ತಮಿಳುನಾಡಿನಲ್ಲಿ ಡಿಎಂಕೆ ಪರ ಪ್ರಚಾರ ಮಾಡುತ್ತಿದ್ದಾರೆಯೇ ಪ್ರಧಾನಿ ಮೋದಿ?

ಮೋದಿ ಹಂಚಿಕೊಂಡಿರುವ ವಿಡಿಯೋ ಇಟ್ಟುಕೊಂಡು 'ಇದು ಡಿಎಂಕೆ ಪರ ಪ್ರಚಾರ' ಎಂದು ನೆಟ್ಟಿಗರು ಕಾಲೆಳೆದಿದ್ದಾರೆ. ಇದಕ್ಕೆ ಪೂರಕ ಎಂಬಂತೆ ಮೋದಿ ಹಂಚಿಕೊಂಡಿರುವ ವಿವೇಕಾನಂದ ಸ್ಮಾರಕ ಮತ್ತು ತಿರುವಳ್ಳುವರ್ ಪ್ರತಿಮೆಗಳು ನಿರ್ಮಾಣವಾಗಿದ್ದು 1996ರಲ್ಲಿ.
ತಮಿಳುನಾಡಿನಲ್ಲಿ ಡಿಎಂಕೆ ಪರ ಪ್ರಚಾರ ಮಾಡುತ್ತಿದ್ದಾರೆಯೇ ಪ್ರಧಾನಿ ಮೋದಿ?

ತಮಿಳುನಾಡಿನಲ್ಲಿ ಆಡಳಿತಾರೂಢ ಎಐಎಡಿಎಂಕೆ ಮತ್ತು ಬಿಜೆಪಿ ಮಿತ್ರಪಕ್ಷಗಳು. ಡಿಎಂಕೆ ಪಕ್ಷ ಎಐಎಡಿಎಂಕೆಯ ಸಾಂಪ್ರದಾಯಿಕ ಎದುರಾಳಿ. ಆದರೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಡಿಎಂಕೆ ಪರ ಪ್ರಚಾರ ನಡೆಸುತ್ತಿದ್ದಾರಾ ಎಂಬ ವದಂತಿ ಶುರುವಾಗಿದೆ. ನರೇಂದ್ರ ಮೋದಿ ಬಗ್ಗೆ ಇಂಥ ವದಂತಿ ಹುಟ್ಟಿಕೊಳ್ಳಲು ಹಲವು ಸಂಗತಿಗಳಿವೆ. ಆ ಪೈಕಿ ಬಹಳ ಮುಖ್ಯವಾದುದು ಇಂದು ನರೇಂದ್ರ ಮೋದಿ ತಮ್ಮದೇ ಟ್ವೀಟರ್ ಅಕೌಂಟಿನಲ್ಲಿ ಹರಿಯ ಬಿಟ್ಟಿರುವ ವಿಡಿಯೋ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

"ಕನ್ಯಾಕುಮಾರಿಗೆ ಹೋಗುವ ದಾರಿಯಲ್ಲಿ ಭವ್ಯವಾದ ವಿವೇಕಾನಂದ ಸ್ಮಾರಕ ಮತ್ತು ತಿರುವಳ್ಳುವರ್ ಪ್ರತಿಮೆಯ ದರ್ಶನವಾಯಿತು" ಎಂಬ ಒಕ್ಕಣೆಯೊಂದಿಗೆ ಆಕಾಶದಿಂದ ವಿವೇಕಾನಂದ ಸ್ಮಾರಕ ಮತ್ತು ತಿರುವಳ್ಳುವರ್ ಪ್ರತಿಮೆಗಳನ್ನು ಸೆರೆಹಿಡಿದಿರುವ ದೃಶ್ಯಗಳನ್ನು ಮೋದಿ ಹಂಚಿಕೊಂಡಿದ್ದಾರೆ. ಇದಕ್ಕೂ ಮೊದಲು ಇತ್ತೀಚೆಗೆ ಅವರು ತಮಿಳುನಾಡಿನಲ್ಲಿ ಮಾಡುತ್ತಿರುವ ಭಾಷಣಗಳು ತಮಿಳರನ್ನು ಕೆಣಕುವಂತಿದ್ದು ಜನ ಡಿಎಂಕೆಯತ್ತ ವಾಲುವಂತೆ ಮಾಡುತ್ತಿವೆ. ರಾಷ್ಟ್ರೀಯ ಪಕ್ಷಗಳನ್ನು ವಿರೋಧಿಸುವ ಮನೋಸ್ಥಿತಿಯುಳ್ಳ ತಮಿಳುನಾಡಿನಲ್ಲಿ ಎಐಎಡಿಎಂಕೆ ಜೊತೆಗಿದ್ದ ಮತದಾರರು ಕೂಡ ಬಿಜೆಪಿ ಜೊತೆಗೆ ಹೋದ ಕಾರಣಕ್ಕೆ ಎಐಎಡಿಎಂಕೆಯಿಂದ ದೂರವಾಗುತ್ತಿದ್ದಾರೆ ಎಂದು ಹೇಳಾಗುತ್ತಿತ್ತು.

ಪ್ರಧಾನಿ ಮೋದಿ ಮತ್ತು ಬಿಜೆಪಿ ನಾಯಕರು ಹೆಚ್ಚೆಚ್ಚು ಎಐಎಡಿಎಂಕೆ ಜೊತೆ ಗುರುತಿಸಿಕೊಂಡಷ್ಟು ತಮಗೆ ಲಾಭ ಎಂಬುದನ್ನು ಅರಿತ ಕೆಲವು ಡಿಎಂಕೆ ನಾಯಕರು ಅದರಲ್ಲೂ ಅಭ್ಯರ್ಥಿಗಳು 'ಪ್ರಧಾನಿ ಮೋದಿ ತಮಿಳುನಾಡಿನಲ್ಲಿ ಹೆಚ್ಚೆಚ್ಚು ಪ್ರದರ್ಶನ ಮಾಡಲಿ, ಆ ಮೂಲಕ ನಮಗೆ ಲಾಭ ಮಾಡಿಕೊಡಲಿ' ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದರು. ಡಿಎಂಕೆ ನಾಯಕರು ಪ್ರಧಾನಿ ಮೋದಿಯನ್ನು ಪ್ರಚಾರಕ್ಕೆ ಆಹ್ವಾನಿಸಿದ್ದ ವಿಷಯ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಕೂಡ ಆಗಿತ್ತು. ಈಗ ಸ್ವತಃ ಮೋದಿ ಮತ್ತೊಮ್ಮೆ 'ಚರ್ಚಾ ವಿಷಯ' ನೀಡಿದ್ದಾರೆ.

ಮೋದಿ ಹಂಚಿಕೊಂಡಿರುವ ವಿಡಿಯೋ ಇಟ್ಟುಕೊಂಡು 'ಇದು ಡಿಎಂಕೆ ಪರ ಪ್ರಚಾರ' ಎಂದು ನೆಟ್ಟಿಗರು ಕಾಲೆಳೆದಿದ್ದಾರೆ. ಇದಕ್ಕೆ ಪೂರಕ ಎಂಬಂತೆ ಮೋದಿ ಹಂಚಿಕೊಂಡಿರುವ ವಿವೇಕಾನಂದ ಸ್ಮಾರಕ ಮತ್ತು ತಿರುವಳ್ಳುವರ್ ಪ್ರತಿಮೆಗಳು ನಿರ್ಮಾಣವಾಗಿದ್ದು 1996ರಲ್ಲಿ. ಆಗ ತಮಿಳುನಾಡಿನ ಮುಖ್ಯಮಂತ್ರಿ ಆಗಿದ್ದವರು ಡಿಎಂಕೆಯ ಸಂಸ್ಥಾಪಕ ದಿವಂಗತ ಕೆ. ಕರುಣಾನಿಧಿ.‌ ಇದನ್ನು ಉಲ್ಲೇಖಿಸಿರುವ ಎ.ಜೆ. ದಯನ್ ಎಂಬುವವರು

"#DMK4TN @mkstalin Sir , These are the monuments built by kalaignar karunanidhi, the DMK patriarch . Kaialgnar is the modern architect of tamilnadu.

Thank you for helping to promote DMK

(ಸರ್, ಇವು ಡಿಎಂಕೆ ಪಿತಾಮಹ ಕಳೈಂಗರ್ ಕರುಣಾನಿಧಿ ನಿರ್ಮಿಸಿದ ಸ್ಮಾರಕಗಳು. ಕಳೈಂಗರ್ ತಮಿಳುನಾಡಿನ ಆಧುನಿಕ ವಾಸ್ತುಶಿಲ್ಪಿ. ಡಿಎಂಕೆ ಪ್ರಚಾರಕ್ಕೆ ಸಹಾಯ ಮಾಡಿದ್ದಕ್ಕಾಗಿ ಧನ್ಯವಾದಗಳು)" ಎಂದಿದ್ದಾರೆ.

ಅಬ್ದುಲ್ ಮಾದುಮೂಲೆ ಎಂಬುವವರು

"But it is not on the way. It is the Southern end point. Tweeting old clip and claiming clicked on the way? Harmless lie, it is ok

(ಆದರೆ ಅದು ಆ ದಾರಿಯಲ್ಲಿಲ್ಲ. ಇದು ದಕ್ಷಿಣದ ತುದಿಯಲ್ಲಿದೆ. ಹಳೆಯ ಕ್ಲಿಪ್ ಅನ್ನು ಟ್ವೀಟ್ ಮಾಡಿದರೆ ದಾರಿಯಲ್ಲಿ ಕ್ಲಿಕ್ ಮಾಡಿದಂತಾಗುತ್ತದೆಯೇ? ಆದರೂ ನಿರುಪದ್ರವಿ ಸುಳ್ಳು, ಪರವಾಗಿಲ್ಲ)" ಎಂದು ಮೋದಿಯ ಕಾಲೆಳೆದಿದ್ದಾರೆ

ಅಭಿ ಧೀಕ್ಷಿತ್ ಎಂಬುವವರು "Sir want to ask a question.

Do PM of india have so much of time that he could conduct election rallies in each and every state of india?Does it look good that PM of any country wasting his time in rallies?

(ಸರ್ ಪ್ರಶ್ನೆ ಕೇಳಲು ಬಯಸುತ್ತೇನೆ. ಭಾರತದ ಪ್ರಧಾನ ಮಂತ್ರಿ ಅವರು ಭಾರತದ ಪ್ರತಿಯೊಂದು ರಾಜ್ಯಗಳಲ್ಲೂ ಚುನಾವಣಾ ರ್ಯಾಲಿಗಳನ್ನು ನಡೆಸಲು ಇಷ್ಟು ಸಮಯವನ್ನು ಹೊಂದಿದ್ದಾರೆಯೇ? ಯಾವುದೇ ದೇಶದ ಪ್ರಧಾನಿ ರ್ಯಾಲಿಗಳಲ್ಲಿ ತಮ್ಮ ಸಮಯವನ್ನು ವ್ಯರ್ಥ ಮಾಡುವುದು ಒಳ್ಳೆಯದು ಎಂದು ತೋರುತ್ತದೆಯೇ?)" ಎಂದು ಪ್ರಶ್ನಿಸಿದ್ದಾರೆ.

ಅರವಿಂದ ಗಜಾನನ ಜೋಷಿ ಎಂಬುವವರು "Sir don't sell them please (ದಯವಿಟ್ಟು ಇವುಗಳನ್ನು ಮಾರಬೇಡಿ) ಎಂದು ವ್ಯಂಗ್ಯವಾಡಿದ್ದಾರೆ.

ಹೀಗೆ ಪ್ರಧಾನಿ ಮೋದಿ ಅವರ ವಿಡಿಯೋ ವೈರಲ್ ಆಗುತ್ತಿದೆ‌. ಮೋದಿಯವರ ಕಾರ್ಯವೈಖರಿ ತಮಗೆ ಅನುಕೂಲ ಆಗಲಿದೆ ಎಂದು ಡಿಎಂಕೆ ಲೆಕ್ಕಾಚಾರ ಹಾಕುತ್ತಿದೆ‌. ಏಪ್ರಿಲ್ 6ರಂದು ತಮಿಳುನಾಡಿನಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ನಾಳೆ ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com