ಕೋವಿಡ್‌-19: ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ಆತಂಕಕಾರಿ ಪರಿಸ್ಥಿತಿ!

ಕಳೆದ 20 ಸೆಪ್ಟೆಂಬರ್‌ 2020ರಂದು 92,605 ಕರೋನಾ ಪ್ರಕರಣಗಳು ದಾಖಲಾಗಿದ್ದವು. ಆ ನಂತರ ಇಷ್ಟು ಮಟ್ಟಿನ ಸಂಖ್ಯೆಯಲ್ಲಿ ಪ್ರಕರಣಗಳು ದಾಖಲಾಗಿರಲಿಲ್ಲ
ಕೋವಿಡ್‌-19: ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ಆತಂಕಕಾರಿ ಪರಿಸ್ಥಿತಿ!

ಕಳೆದ 24 ಗಂಟೆಗಳಲ್ಲಿ (ಶುಕ್ರವಾರ) ಭಾರತದಲ್ಲಿ 89,129 ಹೊಸ ಕರೋನಾ ಪ್ರಕರಣಗಳು ದಾಖಲಾಗಿವೆ. ಕಳೆದ ಆರು ತಿಂಗಳಲ್ಲಿ ದಾಖಲಾದ ಅತೀ ಹೆಚ್ಚು ಕರೋನಾ ಪ್ರಕರಣಗಳ ಸಂಖ್ಯೆ ಇದಾಗಿದ್ದು, ಆತಂಕಕ್ಕೆ ಕಾರಣವಾಗಿದೆ.

ದಿನೇ ದಿನೇ ದೇಶದಲ್ಲಿ ಕರೋನಾ ಪ್ರಕರಣಗಳ ಸಂಖ್ಯೆ ಏರುಗತಿಯಲ್ಲಿಯೇ ಸಾಗುತ್ತಿದ್ದು, ಕಡಿವಾಣವೇ ಇಲ್ಲದಂತಾಗಿದೆ. ಮಹಾರಾಷ್ಟ್ರದಂತಹ ದಟ್ಟವಾದ ಜನಸಂದಣಿ ಇರುವಂತಹ ರಾಜ್ಯಗಳಲ್ಲಿ ಮತ್ತೆ ಲಾಕ್‌ಡೌನ್‌ ಮರುಕಳಿಸುವ ಸಂಭಾವ್ಯತೆಯಿದೆ. ಕಳೆದ 20 ಸೆಪ್ಟೆಂಬರ್‌ 2020ರಂದು 92,605 ಕರೋನಾ ಪ್ರಕರಣಗಳು ದಾಖಲಾಗಿದ್ದವು. ಆ ನಂತರ ಇಷ್ಟು ಮಟ್ಟಿನ ಸಂಖ್ಯೆಯಲ್ಲಿ ಪ್ರಕರಣಗಳು ದಾಖಲಾಗಿರಲಿಲ್ಲ. ಏಪ್ರಿಲ್‌ 2ರಂದು ಕರೋನಾ ಪ್ರಕರಣಗಳ ಸಂಖ್ಯೆ ಆರು ತಿಂಗಳ ದಾಖಲೆಯನ್ನು ಅಳಿಸಿ ಹಾಕಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಮಹಾರಾಷ್ಟ್ರ, ಪಂಜಾಬ್‌, ಕರ್ನಾಟಕ, ಕೇರಳ, ಚತ್ತೀಸ್‌ಘಡ, ಚಂಡೀಘಡ, ಗುಜರಾತ್‌, ಮಧ್ಯಪ್ರದೇಶ, ತಮಿಳುನಾಡು, ದೆಹಲಿ ಮತ್ತು ಹರ್ಯಾಣ ರಾಜ್ಯಗಳಲ್ಲಿ ಪರಿಸ್ಥಿತಿ ತೀವ್ರ ಆತಂಕಕಾರಿಯಾಗಿದೆ. ಈ ರಾಜ್ಯಗಳು ದೇಶದ 90% ಪ್ರಕರಣಗಳಿಗೆ ಕಾರಣವಾಗಿವೆ, ಎಂದು ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ.

ಶುಕ್ರವಾರ ಒಂದು ದಿನದಲ್ಲಿ ಮಹಾರಾಷ್ಟ್ರದಲ್ಲಿ 47,827 ಪ್ರಕರಣಗಳು ಪತ್ತೆಯಾಗಿವೆ. ಕಳೆದ ವರ್ಷ ಮಾರ್ಚ್‌ನಿಂದ ಈ ವರೆಗಿನ ಅತೀ ಹೆಚ್ಚಿನ ಸಂಖ್ಯೆ ಇದಾಗಿದೆ. ಮುಂಬೈ ಒಂದರಲ್ಲೇ 8,648 ಕರೋನಾ ಪ್ರಕರಣಗಳು ಪತ್ತೆಯಾಗಿವೆ. ಪ್ರಕರಣಗಳ ಸಂಖ್ಯೆ ಇದೇ ರೀತಿ ಹೆಚ್ಚಾದಲ್ಲಿ ಮಹಾರಾಷ್ಟ್ರ ಮತ್ತೆ ಲಾಕ್‌ಡೌನ್‌ ಮೊರೆ ಹೋಗುವುದರಲ್ಲಿ ಸಂಶಯವಿಲ್ಲ.

ಇದೇ ರೀತಿ ದೆಹಲಿಯ ಕರೋನಾ ಪ್ರಕರಣಗಳ ಸಂಖ್ಯೆಯೂ ದಾಖಲೆಯ ಮಟ್ಟಕ್ಕೆ ಏರಿದ್ದು, ಶುಕ್ರವಾರದಂದು ಈ ವರ್ಷದ ಅತೀ ಹೆಚ್ಚು ಪ್ರಕರಣಗಳನ್ನು ದಾಖಲಿಸಿದೆ. ನಿನ್ನೆ ಒಂದು ದಿನದಲ್ಲಿಯೇ 3594 ಪ್ರಕರಣಗಳು ಪತ್ತೆಯಾಗಿವೆ.

ಏಪ್ರಿಲ್‌ 6ರಂದು ಚುನಾವಣೆ ಎದುರಿಸಲಿರುವ ತಮಿಳುನಾಡಿನಲ್ಲಿ 3290 ಪ್ರಕರಣಗಳು ದಾಖಲಾಗಿವೆ. ಇಲ್ಲಿಯ ಒಟ್ಟು ಪ್ರಕರಣಗಳ ಸಂಖ್ಯೆ 8,92,780ಕ್ಕೆ ತಲುಪಿದೆ. ಇಲ್ಲಿಯವರೆಗೆ 12,750 ಜನರು ಸೋಂಕಿನಿಂದ ಮೃತಪಟ್ಟಿದ್ದಾರೆ.

ಕರ್ನಾಟಕದಲ್ಲಿ ಕರೋನಾ ಪರಿಸ್ಥಿತಿಯು ತಮಿಳುನಾಡಿಗಿಂತ ಹದೆಗೆಟ್ಟಿದ್ದು, ಒಂದು ದಿನದಲ್ಲಿ 4,991 ಹೊಸ ಪ್ರಕರಣಗಳು ದಾಖಲಾಗಿವೆ. ಇದರಿಂದಾಗಿ ಒಟ್ಟು ಕರೋನಾ ಪ್ರಕರಣಗಳ ಸಂಖ್ಯೆ 10,06,229ಕ್ಕೆ ತಲುಪಿದೆ.

Attachment
PDF
02-04-2021 HMB English.pdf
Preview
ಕೋವಿಡ್‌-19: ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ಆತಂಕಕಾರಿ ಪರಿಸ್ಥಿತಿ!
ಕೋವಿಡ್‌ ಎರಡನೇ ಅಲೆ: ದೇಶದಲ್ಲಿ 81,466 ಹೊಸ ಪ್ರಕರಣಗಳು ಪತ್ತೆ

ಈ ವರೆಗೆ ದೇಶದಲ್ಲಿ ಏಳು ಕೋಟಿಗೂ ಹೆಚ್ಚು ಜನರು ಕರೋನಾ ಲಸಿಕೆಯನ್ನು ಪಡೆದಿದ್ದಾರೆ. ನೀತಿ ಆಯೋಗದ ಸದಸ್ಯರಾಗಿರುವ ಡಾ. ವಿ ಕೆ ಪೌಲ್‌ ಅವರು ಹೇಳುವ ಪ್ರಕಾರ ಕರೋನಾದಿಂದ ಮೃತಪಟ್ಟವರಲ್ಲಿ 88% ಜನರು 45ಕ್ಕಿಂತ ಹೆಚ್ಚಿನ ವಯಸ್ಸಿನವರು. ಹೀಗಾಗಿ ಅಂತಹವರಿಗೆ ಮೊದಲು ಕೋವಿಡ್‌ ಲಸಿಕೆಯನ್ನು ನೀಡುವ ಅಗತ್ಯವಿದೆ ಎಂದಿದ್ದಾರೆ.

ಜಾಗತಿಕ ಮಟ್ಟದಲ್ಲಿ ನೋಡುವುದಾದರೆ, 1.23 ಕೋಟಿ ಕರೋನಾ ಪ್ರಕರಣಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಅಮೇರಿಕಾ ಮತ್ತು ಬ್ರೆಜಿಲ್‌ ಮೊದಲೆರಡು ಸ್ಥಾನದಲ್ಲಿದೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com