ಮೋದಿ ಜನಪ್ರಿಯರಿಬಹುದು, ಆದರೆ ಬಂಗಾಳದಲ್ಲಿ ದೀದಿಗಿಂತ ಜನಪ್ರಿಯರಲ್ಲ: ಪ್ರಶಾಂತ್ ಕಿಶೋರ್ ‌

ಮೋದಿಯ ಜನಪ್ರಿಯತೆಯನ್ನು ಮತವನ್ನಾಗಿ ಮಾಡುವುದು ಕೂಡಾ ಬಿಜೆಪಿ ಕಾರ್ಯತಂತ್ರ. ಮೋದಿ ಜನಪ್ರಿಯರಾಗಿರಬಹುದು ಆದರೆ, ಬಂಗಾಳದಲ್ಲಿ ಮಮತಾ ಬ್ಯಾನರ್ಜಿಗಿಂತ ಮೋದಿ ಜನಪ್ರಿಯರಲ್ಲ ಎಂದು ಪ್ರಶಾಂತ್‌ ಕಿಶೋರ್‌ ಹೇಳಿದ್ದಾರೆ
ಮೋದಿ ಜನಪ್ರಿಯರಿಬಹುದು, ಆದರೆ ಬಂಗಾಳದಲ್ಲಿ ದೀದಿಗಿಂತ ಜನಪ್ರಿಯರಲ್ಲ: ಪ್ರಶಾಂತ್ ಕಿಶೋರ್ ‌
ಇಂಡಿಯನ್‌ ಎಕ್ಸ್ಪ್ರೆಸ್‌ ಚಿತ್ರ

ನರೇಂದ್ರ ಮೋದಿ ಸಾಕಷ್ಟು ಜನಪ್ರಿಯರಾಗಿರಬಹುದು, ಆದರೆ ಬಂಗಾಳದಲ್ಲಿ ಮಮತಾ ಬ್ಯಾನರ್ಜಿಯಷ್ಟು ಜನಪ್ರಿಯರಲ್ಲ ಎಂದು ಚುನಾವಣಾ ತಂತ್ರಜ್ಞ ಪ್ರಶಾಂತ್‌ ಕಿಶೋರ್‌ ಹೇಳಿದ್ದಾರೆ.

ದಿ ಇಂಡಿಯನ್‌ ಎಕ್‌ಸ್‌ಪ್ರೆಸ್‌ ಜೊತೆ ನಡೆಸಿದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಕಿಶೋರ್‌, ಬಂಗಾಳದಲ್ಲಿ ಬಿಜೆಪಿ 100 ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲುವುದಿಲ್ಲ ಅಂದಿದ್ದೆ. ಆ ಮಾತುಗಳಿಗೆ ನಾನು ಈಗಲೂ ಬದ್ಧನಾಗಿದ್ದೇನೆ. ಬಿಜೆಪಿಯು ಎರಡಂಕೆಗಳನ್ನು ದಾಟುವುದಿಲ್ಲ ಎಂದಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಅದಾಗ್ಯೂ, ಪಶ್ಚಿಮ ಬಂಗಾಳದ ಈ ಬಾರಿಯ ಚುನಾವಣೆಯು ಸಾಕಷ್ಟು ಕುತೂಹಲಕಾರಿಯಾಗಿದ್ದು, ಕೇಂದ್ರದ ಆಡಳಿತರೂಢ ಪಕ್ಷ ರಾಜ್ಯದ ಆಡಳಿತರೂಢ ಪಕ್ಷಕ್ಕೆ ಈ ಮಟ್ಟಿನ ಸ್ಪರ್ಧೆ ನೀಡುತ್ತಿರುವುದು ಪಶ್ಚಿಮ ಬಂಗಾಳದಲ್ಲಿ ಇದೇ ಮೊದಲಾಗಿರಬಹುದು ಎಂದು ಅವರು ಹೇಳಿದ್ದಾರೆ.

ಏನೇ ಆದರೂ, ಪಶ್ಚಿಮ ಬಂಗಾಳದ ಈ ಚುನಾವಣೆ, ನರೇಂದ್ರ ಮೋದಿ vs ಮಮತಾ ಬ್ಯಾನರ್ಜಿಯ ನಡುವಿನ ಸ್ಪರ್ಧೆಯಾಗಿದ್ದು, ಹಾಗಾಗಿಯೇ, ಮಾಧ್ಯಮಗಳಿಗೂ ಸೇರಿದಂತೆ ಎಲ್ಲರಿಗೂ ತಮಿಳುನಾಡು, ಕೇರಳ, ಅಸ್ಸಾಂ ಚುನಾವಣೆಗಳ ಕುರಿತು ಇಲ್ಲದ ಕುತೂಹಲ ಬಂಗಾಳ ಚುನಾವಣೆಯಲ್ಲಿದೆ ಎಂದು ಕಿಶೋರ್‌ ಹೇಳಿದ್ದಾರೆ.

ಮೋದಿ ಜನಪ್ರಿಯರಿಬಹುದು, ಆದರೆ ಬಂಗಾಳದಲ್ಲಿ ದೀದಿಗಿಂತ ಜನಪ್ರಿಯರಲ್ಲ: ಪ್ರಶಾಂತ್ ಕಿಶೋರ್ ‌
‘ದೈವಸ್ವರೂಪಿ’ ಜನನಾಯಕರಿಗೂ ಬೇಷರತ್ ಬೇಕಿದೆ ಪ್ರಶಾಂತ್ ಕಿಶೋರರಂಥ ಊರುಗೋಲು!

ಪಶ್ಚಿಮ ಬಂಗಾಳದಲ್ಲಿ ಗೆಲ್ಲಲು ಧರ್ಮದ ಆಧಾರದ ಮೇಲೆ ಬಿಜೆಪಿ ಮತವನ್ನು ಧ್ರುವೀಕರಿಸುತ್ತಿದೆ. ಎರಡನೆಯದಾಗಿ, ಮಮತಾ ಬ್ಯಾನರ್ಜಿಯ ವಿರುದ್ಧ ವ್ಯವಸ್ಥಿತ ಅಪಪ್ರಚಾರ ನಡೆಸುತ್ತಿದೆ. ಆದರೆ ಇದು ಈ ಚುನಾವಣೆಯಲ್ಲಿ ಕೆಲಸಕ್ಕೆ ಬರುವುದಿಲ್ಲ. ಟಿಎಂಸಿಯ ಎಷ್ಟೇ ನಾಯಕರೂ ಪಕ್ಷ ತೊರೆದರೂ ಮಮತಾ ಬ್ಯಾನರ್ಜಿಯ ಜನಪ್ರಿಯತೆಯನ್ನು ಕುಂದುಂಟು ಮಾಡಲು ಅವುಗಳಿಗೆ ಸಾಧ್ಯವಾಗಿಲ್ಲ.

ಮೋದಿ ಜನಪ್ರಿಯರಿಬಹುದು, ಆದರೆ ಬಂಗಾಳದಲ್ಲಿ ದೀದಿಗಿಂತ ಜನಪ್ರಿಯರಲ್ಲ: ಪ್ರಶಾಂತ್ ಕಿಶೋರ್ ‌
ಅಪಾಯವನ್ನು ಮೈಮೇಲೆ ಎಳೆದುಕೊಂಡ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್

ಟಿಎಂಸಿಯು ತನ್ನ ನೆಲವನ್ನು ಕಳೆದ ಕೊಳ್ಳಬಾರದೆಂದು ವ್ಯವಸ್ಥಿತ ಕಾರ್ಯಾಚರಣೆ ನಡೆಸಿದ್ದು, 60% ಕ್ಕೂ ಹೆಚ್ಚು ಬ್ಲಾಕ್ ಅಧ್ಯಕ್ಷರು ಹೊಸಬರು. ಇದು ಇನ್ನಷ್ಟು ಹುರುಪಿನಿಂದ ಕೆಲಸ ಮಾಡಲು ಸಾಧ್ಯ ಮಾಡಿಕೊಡುತ್ತದೆ. 80 ಕ್ಕೂ ಹೆಚ್ಚು ಶಾಸಕರನ್ನು ಕೈಬಿಡಲಾಗಿದೆ. ಟಿಎಂಸಿಯ ವಿರುದ್ಧಇರುವ ಸಣ್ಣಮಟ್ಟದ ಜನಾಕ್ರೋಶವೂ ಇದರಿಂದ ತಣ್ಣಗಾಗಬಹುದು ಎಂದು ಅವರು ಹೇಳಿದ್ದಾರೆ.

ಮೋದಿಯ ಜನಪ್ರಿಯತೆಯನ್ನು ಮತವನ್ನಾಗಿ ಮಾಡುವುದು ಕೂಡಾ ಬಿಜೆಪಿ ಕಾರ್ಯತಂತ್ರ. ಮೋದಿ ಜನಪ್ರಿಯರಾಗಿರಬಹುದು ಆದರೆ, ಬಂಗಾಳದಲ್ಲಿ ಮಮತಾ ಬ್ಯಾನರ್ಜಿಗಿಂತ ಮೋದಿ ಜನಪ್ರಿಯರಲ್ಲ ಎಂದು ಪ್ರಶಾಂತ್‌ ಕಿಶೋರ್‌ ಹೇಳಿದ್ದಾರೆ.

ಮೋದಿ ಜನಪ್ರಿಯರಿಬಹುದು, ಆದರೆ ಬಂಗಾಳದಲ್ಲಿ ದೀದಿಗಿಂತ ಜನಪ್ರಿಯರಲ್ಲ: ಪ್ರಶಾಂತ್ ಕಿಶೋರ್ ‌
ಬಂಗಾಳ ಮಾತ್ರ ತನ್ನ ಸ್ವಂತ ಮಗಳನ್ನ ಬಯಸುತ್ತೆ – ಟಿಎಂಸಿ ಗೆ‌ ಗೆಲುವಿಗೆ ಬೆನ್ನೆಲುಬಾದ ಪ್ರಶಾಂತ್‌ ಕಿಶೋರ್

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com