ಟಿಎಂಸಿ ಬೆಂಬಲಿಗರಿಂದ ಥಳಿತಕ್ಕೊಳಗಾಗಿದ್ದ(?) ಬಿಜೆಪಿ ಕಾರ್ಯಕರ್ತನ ತಾಯಿ ನಿಧನ

ಅವರು ನನ್ನ ಕತ್ತು, ಮುಖದ ಭಾಗಗಳಿಗೆ ಹೊಡೆದಿದ್ದಾರೆ. ನಾನು ಭಯಗೊಂಡಿದ್ದೇನೆ. ಯಾರಲ್ಲೂ ಹೇಳಬಾರದೆಂದು ನನ್ನನ್ನು ಹೆದರಿಸಿದ್ದಾರೆ. ನನ್ನ ದೇಹವಿಡೀ ನೋವಿನಿಂದ ಬಳಲುತ್ತಿದೆ ಎಂದು ಶೋವಾ ಈ ಹಿಂದೆ ವಿಡಿಯೋ ಒಂದರಲ್ಲಿ ಹೇಳಿದ್ದರು.
ಟಿಎಂಸಿ ಬೆಂಬಲಿಗರಿಂದ ಥಳಿತಕ್ಕೊಳಗಾಗಿದ್ದ(?) ಬಿಜೆಪಿ ಕಾರ್ಯಕರ್ತನ ತಾಯಿ ನಿಧನ

ಮಾರ್ಚ್‌ ತಿಂಗಳ ಆರಂಭದಲ್ಲಿ ಟಿಎಂಸಿ ಪಕ್ಷದ ಕಾರ್ಯಕರ್ತರಿಂದ ನಿರ್ದಯವಾಗಿ ಥಳಿತಕ್ಕೊಳಗಾಗಿದ್ದ ಬಿಜೆಪಿ ನಾಯಕನ ವಯೋವೃದ್ಧ ತಾಯಿ (85 ವ.) ಸೋಮವಾರ ನಿಧನರಾಗಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.

ಬಿಜೆಪಿ ಕಾರ್ಯಕರ್ತ ಗೋಪಾಲ್‌ ಮಜುಂದಾರ್‌ ಎಂಬವರ ತಾಯಿ ಶೋವಾ ಮಜುಂದಾರ್‌ ಮಾರ್ಚ್‌ ಮೊದಲ ವಾರದಲ್ಲಿ ಟಿಎಂಸಿ ಗೂಂಡಾಗಳಿಂದ ಹಲ್ಲೆಗೊಳಗಾಗಿದ್ದೇನೆಂದು ಆರೋಪಿಸಿದ್ದರು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಅವರು ನನ್ನ ಕತ್ತು, ಮುಖದ ಭಾಗಗಳಿಗೆ ಹೊಡೆದಿದ್ದಾರೆ. ನಾನು ಭಯಗೊಂಡಿದ್ದೇನೆ. ಯಾರಲ್ಲೂ ಹೇಳಬಾರದೆಂದು ನನ್ನನ್ನು ಹೆದರಿಸಿದ್ದಾರೆ. ನನ್ನ ದೇಹವಿಡೀ ನೋವಿನಿಂದ ಬಳಲುತ್ತಿದೆ ಎಂದು ಶೋವಾ ಈ ಹಿಂದೆ ವಿಡಿಯೋ ಒಂದರಲ್ಲಿ ಹೇಳಿದ್ದರು.

ಅದಾಗ್ಯೂ, ಆಡಳಿತರೂಢ ಟಿಎಂಸಿ ಈ ಆರೋಪಗಳನ್ನು ತಳ್ಳಿ ಹಾಕಿತ್ತು. ಪೊಲೀಸರು ಕೂಡಾ ಮಹಿಳೆಯ ಮೇಲೆ ಹಲ್ಲೆ ನಡೆದಿರುವುದನ್ನು ನಿರಾಕರಿಸಿದ್ದರು. ಬೇರೆ ರೋಗದ ಕಾರಣ ಆಕೆಯ ಮುಖ ಊದಿಕೊಂಡಿದೆ, ಹಲ್ಲೆಯಿಂದ ಸಂಬಂಧಿಸಿದ ಗಾಯಗಳಲ್ಲ ಅದು ಎಂದು ಪೊಲೀಸ್‌ ಹೇಳಿರುವುದಾಗಿ ಇಂಡಿಯಾ ಟುಡೆ ವರದಿ ಮಾಡಿತ್ತು.

ಅದರ ಬಳಿಕ, ಮಹಿಳೆಯ ಮೊಮ್ಮಗ ಗೊಬಿಂದೊ ಎಂಬವರು, ಇದು ಕೌಟುಂಬಿಕ ಕಲಹದ ಪರಿಣಾಮ ಎಂದು ಹೇಳಿದ್ದರು. ಇನ್ನು ಟಿಎಂಸಿ ಸಂಸದ ಸೌಗತ ರಾಯ್‌ ಪ್ರಕಾರ, ಮಹಿಳೆಯ ಮೇಲೆ ಹಲ್ಲೆ ನಡೆದಿಲ್ಲ. ಟಿಎಂಸಿ ಕಾರ್ಯಕರ್ತರು ಹಾಗೂ ಬಿಜೆಪಿ ಕಾರ್ಯಕರ್ತರ ನಡುವಿನ ವಾಕ್ಸಮರದ ವೇಳೆ ಗೋಪಾಲ್‌ ಕೆಳಗೆ ಬಿದ್ದಿದ್ದಾರೆ, ತಮ್ಮ ಮಗನ ಮೇಲೆ ಹಲ್ಲೆ ನಡೆದಿದೆ ಎಂದು ಭಾವಿಸಿ ಅವರ ತಾಯಿ ಗುಂಪಿನ ನಡುವೆ ಓಡಿ ಬಂದಿದ್ದಾರೆ. ಈ ವೇಳೆ ಅವರು ನೆಲಕ್ಕೆ ಬಿದ್ದಿದ್ದಾರೆ. ವಿವಿಧ ಖಾಯಿಲೆಗಳಿಗಿಂದ ಬಳಲುತ್ತಿದ್ದಿದ್ದ ಅವರು ಇಂದು ಮೃತಪಟ್ಟಿದ್ದಾರೆ. ಟಿಎಂಸಿ ಕಾರ್ಯಕರ್ತರು ಹಾಗೂ ಅವರ ಮಗನ ನಡುವಿನ ಜಗಳಕ್ಕೂ ಮಹಿಳೆಯ ನಿಧನಕ್ಕೂ ಯಾವುದೇ ಸಂಬಂಧವಿಲ್ಲವೆಂದು ಹೇಳಿದ್ದಾರೆ.

ಅಮಿತ್‌ ಶಾ & ಜೆಪಿ ನಡ್ಡಾ ಸಂತಾಪ

ಮಹಿಳೆಯ ನಿಧನ ವಾರ್ತೆಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹಾಗೂ ಜೆಪಿ ನಡ್ಡಾ ಸಂತಾಪ ಸೂಚಿಸಿದ್ದಾರೆ.

ಶೋವಾ ಮಜುಂದಾರ್‌ ನಿಧನವಾರ್ತೆ ನೋವು ತಂದಿದೆ. ಮೃತಪಟ್ಟ ಮಹಿಳೆಯ ಕುಟುಂಬದ ನೋವು ದೀರ್ಘಕಾಲ ಮಮತಾ ದೀದಿಯನ್ನು ಕಾಡಲಿದೆ ಎಂದು ಶಾ ಹೇಳಿದ್ದಾರೆ.

ನಿಮ್ಮ ತ್ಯಾಗವನ್ನು ನೆನಪಿಟ್ಟುಕೊಳ್ಳಲಾಗುವುದು ಎಂದು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಟ್ವೀಟ್‌ ಮಾಡಿದ್ದಾರೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com