಲಾಗಿದೆ. ಇದರಲ್ಲಿ ವಿವಿಧ ವಿಭಾಗಗಳು ಮತ್ತು ವಿವಿಧ ವೃತ್ತಿಗಳ ಪ್ರಚಾರಕರು ಇದ್ದಾರೆ ಅವರು ಸಭೆಗಳನ್ನು ಮಾಡುತ್ತಾರೆ ಮತ್ತು ದಿನಾಂಕಗಳನ್ನು ಅಂತಿಮಗೊಳಿಸುತ್ತಾರೆ ಆದರೆ ಮುಜಾಫರ್ ನಗರದಿಂದ ಅಭಿಯಾನ ಪ್ರಾರಂಭವಾಗುವುದು ಖಚಿತ. ಇದು 2013 ರಲ್ಲಿ ಜಾಟ್ ಸಮುದಾಯ ಮತ್ತು ಮುಸ್ಲಿಮರ ನಡುವೆ ಗಲಭೆ ನಡೆದ ಸ್ಥಳವಾಗಿದೆ. ಜಾಟ್ ಮತ್ತು ಮುಸ್ಲಿಂ ಸಮುದಾಯಗಳ ನಡುವೆ ಕಳೆದ 2013 ರ ಆಗಸ್ಟ್-ಸೆಪ್ಟೆಂಬರ್ ನಲ್ಲಿ ನಡೆದ ಗಲಭೆಯಲ್ಲಿ ಸುಮಾರು 62 ಮಂದಿ ಸಾವನ್ನಪ್ಪಿದರು ಮತ್ತು 93 ಮಂದಿ ಗಾಯಗೊಂಡರು. ಇದಲ್ಲದೆ, ಇದು 40,000 ಕ್ಕೂ ಹೆಚ್ಚು ಮುಸ್ಲಿಮರ ಸ್ಥಳಾಂತರಕ್ಕೂ ಕಾರಣವಾಗಿತ್ತು. ಈ ಗಲಭೆಗಳು ಪಶ್ಚಿಮ ಉತ್ತರ ಪ್ರದೇಶ ರಾಜಕೀಯದಲ್ಲಿ ‘ಜಾಟ್ಸ್ ಮತ್ತು ಮುಸ್ಲಿಮರು ಎಂಬ ಮನೋಭಾವವನ್ನು ಸೃಷ್ಟಿಸಿದವು.

2014 ರ ಸಾರ್ವತ್ರಿಕ ಚುನಾವಣೆಯಲ್ಲಿ ಜಾಟ್ಗಳು ಭಾರತೀಯ ಜನತಾ ಪಕ್ಷವನ್ನು (ಬಿಜೆಪಿ) ಬೆಂಬಲಿಸಿದರು. RLD ಯ ಅಜಿತ್ ಚೌಧರಿ ಮತ್ತು ಜಯಂತ್ ಚೌಧರಿ ಕ್ರಮವಾಗಿ ಬಾಗ್ಪತ್ ಮತ್ತು ಮಥುರಾದಲ್ಲಿ ತಮ್ಮ ಸ್ಥಾನಗಳನ್ನು ಕಳೆದುಕೊಂಡರು. 2019 ರ ಲೋಕಸಭಾ ಚುನಾವಣೆಯಲ್ಲೂ ಅವರು ಸೋತರು. ಈಗ, ರೈತರ ಪ್ರತಿಭಟನೆಯು ಈ ಪ್ರದೇಶದಲ್ಲಿ ತನ್ನ ಪ್ರಾಬಲ್ಯವನ್ನು ಮರಳಿ ಪಡೆಯಲು RLD ಗೆ ಅವಕಾಶವನ್ನು ನೀಡಿದೆ.

ಜಯಂತ್ ಅವರು ಕಳೆದ ತಿಂಗಳು ಟಿಕಾಯಟ್ ಸಹೋದರರು ಸೇರಿದಂತೆ ರೈತ ಮುಖಂಡರೊಂದಿಗೆ ರ್ಯಾಲಿ ನಡೆಸಿದರು, ಬಿಜೆಪಿ ವಿರುದ್ಧ ವಿವಿಧ ಸಂಘಟನೆಗಳನ್ನು ಒಂದುಗೂಡಿಸಲು ಅವರು ಶ್ರಮಿಸುತಿದ್ದಾರೆ. ಚೌಧರಿ ಅವರ ಪ್ರಕಾರ, ಈ ಏಕತೆಯ ಸಂದೇಶವು ಮುಜಫರ್ ನಗರದಿಂದ ಎಲ್ಲಾ ಜಾಟ್ ಪ್ರಾಬಲ್ಯದ ಪ್ರದೇಶಗಳು ಮತ್ತು ರಾಜ್ಯದ ಇತರ ಭಾಗಗಳಿಗೆ ಹರಡಲಿದೆ. ಸಹರಾನ್ಪುರ್, ಮೀರತ್ ಮತ್ತು ಮಥುರಾ ಸೇರಿದಂತೆ ಈ ಅಭಿಯಾನಕ್ಕಾಗಿ ನಾವು 25 ಕ್ಕೂ ಹೆಚ್ಚು ಜಿಲ್ಲೆಗಳನ್ನು ಆಯ್ಕೆ ಮಾಡಿದ್ದೇವೆ ಎಂದು ಅವರು ಹೇಳಿದರು.ಈ ಸರ್ಕಾರದ ವಿರುದ್ಧ ಜನಸಾಮಾನ್ಯರ ಐಕ್ಯತೆಯನ್ನು ಮುರಿಯಲು ಬಿಜೆಪಿ ಏನು ಬೇಕಾದರೂ ಮಾಡಲು ಸಿದ್ದವಾಗಿದೆ. ಉತ್ತರ ಪ್ರದೇಶದಲ್ಲಿ ಚುನಾವಣೆ ನಡೆಯಲು ಇನ್ನು ಕೇವಲ 10 ತಿಂಗಳುಗಳಷ್ಟೆ ಇವೆ. ಪಶ್ಚಿಮ ಉತ್ತರ ಪ್ರದೇಶದಲ್ಲಿ ಜನರು ಬಿಜೆಪಿ ನಾಯಕರನ್ನು ನಿರಂತರವಾಗಿ ಬಹಿಷ್ಕರಿಸುತ್ತಿದ್ದಾರೆ. ಎಲ್ಲಾ ವರ್ಗದ ಜನರು ಅವರ ವಿರುದ್ಧ ಒಟ್ಟಾಗಿದ್ದಾರೆ. ಆದ್ದರಿಂದ ಈ ಆಂದೋಲನ ದಿಂದ ಖಂಡಿತಾ ವಿವಿಧ ವರ್ಗಗಳ ಧ್ರುವೀಕರಣ ಆಗಲಿದೆ ಎಂದು ಅವರು ಹೇಳಿದರು. ಬಿಜೆಪಿ ಖಂಡಿತವಾಗಿಯೂ ಈ ಐಕ್ಯತೆಯನ್ನು ಮುರಿಯಲು ಪ್ರಯತ್ನ ನಡೆಸಲಿದೆ ಆದರೆ ನಮ್ಮ ಅಭಿಯಾನ ಭೈಚರಾ ಜಿಂದಾಬಾದ್ ಎಲ್ಲರನ್ನೂ ಒಂದುಗೂಡಿಸುತ್ತದೆ” ಎಂದು ಅವರು ಹೇಳಿದರು.

ಅಭಿಯಾನ ಸಂಘಟನಾ ಸಮಿತಿಯ RLD ಮುಖಂಡರು ಮಾತನಾಡಿ ಗಾಯಕರು, ಕವಿಗಳು, ನಾಟಕ ನಟರು ಮತ್ತು ಸಂಗೀತಗಾರರು ಸೇರಿದಂತೆ ಹಲವಾರು ಸ್ಥಳೀಯ ಕಲಾವಿದರನ್ನು ಅಭಿಯಾನದಲ್ಲಿ ಭಾಗವಹಿಸಲು ಸಂಪರ್ಕಿಸಲಾಗಿದೆ. ಈ ಅಭಿಯಾನದ ಮೂಲಕ ನಾವು ನಮ್ಮ ಸ್ಥಳೀಯ ಸಂಸ್ಕೃತಿಯನ್ನು ಉತ್ತೇಜಿಸಲು ಮತ್ತು ಜನರನ್ನು ಒಂದುಗೂಡಿಸಲು ಯೋಜಿಸಿದ್ದೇವೆ. ಕವನ ಮತ್ತು ಕಥೆ ಹೇಳುವ ಸಂದರ್ಭದಲ್ಲಿ ನಾವು ಏಕತೆಯ ಬಗ್ಗೆ ಹೆಚ್ಚು ಮಾತನಾಡುತ್ತೇವೆ ಎಂದು RLD ನಾಯಕ ಹೇಳಿದರು.

ಬಹುಶಃ ನಾವು ಈ ತಿಂಗಳ ಮಧ್ಯದಲ್ಲಿ ನಮ್ಮ ಮೊದಲ ಕಾರ್ಯಕ್ರಮವನ್ನು ಆಯೋಜಿಸಲಿದ್ದು. ಮುಂದಿನ ತಿಂಗಳಿನಿಂದ, ಏಪ್ರಿಲ್ ಕೊನೆಯ ವಾರದಲ್ಲಿ ಕೊನೆಗೊಳ್ಳಲಿರುವ ಪಂಚಾಯತ್ ಚುನಾವಣೆಯ ನಂತರ ನಾವು ಪ್ರತಿ ವಾರ ಇಂತಹ ಹೆಚ್ಚಿನ ಕಾರ್ಯಕ್ರಮಗಳನ್ನು ಮಾಡುತ್ತೇವೆ. ನಾವು ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸುತ್ತೇವೆ ಎಂದು ಅವರು ಹೇಳಿದರು. RLD ಗಾಗಿ ಸಾಮಾಜಿಕ ಮಾಧ್ಯಮವನ್ನು ನಿರ್ವಹಿಸುವ ಈಶ್ವರ್ಯ ಸಿಂಗ್ ಅವರ ಪ್ರಕಾರ ಅಭಿಯಾನಕ್ಕಾಗಿ ಆನ್ಲೈನ್ ಖಾತೆಗಳನ್ನು ಸಹ ರಚಿಸಲಾಗಿದೆ. ನಾವು ಟ್ವಿಟರ್ ಹ್ಯಾಂಡಲ್ಗಳು ಮತ್ತು ಫೇಸ್ಬುಕ್ ಪುಟಗಳು ಮತ್ತು ವಾಟ್ಸಾಪ್ ಗುಂಪುಗಳನ್ನು ರಚಿಸಿದ್ದೇವೆ. ಕಾರ್ಯಕ್ರಮದ ಸ್ಥಳವನ್ನು ತಲುಪಲು ಸಾಧ್ಯವಾಗದವರು ಅದನ್ನು ಸಾಮಾಜಿಕ ಮಾಧ್ಯಮಗಳ ಮೂಲಕವೂ ವೀಕ್ಷಿಸಬಹುದು. ಪಶ್ಚಿಮ ಉತ್ತರ ಪ್ರದೇಶದ ವಿವಿಧ ಪಟ್ಟಣಗಳ ನಮ್ಮ ಸ್ಥಳೀಯ ಗುಂಪುಗಳಲ್ಲಿ ನಾವು ಈ ಅಭಿಯಾನವನ್ನು ಸಾಕಷ್ಟು ಪ್ರಚಾರ ಮಾಡುತ್ತಿದ್ದೇವೆ ಎಂದು ಅವರು ಹೇಳಿದರು.

RLD ಈ ಹಿಂದೆ ಗಾಂವ್ ಚಲೋ ಅಭಿಯಾನ್’ ಅನ್ನು ಪ್ರಾರಂಭಿಸಿತ್ತು, ಇದರ ಅಡಿಯಲ್ಲಿ ಜಯಂತ್ ಚೌಧರಿ ಪಶ್ಚಿಮ ಉತ್ತರ ಪ್ರದೇಶದ ಗ್ರಾಮಗಳಲ್ಲಿ ಎರಡು ಡಜನ್ ಗಳಿಗೂ ಹೆಚ್ಚು ಸಭೆಗಳನ್ನು ಆಯೋಜಿಸಿದ್ದರು. ಭೈಚರಾ ಜಿಂದಾಬಾದ್ ಅಭಿಯಾನವು ಆ ಪ್ರಭಾವವನ್ನು ಹೆಚ್ಚಿಸಲು ಪ್ರಯತ್ನಿಸುತ್ತದೆ. RLD ಯ ಈ ಅಭಿಯಾನದ ಹಿಂದಿನ ರಾಜಕೀಯ ಲೆಕ್ಕಾಚಾರದ ಪ್ರಕಾರ ಜಾಟ್ಗಳು ರಾಜ್ಯದ ಜನಸಂಖ್ಯೆಯ ಶೇಕಡಾ 6-7ರಷ್ಟಿದ್ದಾರೆ. ಪಶ್ಚಿಮ ಉತ್ತರ ಪ್ರದೇಶದ 18 ಲೋಕಸಭಾ ಸ್ಥಾನಗಳಲ್ಲಿ ಅವರು ಶೇಕಡಾ 17 ರಷ್ಟು ದೊಡ್ಡ ಮತದಾರರಾಗಿದ್ದಾರೆ ಮತ್ತು ಈ ಪ್ರದೇಶದ ಸುಮಾರು 100-120 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಭಾವವನ್ನು ಹೊಂದಿದ್ದಾರೆ ಎಂದು ಅವರು ಹೇಳಿದರು. ಮತ್ತೊಂದೆಡೆ, ಮುಸ್ಲಿಮರು ರಾಜ್ಯದ ಪಶ್ಚಿಮ ಭಾಗದಲ್ಲಿ ಜನಸಂಖ್ಯೆಯ ಶೇಕಡಾ 25 ಕ್ಕಿಂತ ಹೆಚ್ಚು ಇದ್ದು ಇಲ್ಲಿ ದಲಿತರು ಶೇಕಡಾ 20 ಕ್ಕಿಂತ ಹೆಚ್ಚುಇದ್ದಾರೆ. RLD ಈಗಾಗಲೇ ಇಲ್ಲಿ ಸಮಾಜವಾದಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿದೆ. ಆದ್ದರಿಂದ ನಾವು ಜಾಟ್, ಮುಸ್ಲಿಂ, ದಲಿತರು ಮತ್ತು ಯಾದವರನ್ನು ಒಟ್ಟಿಗೆ ಸೇರಿಸಲು ಪ್ರಯತ್ನಿಸುತ್ತಿದ್ದೇವೆ. ಈ ಸಂಯೋಜನೆಯು ಒಟ್ಟು ಜನಸಂಖ್ಯೆಯ ಶೇಕಡಾ 55 ಕ್ಕಿಂತ ಹೆಚ್ಚು ಜನರನ್ನು ಹೊಂದಿದೆ ಎಂದು ಹೇಳಲಾಗಿದೆ. ಆದರೆ, ಬಿಜೆಪಿ ವಕ್ತಾರ ಮನೋಜ್ ಮಿಶ್ರಾ ಅವರು RLD ಅವರು ಬಯಸಿದ ಯಾವುದೇ ಅಭಿಯಾನವನ್ನು ಮಾಡಬಹುದು ಆದರೆ ಗ್ರಾಮೀಣ ಮತ್ತು ನಗರ ಪ್ರದೇಶದ ಎಲ್ಲರೂ ನಮ್ಮೊಂದಿಗಿದ್ದಾರೆ. ಮೋದಿ ಮತ್ತು ಯೋಗಿ ಸರ್ಕಾರಗಳ ಯೋಜನೆಗಳಿಂದಾಗಿ ಹೊರವಲಯದಲ್ಲಿರುವ ಜನರು ಅನೇಕ ಪ್ರಯೋಜನಗಳನ್ನು ಪಡೆಯುತಿದ್ದಾರೆ. ಅವರು ವಿರೋಧ ಪಕ್ಷಗಳ ಬಲೆಗೆ ಬೀಳಲು ಸಹ ಸಾಧ್ಯವಿಲ್ಲ. ಈ ರೀತಿಯ ಪ್ರಚಾರಗಳು ಕೆಲಸ ಮಾಡುವುದಿಲ್ಲ ಎಂದು ನಮಗೆ ಖಚಿತವಾಗಿದೆ ಎಂದು ಹೇಳಿದರು.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com