ಒಂದು ಕಾಲಿನಲ್ಲಿ ಬಂಗಾಳವನ್ನೂ, ಎರಡೂ ಕಾಲುಗಳಿಂದ ದೆಹಲಿಯನ್ನು ಗೆದ್ದು ತೋರಿಸುತ್ತೇನೆ: ಮಮತಾ ಬ್ಯಾನರ್ಜಿ

ಕೇಂದ್ರ ಸರ್ಕಾರ ದೇಶವನ್ನು ಆಳುವುದು ಬಿಟ್ಟು ಪಶ್ಚಿಮ ಬಂಗಾಳದ ಚುನಾವಣೆಯತ್ತ ತನ್ನಿಡೀ ಗಮನ ಹರಿಸಿದೆ ಎಂದು ಮಮತಾ ಕಿಡಿ ಕಾರಿದ್ದಾರೆ.
ಒಂದು ಕಾಲಿನಲ್ಲಿ ಬಂಗಾಳವನ್ನೂ, ಎರಡೂ ಕಾಲುಗಳಿಂದ ದೆಹಲಿಯನ್ನು ಗೆದ್ದು ತೋರಿಸುತ್ತೇನೆ: ಮಮತಾ ಬ್ಯಾನರ್ಜಿ

ಗಾಯದಿಂದಾಗಿ ಒಂದು ಕಾಲು ನೋವಿದ್ದರೂ ರಾಜ್ಯ ಚುನಾವಣೆಯಲ್ಲಿ ಗೆಲ್ಲುತ್ತೇನೆ, ಎರಡೂ ಕಾಲು ಸರಿಯಾದ ಬಳಿಕ ದೆಹಲಿಯ ಅಧಿಕಾರವನ್ನೇ ಹಿಡಿಯುತ್ತೇನೆ ಎಂದು ಒಂದು ಕಾಲದಲ್ಲಿ ಪ್ರಧಾನಮಂತ್ರಿ ಹುದ್ದೆ ಆಕಾಂಕ್ಷಿಯಾಗಿದ್ದ ಮಮತಾ ಬ್ಯಾನರ್ಜಿ ಘರ್ಜಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಮೂರನೇ ಅವಧಿಗೆ ಅಧಿಕಾರ ಹಿಡಿಯಲು ಪ್ರಯತ್ನಿಸುತ್ತಿರುವ ಮಮತಾ ಬ್ಯಾನರ್ಜಿ, ಚುನಾವಣಾ ಪ್ರಚಾರದ ವೇಳೆ ನರೇಂದ್ರ ಮೋದಿ ಹಾಗೂ ಅಮಿತ್‌ ಶಾ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ತನ್ನನ್ನು ರಾಯಲ್ ಬಂಗಾಳದ ಹುಲಿ ಎಂದು ಹೇಳಿಕೊಂಡ ಟಿಎಂಸಿ ಮುಖ್ಯಸ್ಥೆ, ಪಶ್ಚಿಮ ಬಂಗಾಳವನ್ನು ಗುಜರಾತ್‌ನಿಂದ ಯಾರೊಬ್ಬರೂ ಆಳಲಾಗುವುದಿಲ್ಲ. ಪಶ್ಚಿಮ ಬಂಗಾಳವನ್ನು ಪಶ್ಚಿಮ ಬಂಗಾಳದ ಜನರೇ ಆಳುತ್ತಾರೆ ಎಂದು ಪುನರುಚ್ಛರಿಸಿದ ಮಮತಾ, ನಾನು ಒಂದು ಕಾಲಿನಿಂದ ಪಶ್ಚಿಮ ಬಂಗಾಳವನ್ನು ಮತ್ತು ಎರಡು ಕಾಲುಗಳಿಂದ ದೆಹಲಿಯನ್ನು ಗೆಲ್ಲುತ್ತೇನೆ ಎಂದು = ಭರವಸೆ ವ್ಯಕ್ತಪಡಿಸಿದ್ದಾರೆ.

ಒಂದು ಕಾಲಿನಲ್ಲಿ ಬಂಗಾಳವನ್ನೂ, ಎರಡೂ ಕಾಲುಗಳಿಂದ ದೆಹಲಿಯನ್ನು ಗೆದ್ದು ತೋರಿಸುತ್ತೇನೆ: ಮಮತಾ ಬ್ಯಾನರ್ಜಿ
ಬಂಗಾಳ ಮತ್ತು ತಮಿಳುನಾಡಿನಲ್ಲಿ ಪ್ರಮುಖ ಪಾತ್ರ ವಹಿಸಲಿರುವ ಮಹಿಳಾ ಮತದಾರರು

ಛತ್ತೀಸಗಡದಲ್ಲಿ ಭಾನುವಾರ ನಡೆದ ನಕ್ಸಲ್ ದಾಳಿಯಲ್ಲಿ ಹುತಾತ್ಮರಾದ 22 ಭದ್ರತಾ ಸಿಬ್ಬಂದಿಯ ಕುರಿತಂತೆ ಕೇಂದ್ರ ಸರ್ಕಾರವನ್ನು ಟೀಕಿಸಿದ ಮಮತಾ, ಗುಪ್ತಚರ ಇಲಾಖೆ ವಿಫಲವಾಗಿದೆ. ಕೇಂದ್ರ ಸರ್ಕಾರ ದೇಶವನ್ನು ಆಳುವುದು ಬಿಟ್ಟು ಪಶ್ಚಿಮ ಬಂಗಾಳದ ಚುನಾವಣೆಯತ್ತ ತನ್ನಿಡೀ ಗಮನ ಹರಿಸಿದೆ ಎಂದು ಮಮತಾ ಕಿಡಿ ಕಾರಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಕಳೆದ ತಿಂಗಳು ಮಮತಾ ಬ್ಯಾನರ್ಜಿ ನಾಮಪತ್ರ ಸಲ್ಲಿಸುವಾಗ ನಡೆದ ಉಂಟಾದ ನೂಕನುಗ್ಗಲಿನಲ್ಲಿ ಮಮತಾರ ಒಂದು ಕಾಲು ಗಾಯಗೊಂಡಿತ್ತು. ತನ್ನ ಗಾಯಗೊಂಡ ಕಾಲುಗಳನ್ನಿಟ್ಟುಕೊಂಡೇ ಪಶ್ಚಿಮ ಬಂಗಾಳದಾದ್ಯಂತ ಚುನಾವಣಾ ರ್ಯಾಲಿಯನ್ನು ನಡೆಸಿ ಮತಪ್ರಚಾರ ಕೈಗೊಳ್ಳುತ್ತಿದ್ದಾರೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com