ಉತ್ತರಾಖಂಡ್:‌ ಭಾರೀ ಪ್ರಮಾಣದ ಕಾಡ್ಗಿಚ್ಚಿಗೆ ನಾಲ್ವರು ಸಜೀವ ದಹನ, ಏಳು ಜಾನುವಾರು ಬಲಿ

ಕಳೆದ ವರ್ಷ ಸುಮಾರು 172 ಹೆಕ್ಟೇರ್‌ ಅರಣ್ಯ ಬೆಂಕಿಗೆ ಆಹುತಿಯಾಗಿದ್ದರೆ, ಈ ಬಾರಿ ಸುಮಾರು 1290 ಹೆಕ್ಟೇರ್‌ಗಳಿಗಿಂತಲೂ ಹೆಚ್ಚಿನ ಭೂಭಾಗ ಕಾಡ್ಗಿಚ್ಚಿಗೆ ಬಲಿಯಾಗಿವೆ.
ಉತ್ತರಾಖಂಡ್:‌ ಭಾರೀ ಪ್ರಮಾಣದ ಕಾಡ್ಗಿಚ್ಚಿಗೆ ನಾಲ್ವರು ಸಜೀವ ದಹನ, ಏಳು ಜಾನುವಾರು ಬಲಿ

ಉತ್ತರಾಖಂಡಿನಲ್ಲಿ ಕಳೆದ 24 ತಾಸುಗಳಲ್ಲಿ ವ್ಯಾಪಕ ಕಾಡ್ಗಿಚ್ಚು ಸಂಭವಿಸಿದ್ದು, ವಿಶಾಲ ವಿಸ್ತೀರ್ಣದ ಬಹುಪಾಲು ಕಾಡು ಬೆಂಕಿಯ ಕೆನ್ನಾಲಿಗೆಗೆ ಬೂದಿಯಾಗಿವೆ.

ಇದುವರೆಗೂ 62 ಹೆಕ್ಟೇರ್‌ ಅರಣ್ಯ ಪ್ರದೇಶ ಬೆಂಕಿಗೆ ಆಹುತಿಯಾಗಿದ್ದು, ಸುಮಾರು 12,000 ಕ್ಕೂ ಹೆಚ್ಚು ಅಗ್ನಿಶಾಮಕ ದಳದ ಸಿಬ್ಬಂದಿಗಳು ಹಾಗೂ ಫಾರೆಸ್ಟ್‌ ಗಾರ್ಡ್ಸ್‌ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

ದುರದೃಷ್ಟವಶಾತ್‌, ಕಾಡ್ಗಿಚ್ಚಿನಲ್ಲಿ ಸಿಲುಕಿ ನಾಲ್ವರು ಸಜೀವ ದಹನವಾದರೆ, ಏಳಕ್ಕೂ ಹೆಚ್ಚು ಪ್ರಾಣಿಗಳು ಬೆಂಕಿಗೆ ಬಲಿಯಾಗಿವೆ ಹಾಗೂ ಬೆಂಕಿಯಿಂದ ಸುಮಾರು 37 ಲಕ್ಷ ರುಪಾಯಿಗಳಷ್ಟು ಆಸ್ತಿಗೆ ಹಾನಿಯಾಗಿವೆ ಎಂದು ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿ ತಿಳಿಸಿರುವುದಾಗಿ ಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಎಪ್ರಿಲ್‌ ತಿಂಗಳ ಗರಿಷ್ಟ ಮಟ್ಟದ ತಾಪಮಾನ ಇನ್ನೂ ಛತ್ತೀಸಗಢದಲ್ಲಿ ಪ್ರಾರಂಭವಾಗದಿದ್ದರೂ, ಈ ಮಟ್ಟಿನ ಬೆಂಕಿ ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ. ಸಹಜವಾಗಿ, ಬಿಸಿಲ ಧಗೆಗೆ ಕಾಡ್ಗಿಚ್ಚಿನ ಪ್ರಮಾಣ ಹೆಚ್ಚಿರುವುದಾಗಿಯೂ, ಬೆಂಕಿ ಹಬ್ಬುವ ವೇಗ ಹೆಚ್ಚಾಗುತ್ತವೆ. ಆದರೆ ಈ ಬಾರಿ ಚಳಿಗಾಲದ ವೇಳೆಯಲ್ಲಿಯೇ ಇಲ್ಲಿ ಕಾಡ್ಗಿಚ್ಚು ಹಬ್ಬಲು ಪ್ರಾರಂಭವಾಗಿವೆ.

ಕಳೆದ ವರ್ಷ ಸುಮಾರು 172 ಹೆಕ್ಟೇರ್‌ ಅರಣ್ಯ ಬೆಂಕಿಗೆ ಆಹುತಿಯಾಗಿದ್ದರೆ, ಈ ಬಾರಿ ಸುಮಾರು 1290 ಹೆಕ್ಟೇರ್‌ಗಳಿಗಿಂತಲೂ (ಅಂದರೆ ಸುಮಾರು 2317 ಫುಟ್‌ಬಾಲ್‌ ಗ್ರೌಂಡ್‌ನಷ್ಟು) ಹೆಚ್ಚಿನ ಭೂಭಾಗ ಕಾಡ್ಗಿಚ್ಚಿಗೆ ಬಲಿಯಾಗಿವೆ.

ಕೇವಲ ಕಳೆದ 48 ಗಂಟೆಗಳಲ್ಲಿಯೇ ರಾಜ್ಯದಲ್ಲಿ 39 ಕಾಡ್ಗಿಚ್ಚು ಪ್ರಕರಣಗಳು ವರದಿಯಾಗಿದೆ. ಇದರೊಂದಿಗೆ ಕೇವಲ ಈ ವರ್ಷದ ಕಾಡ್ಗಿಚ್ಚಿನ ಸಂಖ್ಯೆ 983 ನ್ನು ದಾಟಿದೆ ಎಂದು ಹಿಂದುಸ್ತಾನ್‌ ಟೈಮ್ಸ್‌ ವರದಿ ಮಾಡಿದೆ.

ಉತ್ತರಾಖಾಂಡಿನಲ್ಲಿ ಫೆಬ್ರವರಿಯಿಂದ ಜೂನ್‌ ಅಂತ್ಯದವರೆಗೆ ಕಾಡ್ಗಿಚ್ಚು ಪ್ರಕರಣಗಳು ಸಾಮಾನ್ಯವಾದರೂ, ಮೇ ಹಾಗೂ ಜೂನ್‌ ತಿಂಗಳಲ್ಲಿ ವಿಪರೀತ ಪ್ರಮಾಣದ ಬಿಸಿಲಿನ ಕಾರಣ ಈ ತಿಂಗಳುಗಳಲ್ಲಿ ಕಾಡ್ಗಿಚ್ಚಿನ ಪ್ರಮಾಣ ಹೆಚ್ಚಿರುತ್ತವೆ. ಆದರೆ, ಎಪ್ರಿಲ್‌ ಆರಂಭದಲ್ಲೇ ಈ ಪ್ರಮಾಣದ ಕಾಡ್ಗಿಚ್ಚು ಶುರುವಾಗಿದ್ದು ದಿಗಿಲಿಗೆ ಕಾರಣವಾಗಿದೆ.

2000 ರಲ್ಲಿ ಉತ್ತರಾಖಂಡ ರಾಜ್ಯ ರಚನೆಯಾದಾಗಿನಿಂದ, ಕಾಡ್ಗಿಚ್ಚಿನಿಂದಾಗಿ ರಾಜ್ಯವು 44,000 ಹೆಕ್ಟೇರ್ ಅರಣ್ಯವನ್ನು ಕಳೆದುಕೊಂಡಿದೆ. 2016 ಮತ್ತು 2018 ರಲ್ಲಿ ಅತಿದೊಡ್ಡ ಕಾಡ್ಗಿಚ್ಚು ಪ್ರಕರಣಗಳಿಗೆ ರಾಜ್ಯವು ಸಾಕ್ಷಿಯಾಗಿದೆ. ಕೇವಲ ಈ ಎರಡು ವರ್ಷಗಳಲ್ಲಿ ಒಟ್ಟಾರೆಯಾಗಿ 8,900 ಹೆಕ್ಟೇರ್ ಅರಣ್ಯ ಭೂಮಿಯನ್ನು ಉತ್ತರಾಖಂಡ್‌ ಕಳೆದುಕೊಂಡಿದೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com