ಕರೋನಾ ಸೋಂಕು ಹೆಚ್ಚಳಕ್ಕೆ ಯಾರಿಗೆ ಕ್ರೆಡಿಟ್ ನೀಡಬೇಕು? ಪರೋಕ್ಷವಾಗಿ ಮೋದಿಯನ್ನು ತಿವಿದ ಸ್ವಾಮಿ

ಕರೋನಾ ಪ್ರಕರಣಗಳ ಏರಿಕೆ ಕುರಿತಂತೆ ಪ್ರತಿಕ್ರಿಯಿಸಿರುವ ಸ್ವಾಮಿ, ಕರೋನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿವೆ. ಇದರ ಕ್ರೆಡಿಟ್‌ಅನ್ನು ಯಾರಿಗೆ ನೀಡುತ್ತೀರಿ ಎಂದು ಪ್ರಶ್ನಿಸಿದ್ದಾರೆ.
ಕರೋನಾ ಸೋಂಕು ಹೆಚ್ಚಳಕ್ಕೆ ಯಾರಿಗೆ ಕ್ರೆಡಿಟ್ ನೀಡಬೇಕು? ಪರೋಕ್ಷವಾಗಿ ಮೋದಿಯನ್ನು ತಿವಿದ ಸ್ವಾಮಿ
ಕರೋನಾ ಸೋಂಕು ಹೆಚ್ಚಳಕ್ಕೆ ಯಾರಿಗೆ ಕ್ರೆಡಿಟ್ ನೀಡಬೇಕು? ಪರೋಕ್ಷವಾಗಿ ಮೋದಿಯನ್ನು ತಿವಿದ ಸ್ವಾಮಿ
ಅಮಿತ್ ಮಾಳವಿಯ ಪದಚ್ಯುತಿಗೆ ಸುಬ್ರಹ್ಮಣ್ಯನ್ ಸ್ವಾಮಿ ಗಡುವು

ಬಿಜೆಪಿಯನ್ನು ಪದೇ ಪದೇ ಇರಿಸು-ಮುರಿಸುಗೆ ತಳ್ಳುವ ಹೇಳಿಕೆಯ ಮೂಲಕವೇ ಸದ್ಯ ಚಾಲ್ತಿಯಲ್ಲಿರುವ ಬಿಜೆಪಿ ಹಿರಿಯ ರಾಜ್ಯಸಭಾ ಸದಸ್ಯ ಡಾ. ಸುಬ್ರಮಣಿಯನ್‌ ಸ್ವಾಮಿ ಮತ್ತೆ ಕೇಂದ್ರ ಸರ್ಕಾರವನ್ನು ಲೇವಡಿ ಮಾಡಿದ್ದಾರೆ.

ಕರೋನಾ ಪ್ರಕರಣಗಳ ಏರಿಕೆ ಕುರಿತಂತೆ ಪ್ರತಿಕ್ರಿಯಿಸಿರುವ ಸ್ವಾಮಿ, ಕರೋನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿವೆ. ಇದರ ಕ್ರೆಡಿಟ್‌ಅನ್ನು ಯಾರಿಗೆ ನೀಡುತ್ತೀರಿ ಎಂದು ಪ್ರಶ್ನಿಸಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ತಮ್ಮ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಪರೋಕ್ಷವಾಗಿ ನರೇಂದ್ರ ಮೋದಿ ಹಾಗೂ ಅವರ ಭಕ್ತರಿಗೆ ತಿವಿದ ಸ್ವಾಮಿ, 2020 ರ ಎಪ್ರಿಲ್‌ ವೇಳೆ ದಿನವೊಂದಕ್ಕೆ 1 ಲಕ್ಷದವರೆಗೆ ದಾಖಲಾಗುತ್ತಿದ್ದ ಕರೋನಾ ಪ್ರಕರಣಗಳು, ನವೆಂಬರ್‌ ವೇಳೆಗಾಗುವಾಗ 10,000 ಕ್ಕೆ ಇಳಿದಿದ್ದವು. ಆ ವೇಳೆ ಅಂಧಭಕ್ತರು ಹಾಗೂ ಗಂದಭಕ್ತರಿಂದ ಅದರ ಕ್ರೆಡಿಟ್ಟನ್ನು ಪಡೆದವರು ಯಾರು? ಈಗ ದಿನವೊಂದಕ್ಕೆ 1 ಲಕ್ಷ ಪ್ರಕರಣಗಳು ಮತ್ತೆ ದಾಕಲಾಗುತ್ತಿವೆ, ಅಂದರೆ ಈಗ ಯಾರಿಗೆ ಇದರ ಕ್ರೆಡಿಟ್ಟನ್ನು ಕೊಡಬೇಕು ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ಸ್ವಾಮಿಯ ಈ ಟ್ವೀಟ್‌ ಗೆ ಸೋಮವಾರ ಮಧ್ಯಾನದ ವೇಳೆಗೆ 25 ಸಾವಿರಕ್ಕೂ ಹೆಚ್ಚು ಮೆಚ್ಚುಗೆಗಳು ವ್ಯಕ್ತವಾಗಿದ್ದು, ಸುಮಾರು ಐದು ಸಾವಿರದಷ್ಟು ಮಂದಿ ಅದನ್ನು ಮರುಹಂಚಿಕೊಂಡಿದ್ದಾರೆ. ಎರಡು ಸಾವಿರಕ್ಕೂ ಅಧಿಕ ಪ್ರತಿಕ್ರಿಯೆಗಳು ಬಂದಿವೆ. ಅವುಗಳಲ್ಲಿ ಬಹುತೇಕ ಸ್ವಾಮಿ ಹೇಳಿಕೆ ಪರವಾಗಿ ಬಂದಿದ್ದರೆ, ಬಿಜೆಪಿ ಹಾಗೂ ಮೋದಿ ಬೆಂಬಲಿಗರು ಸ್ವಾಮಿ ಪ್ರತಿಕ್ರಿಯೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕರೋನಾ ಸೋಂಕು ಹೆಚ್ಚಳಕ್ಕೆ ಯಾರಿಗೆ ಕ್ರೆಡಿಟ್ ನೀಡಬೇಕು? ಪರೋಕ್ಷವಾಗಿ ಮೋದಿಯನ್ನು ತಿವಿದ ಸ್ವಾಮಿ
ಪಶ್ಚಿಮ ಬಂಗಾಳದ ಚುನಾವಣೆ ಪ್ರಣಾಳಿಕೆ ಬಿಡುಗಡೆ ಮಾಡಿದ ಅಮಿತ್ ಶಾ: ಸ್ವಾಮಿ ಟೀಕೆ

ಭಾರತದಲ್ಲಿ ಕರೋನಾ ಸಾಂಕ್ರಾಮಿಕ ಸೋಂಕು ರಾಜಕೀಯಕ್ಕೆ ಸಾಕಷ್ಟು ಬಳಕೆಯಾಗಿದ್ದು, ಅಲ್ಪಸಂಖ್ಯಾತ ಸಮುದಾಯದ ಮೇಲೆ ಧ್ವೇಷ ಹರಡಲೂ ಸೋಂಕನ್ನು ಬಳಸಿಕೊಳ್ಳಲಾಗಿತ್ತು. ಸೋಂಕಿನ ನಿರ್ವಹಣೆಯಲ್ಲಿ ವಿಫಲವಾದ ಸರ್ಕಾರವನ್ನು ಪ್ರತಿಪಕ್ಷಗಳು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದವು, ಅದೇ ವೇಳೆ ಸೋಂಕು ಕಡಿಮೆಗೊಳ್ಳುತ್ತಿದ್ದಂತೆ ಅದರ ಕ್ರೆಡಿಟ್‌ಅನ್ನು ನರೇಂದ್ರ ಮೋದಿ ಸರ್ಕಾರಕ್ಕೆ ನೀಡಲಾಗಿತ್ತು.

ಕರೋನಾ ಸೋಂಕು ಹೆಚ್ಚಳಕ್ಕೆ ಯಾರಿಗೆ ಕ್ರೆಡಿಟ್ ನೀಡಬೇಕು? ಪರೋಕ್ಷವಾಗಿ ಮೋದಿಯನ್ನು ತಿವಿದ ಸ್ವಾಮಿ
ಕೋವಿಶೀಲ್ಡ್ ಜನಬಳಕೆ ವಿರುದ್ಧ ಬಿಜೆಪಿಯ ಸುಬ್ರಮಣಿಯನ್ ಸ್ವಾಮಿ ಟ್ವೀಟ್ ಸಮರ!

ಸದ್ಯ ಭಾರತದ ಒಟ್ಟು ಕರೋನಾ ಸೋಂಕು ಪ್ರಕರಣಗಳ ಶೇಕಡಾ 60 ಪ್ರಕರಣಗಳು ಮಹಾರಾಷ್ಟ್ರ ಒಂದರಲ್ಲೇ ಪತ್ತೆಯಾಗುತ್ತಿರುವುದರಿಂದ ಉದ್ಧವ್‌ ಠಾಕ್ರೆ ವಿರೋಧಿಗಳು ಠಾಕ್ರೆಯನ್ನು ಗುರಿಯಾಗಿಸುತ್ತಿದ್ದಾರೆ.

ಕರೋನಾ ಸೋಂಕು ಹೆಚ್ಚಳಕ್ಕೆ ಯಾರಿಗೆ ಕ್ರೆಡಿಟ್ ನೀಡಬೇಕು? ಪರೋಕ್ಷವಾಗಿ ಮೋದಿಯನ್ನು ತಿವಿದ ಸ್ವಾಮಿ
ರಾವಣನ ನಾಡಿನಲ್ಲಿ ₹51, ರಾಮನ ನಾಡಿನಲ್ಲಿ ₹93: ಪೆಟ್ರೋಲ್ ಬೆಲೆ ಏರಿಕೆ ವಿರುದ್ಧ ಸ್ವಾಮಿ ವ್ಯಂಗ್ಯ

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com