ಕೇರಳದಲ್ಲಿ LDF ಮತ್ತು UDF ನಡುವೆ ಮ್ಯಾಚ್‌ ಫಿಕ್ಸಿಂಗ್‌ ನಡೆಯುತ್ತಿದೆ – ಪ್ರಧಾನಿ ಮೋದಿ ಟೀಕೆ

"ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ ಮತ್ತು ಕಮ್ಯುನಿಸ್ಟರ ಎಲ್‌ಡಿಎಫ್‌ಗಳ ಮಧ್ಯೆ ಹೆಸರಿನ ಹೊರತಾಗಿ ಯಾವುದೇ ವ್ಯತ್ಯಾಸವಿಲ್ಲ. ಇವರ ಮ್ಯಾಚ್‌ ಫಿಕ್ಸಿಂಗ್‌, ಎಲ್ಲರಿಗೂ ತಿಳಿದಿರುವ ರಹಸ್ಯ"
ಕೇರಳದಲ್ಲಿ LDF ಮತ್ತು UDF ನಡುವೆ ಮ್ಯಾಚ್‌ ಫಿಕ್ಸಿಂಗ್‌ ನಡೆಯುತ್ತಿದೆ – ಪ್ರಧಾನಿ ಮೋದಿ ಟೀಕೆ

ಏಪ್ರಿಲ್‌ ರಂದು ಚುನಾವಣೆ ಎದುರಿಸಲಿರುವ ಕೇರಳದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ. ಕೇರಳದಲ್ಲಿ ಬಿಜೆಪಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಎಂದೇ ಬಿಂಬಿತರಾಗಿರುವ ʼಮೆಟ್ರೋ ಮ್ಯಾನ್‌ʼ ಈ ಶ್ರೀಧರನ್‌ ಅವರು ಸ್ಪರ್ಧಿಸಲಿರುವ ಪಾಲಕ್ಕಾಡ್‌ನಲ್ಲಿ ಮಂಗಳವಾರ ಪ್ರಚಾರ ನಡೆಸಿದ್ದಾರೆ. ಈ ವೇಳೆ ಪಿನರಾಯಿ ವಿಜಯನ್‌ ನೇತೃತ್ವದ ಎಡ ಪಕ್ಷಗಳ ವಿರುದ್ದ ಹರಿಹಾಯ್ದಿರುವ ಪ್ರಧಾನಿ ಮೋದಿ, ಕೆಲವು ಚಿನ್ನದ ತುಂಡುಗಳಿಗಾಗಿ ಎಲ್‌ಡಿಎಫ್‌ ಕೇರಳವನ್ನೇ ಮಾರಿದೆ ಎಂದು ಹೇಳಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

“ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ ಮತ್ತು ಕಮ್ಯುನಿಸ್ಟರ ಎಲ್‌ಡಿಎಫ್‌ಗಳ ಮಧ್ಯೆ ಹೆಸರಿನ ಹೊರತಾಗಿ ಯಾವುದೇ ವ್ಯತ್ಯಾಸವಿಲ್ಲ. ಇವರ ಮ್ಯಾಚ್‌ ಫಿಕ್ಸಿಂಗ್‌, ಎಲ್ಲರಿಗೂ ತಿಳಿದಿರುವ ರಹಸ್ಯʼ. ಐದು ವರ್ಷ ಅವರು ದರೋಡೆ ಮಾಡುತ್ತಾರೆ. ಈನ್ನೈದು ವರ್ಷ ಇವರು ದರೋಡೆ ಮಾಡುತ್ತಾರೆ. ಇದು ಇವರಿಬ್ಬರ ನಡುವಿನ ಮ್ಯಾಚ್‌ ಫಿಕ್ಸಿಂಗ್‌,” ಎಂದು ನರೇಂದ್ರ ಮೋದಿ ಹೇಳಿದ್ದಾರೆ.

“ಎರಡು ಪಕ್ಷಗಳು ದರೋಡೆ ನಡೆಸಲು ಕೆಲವು ಕ್ಷೇತ್ರಗಳನ್ನು ಆಯ್ದುಕೊಂಡಿವೆ. ಯುಡಿಎಫ್‌ ಸೂರ್ಯನ ಕಿರಣಗಳನ್ನೂ ಬಿಟ್ಟಿಲ್ಲ. ಎಲ್‌ಡಿಎಫ್‌ ಕೆಲವು ಚಿನ್ನದ ತುಂಡುಗಳಿಗಾಗಿ ಕೇರಳವನ್ನೇ ಮಾರಿದೆ,” ಎಂದು ಕೇರಳದ ಅಕ್ರಮ ಚಿನ್ನ ಸಾಗಾಣಿಕೆ ಪ್ರಕರಣವನ್ನು ಸೂಚ್ಯವಾಗಿ ತಿಳಿಸಿದ್ದಾರೆ.

ಇನ್ನು ಶ್ರೀಧರನ್‌ ಅವರ ಗುಣಗಾನ ಮಾಡಿರು ಪ್ರಧಾನಿ ಮೋದಿ, ಆಧುನಿಕ ಭಾರತದಲ್ಲಿ ಸಂಪರ್ಕ ವ್ಯವಸ್ಥೆಯ ಸುಧಾರಣೆಗೆ ಶ್ರೀಧರನ್‌ ಅವರ ಕೊಡುಗೆ ಅಪಾರ. ಅವರು ಕೇರಳದ ನಿಜವಾದ ಮಣ್ಣಿನ ಮಗ,” ಎಂದಿದ್ದಾರೆ.

ಕೇರಳದಲ್ಲಿ ಮೊದಲ ಬಾರಿಗೆ ಮತದಾನ ಮಾಡುವವರು, ಯುಡಿಎಫ್‌ ಮತ್ತು ಎಲ್‌ಡಿಎಫ್‌ ಸರ್ಕಾರಗಳಿಂದ ಬೇಸರಗೊಂಡಿದ್ದಾರೆ. ಹಾಗಾಗಿ ಈ ಬಾರಿ ರಾಜ್ಯದಲ್ಲಿ ಮಹತ್ತರವಾದ ಬದಲಾವಣೆಯಲ್ಲಿ ಇಲ್ಲಿನ ಯುವಜನತೆ ಬಯಸಿದೆ. ಬಿಜೆಪಿ ದೂರದೃಷ್ಟಿತ್ವವನ್ನು ಗಮನಿಸಿ ಕೆರಳದ ವೃತ್ತಿಪರರು ಹಾಗೂ ಇಲ್ಲಿನ ಯುವಕರು ಬಿಜೆಪಿಯನ್ನು ಮುಕ್ತವಾಗಿ ಬೆಂಬಲಿಸುತ್ತಿದ್ದಾರೆ. ಭಾರತದಾದ್ಯಂತ ಈ ಹೊಸ ಅಲೆಯನ್ನು ನಾವು ಕಾಣಬಹುದು, ಎಂದು ಹೇಳಿದ್ದಾರೆ.

ಇನ್ನು ಕೇರಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ, FAST ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸುವುದಾಗಿ ಹೇಳಿದ್ದಾರೆ. F- Fisheries and Fertilisers (ಮೀನುಗಾರಿಕೆ ಮತ್ತು ರಸಗೊಬ್ಬರ), A- Agriculture and Ayurveda (ಕೃಷಿ ಮತ್ತು ಆಯುರ್ವೇದ), S – Skill Development and Social Justice (ಕೌಶಲ್ಯಾಭಿವೃದ್ದಿ ಮತ್ತು ಸಾಮಾಜಿಕ ನ್ಯಾಯ), T –Tourism and Technology (ಪ್ರವಾಸ ಮತ್ತು ತಂತ್ರಜ್ಞಾನ), ಕ್ಷೇತ್ರಗಳಲ್ಲಿ ಅಭಿವೃದ್ದಿ ಸಾಧಿಸುವುದು ಬಿಜೆಪಿ ಗುರಿ ಎಂದು ಅವರು ಹೇಳಿದ್ದಾರೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com