ಕೇರಳದಲ್ಲಿ RSS ಬಿಟ್ಟು ಕಾಂಗ್ರೆಸ್ ಕೈಡಿದ ನಾಯರ್ ಸಮುದಾಯ

2019 ರ ಲೋಕಸಭಾ ಚುನಾವಣೆಯಲ್ಲಿ, ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ 20 ಲೋಕಸಭಾ ಸ್ಥಾನಗಳಲ್ಲಿ 19 ಸ್ಥಾನಗಳನ್ನು ಗೆಲ್ಲುವ ಮೂಲಕ ಚುನಾವಣಾ ಲಾಭವನ್ನು ಗಳಿಸಿತು. ಇದರ ಅರ್ಥ, ನಾಯರ್ ಸಮುದಾಯದ ಮತವು ಕಾಂಗ್ರೆಸ್ ಪರವಾಗಿ ಚಲಾವಣೆಯಾಗಿದೆ ಎಂದು ತಿಳಿದುಬಂದಿದೆ.
ಕೇರಳದಲ್ಲಿ RSS ಬಿಟ್ಟು ಕಾಂಗ್ರೆಸ್ ಕೈಡಿದ ನಾಯರ್ ಸಮುದಾಯ

ದೇಶದಲ್ಲಿ ಪಂಚ ರಾಜ್ಯಗಳ ವಿಧಾನ ಸಬಾ ಚುನಾವಣಾ ಕಣ ರಂಗೇರುತಿದ್ದಂತೆ ದಕ್ಷಿಣದ ಕಮ್ಯುನಿಷ್ಟರ ಭದ್ರ ಕೋಟೆ ಅಗಿರುವ ಕೇರಳದಲ್ಲೂ ಪ್ರಚಾರ ಕಾವೇರತೊಡಗಿದೆ. ಈ ಬಾರಿ ಕೇರಳದ ಪ್ರಬಲ ಮೇಲ್ವರ್ಗ ಸಮುದಾಯವಾದ ನಾಯರ್‌ಗಳು ಆರ್‌ಎಸ್‌ಎಸ್‌ ಬಿಟ್ಟು ಕಾಂಗ್ರೆಸ್ ಕೈ ಹಿಡಿದಿದ್ದಾರೆ. 1947 ರಲ್ಲಿ ಪ್ರಬಲ ಜನಾಂಗ ನಾಯರ್‌ಗಳನ್ನು ಒಂದುಗೂಡಿಸಲು ಸಾಮಾಜಿಕ ಸುಧಾರಕ ಮತ್ತು ಸ್ವಾತಂತ್ರ್ಯ ಹೋರಾಟಗಾರ ಮನ್ನಾಥ್ ಪದ್ಮನಾಭನ್ ಅವರು ನಾಯರ್ ಸರ್ವೀಸ್ ಸೊಸೈಟಿಯನ್ನು ಸ್ಥಾಪಿಸಿದರು.

ಇದೇ ಸಂಸ್ಥೆ - ತಿರುವಾಂಕೂರು ಪ್ರದೇಶದಲ್ಲಿ ಚಂಗನಸೇರಿಯಲ್ಲಿ ಕಾಲೇಜು ಸ್ಥಾಪಿಸಿತು. ಪದ್ಮನಾಭನ್ ಈ ಸಂಸ್ಥೆಗೆ ಎನ್ಎಸ್ಎಸ್ ಹಿಂದೂ ಕಾಲೇಜು ಎಂದು ಹೆಸರಿಟ್ಟರು.ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಇತಿಹಾಸದ ಪ್ರಕಾರ, ಆರ್‌ಎಸ್‌ಎಸ್‌ನ ಎರಡನೇ ಮುಖ್ಯ ಕಾರ್ಯನಿರ್ವಾಹಕ ಎಂ.ಎಸ್. ಗೋಲ್ವಾಲ್ಕರ್ ಅವರು ಪದ್ಮನಾಭನ್ ಅವರನ್ನು ಕಾಲೇಜಿಗೆ ಈ ಹೆಸರಿಸಲು ಪ್ರೇರೇಪಿಸಿದರು ಎನ್ನಲಾಗಿದ್ದು, ಪದ್ಮನಾಭನ್ಅವರು ಈ ಹಿಂದೆ ಗೋಲ್ವಾಲ್ಕರ್ ಅವರ 51 ನೇ ಹುಟ್ಟುಹಬ್ಬದಂದು ಕೇರಳದ ತಿರುವನಂತಪುರಂನಲ್ಲಿ ಅವರನ್ನು ಸನ್ಮಾನಿಸಿದರು.

ಆದರೆ ಎನ್ಎಸ್ಎಸ್ ಮತ್ತು ಆರ್ ಎಸ್ಎಸ್ ನಡುವಿನ ಸಂಬಂಧಗಳು ಇತ್ತೀಚಿನ ವರ್ಷಗಳಲ್ಲಿ ಹಳಸಿಕೊಂಡಿದೆ.ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ, ತಿರುವನಂತಪುರದ ನೆಮೊಮ್ನಲ್ಲಿ ಸ್ಪರ್ಧಿಸುತ್ತಿರುವ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಕುಮ್ಮನಂ ರಾಜಶೇಖರನ್ ಅವರನ್ನು ಎನ್ಎಸ್ಎಸ್ ವಿರೋಧಿಸಿದೆ.‌ ಈ ಕ್ಷೇತ್ರದಲ್ಲಿ ಬಿಜೆಪಿ, ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ವಾದಿ) ನಡುವೆ ತ್ರಿಕೋನ ಸ್ಪರ್ಧೆಏರ್ಪಟ್ಟಿದೆ. ಇಲ್ಲಿ, ಕಾಂಗ್ರೆಸ್ ಅಭ್ಯರ್ಥಿ ಮತ್ತು ಮಾಜಿ ಮುಖ್ಯಮಂತ್ರಿ ಕೆ ಕರುಣಕರನ್ ಅವರ ಪುತ್ರ ಕೆ.ಮುರಲೀಧರನ್ ಅವರನ್ನು ಎನ್ಎಸ್ಎಸ್ ಬೆಂಬಲಿಸುತ್ತಿದೆ.ಆರ್ ಎಸ್ಎಸ್ ಎಸ್ಕಾಂಗ್ರೆಸ್ ಜೊತೆಗಿನ ನಂಟು ಬರೇ ನೆಮೊಮ್ಗೆ ಮಾತ್ರ ಸೀಮಿತವಾಗಿದೆಯೇ ಅಥವಾ ರಾಜ್ಯದ ಇತರ ಕ್ಷೇತ್ರಗಳಿಗೂ ವಿಸ್ತರಿಸಿ ಕೇರಳದಲ್ಲಿ ಗಾತ್ರ ಹಿಗ್ಗಿಸಿಕೊಳ್ಳುವ ಬಿಜೆಪಿಯ ಮಹತ್ವಾಕಾಂಕ್ಷೆಗೆ ತಡೆ ಒಡ್ಡಲಿದೆಯೇ ಎಂದು ಕಾದು ನೋಡಬೇಕಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಕೇರಳದ ಜನಸಂಖ್ಯೆಯಲ್ಲಿ ನಾಯರ್ ಸಮುದಾಯದ ಪಾಲು ಶೇಕಡಾ 14.5 ರಷ್ಟಿದೆ. ಆರ್‌ಎಸ್ಎಸ್ ‌ಮುಖವಾಣಿ ಆರ್ಗನೈಸರ್ ಮನ್ನಾಥ್ ಪದ್ಮನಾಭನ್ ಅವರನ್ನು ಉಲ್ಲೇಖಿಸಿ, ಶಕ್ತಿ ಮತ್ತು ಸಂಘಟನೆಯ ಕೊರತೆ ಮತ್ತು ಅದರ ಪರಿಣಾಮದ ಹೇಡಿತನ ಮತ್ತು ನಮ್ಮ ಹಿಂದೂ ಜನಾಂಗದ ದರಿದ್ರ ಸ್ಥಿತಿಗೆ ಆರ್‌ಎಸ್ಎಸ್ ಮಾತ್ರ ಪರಿಣಾಮಕಾರಿ ಪರಿಹಾರವಾಗಿದೆ. ನಾನು ಪ್ರಾಯದವನಾಗಿದ್ದಿದ್ದರೆ ಆರ್ಎಸ್ಎಸ್ನ ದೈಹಿಕ ಚಟುವಟಿಕೆಗಳಲ್ಲಿ ಸಹ ನಾನು ಸಂತೋಷದಿಂದ ಭಾಗವಹಿಸುತ್ತಿದ್ದೆ ಎಂದು ಪ್ರಕಟಿಸಿದೆ.

ಕೇರಳದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕಾರಿಣಿ ಪ್ರಕಾರ ಆರ್ಎಸ್ಎಸ್ ಮತ್ತು ಎನ್ಎಸ್ಎಸ್ ಯಾವುದೇ ಸೈದ್ಧಾಂತಿಕ ಸಂಘರ್ಷಗಳನ್ನು ಹೊಂದಿಲ್ಲ. ಈ ಹಿಂದೆ ಸಂಸ್ಥೆಗಳು ಪರಸ್ಪರ ಅನ್ಯೋನ್ಯವಾಗೇ ಇವೆ. ಹಾಗಾದರೆ, ಎನ್ಎಸ್ಎಸ್ ಬಿಜೆಪಿಯನ್ನು ಏಕೆ ಬೆಂಬಲಿಸಲಿಲ್ಲ? ಎನ್ಎಸ್ಎಸ್ನ ಪ್ರಸ್ತುತ ನಾಯಕತ್ವವು ಸಂಸ್ಥೆಯ ಸದಸ್ಯರ ನಾಡಿಮಿಡಿತವನ್ನು ಅರ್ಥಮಾಡಿಕೊಂಡಿಲ್ಲ. ನಾಯಕತ್ವ ಮಾತ್ರ ಬಿಜೆಪಿಯಿಂದ ದೂರ ಸರಿದಿದೆ, ನಾಯರ್‌ಗಳಲ್ಲ ಎಂದು ಆರ್ ಎಸ್‌ ಎಸ್ ನಾಯಕನಾಯಕರು ಹೇಳುತ್ತಾರೆ. ‌

2014 ರ ಲೋಕಸಭಾ ಚುನಾವಣೆಯಲ್ಲಿ ಕೇರಳದಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್ ಡಿಏ) ಮತ ಪಾಲು ಶೇಕಡಾ 10.85 ರಷ್ಟಿತ್ತು. 2019 ರ ಲೋಕಸಭಾ ಚುನಾವಣೆಯಲ್ಲಿ ಇದು ಶೇಕಡಾ 15.20 ಕ್ಕೆ ಏರಿಕೆಯಾಗಿದ್ದು, ಬಿಜೆಪಿ ಒಂದೇ ಶೇ 12.93 ರಷ್ಟು ಮತಗಳನ್ನು ಪಡೆದಿದೆ. ಕೇರಳದಲ್ಲಿ ಬಿಜೆಪಿಗೆ ಜನ ಬೆಂಬಲ ಹೆಚ್ಚುತ್ತಿದೆ. ಇದು ನಾಯರ್ ಸಮುದಾಯದ ಮತವಾಗಿದೆ ಇದರ ಮೊದಲ ಹೊಡೆತ ಕಾಂಗ್ರೆಸ್ ಗೆ ಆಗಿದ್ದರೆ ಸಿಪಿಐ ಮತ್ತು ಸಿಪಿಐಎಂ ಗೆ ಎರಡನೆಯ ಹೊಡೆತ ತಿಂದಿದೆ ಎಂದು ಕೇರಳ ಮೂಲದ ರಾಜಕೀಯ ವಿಶ್ಲೇಷಕ ಮತ್ತು ಹಿರಿಯ ಪತ್ರಕರ್ತ ಕೆ.ಪಿ.ಸೇತುನಾಥ್ ಹೇಳುತ್ತಾರೆ. ಮುಟ್ಟಿನ ವಯಸ್ಸಿನ ಮಹಿಳೆಯರಿಗೆ ಬೆಟ್ಟದ ದೇಗುಲಕ್ಕೆ ಪ್ರವೇಶಿಸಲು ಅವಕಾಶ ಮಾಡಿಕೊಟ್ಟ 2018 ರ ಸುಪ್ರೀಂ ಕೋರ್ಟ್ ತೀರ್ಪಿನ ನಂತರ ನಡೆದ ‘ಸೇವ್‌ ಶಬರಿಮಲʼ ಅಭಿಯಾನದ ಸಂದರ್ಭದಲ್ಲಿ, ಕೋಪಗೊಂಡ ಎನ್ಎಸ್ಎಸ್ ನಾಯಕತ್ವವು ಸಮುದಾಯವನ್ನು ಪ್ರತಿಭಟನೆಗೆ ಬೆಂಬಲಿಸುವಂತೆ ಕೋರಿತ್ತು.

ಈ ಆಂದೋಲನವನ್ನು ಬಿಜೆಪಿ ಮತ್ತು ಆರ್‌ಎಸ್ಎಸ್ ಆಯೋಜಿಸಿದ್ದರೆ, 2019 ರ ಲೋಕಸಭಾ ಚುನಾವಣೆಯಲ್ಲಿ, ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ 20 ಲೋಕಸಭಾ ಸ್ಥಾನಗಳಲ್ಲಿ 19 ಸ್ಥಾನಗಳನ್ನು ಗೆಲ್ಲುವ ಮೂಲಕ ಚುನಾವಣಾ ಲಾಭವನ್ನು ಗಳಿಸಿತು. ಇದರ ಅರ್ಥ, ನಾಯರ್ ಸಮುದಾಯದ ಮತವು ಕಾಂಗ್ರೆಸ್ ಪರವಾಗಿ ಚಲಾವಣೆಯಾಗಿದೆ. ಆರ್ಎಸ್ಎಸ್ ಮತ್ತು ಬಿಜೆಪಿ ನಾಯಕರು ಮತಗಳಿಕೆ ಹಿನ್ನಡೆಗೆ ಎನ್ಎಸ್ಎಸ್ ಪ್ರಧಾನ ಕಾರ್ಯದರ್ಶಿ ಜಿ ಸುಕುಮಾರನ್ ನಾಯರ್‌ಗಳನ್ನು ಧೂಷಿಸಿದ್ದಾರೆ. ಎನ್ಎಸ್ಎಸ್ ಕಾಂಗ್ರೆಸ್ ಅನ್ನು ಬೆಂಬಲಿಸಬಾರದು ಎಂದು ಬಿಜೆಪಿ ನಾಯಕರೊಬ್ಬರು ಹೇಳಿದರು. ಕಾಂಗ್ರೆಸ್ ಗೆ ಸುಕುಮಾರನ್ ನಾಯರ್ ಅವರ ಬೆಂಬಲವು ಪ್ರಾದೇಶಿಕ ಪಕ್ಷವಾದ ಕೇರಳ ಕಾಂಗ್ರೆಸ್ ಜತೆಗಿನ ಹಿಂದಿನ ಒಡನಾಟದ ಫಲವಾಗಿದೆ ಎಂದು ರಾಜಕೀಯ ವೀಕ್ಷಕರು ಹೇಳುತ್ತಾರೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನಿಂದ ಒಂದು ಬಣ ವಿಭಜನೆಯಾದ ನಂತರ 1964 ರಲ್ಲಿ ಸ್ಥಾಪನೆಯಾದ ಪಕ್ಷ ಕೇರಳ ಕಾಂಗ್ರೆಸ್ ಆಗಿದ್ದು, ಕೆ.ಎಂ ಜಾರ್ಜ್ ಮತ್ತು ಆರ್ ಬಾಲಕೃಷ್ಣ ಪಿಳ್ಳೈ ಅವರು ಇದರ ಸ್ಥಾಪಕರು. ಆ ಸಮಯದಲ್ಲಿ ಅವರು ಎನ್ಎಸ್ಎಸ್ ಸಂಸ್ಥಾಪಕ ಮನ್ನಾಥ್ ಪದ್ಮನಾಭನ್ ಅವರ ಬೆಂಬಲವನ್ನು ಪಡೆದಿದ್ದರು.

ನಂತರದ ವರ್ಷಗಳಲ್ಲಿ ಕೇರಳ ಕಾಂಗ್ರೆಸ್ ಹಲವಾರು ಬಣಗಳಾಗಿ ವಿಭಜನೆಯಾಯಿತು, ಆದರೆ ಪ್ರಸ್ತುತ, ಒಂದು ಪ್ರಮುಖ ಬಣ ಕೇರಳ ಕಾಂಗ್ರೆಸ್ (ಜೋಸೆಫ್) ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ಮತ್ತು ಇನ್ನೊಂದು ಕೇರಳ ಕಾಂಗ್ರೆಸ್ (ಮಣಿ) ಎಡರಂಗದ ಜತೆಗಿದೆ. ಶಬರಿಮಲೆ ತೀರ್ಪನ್ನು ಜಾರಿಗೆ ತಂದ ನಂತರ ನಾಯಕತ್ವವು ಎಲ್ಡಿಎಫ್ ಅನ್ನು ಬೆಂಬಲಿಸಲು ಸಾಧ್ಯವಿಲ್ಲವಾದ್ದರಿಂದ, ಎನ್ಎಸ್ಎಸ್ ಈಗ ಕಾಂಗ್ರೆಸ್ ಅನ್ನು ಬೆಂಬಲಿಸುತ್ತಿದೆ.ಇದುಶಬರಿಮಲೆ ದೇವಾಲಯದ ಸಂಪ್ರದಾಯವನ್ನು ಕಾಪಾಡುವ ಶಾಸನವನ್ನು ತರಲು ಬಯಸಿದೆ ಎಂದು ಎನ್ಎಸ್ಎಸ್ ಮೂಲವೊಂದು ತಿಳಿಸಿದೆ. ಇದಲ್ಲದೆ, ಕಾಂಗ್ರೆಸ್ ಅನ್ನು ಬೆಂಬಲಿಸುವ ಎನ್ಎಸ್ಎಸ್ ನಾಯಕತ್ವದ ನಿರ್ಧಾರವು ಅವರ ಪ್ರಧಾನ ಆಸ್ತಿ-ಶಿಕ್ಷಣ ಸಂಸ್ಥೆಗಳನ್ನು ಕಾಪಾಡುವ ಉದ್ದೇಶವನ್ನು ಹೊಂದಿದೆ ಎಂದು ಆರ್ಎಸ್ಎಸ್ ನಾಯಕರೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು. ಎನ್ಎಸ್ಎಸ್,ಪ್ರಸ್ತುತ 100 ಕ್ಕೂ ಹೆಚ್ಚು ಶಾಲೆಗಳು ಮತ್ತು ಡಜನ್ಗಟ್ಟಲೆ ಖಾಸಗಿ ಕಾಲೇಜುಗಳನ್ನು ಹೊಂದಿದೆ. ಕಾಂಗ್ರೆಸ್ ಅವರಿಗೆ ಶಾಲೆಗಳನ್ನು ನಡೆಸಲು ನಿರ್ಬಂಧಗಳನ್ನು ಕಡಿಮೆ ಮಾಡಿ ಹೆಚ್ಚಿನ ಅನುಕೂಲಗಳನ್ನು ನೀಡಬಹುದು ಎಂದು ಆರ್ಎಸ್ಎಸ್ ನಾಯಕ ಆರೋಪಿಸಿದ್ದಾರೆ.

ಸಿಪಿಐ ಯೊಂದಿಗೆ, ಎನ್ಎಸ್ಎಸ್ ಬಿನ್ನಾಭಿಪ್ರಾಯಗಳನ್ನು ಹೊಂದಿದೆ. ಈ ಕುರಿತು ಎನ್ಎಸ್ಎಸ್ ಜಿಲ್ಲಾಪದಾಧಿಕಾರಿ ಜಯಪ್ರಕಾಶ್ ನಾಯರ್ ಅವರೊಂದಿಗೆ ಮಾತನಾಡಿದಾಗ ನಾವು ಸ್ಪರ್ಧಿಸುತ್ತಿರುವ ಎಲ್ಲಾ ಪಕ್ಷಗಳಿಂದ ಸಮಾನ ಅಂತರವನ್ನು ಕಾಪಾಡಿಕೊಳ್ಳುತ್ತೇವೆ ಎಂದು ಅವರು ಹೇಳಿದರು. ಎನ್ಎಸ್ಎಸ್ ನಾಯಕತ್ವದ ನಿರ್ಧಾರಗಳನ್ನು ಎಲ್ಲಾ ಜಿಲ್ಲೆಗಳ ಎಲ್ಲಾ ಪದಾಧಿಕಾರಿಗಳೂ ಪಾಲಿಸುತ್ತಾರೆ. ನಮಗೆ ಬಿಜೆಪಿ ವಿರುದ್ಧ ದ್ವೇಷ ಇಲ್ಲವಾದರೂ ಅದನ್ನು ಬೆಂಬಲಿಸದಿರುವುದು ನಾಯಕತ್ವದ ನಿರ್ಧಾರ ಎಂದು ಅವರು ಹೇಳಿದರು.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com