ಭ್ರಷ್ಟಾಚಾರ ಆರೋಪ: ಸಿಬಿಐ ತನಿಖೆ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಗೃಹಸಚಿವ ರಾಜಿನಾಮೆ

ಬಾಂಬೆ ಹೈಕೋರ್ಟ್‌ ಪರಂ ಬೀರ್‌ ಸಿಂಗ್ ಮಾಡಿರುವ‌ ಆರೋಪದ ಬಗ್ಗೆ ತನಿಖೆ ಮಾಡುವಂತೆ ಸಿಬಿಐಗೆ ಆದೇಶಿಸಿದ ಹಿನ್ನೆಲೆಯಲ್ಲಿ ದೇಶ್‌ಮುಖ್‌ ರಾಜಿನಾಮೆ ನೀಡಿದ್ದಾರೆ.
ಭ್ರಷ್ಟಾಚಾರ ಆರೋಪ: ಸಿಬಿಐ ತನಿಖೆ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಗೃಹಸಚಿವ ರಾಜಿನಾಮೆ

ಮುಂಬೈ ಮಾಜಿ ಪೊಲೀಸ್‌ ಮುಖ್ಯಸ್ಥರಿಂದ ಗಂಭೀರ ಆರೋಪಕ್ಕೆ ಗುರಿಯಾಗಿದ್ದ ಮಹಾರಾಷ್ಟ್ರ ಗೃಹಸಚಿವ ಅನಿಲ್‌ ದೇಶ್‌ಮುಖ್ ಕೊನೆಗೂ ತಮ್ಮ ಹುದ್ದೆಗೆ ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಿದ್ದಾರೆ.

ಕಳೆದ ತಿಂಗಳು ಪರಮ್‌ ಬೀರ್ ಸಿಂಗ್‌ ಮಹಾರಾಷ್ಟ್ರ ಮುಖ್ಯಮಂತ್ರಿಗೆ ಪತ್ರ ಬರೆದಿದ್ದು, ಪತ್ರದಲ್ಲಿ ಗೃಹಸಚಿವರು 100 ಕೋಟಿ ರುಪಾಯಿ ಲಂಚ ಸಂಗ್ರಹಿಸುವ ಗುರಿ ಹೊಂದಿದ್ದರು ಎಂದು ಆರೋಪಿಸಿದ್ದರು.

ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಆದರೆ, ಈ ಆರೋಪವನ್ನು ತಳ್ಳಿಹಾಕಿದ್ದ ಅನಿಲ್‌ ದೇಶ್‌ಮುಖ್‌ ತನ್ನ ಸ್ಥಾನಕ್ಕೆ ರಾಜಿನಾಮೆ ನೀಡುವುದಿಲ್ಲವೆಂದು ಪಟ್ಟು ಹಿಡಿದು ಕೂತಿದ್ದರು. ಇದು ಮಹಾರಾಷ್ಟ್ರದ ಮಹಾಆಘಡಿ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿತ್ತು.

ಆದರೆ, ಇದೀಗ ಬಾಂಬೆ ಹೈಕೋರ್ಟ್‌ ಪರಂ ಬೀರ್‌ ಸಿಂಗ್‌ ಆರೋಪದ ತನಿಖೆ ಮಾಡುವಂತೆ ಸಿಬಿಐಗೆ ಆದೇಶಿಸಿದ ಹಿನ್ನೆಲೆಯಲ್ಲಿ ದೇಶ್‌ಮುಖ್‌ ರಾಜಿನಾಮೆ ನೀಡಿದ್ದಾರೆ.

ಭ್ರಷ್ಟಾಚಾರ ಆರೋಪ: ಸಿಬಿಐ ತನಿಖೆ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಗೃಹಸಚಿವ ರಾಜಿನಾಮೆ
ಗೃಹಸಚಿವರ ಮೇಲೆ ಭ್ರಷ್ಟಾಚಾರ ಆರೋಪಿಸಿದ ಮುಂಬೈ ಮಾಜಿ ಕಮಿಷನರ್!‌

ತನಿಖೆ ನಡೆಯುವುದರಿಂದ ನಾನು ನನ್ನ ಸ್ಥಾನದಲ್ಲಿ ಇನ್ನುಮುಂದೆ ಮುಂದುವರಿಯುವುದಿಲ್ಲ ಎಂದು ತನ್ನ ರಾಜಿನಾಮೆ ಪತ್ರದಲ್ಲಿ ಅನಿಲ್‌ ದೇಶ್‌ಮುಖ್‌ ಹೇಳಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com