ನಂದಿಗ್ರಾಮ: ಚುನಾವಣೆಗೆ 2ದಿನ ಬಾಕಿ –ವೀಲ್‌ಚೇರ್‌ ಸಹಾಯದಿಂದ ಬ್ಯಾನರ್ಜಿ ಬೃಹತ್‌ ಪಾದಯಾತ್ರೆ

ನಂದಿಗ್ರಾಮ ವಿಧಾನಸಭಾ ಕ್ಷೇತ್ರಕ್ಕೆ (ಏಪ್ರಿಲ್‌ 01 ) ಗುರುವಾರ ಚುನಾವಣೆ ನಡೆಯಲ್ಲಿದ್ದು, ಮತದಾರರು ಮಮತಾ ಬ್ಯಾನರ್ಜಿ ಮತ್ತು ಸುವೆಂದು ಅಧಿಕಾರಿಯ ಭವಿಷ್ಯ ನಿರ್ಧರಿಸಲಿದ್ದಾರೆ.
ನಂದಿಗ್ರಾಮ: ಚುನಾವಣೆಗೆ 2ದಿನ ಬಾಕಿ –ವೀಲ್‌ಚೇರ್‌ ಸಹಾಯದಿಂದ ಬ್ಯಾನರ್ಜಿ ಬೃಹತ್‌ ಪಾದಯಾತ್ರೆ

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಹಿನ್ನಲೆ, ನಂದಿಗ್ರಾಮದಿಂದ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಸ್ಪರ್ಧಿಸಿದ್ದು, ಟಿಎಂಸಿಯಿಂದ ಬಿಜೆಪಿಗೆ ವಲಸೆ ಹೋದ ಸುವೆಂದು ಅಧಿಕಾರಿ ಪ್ರತಿಸ್ಟರ್ಧಿಯಾಗಿ ನಿಂತಿದ್ದಾರೆ. ಬಿಜೆಪಿ ಮತ್ತು ಟಿಎಂಸಿ ಯ ಚುನಾವಣಾ ಪ್ರಚಾರ ಕಣ ರಂಗೇರಿದ್ದು, ಮಮತಾ ಬ್ಯಾನರ್ಜಿ ವೀಲ್‌ಚೇರ್‌ ಸಹಾಯದಿಂದ ನಂದಿಗ್ರಾಮದಲ್ಲಿಂದು ಬೃಹತ್‌ ಪಾದಯಾತ್ರೆ ನಡೆಸಿದ್ದಾರೆ.

ನಂದಿಗ್ರಾಮ ವಿಧಾನಸಭಾ ಕ್ಷೇತ್ರಕ್ಕೆ (ಏಪ್ರಿಲ್‌ 01 ) ಗುರುವಾರ ಚುನಾವಣೆ ನಡೆಯಲ್ಲಿದ್ದು, ಮತದಾರರು ಮಮತಾ ಬ್ಯಾನರ್ಜಿ ಮತ್ತು ಸುವೆಂದು ಅಧಿಕಾರಿಯ ಭವಿಷ್ಯ ನಿರ್ಧರಿಸಲಿದ್ದಾರೆ. ಚುನಾವಣೆಗೆ ಎರಡೇ ದಿನಗಳು ಬಾಕಿಯಿದ್ದು, ನಂದಿಗ್ರಾಮದಲ್ಲಿ ಚುನಾವಣಾ ಪ್ರಚಾರ ಕೊನೆಗೊಳ್ಳುವ ಕಾಲವು ಹತ್ತಿರವಾಗಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಎಂಟು ಕಿಲೋ ಮೀಟರ್‌ವರೆಗೆ ನಡೆದ ಪಾದಯಾತ್ರೆಯಲ್ಲಿ ಬ್ಯಾನರ್ಜಿ ಮತದಾರರಿಂದ ಮತಯಾಚಿಸಿದ್ದಾರೆ. ತೃಣಮೂಲ ಕಾಂಗ್ರೆಸ್‌ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದೆ.

ಬ್ಯಾನರ್ಜಿ ನಂದಿಗ್ರಾಮದಲ್ಲಿ ನಾಮಪತ್ರಸಲ್ಲಿಕೆ ವೇಳೆ ಹೆಚ್ಚು ಜನಸಂದಣಿ ಸೇರಿ ನೂಕು ನುಗ್ಗಲಾಗಿ ಕಾರಿನ ಬಳಿಯಿದ್ದ ಬ್ಯಾನರ್ಜಿ ಗಾಯಗೊಂಡಿದ್ದರು, ಇದರ ವಿರುದ್ಧ ಟಿಎಂಸಿ ನಾಯಕರು ಪ್ರತಿಭಟನೆ ನಡೆಸಿ, ಉದ್ದೇಶ ಪೂರ್ವಕವಾಗಿ ದಾಳಿಮಾಡಲಾಗಿದೆ ಎಂದು ವಿರೋಧ ಪಕ್ಷದವರ ಮೇಲೆ ಆರೋಪ ಹೊರಿಸಲಾಗಿತ್ತು. ಇದನ್ನು ಬಿಜೆಪಿ ನಿರಾಕರಿಸಿತ್ತು

ಚುನಾವಣಾ ದಿನಾಂಕ ಘೋಷಣೆಯಾಗಿದ್ದಾಗಿನಿಂದಲೂ ಪ್ರಾದೇಶಿಕ ಪಕ್ಷ, ಟಿಎಂಸಿ ಮತ್ತು ಬಿಜೆಪಿ ನಡುವೆ ವಾಕ್‌ ಸಮರ ನಡೆಯುತ್ತಿದ್ದು, ಬಂಗಾಳದಲ್ಲಿ ಕಮಲ ಅರಳಿಸಲು, ಕೇಂದ್ರ ಗೃಹಸಚಿವ ಅಮಿತ್‌ ಶಾ, ಪ್ರಧಾನಿ ಮೋದಿ ಸೇರಿದಂತೆ ಪ್ರಬಲ ಬಿಜೆಪಿ ನಾಯಕರು ಮತ ಪ್ರಚಾರ ನಡೆಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಮೊದಲ ಹಂತದ ಚುನಾವಣೆ ಮಾರ್ಚ್‌ 27 ರಂದು ನಡೆದಿದೆ. 30 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಶೇಕಡಾ 84.13 ರಷ್ಟು ಮತದಾನವಾಗಿದೆ ಎಂದು ಕೇಂದ್ರ ಚುನಾವಣಾ ಆಯೋಗ ತಿಳಿಸಿದೆ. 2 ನೇ ಹಂತದ ಮತದಾನಕ್ಕೆ ರಾಜ್ಯ ಸಜ್ಜಾಗುತ್ತಿದ್ದು, ಒಟ್ಟು 8 ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಮೇ 2 ರಂದು ಫಲಿತಾಂಶ ಹೊರಬೀಳಲಿದೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com