ಹೆಲ್ಮೆಟ್‌ ಧರಿಸದ ಗರ್ಭಿಣಿಯನ್ನು 3 ಕಿ.ಮಿ ನಡೆಯುವಂತೆ ಮಾಡಿದ SI ಅಮಾನತು

ಎಸ್‌ಐ ಬಕ್ಸಾಲ್‌, ಗುರುಬಾರಿಗೆ ಬೈಕ್‌ ಹತ್ತಲು ಅನುಮತಿಸದ ಕಾರಣ ಆಕೆ ಸುಡು ಬಿಸಿಲಿನಲ್ಲಿ 3 ಕಿಮೀ ದೂರದಲ್ಲಿರುವ ಪೊಲೀಸ್‌ ಸ್ಟೇಷನ್‌ ವರೆಗೆ ನಡೆದೇ ಸಾಗಿದ್ದಾಳೆ.
ಹೆಲ್ಮೆಟ್‌ ಧರಿಸದ ಗರ್ಭಿಣಿಯನ್ನು 3 ಕಿ.ಮಿ ನಡೆಯುವಂತೆ ಮಾಡಿದ SI ಅಮಾನತು

ಹೆಲ್ಮೆಟ್‌ ಧರಿಸದ ನೆಪವೊಡ್ಡಿ ಗರ್ಭಿಣಿ ಮಹಿಳೆಯನ್ನು ಮೂರು ಕಿ.ಮೀ ನಡೆದು ಹೋಗುವಂತೆ ಮಾಡಿದ ಆರೋಪದ ಮೇಲೆ ಒರಿಸ್ಸಾದ ಪೊಲೀಸ್‌ ಸಬ್‌ಇನ್ಸ್ಪೆಕ್ಟರ್‌ ಒಬ್ಬರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಸಬ್‌ಇನ್ಸ್ಪೆಕ್ಟರ್‌ ರೀನಾ ಬಕ್ಸಲ್‌ ಅಮಾನತುಗೊಂಡವರು.

ಗರ್ಭಿಣಿ ಮಹಿಳೆ ಮತ್ತು ಪತಿ ಚಾರ್ಜ್ ಆಫೀಸರ್ (ಒಐಸಿ) ತಮ್ಮನ್ನು ಹಿಂಸಿಸಿದ್ದಾರೆ ಎಂದು ಆರೋಪಿಸಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಗುರುಬಾರಿ ಎಂಬ ಮಹಿಳೆ ತನ್ನ ಪತಿ ಬಿಕ್ರಮ್ ಬಿರುಲಿಯೊಂದಿಗೆ ಬೈಕ್‌ನಲ್ಲಿ ಆರೋಗ್ಯ ತಪಾಸಣೆಗಾಗಿ ಉದಾಲಾ ಉಪವಿಭಾಗ ಆಸ್ಪತ್ರೆಗೆ ಹೋಗುತ್ತಿದ್ದಾಗ ಅವರನ್ನು ಒಡಿಶಾದ ಮಾಯಾರ್‌ಬಂಜ್‌ ಜಿಲ್ಲೆಯ ಸಾರತ್‌ ಪೊಲೀಸ್‌ ಠಾಣೆಯ ಸಿಬ್ಬಂದಿಗಳು ತಡೆದಿದ್ದಾರೆ. ಬಿಕ್ರಮ್ ಹೆಲ್ಮೆಟ್ ಧರಿಸಿದ್ದರೆ, ಹಿಂಬದಿ ಸವಾರಳಾಗಿದ್ದ ಗುರುಬಾರಿ ಹೆಲ್ಮೆಟ್‌ ಧರಿಸಿರಲಿಲ್ಲ.

ಪೊಲೀಸ್‌ ತಪಾಸಣೆಯ ವೇಳೆ ದಂಪತಿ
ಪೊಲೀಸ್‌ ತಪಾಸಣೆಯ ವೇಳೆ ದಂಪತಿ ಚಿತ್ರ: ANI

ತನ್ನ ಹೆಂಡತಿ ಆಕೆಯ ಆರೋಗ್ಯದ ದೃಷ್ಟಿಯಿಂದ ಹೆಲ್ಮೆಟ್‌ ಧರಿಸಿಲ್ಲ ಎಂದು ಬಿಕ್ರಮ್‌ ಪರಿಪರಿಯಾಗಿ ಪೊಲೀಸರನ್ನು ಬೇಡಿಕೊಂಡರೂ ಕರುಣೆ ತೋರದ ಪೊಲೀಸರು 500 ರುಪಾಯಿ ದಂಡ ವಿಧಿಸಿದ್ದಾರೆ. ಹಾಗೂ ದಂಡ ಕಟ್ಟಲು ಮೂರು ಕಿ.ಮೀ ದೂರದಲ್ಲಿರುವ ಪೊಲೀಸ್‌ ಠಾಣೆಗೆ ಗಂಡನನ್ನು ಕಳಿಸಿದ್ದಾರೆ. ಎಸ್‌ಐ ಬಕ್ಸಾಲ್‌, ಗುರುಬಾರಿಗೆ ಬೈಕ್‌ ಹತ್ತಲು ಅನುಮತಿಸದ ಕಾರಣ ಆಕೆ ಸುಡು ಬಿಸಿಲಿನಲ್ಲಿ 3 ಕಿಮೀ ದೂರದಲ್ಲಿರುವ ಪೊಲೀಸ್‌ ಸ್ಟೇಷನ್‌ ವರೆಗೆ ನಡೆದೇ ಸಾಗಿದ್ದಾಳೆ.

ಅಮಾನತುಗೊಂಡ ಪೊಲೀಸ್‌ ಅಧಿಕಾರಿ ರೀನಾ ಬಕ್ಸಾಲ್‌
ಅಮಾನತುಗೊಂಡ ಪೊಲೀಸ್‌ ಅಧಿಕಾರಿ ರೀನಾ ಬಕ್ಸಾಲ್‌

ದಂಪತಿ ತಮಗಾದ ಕಿರುಕುಳದ ಕುರಿತಂತೆ ನೀಡಿದ ದೂರಿನ ಮೇರೆಗೆ ನಡೆಸಿದ ತನಿಖೆಯಲ್ಲಿ ದಂಪತಿಯೊಂದಿಗೆ ಪೊಲೀಸ್‌ ಸಿಬ್ಬಂದಿಗಳು ಅನುಚಿತವಾಗಿ ವರ್ತಿಸಿರುವುದು ಕಂಡು ಬಂದಿದ್ದು, ತಕ್ಷಣಕ್ಕೆ ಚಾರ್ಜ್‌ ಆಫೀಸರ್‌ ಆಗಿದ್ದ ಎಸ್‌ಐ ರೀನಾ ಬಕ್ಸಲ್‌ ಅವರನ್ನು ಜಿಲ್ಲಾ ವರಿಷ್ಟಾಧಿಕಾರಿ ಅಮಾನತುಗೊಳಿಸಿ ಆದೇಶಿಸಿದ್ದಾರೆ.

ಪ್ರಸ್ತುತ, ಪೊಲೀಸ್ ಠಾಣೆಯ ಉಸ್ತುವಾರಿಯನ್ನು ಸಹಾಯಕ ಸಬ್ ಇನ್ಸ್‌ಪೆಕ್ಟರ್ ಬಿ.ಡಿ.ದಸ್ಮೋಹಪಾತ್ರ ಅವರಿಗೆ ಹಸ್ತಾಂತರಿಸುವಂತೆ ಎಸ್‌ಐ ರೀನಾ ಬಕ್ಸಲ್ ಅವರಿಗೆ ನಿರ್ದೇಶಿಸಲಾಗಿದೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com