ಕೋವಿಡ್‌ ಎರಡನೇ ಅಲೆ: ದೇಶದಲ್ಲಿ 81,466 ಹೊಸ ಪ್ರಕರಣಗಳು ಪತ್ತೆ

ಮಹಾರಾಷ್ಟ್ರ ಒಂದರಲ್ಲಿಯೇ 43,183 ಕೋವಿಡ್‌ ಪ್ರಕರಣಗಳು ಕಂಡು ಬಂದಿದ್ದು, ದೇಶದ ಸುಮಾರು ಅರ್ಧದಷ್ಟು ಕೋವಿಡ್‌ ಪ್ರಕರಣಗಳು ಮಹರಾಷ್ಟ್ರ ಒಂದರಲ್ಲೇ ದಾಖಲಾಗಿವೆ.
ಕೋವಿಡ್‌ ಎರಡನೇ ಅಲೆ: ದೇಶದಲ್ಲಿ 81,466 ಹೊಸ ಪ್ರಕರಣಗಳು ಪತ್ತೆ

ದೇಶದಲ್ಲಿ 81,466 ಹೊಸ ಕೋವಿಡ್‌ ಪ್ರಕರಣಗಳು ಒಂದೇ ದಿನದಲ್ಲಿ ಪತ್ತೆಯಾಗಿರುವುದು ಕೋವಿಡ್‌ ಎರಡನೇ ಅಲೆಯ ಆತಂಕವನ್ನು ಇನ್ನಷ್ಟು ಹೆಚ್ಚಿಸಿದೆ. ಒಟ್ಟಾರೆ ದೇಶದಲ್ಲಿ ವರದಿಯಾದ ಕೋವಿಡ್‌ ಪ್ರಕರಣಗಳ ಸಂಖ್ಯೆ 1,23,02,110 ಕ್ಕೇರಿದೆ.

ಮಹಾರಾಷ್ಟ್ರ ಒಂದರಲ್ಲಿಯೇ 43,183 ಕೋವಿಡ್‌ ಪ್ರಕರಣಗಳು ಕಂಡು ಬಂದಿದ್ದು, ದೇಶದ ಸುಮಾರು ಅರ್ಧದಷ್ಟು ಕೋವಿಡ್‌ ಪ್ರಕರಣಗಳು ಮಹರಾಷ್ಟ್ರ ಒಂದರಲ್ಲೇ ದಾಖಲಾಗಿವೆ.

ಛತ್ತೀಸ್‌ಘಡ ಹಾಗೂ ಕರ್ನಾಟಕದಲ್ಲಿ 4000 ಕ್ಕೂ ಹೆಚ್ಚು ಕೋವಿಡ್‌ ಪ್ರಕರಣ ದಾಖಲಾಗಿದೆ.

ದೇಶಾದ್ಯಂತ 469 ಕೋವಿಡ್‌ ಮರಣಗಳು ಕಳೆದ 24 ಗಂಟೆಗಳಲ್ಲಿಯೇ ಸಂಭವಿಸಿದ್ದು, ಇದುವರೆಗೂ 1.63 ಲಕ್ಷಕ್ಕೂ ಅಧಿಕ ಮಂದಿ ಕರೋನಾ ಸೋಂಕಿನಿಂದ ಮೃತಪಟ್ಟಿದ್ದಾರೆ.

ದೇಶದಲ್ಲಿ ಕೋವಿಡ್‌ ಎರಡನೇ ಅಲೆ ತೀವ್ರವಾಗುತ್ತಿದ್ದಂತೆ ಕೇಂದ್ರ ಔಷಧ ನಿಯಂತ್ರಕ ಮಂಡಳಿ ಮೂರನೇ ಹಂತದ ಕ್ಲಿನಿಕಲ್‌ ಟ್ರಯಲ್‌ಗೆ ಕೊವಾಕ್ಸಿನ್‌ ಅನ್ನು ಒಳಪಡಿಸಲು ಭಾರತ್‌ ಬಯೋಟೆಕ್‌ಗೆ ಅನುಮತಿ ನೀಡಿದೆ ಎಂದು ದಿ ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿ ಮಾಡಿದೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com