ನಾನು LBGTQI ವಿಚಾರದಲ್ಲಿ ‌ನನ್ನದೇ ಕಲ್ಪನೆಯನ್ನು ಮುರಿಯಲು ಯತ್ನಿಸುತ್ತಿದ್ದೇನೆ:ಮದ್ರಾಸ್ HC ಜಡ್ಜ್

2018 ರಲ್ಲಿ, ಸುಪ್ರೀಂ ಕೋರ್ಟ್ ಸಂವಿಧಾನ ಪೀಠವು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 377 ರ ನಿಬಂಧನೆಗಳನ್ನು ರದ್ದುಗೊಳಿಸಿತ್ತು. ಪರಸ್ಪರ ಒಪ್ಪಿಗೆ ಇರುವ ವಯಸ್ಕರ ನಡುವಿನ ಲೈಂಗಿಕತೆಯನ್ನು‌ ಅಪರಾಧೀಕರಿಸಲಾಗುವುದಿಲ್ಲ‌ ಎಂದು ತೀರ್ಪು‌ ನೀಡಿತ್ತು.
ನಾನು LBGTQI ವಿಚಾರದಲ್ಲಿ ‌ನನ್ನದೇ ಕಲ್ಪನೆಯನ್ನು ಮುರಿಯಲು ಯತ್ನಿಸುತ್ತಿದ್ದೇನೆ:ಮದ್ರಾಸ್ HC ಜಡ್ಜ್

ಮಾರ್ಚ್ 29ರಂದು LGBTQI ದಂಪತಿಗೆ ಸಂಬಂಧಿಸಿದ ಪ್ರಕರಣವೊಂದನ್ನು ಆಲಿಸುವಾಗ ಮದ್ರಾಸ್ ಹೈಕೋರ್ಟ್‌ನ ನ್ಯಾಯಾಧೀಶರು ತಮ್ಮದೇ ಆದ ಪೂರ್ವಭಾವಿ ಕಲ್ಪನೆಗಳನ್ನು ಮೀರಿ ಈ‌ ಪ್ರಕರಣವನ್ನು ಗಮನಿಸುತ್ತಿದ್ದೇನೆ ಎಂದು ಹೇಳಿರುವುದಾಗಿ ಎಂದು ಲೈವ್ ‌ಲಾ (live law) ವರದಿ ಮಾಡಿದೆ.

ಒಬ್ಬರಿಗೊಬ್ಬರು ಸಂಗಾತಿಗಳೆಂದು ಗುರುತಿಸಿಕೊಳ್ಳಲು‌ ಇಚ್ಛಿಸುಚ ಇಬ್ಬರು ಪುರುಷರು ತಮ್ಮ ಪೋಷಕರ ವಿರುದ್ಧ ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆಗೆ ಆನಂದ್ ವೆಂಕಟೇಶ್ ಅವರ ನ್ಯಾಯಪೀಠವು ಈ ಪ್ರಕರಣದಲ್ಲಿರುವ ಸೂಕ್ಷ್ಮತೆಯನ್ನು ಎತ್ತಿ ತೋರಿಸುತ್ತಾ ಅಭಿಪ್ರಾಯ ವ್ಯಕ್ತಪಡಿಸಿದರು.

ಇಬ್ಬರು ಪುರುಷರು ಕ್ರಮವಾಗಿ 20 ಮತ್ತು 22 ವರ್ಷ ವಯಸ್ಸಿನ ವಿದ್ಯಾರ್ಥಿಗಳಾಗಿದ್ದು ಕಳೆದ ಎರಡು ವರ್ಷಗಳಿಂದ ಪರಸ್ಪರ ಪರಿಚಿತರು ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ನ್ಯಾಯಮೂರ್ತಿ ವೆಂಕಟೇಶ್ ಅವರು ಅವರಿಬ್ಬರ ಹೇಳಿಕೆಯಲ್ಲಿ 'ಸ್ಪಷ್ಟತೆ' ಇದೆ ಮತ್ತು ಪರಸ್ಪರರ ಸಂಗಾತಿಯಾಗುವ ಅವರ ಉದ್ದೇಶದಲ್ಲಿ ಯಾವುದೇ ಸಂಶಯದ ಸುಳಿವು ಇಲ್ಲ ಎಂದು ಹೇಳಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ನ್ಯಾಯಮೂರ್ತಿ ವೆಂಕಟೇಶ್ ಅವರು ದಂಪತಿಯ ಪೋಷಕರಿಗೆ LGBTQI ಸಮಸ್ಯೆಗಳಲ್ಲಿ ಅನುಭವಿ ಸಲಹೆಗಾರರಾಗಿರುವ ಮನಶಾಸ್ತ್ರಜ್ಞರಾದ ವಿದ್ಯಾ ದಿನಕರ್ ಅವರನ್ನು ಭೇಟಿಯಾಗಲು ಶಿಫಾರಸು ಮಾಡಿದ್ದಾರೆ. ಮತ್ತು ಮನಶ್ಶಾಸ್ತ್ರಜ್ಞ ವಿದ್ಯಾ ದಿನಕರನ್ ಅವರು ತಮ್ಮ ವರದಿಯನ್ನು ಮೊಹರು ಮಾಡಿದ ಕವರ್‌ನಲ್ಲಿ ಏಪ್ರಿಲ್ 26 ರೊಳಗೆ ಸಲ್ಲಿಸುವಂತೆ ಕೋರಿದ್ದಾರೆ.

"ನಾನು ಈ ವಿಷಯದ ಬಗ್ಗೆ ನನ್ನದೇ ಆದ ಪೂರ್ವಭಾವಿ ಕಲ್ಪನೆಗಳನ್ನು ಮುರಿಯಲು ಮತ್ತು ಮುಕ್ತವಾಗಿರಲು ಪ್ರಯತ್ನಿಸುತ್ತಿದ್ದೇನೆ. ವಿಕಾಸದ ಪ್ರಕ್ರಿಯೆಯಲ್ಲಿರುವ ನಾನು ಅರ್ಜಿದಾರರು ಮತ್ತು ಅವರ ಪೋಷಕರ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ. ಈ ಬಗ್ಗೆ ವಿವರವಾದ ಆದೇಶವನ್ನು ನೀಡಲು ಪ್ರಯತ್ನಿಸುತ್ತೇನೆ" ಎಂದು ಹೇಳಿರುವ ಬಗ್ಗೆ 'ಲೈವ್ ಲಾ' ವರದಿ ಮಾಡಿದೆ.

ಇತ್ತಂಡಗಳು ಶಾಂತಿಯಿಂದ ಇರುತ್ತವೆ ಎಂದು ತಮ್ಮ ನ್ಯಾಯಪೀಠಕ್ಕೆ ಮನವರಿಕೆಯಾಗಿದೆ ಮತ್ತು ಈ ಪ್ರಕರಣದಲ್ಲಿ ಪೊಲೀಸರು ಹಸ್ತಕ್ಷೇಪ ಮಾಡುವುದಿಲ್ಲ ಎಂದು ಸರ್ಕಾರ ಭರವಸೆ ನೀಡಿದೆ ಎಂದು ನ್ಯಾಯಮೂರ್ತಿ ವೆಂಕಟೇಶ್ ಹೇಳಿದ್ದಾರೆ.

2018 ರಲ್ಲಿ, ಸುಪ್ರೀಂ ಕೋರ್ಟ್ ಸಂವಿಧಾನ ಪೀಠವು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 377 ರ ನಿಬಂಧನೆಗಳನ್ನು ರದ್ದುಗೊಳಿಸಿತ್ತು. ಪರಸ್ಪರ ಒಪ್ಪಿಗೆ ಇರುವ ವಯಸ್ಕರ ನಡುವಿನ ಲೈಂಗಿಕತೆಯನ್ನು‌ ಅಪರಾಧೀಕರಿಸಲಾಗುವುದಿಲ್ಲ‌ ಎಂದು ತೀರ್ಪು‌ ನೀಡಿತ್ತು. ಮತ್ತು ಒಂದು ಶತಮಾನಕ್ಕೂ ಹೆಚ್ಚು ಕಾಲ ಭಾರತದಲ್ಲಿ‌ ಅಪರಾಧ ಎಂದು ಪರಿಗಣಿಸಲ್ಪಟ್ಟಿದ್ದ ಸಲಿಂಗಕಾಮಕ್ಕೆ ಕಾನೂನಾತ್ಮಕ ಮಾನ್ಯತೆ ನೀಡಿತ್ತು.

"ಬಹುಸಂಖ್ಯಾತ ದೃಷ್ಟಿಕೋನಗಳು ಮತ್ತು ಜನಪ್ರಿಯ ನೈತಿಕತೆಯು ಸಾಂವಿಧಾನಿಕ ಹಕ್ಕುಗಳನ್ನು ನಿರ್ದೇಶಿಸಲು ಸಾಧ್ಯವಿಲ್ಲ. ನಾವು ಪೂರ್ವಾಗ್ರಹವನ್ನು ತೊಡೆದುಹಾಕಬೇಕು ಮತ್ತು ಸಲಿಂಗಕಾಮಿಗಳನ್ನೂ ಸ್ವೀಕರಿಸಬೇಕು”ಎಂದು ಅಂದಿನ ಸಿಜೆಐ ದೀಪಕ್ ಮಿಶ್ರಾ ಹೇಳಿದ್ದರು.

ಹೀಗಿದ್ದೂ ಭಾರತದಲ್ಲಿ ಸಮಾನ‌ ಲಿಂಗಿಗಳು ತಮ್ಮಚ್ಛಿಯಂತೆ ಬದುಕುವುದು‌ ಸುಲಭವಲ್ಲ. ನ್ಯಾಯಾಧೀಶರ ಅಪರೂಪದ ಮತ್ತು ಸೂಕ್ಷ್ಮ ಅಭಿಪ್ರಾಯವೂ ಭಾರತದಲ್ಲಿನ ಅಭ್ಯಾಸಗಳ ಪ್ರತಿಬಿಂಬವಾಗಿಯೇ ನಿಂತಿದೆ. "ನಮ್ಮ ಕಾನೂನುಗಳು, ಕಾನೂನು ವ್ಯವಸ್ಥೆ, ಸಮಾಜ ಮತ್ತು ನಮ್ಮ ಮೌಲ್ಯಗಳು ಸಲಿಂಗ ದಂಪತಿಗಳನ್ನು ಒಪ್ಪುವುದಿಲ್ಲವಾದ್ದರಿಂದ ಸಮಾನ‌ಲಿಂಗಿಗಳ‌‌ ಮದುವೆಗೆ ಅನುಮತಿ ನೀಡಲಾಗುವುದಿಲ್ಲ" ಎಂದು ಸೆಪ್ಟೆಂಬರ್ 2020 ರಲ್ಲಿ ಕೇಂದ್ರವು ದೆಹಲಿ ಹೈಕೋರ್ಟ್‌ಗೆ ಹೇಳಿದೆ.

ನ್ಯಾಯಮೂರ್ತಿ ವೆಂಕಟೇಶ್ ಅವರ ಅಭಿಪ್ರಾಯಗಳು ದೂರುದಾರರ ಬಗ್ಗೆ ನ್ಯಾಯಾಂಗದ ಗಮನವು‌ ಪೂರ್ಣವಾಗಿ ಕೇಂದ್ರೀಕರಿಸಿದ ಸಮಯದಲ್ಲಿ ಬಂದಿದೆ. ಮದ್ರಾಸ್ ಹೈಕೋರ್ಟ್ ನ್ಯಾಯಾಧೀಶರ ಹೇಳಿಕೆಯ ಅದೇ ದಿನ ಕಾರ್ಯಕ್ರಮ ನಿರೂಪಕ ವರುಣ್ ಹಿರೆಮಠ್ ಅವರ ಮೇಲೆ ಅತ್ಯಾಚಾರದ ಆರೋಪ ಹೊರಿಸಿದ್ದ 22 ವರ್ಷದ ಮಹಿಳೆ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೋಬ್ಡೆ ಅವರಿಗೆ ಪತ್ರ ಬರೆದು, ವಿಚಾರಣೆಯ ಸಮಯದಲ್ಲಿ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರ ಸೂಕ್ಷ್ಮವಲ್ಲದ, ಸೂಕ್ತವಲ್ಲದ ಮತ್ತು ಆಘಾತಕಾರಿಯಾಗಿ ವರ್ತಿಸಿದ್ದ ಬಗ್ಗೆ ತಿಳಿಸಿದ್ದರು. ಇದು ನಮ್ಮ ಕಾನೂನು ವ್ಯವಸ್ಥೆ ಇನ್ನೂ ಲೈಂಗಿಕ ಅಪರಾಧ ಮತ್ತು ಹಿಂಸಾಚರದ ವಿಚಾರಣೆಯಲ್ಲಿ ಪಾಲಿಸುವ ಅಸೂಕ್ಷ್ಮತೆಯನ್ನು ಎತ್ತಿ ತೋರುವಂತಿದೆ. ಲೈಂಗಿಕ ಹಿಂಸಾಚಾರಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಅಧೀನ ನ್ಯಾಯಾಲಯಗಳು ಸೂಕ್ಷ್ಮವಲ್ಲದ ಜಾಮೀನು ಆದೇಶಗಳನ್ನು ನೀಡುವುದನ್ನು ತಪ್ಪಿಸುವ ಉದ್ದೇಶದಿಂದ ಸುಪ್ರೀಂ ಕೋರ್ಟ್ ಕೂಡ ಈಗ ಮಾರ್ಗಸೂಚಿಗಳನ್ನು ಹೊರಡಿಸಿದೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com