ಹೆಚ್ಚು ದುಡಿಸಿಕೊಳ್ಳಲು ವಲಸೆ ಕಾರ್ಮಿಕರಿಗೆ ಪಂಜಾಬ್ ರೈತರು ಡ್ರಗ್ ಒದಗಿಸುತ್ತಾರೆ: MHA ಪತ್ರ

ಪತ್ರವನ್ನು ಹಿಂಪಡೆಯುವಂತೆ ಸಿಂಗ್ ಎಂಹೆಚ್‌ಎಗೆ ಮನವಿ ಮಾಡಿದ್ದಾರೆ “ನಮ್ಮ ಕಾರ್ಮಿಕರೊಂದಿಗೆ ನಮಗೆ ಉತ್ತಮ ಸಂಬಂಧವಿದೆ. ಅವರು ಪ್ರತಿ ವರ್ಷ ರಾಜ್ಯಾದ್ಯಂತ ಕೆಲಸ ಮಾಡಲು ಬರುವ ಯುಪಿ ಮತ್ತು ಬಿಹಾರದ ಹಿಂದೂ ವಲಸೆ ಕಾರ್ಮಿಕರು ಹಾಗು ನಮ್ಮ ನಡುವೆ ಸಮಸ್ಯೆ ಸೃಷ್ಟಿಸಲು ನೋಡುತ್ತಿದ್ದಾರೆ ಎಂದಿದ್ದಾರೆ.
ಹೆಚ್ಚು ದುಡಿಸಿಕೊಳ್ಳಲು ವಲಸೆ ಕಾರ್ಮಿಕರಿಗೆ ಪಂಜಾಬ್ ರೈತರು ಡ್ರಗ್ ಒದಗಿಸುತ್ತಾರೆ: MHA ಪತ್ರ

ಗೃಹ ಸಚಿವಾಲಯವು (ಎಂಹೆಚ್‌ಎ) ಪಂಜಾಬ್ ಸರ್ಕಾರಕ್ಕೆ ಪತ್ರವೊಂದನ್ನು ರವಾನಿಸಿದ್ದು, ಪಂಜಾಬ್ ಗಡಿಯ ರೈತರು ವಲಸೆ ಮತ್ತು ಕಾಂಟ್ರಾಕ್ಟ್ ಕಾರ್ಮಿಕರಿಗೆ ತಮ್ಮ ಹೊಲಗಳಲ್ಲಿ ಕೆಲಸ ಮಾಡಲು ಮತ್ತು ಹೆಚ್ಚು ಹೊತ್ತು ಕೆಲಸ ನಿರ್ವಹಿಸಲು ಡ್ರಗ್ಸ್ ನೀಡುತ್ತಿದ್ದಾರೆ ಎಂದು ಆರೋಪಿಸಿದೆ. ಆದ್ಯತೆಯ ಮೇರೆಗೆ ರಾಜ್ಯ ಸರ್ಕಾರವು ಈ ಬಗ್ಗೆ ತನಿಖೆ ನಡೆಸಿ ಮಾಹಿತಿ ಸಲ್ಲಿಸಬೇಕೆಂದು ಸಚಿವಾಲಯವು ಆದೇಶಿಸಿದೆ.

ಪತ್ರವು ಯಾವ ವರ್ಗದ ‘ಡ್ರಗ್'ನ್ನು ಉದ್ದೇಶಿಸಿದೆ ಎಂಬುದು ಸ್ಪಷ್ಟವಾಗಿಲ್ಲ, ಆದರೆ ಬಹುಶಃ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಔಷಧಿ ಅಂದರೆ ಸ್ಟೀರಾಯ್ಡ್‌ಗಳನ್ನು ಉದ್ದೇಶಿಸಿಯೇ ಹೇಳಲಾಗಿದೆ ಎನ್ನಲಾಗುತ್ತಿದೆ.

ಎಂಹೆಚ್‌ಎ ಪತ್ರವನ್ನು 2019-2020ರಲ್ಲಿ ಕೇಂದ್ರ ಸಂಸ್ಥೆಯಾದ 'ಬಾರ್ಡರ್ ಸೆಕ್ಯುರಿಟಿ ಫೋರ್ಸಸ್'ನ ಶೋಧನೆಯನ್ನು ಉಲ್ಲೇಖಿಸಿ ಬರೆಯಲಾಗಿದೆ. ಆದರೆ ಈ ಪತ್ರವನ್ನು ಪ್ರತಿಭಟನಾ ನಿರತ ರೈತರನ್ನು ನರೇಂದ್ರ ಮೋದಿ ಸರ್ಕಾರವು ಅವರನ್ನು ಕೆಣಕುವ ಮತ್ತೊಂದು ಯತ್ನವೆಂಬಂತೆ ತೋರುತ್ತಿದೆ.

ಗೃಹ ಸಚಿವಾಲಯವು (ಎಂಎಚ್‌ಎ) ಪಂಜಾಬ್ ಸರ್ಕಾರಕ್ಕೆ ಪತ್ರವೊಂದನ್ನು ರವಾನಿಸಿದ್ದು, ಪಂಜಾಬ್ ಗಡಿಯ ರೈತರು ವಲಸೆ ಮತ್ತು ಕಾಂಟ್ರಾಕ್ಟ್ ಕಾರ್ಮಿಕರಿಗೆ ತಮ್ಮ ಹೊಲಗಳಲ್ಲಿ ಕೆಲಸ ಮಾಡಲು ಮತ್ತು ಹೆಚ್ಚು ಹೊತ್ತು ಕೆಲಸ ನಿರ್ವಹಿಸಲು ಡ್ರಗ್ಸ್ ನೀಡುತ್ತಿದ್ದಾರೆ ಎಂದು ಆರೋಪಿಸಿದೆ. ಆದ್ಯತೆಯ ಮೇರೆಗೆ ರಾಜ್ಯ ಸರ್ಕಾರವು ಈ ಬಗ್ಗೆ ತನಿಖೆ ನಡೆಸಿ ಮಾಹಿತಿ ಸಲ್ಲಿಸಬೇಕೆಂದು ಸಚಿವಾಲಯವು ಆದೇಶಿಸಿದೆ.

ಪತ್ರವು ಯಾವ ವರ್ಗದ ‘ಡ್ರಗ್'ನ್ನು ಉದ್ದೇಶಿಸಿದೆ ಎಂಬುದು ಸ್ಪಷ್ಟವಾಗಿಲ್ಲ, ಆದರೆ ಬಹುಶಃ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಔಷಧಿ ಅಂದರೆ ಸ್ಟೀರಾಯ್ಡ್‌ಗಳನ್ನು ಉದ್ದೇಶಿಸಿಯೇ ಹೇಳಲಾಗಿದೆ ಎನ್ನಲಾಗುತ್ತಿದೆ.

ಎಂಹೆಚ್‌ಎ ಪತ್ರವನ್ನು 2019-2020ರಲ್ಲಿ ಕೇಂದ್ರ ಸಂಸ್ಥೆಯಾದ 'ಬಾರ್ಡರ್ ಸೆಕ್ಯುರಿಟಿ ಫೋರ್ಸಸ್'ನ ಶೋಧನೆಯನ್ನು ಉಲ್ಲೇಖಿಸಿ ಬರೆಯಲಾಗಿದೆ. ಆದರೆ ಈ ಪತ್ರವನ್ನು ಪ್ರತಿಭಟನಾ ನಿರತ ರೈತರನ್ನು ನರೇಂದ್ರ ಮೋದಿ ಸರ್ಕಾರವು ಅವರನ್ನು ಕೆಣಕುವ ಮತ್ತೊಂದು ಯತ್ನವೆಂಬಂತೆ ತೋರುತ್ತಿದೆ.

ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ಜಾರಿಗೆ ತರುವ ಮೋದಿ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಐದು ತಿಂಗಳ ಕಾಲ ರೈತರ ಆಂದೋಲನಕ್ಕೆ ಮುಂದಾಗಿರುವ ಬಿಕೆಯು ಡಕೌಂಡಾದ ಪ್ರಧಾನ ಕಾರ್ಯದರ್ಶಿ ಮತ್ತು ಅಖಿಲ ಭಾರತ ಕಿಶನ್ ಸಂಘರ್ಷ ಸಮನ್ವಯ ಸಮಿತಿಯ ಸದಸ್ಯ ಸಚಿವ ಜಗ್ಮೋಹನ್ ಸಿಂಗ್ ಅವರು ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತಾಡುತ್ತಾ “ನಮ್ಮನ್ನು ಖಲಿಸ್ತಾನಿ ಮತ್ತು ಭಯೋತ್ಪಾದಕರು ಎಂದು ಕರೆದ ನಂತರ, ಕೇಂದ್ರ ಸರ್ಕಾರವು ಮತ್ತೊಂದು ಕೋಮು ಕಾರ್ಡ್ ಕೈಗೆತ್ತಿಕೊಂಡಿದೆ. ಎಂಎಚ್‌ಎ ಪ್ರಕಾರ ಈ ಸಮೀಕ್ಷೆಯನ್ನು ಬಿಎಸ್‌ಎಫ್ 2019-20ರಲ್ಲಿ ಮಾಡಿದ್ದು, ಅವರು ಈ ವರದಿಯನ್ನು ಇಲ್ಲಿಯವರೆಗೆ ಮುಚ್ವಿಟ್ಟು ರೈತರ ಆಂದೋಲನ ಉತ್ತುಂಗದಲ್ಲಿದ್ದಾಗ ಮಾತ್ರ ಪಂಜಾಬ್ ಸರ್ಕಾರಕ್ಕೆ ಪತ್ರ ಬರೆದಿರುವುದು ಅಚ್ಚರಿ ಮೂಡಿಸಿದೆ" ಎಂದು ಹೇಳಿದ್ದಾರೆ.

ಪತ್ರವನ್ನು ಹಿಂಪಡೆಯುವಂತೆ ಸಿಂಗ್ ಎಂಹೆಚ್‌ಎಗೆ ಮನವಿ ಮಾಡಿದ್ದಾರೆ “ನಮ್ಮ ಕಾರ್ಮಿಕರೊಂದಿಗೆ ನಮಗೆ ಉತ್ತಮ ಸಂಬಂಧವಿದೆ. ಅವರು ಪ್ರತಿ ವರ್ಷ ರಾಜ್ಯಾದ್ಯಂತ ಕೆಲಸ ಮಾಡಲು ಬರುವ ಯುಪಿ ಮತ್ತು ಬಿಹಾರದ ಹಿಂದೂ ವಲಸೆ ಕಾರ್ಮಿಕರು ಮತ್ತು ನಮ್ಮ ನಡುವೆ ಸಮಸ್ಯೆ ಸೃಷ್ಟಿಸಲು ನೋಡುತ್ತಿದ್ದಾರೆ. ನಾವು ಪಂಜಾಬ್‌ನ ಗಡಿ ಜಿಲ್ಲೆಗಳ ಡಿಸಿಗಳನ್ನು ಭೇಟಿಯಾಗಲಿದ್ದೇವೆ ಮತ್ತು ಈ ಪತ್ರದ ಬಗ್ಗೆ ನಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತೇವೆ. ಈ ಜಿಲ್ಲೆಗಳ ಕ್ಷೇತ್ರಗಳಲ್ಲಿ ಕೆಲಸ ಮಾಡುವ ವಲಸೆ ಕಾರ್ಮಿಕರನ್ನು ನಾವು ಪುರಾವೆಯಾಗಿ ತೋರಿಸಲಿದ್ದೇವೆ ” ಎಂದು ಹೇಳಿದ್ದಾರೆ.

ಗುರುದಾಸ್‌ಪುರ, ಅಮೃತಸರ, ಫಿರೋಜ್‌ಪುರ ಮತ್ತು ಅಬೋಹರ್‌ಗಳನ್ನು ಉಲ್ಲೇಖಿಸಿ ಮಾರ್ಚ್ 17 ರಂದು ಎಂಹೆಚ್‌ಎ ರಾಜ್ಯ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾನಿರ್ದೇಶಕರಿಗೆ ಕಳುಹಿಸಿದ ಪತ್ರದಲ್ಲಿ, ಬಿಎಸ್‌ಎಫ್‌ನ ಅಧ್ಯಯನದ ಪ್ರಕಾರ, ಅಂತಹ 58 ಕಾರ್ಮಿಕರನ್ನು ಕೇಂದ್ರ ಪಡೆಗಳು ಪಂಜಾಬ್‌ನ ಗಡಿ ಜಿಲ್ಲೆಗಳಿಂದ ಬಂಧಿಸಿವೆ ಎಂದು ಹೇಳಿದೆ.

ಪತ್ರವು “ಬಂಧಿತ ಕಾರ್ಮಿಕರನ್ನು ಪ್ರಶ್ನಿಸಿದ ವೇಳೆಯಲ್ಲಿ ಅವರಲ್ಲಿ ಹೆಚ್ಚಿನವರು ಮಾನಸಿಕವಾಗಿ ಜರ್ಜರಿತರಾಗಿದ್ದರು ಅಥವಾ ದುರ್ಬಲ ಮನಸ್ಥಿತಿಯನ್ನು ಹೊಂದಿದ್ದರು. ಪಂಜಾಬ್‌ ಗಡಿಯ ಹಳ್ಳಿಗಳಲ್ಲಿ ರೈತರೊಂದಿಗೆ ಕಾಂಟ್ರಾಕ್ಟ್ ಆಧಾರಿತ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಬಂಧಿತ ವ್ಯಕ್ತಿಗಳು ಕಳಪೆ ಕುಟುಂಬ ಹಿನ್ನೆಲೆ ಮತ್ತು ಬಿಹಾರ ಮತ್ತು ಉತ್ತರ ಪ್ರದೇಶದ ದೂರದ ಪ್ರದೇಶಗಳಿಂದ ಬಂದವರು” ಎಂದು ತಿಳಿಸುತ್ತದೆ. ಅನೇಕ ಆಯಾಮ ಇರುವ ಈ ಪ್ರಕರಣವು 'ಮಾನವ ಕಳ್ಳಸಾಗಣೆ', 'ಜೀತಗಾರಿಕೆ' ಮತ್ತು 'ಮಾನವ ಹಕ್ಕುಗಳ ಉಲ್ಲಂಘನೆ'ಯನ್ನು ಒಳಗೊಂಡಿರುತ್ತದೆ ಎಂದು ಪತ್ರವು ಪಂಜಾಬ್ ಸರ್ಕಾರಕ್ಕೆ ತಿಳಿಸಿದೆ ಎಂಬುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.

ಪತ್ರದಲ್ಲಿನ ವಿಚಾರಗಳನ್ನು ಇಂಡಿಯನ್ ಎಕ್ಸ್‌ಪ್ರೆಸ್‌‌ಗೆ ದೃಢಪಡಿಸಿರುವ ಪಂಜಾಬ್‌ನ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪತ್ರದಲ್ಲಿ ಇರುವ ವಿಚಾರಗಳು ಉತ್ಪ್ರೇಕ್ಷೆಯಿಂದ ಕೂಡಿದೆ ಎಂದಿದ್ದಾರೆ. ರಾಜ್ಯ ಪೊಲೀಸ್ ಮತ್ತು BSF ಮಧ್ಯೆ ನಡೆಯುವ ನಿಯಮಿತ ಸಭೆಗಳಲ್ಲಿ ಈ ವಿಷಯವನ್ನು ಎಂದೂ ಚರ್ಚಿಸಲಾಗಿಲ್ಲ ಎಂದಿದ್ದಾರೆ.

ಮೋದಿ ಸರ್ಕಾರದ ಮಾಜಿ ಮಿತ್ರ ಶಿರೋಮಣಿ ಅಕಾಲಿ ದಳದ ಮಾಜಿ ಸಂಸದ ಪ್ರೇಮ್ ಸಿಂಗ್ ಚಂಡುಮಾಜ್ರಾ ಈ ಕುರಿತು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ “ಗೃಹ ಸಚಿವಾಲಯದ ಇಂತಹ ಪತ್ರಗಳು ದೇಶಾದ್ಯಂತ ತಪ್ಪು ಸಂದೇಶವನ್ನು ಕಳುಹಿಸುತ್ತದೆ ಮತ್ತು ಕಳವಳದ ವಾತಾವರಣವನ್ನು ಸೃಷ್ಟಿಸುತ್ತದೆ” ಎಂದು ಹೇಳಿದ್ದಾರೆ.

ಪಂಜಾಬ್‌ನ ರೈತ ಸಂಘಗಳ ರಾಜ್ಯ ಬಿಜೆಪಿ ಉಸ್ತುವಾರಿಯಾಗಿರುವ ಹರ್ಜೀತ್ ಸಿಂಗ್ ಗ್ರೆವಾಲ್ ಅವರು ಈ ಪತ್ರವನ್ನು “ಕೇವಲ ಆಡಳಿತಾತ್ಮಕ” ವಿಷಯವೆಂದು ಅಭಿಪ್ರಾಯ ಪಟ್ಟಿದ್ದಾರೆ ಮತ್ತು ಈ ಕುರಿತಯ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ಹೇಳಿಕೆ ನೀಡಿರುವ ಅವರು “ಈ ಬಗ್ಗೆ ರಾಜಕೀಯ ಮಾಡುವುದು ಸರಿಯಲ್ಲ" ಎಂದಿದ್ದಾರೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com