BJP-TMC ಘರ್ಷಣೆ: 2 ತಾಸು ಮತಗಟ್ಟೆಯೊಳಗೆ ಸಿಲುಕಿದ ಮಮತಾ ಬ್ಯಾನರ್ಜಿ -ರಕ್ಷಣೆಗೆ ರಾಜ್ಯಪಾಲರಿಗೆ ಕರೆ

ನಂದಿಗ್ರಾಮದ ಬೋಯಲ್‌ ಪ್ರದೇಶದ ಮತಗಟ್ಟೆಯೊಂದಕ್ಕೆ ಮತಚಲಾಯಿಸಲು ಮಮತಾ ಬ್ಯಾನರ್ಜಿ ಬರುತ್ತಿದ್ದಂತೆಯೇ ಬಿಜೆಪಿ ಕಾರ್ಯಕರ್ತರು ಜೈ ಶ್ರೀರಾಮ್‌ ಘೋಷಣೆ ಕೂಗಿದ್ದಾರೆ.
BJP-TMC ಘರ್ಷಣೆ: 2 ತಾಸು ಮತಗಟ್ಟೆಯೊಳಗೆ ಸಿಲುಕಿದ ಮಮತಾ ಬ್ಯಾನರ್ಜಿ -ರಕ್ಷಣೆಗೆ ರಾಜ್ಯಪಾಲರಿಗೆ ಕರೆ

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಹಲವು ರೋಚಕ ಸನ್ನಿವೇಶಗಳಿಗೆ ಸಾಕ್ಷಿಯಾಗಿದ್ದು, ಎರಡನೇ ಹಂತದ ಮತದಾನದ ವೇಳೆ ನಂದಿಗ್ರಾಮದ ಮತಗಟ್ಟೆಯ ಹೊರಗೆ ಸೃಷ್ಟಿಯಾದ ಹಿಂಸಾತ್ಮ ಸಂಘರ್ಷ ಸ್ಥಿತಿಗೆ ರಾಜ್ಯದ ಮುಖ್ಯಮಂತ್ರಿ ಎರಡು ಗಂಟೆಗಳ ಕಾಲ ಮತಗಟ್ಟೆಯೊಳಗೆ ಸಿಲುಕಿಕೊಂಡ ಘಟನೆ ವರದಿಯಾಗಿದೆ.

ಬಂಗಾಳದ ನಂದಿಗ್ರಾಮ ಈ ಬಾರಿ ಹೈ-ವೋಲ್ಟೇಜ್‌ ಸುನಾವಣೆಗೆ ಸಾಕ್ಷಿಯಾಗಿದ್ದು, ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಟಿಎಂಸಿ ತೊರೆದು ಬಿಜೆಪಿ ಸೇರಿರುವ ಸುವೆಂದು ಅಧಿಕಾರಿ ಈ ಕ್ಷೇತ್ರದಲ್ಲಿ ನೇರ ಹಣಾಹಣಿಯಲ್ಲಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ನಂದಿಗ್ರಾಮದ ಬೋಯಲ್‌ ಪ್ರದೇಶದ ಮತಗಟ್ಟೆಯೊಂದಕ್ಕೆ ಮತಚಲಾಯಿಸಲು ಮಮತಾ ಬ್ಯಾನರ್ಜಿ ಬರುತ್ತಿದ್ದಂತೆಯೇ ಬಿಜೆಪಿ ಕಾರ್ಯಕರ್ತರು ಮತಗಟ್ಟೆಯ ಸುತ್ತ ನೆರೆದಿದ್ದಾರೆ ಎಂದು ಡೆಕ್ಕನ್‌ ಹೆರಾಲ್ಡ್‌ ವರದಿ ಮಾಡಿದೆ. ಮಮತಾ ಮತಗಟ್ಟೆಗೆ ಬರುತ್ತಿದ್ದಂತೆ, ಟಿಎಂಸಿ ಕಾರ್ಯಕರ್ತರು, ಆ ಮತಗಟ್ಟೆಯಲ್ಲಿ ಬಿಜೆಪಿ ಕಾರ್ಯಕರ್ತರು ನಕಲಿ ಮತಚಲಾಯಿಸುತ್ತಿದ್ದಾರೆಂದು ಆರೋಪಿಸಿದ್ದಾರೆ. ಅದೇ ವೇಳೆ, ಅಲ್ಲಿ ನೆರೆದಿದ್ದ ಬಿಜೆಪಿ ಕಾರ್ಯಕರ್ತರು ಜೈ ಶ್ರೀ ರಾಂ ಘೋಷಣೆ ಕೂಗಿದ್ದಾರೆ. ಸ್ಥಳದಲ್ಲಿ ನೆರೆದಿದ್ದರಿಂದ ಉದ್ವಿಘ್ನ ಸ್ಥಿತಿ, ತಕ್ಷಣವೇ ಘರ್ಷಣೆಗೆ ತಿರುಗಿದ್ದು, ಇತ್ತಂಡದ ಕಡೆಯಿಂದ ಹಿಂಸಾತ್ಮಕದಾಳಿ ನಡೆದಿವೆ. ಉಭಯ ತಂಡಗಳು ಪರಸ್ಪರ ಕಲ್ಲುಗಳಿಂದ ದಾಳಿ ನಡೆಸಿದ್ದಾರೆ ಎಂದು ವರದಿಯಾಗಿದೆ.

ಈ ವೇಳೆ ಘರ್ಷಣೆ ನಿಭಾಯಿಸಲು ಪೊಲೀಸರು ಹಾಗೂ ಕೇಂದ್ರ ಭದ್ರತಾ ಪಡೆ ಹರಸಾಹಸ ಪಡುತ್ತಿದ್ದಂತೆ ಝಡ್+ ಭದ್ರತೆ ಇರುವ ಮಮತಾ ಬ್ಯಾನರ್ಜಿಗೆ ಮತಗಟ್ಟೆಯಲ್ಲಿ ತಾತ್ಕಾಲಿಕ ರಕ್ಷಣೆ ನೀಡಲಾಗಿದೆ. ಪರಿಸ್ಥಿತಿ ಹತೋಟಿಗೆ ಬರದ ಹಿನ್ನೆಲೆಯಲ್ಲಿ ಮತಗಟ್ಟೆಯೊಳಗೆ ಸುಮಾರು ಎರಡು ತಾಸುಗಳ ಕಾಲ ಸಿಲುಕಬೇಕಾದ ಅನಿವಾರ್ಯತೆ ಮಮತಾರಿಗೆ ಎದುರಾಗಿದೆ.

ಬಳಿಕ ಪಶ್ಚಿಮ ಬಂಗಾಳ ರಾಜ್ಯಪಾಲರಿಗೆ ಕರೆ ಮಾಡಿದ ಮಮತಾ, ʼಇಲ್ಲಿನ ಸ್ಥಳೀಯರಿಗೆ ಮತ ಚಲಾಯಿಸಲು ಬಿಡುತ್ತಿಲ್ಲ. ನೀವು ಇದನ್ನು ಗಮಿನಸಬೇಕೆಂದುʼ ಅವರಲ್ಲಿ ಮನವಿ ಮಾಡಿದ್ದಾರೆ.

ಇಲ್ಲಿ (ಮತಗಟ್ಟೆಯಲ್ಲಿ) ಗಲಭೆ ಸೃಷ್ಟಿಸಿದವರು ಸ್ಥಳೀಯರಲ್ಲ. ಬಿಜೆಪಿ ಹೊರ ರಾಜ್ಯದಿಂದ ಜನರನ್ನು ಗಲಭೆ ಸೃಷ್ಟಿಸಲೆಂದೆ ತರಿಸಿದೆ. ಈ ಮತಗಟ್ಟೆಯಲ್ಲಿ ಈಗಾಗಲೇ 80% ಗೂ ಹೆಚ್ಚು ನಕಲಿ ಮತ ಚಲಾವಣೆಯಾಗಿವೆ. ಈ ಕುರಿತಂತೆ ನಾವು 63 ದೂರುಗಳನ್ನು ಚುನಾವಣಾ ಆಯೋಗಕ್ಕೆ ನೀಡಿದ್ದೇವೆ. ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ, ಹಾಗಾಗಿ ನಾವು ಕಾನೂನು ಮೊರೆ ಹೋಗಲು ತೀರ್ಮಾನಿಸಿದ್ದೇವೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com