ಪ್ರಧಾನಿ ಬಾಂಗ್ಲಾ ಭೇಟಿ: ಅವರ ವೀಸಾ ಕೂಡಾ ರದ್ದಾಗಲಿ -ಮಮತಾ ಆಗ್ರಹ

2019 ರ ಲೋಕಸಭಾ ಚುನಾವಣೆಯಲ್ಲಿ, ಬಾಂಗ್ಲಾದೇಶದ ನಟರೊಬ್ಬರು ನಮ್ಮ ಚುನಾವಣಾ ರ‍್ಯಾಲಿಯಲ್ಲಿ ಪಾಲ್ಗೊಂಡಾಗ, ಬಿಜೆಪಿ ಬಾಂಗ್ಲಾದೇಶದ ಸರ್ಕಾರದೊಂದಿಗೆ ಮಾತನಾಡಿ ಅವರ ವೀಸಾವನ್ನು ರದ್ದುಗೊಳಿಸಿತ್ತು. ಈಗ ಯಾಕೆ ಪ್ರಧಾನಿ ಮೋದಿ ಅವರ ವೀಸಾ ರದ್ದಾಗಲಿಲ್ಲ..? ಈ ಕುರಿತು ನಾವು ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇವೆಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಪ್ರಧಾನಿ ಬಾಂಗ್ಲಾ ಭೇಟಿ: ಅವರ ವೀಸಾ ಕೂಡಾ ರದ್ದಾಗಲಿ -ಮಮತಾ ಆಗ್ರಹ

ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬ್ಲಾಂಗ್ಲಾ ದೇಶಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅಲ್ಲಿಂದ ಮೋದಿ ಪಶ್ಚಿಮಬಂಗಾಳದ ಮತದಾರರನ್ನು ಸೆಳೆಯಲು ಪ್ರಯತ್ನಿಸುತ್ತಿದ್ದಾರೆಂದು ಆರೋಪಿಸಿದ್ದಾರೆ.

ಬಂಗಾಳದಲ್ಲಿ ಚುನಾವಣೆ ನಡೆಯುತ್ತಿದೆ, ಮೋದಿ ಬಾಂಗ್ಲಾದೇಶಕ್ಕೆ ಹೋಗಿ ಪಶ್ಚಿಮಬಂಗಾಳದ ಬಗ್ಗೆ ಮಾತನಾಡುತ್ತಿದ್ದಾರೆ. ಇದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ ಎಂದು ಬ್ಯಾನರ್ಜಿ ಖರಗ್‌ಪುರದಲ್ಲಿ ನಡೆದ ಚುನಾವಣಾ ಪ್ರಚಾರ ಕಾರ್ಯಕ್ರಮವೊಂದರಲ್ಲಿ ಆರೋಪಿಸಿದ್ದಾರೆ.

ಪ್ರಧಾನಿ ಬಾಂಗ್ಲಾ ಭೇಟಿ: ಅವರ ವೀಸಾ ಕೂಡಾ ರದ್ದಾಗಲಿ -ಮಮತಾ ಆಗ್ರಹ
ಮೋದಿ ಆಗಮನ ವಿರೋಧಿಸಿ ಬಾಂಗ್ಲಾದಲ್ಲಿ ಪ್ರತಿಭಟನೆ: 40ಕ್ಕೂ ಹೆಚ್ಚು ಮಂದಿಗೆ ಗಾಯ

2019 ರ ಲೋಕಸಭಾ ಚುನಾವಣೆಯಲ್ಲಿ, ಬಾಂಗ್ಲಾದೇಶದ ನಟರೊಬ್ಬರು ನಮ್ಮ ಚುನಾವಣಾ ರ‍್ಯಾಲಿಯಲ್ಲಿ ಪಾಲ್ಗೊಂಡಾಗ, ಬಿಜೆಪಿ ಬಾಂಗ್ಲಾದೇಶದ ಸರ್ಕಾರದೊಂದಿಗೆ ಮಾತನಾಡಿ ಅವರ ವೀಸಾವನ್ನು ರದ್ದುಗೊಳಿಸಿತ್ತು. ಇದೀಗ ಪಶ್ಚಿಮಬಂಗಾಳದಲ್ಲಿ ಚುನಾವಣೆ ನಡೆಯುತ್ತಿದೆ. ಪ್ರಧಾನಿ ಮೋದಿಯವರು ಬಾಂಗ್ಲಾದೇಶಕ್ಕೆ ಹೋಗಿದ್ದಾರೆ. ಅಲ್ಲಿ ಅವರು ಒಂದು ಸಮುದಾಯದ ಮತವನ್ನು ಸೆಳೆಯಲು ಹೋಗಿರಬಹುದು. ಈಗ ಯಾಕೆ ಪ್ರಧಾನಿ ಮೋದಿ ಅವರ ವೀಸಾ ರದ್ದಾಗಲಿಲ್ಲ? ಈ ಕುರಿತು ನಾವು ಚುನಾವಣಾ ಆಯೋಗಕ್ಕೆ ದೂರು ನೀಡುವುದಾಗಿ ಹೇಳಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಪ್ರಧಾನಿ ಮೋದಿ ಇಂದು ಬಾಂಗ್ಲಾದೇಶದಲ್ಲಿ ಹಿಂದೂ ಆಧ್ಯಾತ್ಮಿಕ ವ್ಯಕ್ತಿಯ ಜನ್ಮಸ್ಥಳ ಮತ್ತು ಮತುವಾ ಸಮುದಾಯದ ಆಧ್ಯಾತ್ಮಿಕ ಗುರು ಹರಿಚಂದ್ ಠಾಕೂರ್ ಅವರ ಜನ್ಮಸ್ಥಳವಾದ ಒರಕಂಡಿಯ ದೇವಸ್ಥಾನವೊಂದಕ್ಕೆ ಭೇಟಿನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಈ ವಿಚಾರವನ್ನು ಪ್ರಸ್ತಾಪಿಸಿ ಮಾತನಾಡಿದ ಬ್ಯಾನರ್ಜಿಯವರು “ ಒರಕಂಡಿಯಲ್ಲಿ ಹಿಂದೂ ಸಮುದಾಯದ ಮತುವಾ ಜನಾಂಗದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಪಶ್ಚಿಮಬಂಗಾಳದಲ್ಲಿಯೂ ಅವರ ಸಂಖ್ಯೆ ಅಧಿಕವಾಗಿದೆ. ಇದು ಚುನಾವಣೆ ದೃಷ್ಟಿಯಿಂದಲ್ಲೂ ಅತೀ ಮುಖ್ಯವಾಗುತ್ತದೆ," ಎಂದಿದ್ದಾರೆ.

ಪ್ರಧಾನಿ ಒರಕಂಡಿಗೆ ಭೇಟಿನೀಡಿದಾಗ ಹಲವು ರಾಜಕೀಯ ಪ್ರೇರಿತ ಸಂದೇಶಗಳನ್ನು ನೀಡಿದ್ದಾರೆ. ಭಾರತದಿಂದ ಒರಕಂಡಿ ಜನರಿಗೆ ಸಹಾಯ ಹಸ್ತ ನೀಡುವುದಾಗಿ ಭರವಸೆ ನೀಡಿದ್ದಾರೆ. ಜೊತೆಗೆ ಬಾಂಗ್ಲಾದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ನನ್ನ ಪಾತ್ರವೂ ಇದೆ. ಆ ಸಮಯದಲ್ಲಿ ನಾನು ಜೈಲು ಸೇರಿದ್ದೆ ಎಂದು ಹೇಳಿಕೊಂಡಿದ್ದಾರೆ. ಇದಕ್ಕೀಗಾ ಮಮತಾ ಪ್ರತ್ಯುತ್ತರ ಕೊಟ್ಟಿದ್ದು, ಮಮತಾ ಅವರು ಬಾಂಗ್ಲಾದೇಶದಿಂದ ಜನರನ್ನು ಕರೆತರುತ್ತಾರೆ ಮತ್ತು ಒಳನುಸುಳುವಿಕೆಗೆ ಸಹಕಾರ ನೀಡುತ್ತಾರೆಂದಿದ್ದರು, ಆದರೀಗ ಪ್ರಧಾನಿ ಮೋದಿಯವರೇ ಮತದಾರರನ್ನು ಸೆಳೆಯಲು ಬಾಂಗ್ಲಾದೇಶಕ್ಕೆ ಭೇಟಿ ಕೊಟ್ಟಿದ್ದಾರೆಂದು ಆರೋಪಿಸಿದ್ದಾರೆ.

ಪ್ರಧಾನಿ ಬಾಂಗ್ಲಾ ಭೇಟಿ: ಅವರ ವೀಸಾ ಕೂಡಾ ರದ್ದಾಗಲಿ -ಮಮತಾ ಆಗ್ರಹ
#LieLikeModi: ಟ್ರೋಲ್‌ಗಳಿಗೆ ಆಹಾರವಾದ ಮೋದಿಯ ʼಬಾಂಗ್ಲಾ ವಿಮೋಚನೆ ಹೋರಾಟʼ

ಪಶ್ಚಿಮ ಬಂಗಾಳದಲ್ಲಿ ಮಾರ್ಚ್‌ 27 ರಿಂದ ಮತದಾನ ಆರಂಭವಾಗಿದ್ದು, ಒಟ್ಟು 8 ಹಂತಗಳಲ್ಲಿ ಚುನಾವಣೆ ನಡೆಯಲಿದೆ. ರಾಜಕೀಯ ಪಕ್ಷಗಳ ಪ್ರಚಾರ ಕಾರ್ಯ ಬಿರುಸಿನಿಂದ ಸಾಗಿದ್ದು, ಮತದಾರರನ್ನು ಸೆಳೆಯುವ ದೃಷ್ಟಿಯಿಂದ ಚುನಾವಣಾ ಪ್ರಚಾರದಲ್ಲಿ ಬಿಜೆಪಿ ಮತ್ತು ಟಿಎಂಸಿ ನಡುವಿನ ವಾಕ್ಸಮರ ಮುಂದುವರೆದಿದೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com