ಆಡಿಯೋ ಕ್ಲಿಪ್‌ ವೈರಲ್:‌ ಬಿಜೆಪಿ ಮುಖಂಡನಿಗೆ ಸಹಾಯಿಸುವಂತೆ ಕೋರಿದ ಮಮತಾ ಬ್ಯಾನರ್ಜಿ?

ಆಡಿಯೊ ಕ್ಲಿಪ್‌ನ ಸತ್ಯಾಸತ್ಯತೆಯನ್ನು ಪ್ರಶ್ನಿಸಿರುವ ಟಿಎಂಸಿ ವಕ್ತಾರ ಕುನಾ ಘೋಷ್, 'ಕ್ಲಿಪ್ ಪರಿಶೀಲಿಸದ ಕಾರಣ ನಿಜವೋ ಅಲ್ಲವೋ ಎಂಬುದು ತಿಳಿದಿಲ್ಲ. ಆದರೂ ಓರ್ವ ರಾಜಕಾರಣಿ ಪಕ್ಷದ ಮಾಜಿ ಮುಖಂಡರಿಗೆ ಕರೆ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ' ಎಂದು ಹೇಳಿದ್ದಾರೆ.
ಆಡಿಯೋ ಕ್ಲಿಪ್‌ ವೈರಲ್:‌ ಬಿಜೆಪಿ ಮುಖಂಡನಿಗೆ ಸಹಾಯಿಸುವಂತೆ ಕೋರಿದ ಮಮತಾ ಬ್ಯಾನರ್ಜಿ?

ಪಶ್ಚಿಮ ಬಂಗಾಳದಲ್ಲಿ ಮೊದಲ ಹಂತದ ಚುನಾವಣೆ ನಡೆಯುತ್ತಿದ್ದಂತೆಯೇ, ಬಿಡುಗಡೆಯಾಗಿರುವ ಫೋನ್‌ ರೆಕಾರ್ಡ್‌ ಒಂದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಆಡಿಯೋದಲ್ಲಿ, ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷವನ್ನು ತೊರೆದ ನಾಯಕನನ್ನು ಓಲೈಕೆ ಮಾಡಿ ಮತ್ತೆ ಪಕ್ಷಕ್ಕೆ ಸೇರಿಸಲು ಮತ್ತು ನಂದಿಗ್ರಾಮ ವಿಧಾನಸಭಾ ಚುನಾವಣೆಯಲ್ಲಿ ತಮ್ಮನ್ನು ಗೆಲ್ಲಿಸುವಂತೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸಹಾಯ ಯಾಚಿಸಿದ್ದಾರೆ ಎನ್ನಲಾಗುತ್ತಿದೆ.

ಆಡಿಯೊ ಕ್ಲಿಪ್‌ನಲ್ಲಿ ಮಮತಾ ಬ್ಯಾನರ್ಜಿಯವರ ಶಬ್ದಕ್ಕೆ ಹೋಲಿಕೆಯಾಗುವ ಶಬ್ದದಲ್ಲಿ, ತಮಲುಕ್‌ ಆಡಳಿತ ಪ್ರದೇಶದ ಬಿಜೆಪಿ ಉಪಾಧ್ಯಕ್ಷರಾದ ಪ್ರಲಯ್ ಪಾಲ್ ಅವರಲ್ಲಿ ಸಹಾಯ ಮಾಡುವಂತೆ ವಿನಂತಿಸುವುದು ಹಾಗೂ ಅವರಿಗೆ ಯಾವುದೇ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಲಾಗುವುದು ಎಂಬ ಭರವಸೆಯನ್ನು ನೀಡುವುದು ಕೇಳಿಬರುತ್ತದೆ. ಆದರೆ ಈ ಆಡಿಯೋ ಕ್ಲಿಪ್‌ನ ಸತ್ಯಾಸತ್ಯೆಯು ಬಹಿರಂಗವಾಗಿಲ್ಲ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

'ನೀವು ಯುವಕ, ತುಂಬಾ ಶ್ರಮ ವಹಿಸುತ್ತಿದ್ದೀರಿ ಎಂಬುದು ನನಗೆ ತಿಳಿದಿದೆ. ನಂದಿಗ್ರಾಮದಲ್ಲಿ ಈ ಬಾರಿ ನಮಗೆ ಸ್ವಲ್ಪ ಸಹಾಯ ಮಾಡಿ. ನಿಮಗೆ ಯಾವುದೇ ತೊಂದರೆ ಎದುರಾಗದಂತೆ ನೋಡಿಕೊಳ್ಳಲಾಗುವುದು' ಎಂದು ಆಡಿಯೋ ಕ್ಲಿಪ್‌ನಲ್ಲಿ ಕೇಳಿಬರುತ್ತದೆ.

'ದೀದಿ, ನೀವು ಏನು ಯೋಚನೆ ಮಾಡಿದರೂ ಸರಿ, ನಾನು ಟಿಎಂಸಿ ಪಕ್ಷವನ್ನು ತೊರೆದಿದ್ದೇನೆ. ಈಗ ಸೇವೆ ಸಲ್ಲಿಸುತ್ತಿರುವ ಬಿಜೆಪಿ ಪಕ್ಷಕ್ಕೆ ದ್ರೋಹ ಬಗೆಯಲು ಸಾಧ್ಯವಿಲ್ಲ. ನಾನು ಪಕ್ಷಕ್ಕಾಗಿ ಕೆಲಸ ಮಾಡುವಾಗ ಅದನ್ನು ಸಂಪೂರ್ಣ ನಿಷ್ಠೆಯಿಂದ ಮಾಡುತ್ತೇನೆ ಎಂದು ಪ್ರಲಯ್ ಪಾಲ್ ಉತ್ತರಿಸುತ್ತಾರೆ.

ಆಡಿಯೋ ಕ್ಲಿಪ್‌ ವೈರಲ್:‌ ಬಿಜೆಪಿ ಮುಖಂಡನಿಗೆ ಸಹಾಯಿಸುವಂತೆ ಕೋರಿದ ಮಮತಾ ಬ್ಯಾನರ್ಜಿ?
ಪ್ರಧಾನಿ ಬಾಂಗ್ಲಾ ಭೇಟಿ: ಅವರ ವೀಸಾ ಕೂಡಾ ರದ್ದಾಗಲಿ -ಮಮತಾ ಆಗ್ರಹ

ನಂದಿಗ್ರಾಮದಲ್ಲಿ ಬಿಜೆಪಿಯಿಂದ ಸ್ಪರ್ಧಿಸುವ ಸುವೇಂದು ಅಧಿಕಾರಿ ನಿಮಗೆ ಎಲ್ಲವೂ ಆಗಿದ್ದಾರೆಯೇ? ಎಂಬುದನ್ನು ಮಮತಾ ಪ್ರಶ್ನೆ ಮಾಡಿರುವುದಾಗಿ ಹೇಳಲಾಗಿದೆ. ಟಿಎಂಸಿಗೆ ಮರು ಸೇರ್ಪಡೆಗೊಳ್ಳುವ ಪ್ರಸ್ತಾಪವನ್ನು ಪಾಲ್ ನಿರಾಕರಿಸುವುದರೊಂದಿಗೆ ಆಡಿಯೊ ಕ್ಲಿಪ್ ಕೊನೆಗೊಳ್ಳುತ್ತದೆ.

ಈ ಕುರಿತು ಸುದ್ದಿಗಾರರಿಗೆ ವಿವರ ನೀಡಿರುವ ಪಾಲ್, ಮಮತಾ ಪ್ರಸ್ತಾಪವನ್ನು ನಿರಾಕರಿಸಿರುವುದಾಗಿ ಹೇಳಿದ್ದಾರೆ.

ಆಡಿಯೋ ವೈರಲ್‌ ಆಗುತ್ತಿದ್ದಂತೆ ಬಿಜೆಪಿ ಮಮತಾ ಅವರ ಮೇಲೆ ಮುಗಿಬಿದ್ದಿದ್ದು, 'ಸೋಲನ್ನು ಒಪ್ಪಿಕೊಂಡವರು ಮಾತ್ರ ಮಮತಾ ದೀದಿ ರೀತಿಯಲ್ಲಿ ಮಾತನಾಡಬಲ್ಲರು' ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯ್‌ವರ್ಗೀಯಾ ಟೀಕಿಸಿದ್ದಾರೆ.

ಆದರೆ, ಆಡಿಯೊ ಕ್ಲಿಪ್‌ನ ಸತ್ಯಾಸತ್ಯತೆಯನ್ನು ಪ್ರಶ್ನಿಸಿರುವ ಟಿಎಂಸಿ ವಕ್ತಾರ ಕುನಾ ಘೋಷ್, 'ಕ್ಲಿಪ್ ಪರಿಶೀಲಿಸದ ಕಾರಣ ನಿಜವೋ ಅಲ್ಲವೋ ಎಂಬುದು ತಿಳಿದಿಲ್ಲ. ಆದರೂ ಓರ್ವ ರಾಜಕಾರಣಿ ಪಕ್ಷದ ಮಾಜಿ ಮುಖಂಡರಿಗೆ ಕರೆ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ' ಎಂದು ಹೇಳಿದ್ದಾರೆ.

ಆಡಿಯೋ ಕ್ಲಿಪ್‌ ವೈರಲ್:‌ ಬಿಜೆಪಿ ಮುಖಂಡನಿಗೆ ಸಹಾಯಿಸುವಂತೆ ಕೋರಿದ ಮಮತಾ ಬ್ಯಾನರ್ಜಿ?
ಟಿಎಂಸಿ ಸೇರಿ ಮಮತಾ ಬ್ಯಾನರ್ಜಿಯನ್ನು ಹಾಡಿಹೊಗಳಿದ ಬಿಜೆಪಿ ಮಾಜಿ ನಾಯಕ ಯಶ್ವಂತ್ ಸಿನ್ಹಾ

ಟಿಎಂಸಿಯಿಂದ ಬಿಜೆಪಿ ಮುಖಂಡನ ಆಡಿಯೋ ಬಿಡುಗಡೆ

ಟಿಎಂಸಿ ಹಾಗೂ ಮಮತಾ ಬ್ಯಾನರ್ಜಿ ವಿರುದ್ಧ ಬಿಜೆಪಿ ಟೀಕಾಸ್ತ್ರ ಪ್ರಹಾರ ಮಾಡುತ್ತಿದ್ದಂತೆಯೇ, ಟಿಎಂಸಿ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಮುಕುಲ್ ರಾಯ್ ಅವರದ್ದು ಎನ್ನಲಾದ ಆಡಿಯೋ ಕ್ಲಿಪ್‌ ಒಂದನ್ನು ಬಿಡುಗಡೆ ಮಾಡಿದೆ.

ಮುಕುಲ್ ರಾಯ್ ಟಿಎಂಸಿ ಮುಖಂಡ ಶಿಶಿರ್ ಬಜೋರಿಯಾ ಅವರೊಂದಿಗೆ ಚುನಾವಣಾ ಸಮಿತಿ ಮೇಲೆ ಹೇಗೆ ಪ್ರಭಾವ ಬೀರಬಹುದು ಎಂಬುದರ ಬಗ್ಗೆ ಕೇಳಿರುವುದು ಉಲ್ಲೇಖವಾಗಿದೆ.

ನಿರ್ದಿಷ್ಟ ಕ್ಷೇತ್ರದ ಹೊರಗಿನಿಂದಲೂ ಮತದಾನ ಏಜೆಂಟರಿಗೆ ಎಲ್ಲಾ ಮತಗಟ್ಟೆಗಳಲ್ಲಿ ಕಾರ್ಯನಿರ್ವಹಿಸಲು ಅವಕಾಶ ನೀಡುವಂತೆ ಚುನಾವಣಾ ಆಯೋಗಕ್ಕೆ ಮನವರಿಕೆ ಮಾಡಿಕೊಡುವಂತೆ ರಾಯ್ ಅವರು ಬಜೋರಿಯಾ ಅವರನ್ನು ಕೇಳಿರುವುದಾಗಿ ಆರೋಪಿಸಲಾಗಿದೆ.

ಆಡಿಯೋ ಕ್ಲಿಪ್‌ ವೈರಲ್:‌ ಬಿಜೆಪಿ ಮುಖಂಡನಿಗೆ ಸಹಾಯಿಸುವಂತೆ ಕೋರಿದ ಮಮತಾ ಬ್ಯಾನರ್ಜಿ?
ಚುನಾವಣೆ ಹೊಸ್ತಿಲಲ್ಲಿ ಪಶ್ಚಿಮ ಬಂಗಾಳ: ಬಿಜೆಪಿಯೆಡೆಗೆ ಇನ್ನೂ ನಿಲ್ಲದ ಟಿಎಂಸಿ ನಾಯಕರ ವಲಸೆ

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com