ಮ್ಯಾನ್ಮಾರ್ ‌ನೊಂದಿಗೆ ವ್ಯಾಪಾರ ಒಪ್ಪಂದ ಸ್ಥಗಿತಗೊಳಿಸಿದ ಯುಎಸ್

ಅಮೇರಿಕಾ ಮಿಲಿಟರಿಯ ಹಿಂಸಾತ್ಮಕ ದಮನ ನೀತಿಯನ್ನು ಖಂಡಿಸುವುದರ ಜೊತೆಗೆ ಮ್ಯಾನ್ಮಾರ್‌ನೊಂದಿಗೆ ವ್ಯಾಪಾರ ಒಪ್ಪಂದ ಸ್ಥಗಿತಗೊಳಿಸಿದೆ, ಇದರಿಂದ ಅಮೆರಿಕವು ತನ್ನ ಆದ್ಯತೆಯ ದೇಶದ ಪಟ್ಟಿಯಿಂದ ಅನಿವಾರ್ಯವಾಗಿ ಮ್ಯಾನ್ಮಾರ್ ಅನ್ನು ತೆಗೆದುಹಾಕಿದೆ.
ಮ್ಯಾನ್ಮಾರ್ ‌ನೊಂದಿಗೆ ವ್ಯಾಪಾರ ಒಪ್ಪಂದ ಸ್ಥಗಿತಗೊಳಿಸಿದ ಯುಎಸ್

ಯುನೈಟೆಡ್ ಸ್ಟೇಟ್ಸ್ ಸೋಮವಾರ ಮ್ಯಾನ್ಮಾರ್‌ನೊಂದಿಗಿನ ತನ್ನ ವ್ಯಾಪಾರ ಒಪ್ಪಂದವನ್ನು ಸ್ಥಗಿತಗೊಳಿಸಿ ದೇಶದಲ್ಲಿ ದಂಗೆ-ವಿರೋಧಿ ಪ್ರತಿಭಟನೆಗಳ ಮೇಲೆ ಮಿಲಿಟರಿಯ ಹಿಂಸಾತ್ಮಕ ದಮನ ನೀತಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.

"ಯುಎಸ್‌ಟಿಆರ್ (ಯುನೈಟೆಡ್ ಸ್ಟೇಟ್ಸ್ ಟ್ರೇಡ್ ರೆಪ್ರೆಸೆಂಟೇಟಿವ್) 2013 ರ ಟ್ರೇಡ್ ಅಂಡ್ ಇನ್ವೆಸ್ಟ್ಮೆಂಟ್ ಫ್ರೇಮ್ವರ್ಕ್ ಒಪ್ಪಂದದಡಿಯಲ್ಲಿ ಬರ್ಮಾದೊಂದಿಗಿನ ಎಲ್ಲಾ ವ್ಯಾಪಾರ ಸಂಬಂಧವನ್ನು ಯುಎಸ್ ಸ್ಥಗಿತಗೊಳಿಸುತ್ತದೆ" ಎಂದು ಏಜೆನ್ಸಿಯ ರಾಯಭಾರಿ ಕ್ಯಾಥರೀನ್ ತೈ ಟ್ವೀಟ್ ನಲ್ಲಿ ತಿಳಿಸಿದ್ದಾರೆ. "ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ಸರ್ಕಾರವನ್ನು ಪುನಃಸ್ಥಾಪಿಸುವ ಬರ್ಮಾದ ಜನತೆಯ ಪ್ರಯತ್ನಗಳನ್ನು ನಾವು ಬೆಂಬಲಿಸುತ್ತೇವೆ, ಇದು ಬರ್ಮಾದ ಆರ್ಥಿಕ ಬೆಳವಣಿಗೆ ಮತ್ತು ಸುಧಾರಣೆಯ ಅಡಿಪಾಯವಾಗಿದೆ".

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಮ್ಯಾನ್ಮಾರ್‌ನಲ್ಲಿ ಶಾಂತಿಯುತ ಪ್ರತಿಭಟನಾಕಾರರು, ವಿದ್ಯಾರ್ಥಿಗಳು, ಮಕ್ಕಳು ಮತ್ತು ವೈದ್ಯರನ್ನು ಹತ್ಯೆಗೈದ ಮೂಲಕ ಅಂತರರಾಷ್ಟ್ರೀಯ ಸಮುದಾಯವು ಆಘಾತಕ್ಕೊಳಗಾಗಿದೆ ಎಂದೂ ಅವರು ಹೇಳಿದ್ದಾರೆ.

ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳು ಕೆಲವು ಅರ್ಹತಾ ಮಾನದಂಡಗಳನ್ನು ಪೂರೈಸಿದರೆ ಅಮೆರಿಕದಿಂದ ತೆರಿಗೆ ರಹಿತವಾಗಿ ಉತ್ಪನ್ನಗಳನ್ನು ದೇಹದೊಳಕ್ಕೆ ತರಿಸಬಹುದಿತ್ತು. ಆದರೆ ಈಗ ವ್ಯಾಪಾರ ಒಪ್ಪಂದದ ಸ್ಥಗಿತದಿಂದಾಗಿ ಅಮೆರಿಕವು ತನ್ನ ಆದ್ಯತೆಯ ದೇಶದ ಪಟ್ಟಿಯಿಂದ ಅನಿವಾರ್ಯವಾಗಿ ಮ್ಯಾನ್ಮಾರ್ ಅನ್ನು ತೆಗೆದುಹಾಕಿದೆ.

ಮ್ಯಾನ್ಮಾರ್‌ನಲ್ಲಿ ನಡೆದ ಹಿಂಸಾಚಾರದಲ್ಲಿ 500 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ 'monitoring group Assistance Association for Political Prisoners'ನ್ನು ಉಲ್ಲೇಖಿಸಿ ಎಎಫ್‌ಪಿ ಸೋಮವಾರ ವರದಿ ಮಾಡಿದೆ. ಶನಿವಾರ, ಮ್ಯಾನ್ಮಾರ್‌ನ ಭದ್ರತಾ ಪಡೆಗಳು ದೇಶದಲ್ಲಿ ಮಕ್ಕಳೂ ಸೇರಿದಂತೆ 100 ಕ್ಕೂ ಹೆಚ್ಚು ಜನರನ್ನು ಕೊಂದಿದ್ದವು.

ಫೆಬ್ರವರಿ 1 ರಂದು ಮ್ಯಾನ್ಮಾರ್ನಲ್ಲಿ ಮಿಲಿಟರಿಯು ದೇಶದ ಮೇಲೆ ಹಿಡಿತ ಸಾಧಿಸಿ ರಾಜ್ಯ ಕೌನ್ಸಿಲರ್ ಆಂಗ್ ಸಾನ್ ಸೂಕಿ ಮತ್ತು ಆಡಳಿತಾರೂಢ ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿಯ ಇತರ ಹಿರಿಯ ವ್ಯಕ್ತಿಗಳನ್ನು ವಶಕ್ಕೆ ತೆಗೆದುಕೊಂಡಿತ್ತು. ನವೆಂಬರ್‌ನಲ್ಲಿ ನಡೆದ ರಾಷ್ಟ್ರೀಯ ಚುನಾವಣೆಗಳಲ್ಲಿ ಸೂಕಿ ಸಾಧಿಸಿದ ವಿಜಯದ ನಂತರ ಈ ಘಟನೆ ನಡೆದಿತ್ತು. ಈ ಚುನಾವಣೆಯಲ್ಲಿ ಮಿಲಿಟರಿ ಬೆಂಬಲಿತ ಯೂನಿಯನ್ ಸಾಲಿಡಾರಿಟಿ ಮತ್ತು ಡೆವಲಪ್ಮೆಂಟ್ ಪಾರ್ಟಿ ತನ್ನ ಪ್ರಮುಖ ಭದ್ರಕೋಟೆಗಳಲ್ಲಿ ಕಳಪೆ ಪ್ರದರ್ಶನ ನೀಡಿತ್ತು. ವಂಚನೆಯ ಆರೋಪಗಳನ್ನು ಹೊರಿಸಿದ ಮಿಲಿಟರಿ ಚುನಾವಣಾ ಫಲಿತಾಂಶಗಳನ್ನು ಸ್ವೀಕರಿಸಲು ನಿರಾಕರಿಸಿತು.

ಪರಿಣಾಮ, ಮ್ಯಾನ್ಮಾರ್‌ನಾದ್ಯಂತ ಪ್ರತಿಭಟನೆಗಳು ನಡೆದವು. ಗುಂಡಿನ ದಾಳಿ, ಇಂಟರ್ನೆಟ್ ಕಡಿತ ಮತ್ತು ಕರ್ಫ್ಯೂಗಳೊಂದಿಗೆ ಮಿಲಿಟರಿಯು ಈ ಪ್ರತಿಭಟನೆಗಳಿಗೆ ತೀವ್ರವಾದ ಪ್ರತಿರೋಧ ಒಡ್ಡಿತು.

ಮ್ಯಾನ್ಮಾರ್‌ನ ಮಿಲಿಟರಿ ಪ್ರಾಯೋಜಿತ ಹಿಂಸಾಚಾರವು ಅಂತರರಾಷ್ಟ್ರೀಯ ಸಮುದಾಯದಿಂದ ಭಾರೀ ಟೀಕೆಗೆ ಗುರಿಯಾಯಿತು. ನರಹತ್ಯೆಯ ತಡೆಗಟ್ಟುವಿಕೆ ಕುರಿತು ವಿಶ್ವಸಂಸ್ಥೆಯ ವಿಶೇಷ ಸಲಹೆಗಾರ ಮತ್ತು ಯುಎನ್ ಮಾನವ ಹಕ್ಕುಗಳ ಹೈಕಮಿಷನರ್ ಮಿಚೆಲ್ ಬ್ಯಾಚೆಲೆಟ್ ಈ ಕೊಲೆಗಳನ್ನು ತಕ್ಷಣ ನಿಲ್ಲಿಸುವಂತೆ ಸೈನ್ಯಕ್ಕೆ ಕರೆ ನೀಡಿದರು.

ಯುಎನ್ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರೆಸ್ " ಜನರ ಮೇಲಿನ ಈ ಮಟ್ಟಿನ ದೌರ್ಜನ್ಯವನ್ನು ಎಸಗುವುದು ಸ್ವೀಕಾರಾರ್ಹವಲ್ಲ, ಎಷ್ಟೋ ಜನರು ಕೊಲ್ಲಲ್ಪಟ್ಟರು" ಎಂದು ಹೇಳಿರುವುದಾಗಿ ಎಎಫ್‌ಪಿ ವರದಿ ಮಾಡಿದೆ. "ಮ್ಯಾನ್ಮರ್‌ನ ಮೇಲೆ ಒತ್ತಡ ಹೇರಲು ಅಂತರಾಷ್ಟ್ರೀಯ ಸಮುದಾಯದಿಂದ ಏಕತೆ ಮತ್ತು ಬಲ ಬೇಕು" ಎಂದು ಅವರು ಹೇಳಿದರು.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com